ಮನೆಯಲ್ಲಿಯೇ ಮಾಡಬಹುದಾದ ‘ಹೊಮಿಯೋಪಥಿ ಉಪಚಾರ !’, (ಲೇಖನಮಾಲೆ ೧೬) !
ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆ ಯನ್ನು ಹೇಗೆ ಮಾಡಬಹುದು ? ಹೋಮಿಯೋಪತಿ ಔಷಧಿಗಳನ್ನು ಯಾವ ರೀತಿ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸ ಬೇಕು ? ಇಂತಹ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇವೆ.
ಸಂಚಿಕೆ ೨೫/೯ ರಿಂದ ನಾವು ಪ್ರತ್ಯಕ್ಷ ರೋಗಗಳ ಮೇಲೆ ಸ್ವಯಂಚಿಕಿತ್ಸೆ ಪದ್ಧತಿಯನ್ನು ತಿಳಿದುಕೊಳ್ಳುತ್ತಿದ್ದೇವೆ. ಅದರ ಅಡಿಯಲ್ಲಿ ೨೫/೧೭ ನೇ ಸಂಚಿಕೆಯಲ್ಲಿ ನಾವು ‘ಬೆನ್ನುನೋವು’ ರೋಗಕ್ಕೆ ತೆಗೆದುಕೊಳ್ಳಬೇಕಾದ ಆರೈಕೆ ಮತ್ತು ಅದಕ್ಕೆ ತೆಗೆದುಕೊಳ್ಳಬೇಕಾದ ಔμÀಧಿಗಳ ಮಾಹಿತಿಯನ್ನು ಓದಿದೆವು. ಕಾಯಿಲೆಗಳಿಗೆ ನೇರವಾಗಿ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೧, ೨೫/೨ ಮತ್ತು ೨೫/೩ ನೇ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಟಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ !
ಸಂಕಲನಕಾರರು : ಹೋಮಿಯೋಪಥಿ ಡಾ. ಪ್ರವೀಣ ಮೆಹತಾ, ಡಾ. ಅಜಿತ ಭರಮಗುಡೆ ಮತ್ತು ಡಾ. (ಸೌ.) ಸಂಗೀತಾ ಭರಮಗುಡೆ.
ಕೆಲವೊಮ್ಮೆ ಯಾವುದೇ ಕಾಯಿಲೆ ಇಲ್ಲದಿರುವಾಗಲೂ ಹಸಿವೆ ಕಡಿಮೆಯಾಗುತ್ತದೆ ಅಥವಾ ಹಸಿವು ಆಗುವುದೇ ಇಲ್ಲ, ಉದಾ. ವಯಸ್ಸಿಗನುಸಾರ (ಇಳಿವಯಸ್ಸಿನಲ್ಲಿ), ದುಃಖ, ರೋಮಾಂಚನಕಾರಿ ದೃಶ್ಯಗಳು ಅಥವಾ ದುರ್ಗಂಧ ಎದುರಿಗಿರುವುದು, ಒತ್ತಡ ಇತ್ಯಾದಿ. ಪ್ರತಿಜೈವಿಕ (ಯಾಂಟಿಬಯೋಟಿಕ್ಸ್), ರಾಸಾಯನಿಕ ದ್ರವ್ಯವನ್ನು ಉಪಯೋಗಿಸಿ ಮಾಡಿದ ಕ್ಯಾನ್ಸರ್ ವಿರೋಧಿ ಉಪಚಾರ (ಕಿಮೋಥೆರಪಿ) ಇತ್ಯಾದಿಗಳಿಂದಲೂ ಹಸಿವೆ ಕಡಿಮೆಯಾಗುತ್ತದೆ. ಇಂತಹ ಸಮಯದಲ್ಲಿ ಕೇವಲ ೨-೩ ಬಾರಿ ಸೇವಿಸುವ ಬದಲು ರುಚಿಸುವ ಹಾಗೂ ಜೀರ್ಣವಾಗುವ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಪದೇ ಪದೇ ತೆಗೆದುಕೊಳ್ಳುವುದು ಯೋಗ್ಯವಾಗಿದೆ. ೨ ವಾರಗಳಿಗಿಂತ ಹೆಚ್ಚು ಸಮಯದಿಂದ ಹಸಿವೆ ಕಡಿಮೆ ಆಗಿದ್ದರೆ, ಉಪಚಾರ ಮಾಡುವುದು ಆವಶ್ಯಕವಾಗಿದೆ. ಹಸಿವೆ ಕಡಿಮೆಯಾಗುವುದು ಅಥವಾ ಆಗದಿರುವುದು ಈ ಲಕ್ಷಣದ ಹೊರತು ಯಾವುದಾದರೂ ವೈಶಿಷ್ಟ್ಯಪೂರ್ಣ ಲಕ್ಷಣಗಳಿದ್ದರೆ ಯಾವ ಔಷಧಗಳನ್ನು ತೆಗೆದುಕೊಳ್ಳಬೇಕು, ಇದನ್ನು ಆ ಔಷಧಗಳ ಹೆಸರುಗಳ ಮುಂದೆ ಕೊಡಲಾಗಿದೆ.
೧. ಅಲ್ಫಾಲ್ಫಾ (Alfalfa)
೧ ಅ. ಈ ಔಷಧವು ಪೋಷಣೆಗೆ ಸಕಾರಾತ್ಮಕ ಪ್ರಭಾವ ಬೀರುತ್ತದೆ – ಈ ಔಷಧದಿಂದ ಹಸಿವೆ ಹೆಚ್ಚಾಗುತ್ತದೆ ಮತ್ತು ಪಚನಕ್ರಿಯೆಯೂ ಸುಧಾರಿಸುತ್ತದೆ. ಆದ್ದರಿಂದ ರೋಗಿಯ ಶಾರೀರಿಕ ಹಾಗೂ ಮಾನಸಿಕ ಬಲ ಹಾಗೂ ತೂಕ ಹೆಚ್ಚಾಗುತ್ತದೆ.
೧ ಆ. ಈ ಔಷಧಿ ಕುಪೋಷಣೆಗೆ ಸಂಬಂಧಿಸಿದ ನರಗಳ ದೌರ್ಬಲ್ಯ-ಕ್ಷೀಣತೆ (ಓಎಉಡಿಚಿಸ್ಣಹೆಟೀಚಿ), ನಿದ್ರಾನಾಶ, ಮಾನಸಿಕ ಕಾರಣಗಳಿಂದಾಗುವ ಅಜೀರ್ಣ ಈ ಕಾಯಿಲೆಗಳಿಗೆ ಉಪಯುಕ್ತವಾಗಿದೆ.
೨. ಚಾಯನಾ ಆಫಿಸಿನ್ಯಾಲಿಸ್ (China Offi cinalis)
೨ ಅ. ಹೊಟ್ಟೆಗಚ್ಚಿಯಾಗಿ ಊಟ-ತಿಂಡಿ ಬೇಡವೆನಿಸುವುದು
೨ ಆ. ಆಹಾರದ ರುಚಿ ತುಂಬಾ ಉಪ್ಪುಪ್ಪು ಅನಿಸುವುದು
೨ ಇ. ಏನನ್ನೂ ತಿನ್ನುವ ಅಥವಾ ಕುಡಿಯುವ ಇಚ್ಛೆ ಇಲ್ಲದಿರುವುದು. ಎಲ್ಲ ಪ್ರಕಾರದ ಆಹಾರದ ಬಗ್ಗೆ ಉದಾಸೀನತೆ ಇರುವುದು
೨ ಈ. ತುಂಬಾ ಪ್ರಮಾಣದಲ್ಲಿ ಚಹಾ ಕುಡಿಯುವುದರಿಂದ ಹಸಿವಾಗದಿರುವುದು, ಹಣ್ಣುಗಳನ್ನು ಸೇವಿಸಿದರೆ ವ್ಯಾಧಿ (ರೋಗಗಳು) ಹೆಚ್ಚಾಗುವುದು
೩. ರ್ವಸ್ ಟೋಕ್ಸಿಕೋಡೆಂಡ್ರಾನ್ ( Rhus Toxicodendron)
೩ ಅ. ತುಂಬಾ ನೀರಡಿಕೆ ಆಗುವುದು; ಏನನ್ನೂ ತಿನ್ನುವ ಇಚ್ಛೆ ಇಲ್ಲದಿರುವುದು
೩ ಆ. ಬಾಯಿಗೆ ಕಹಿ ರುಚಿ ಬಂದು ವಾಕರಿಕೆ ಬರುವುದು
೩ ಇ. ಊಟದ ನಂತರ ಹೊಟ್ಟೆ ಭಾರವಾಗಿ ತಲೆ ತಿರುಗುವುದು
೩ ಈ. ಹಾಲು ಕುಡಿಯುವ ಇಚ್ಛೆಯಾಗುವುದು
೩ ಉ. ಊಟದ ನಂತರ ಅಮಲು ಬರುವುದು
೪. ಕೊಲ್ಚಿಕಮ್ ಎಟಮ್ನಾಲೆ ( Rhus Toxicodendron)
ಆಹಾರವನ್ನು ನೋಡುತ್ತಲೇ ಹಸಿವೆ ಇಲ್ಲವಾಗುವುದು
೫. ಸೋರಿನಮ್ (Psorinum)
ಗಂಭೀರ ಕಾಯಿಲೆಯ ನಂತರ ಹಸಿವೆ ಆಗದಿರುವುದು‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪತಿ’ ಉಪಾಯ !’ ಈ ಮುಂಬರುವ ಗ್ರಂಥದಲ್ಲಿನ ಆಯ್ದ ಭಾಗಗಳನ್ನು ಪ್ರತಿ ವಾರದ ಸಂಚಿಕೆಯಲ್ಲಿ ಲೇಖನಗಳ ಸ್ವರೂಪದಲ್ಲಿ ಪ್ರಕಟಿಸಲಾಗುತ್ತಿದೆ. ಆದರೂ ಸ್ವಉಪಾಯದ ದೃಷ್ಟಿಯಿಂದ ಸಾಧಕರು, ವಾಚಕರು, ರಾಷ್ಟ್ರ-ಧರ್ಮಪ್ರೇಮಿಗಳು, ಹಿತಚಿಂತಕರು, ಅರ್ಪಣೆದಾರರು ಈ ಲೇಖನಗಳನ್ನು ಆಪತ್ಕಾಲದ ದೃಷ್ಟಿಯಿಂದ ಸಂಗ್ರಹಿಸಿ ಇಡಬೇಕು. ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು ದೊರಕದಿದ್ದರೆ, ಅಂತಹ ಸಮಯದಲ್ಲಿ ಈ ಲೇಖನಗಳನ್ನು ಓದಿ ತಮ್ಮ ಮೇಲೆ ಉಪಾಯ ಮಾಡಿಕೊಳ್ಳಬಹುದು. |