ರಾಮಮಂದಿರದಲ್ಲಿ ಮತ್ತೊಮ್ಮೆ ರಾಮಲಲ್ಲ ಪ್ರತಿಷ್ಠಾಪನೆ ಆಗುವುದು ಎಂದರೆ ರಾಮರಾಜ್ಯದ ನಾಂದಿಯೇ ! – ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ , ಸನಾತನ ಸಂಸ್ಥೆ

ಶ್ರೀರಾಮಮಂದಿರದ ಸಮಾರಂಭದಲ್ಲಿ ಸನಾತನ ಸಂಸ್ಥೆಯ ಆಧ್ಯಾತ್ಮಿಕ ಉತ್ತರಾಧಿಕಾರಿಗಳ ವಂದನಿಯ ಉಪಸ್ಥಿತಿ !

ಅಯೋಧ್ಯೆ – ಶ್ರೀರಾಮ ಜನ್ಮ ಭೂಮಿಗಾಗಿ ೫೦೦ ವರ್ಷಗಳ ಸುದೀರ್ಘ ಸಂಘರ್ಷದ ನಂತರ ರಾಮ ಜನ್ಮಭೂಮಿ ಮುಕ್ತವಾಯಿತು ಮತ್ತು ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನ ಭವ್ಯ ರಾಮ ಮಂದಿರದ ನಿರ್ಮಾಣವಾಗಿ ರಾಮಲಲ್ಲಾನ ಪ್ರತಿಷ್ಠಾಪನೆಯ ಸಮಾರಂಭವನ್ನು ಇಂದು ನಾವು ನೋಡುತ್ತಿದ್ದೇವೆ, ಇದು ಸನಾತನ ಹಿಂದೂ ಧರ್ಮೀಯರಿಗಾಗಿ ಅತ್ಯಂತ ಮಹತ್ವದ ದಿನವಾಗಿದೆ. ದೇಶಾದ್ಯಂತ ಇರುವ ಎಲ್ಲಾ ಸಂತ ಮಹಂತರಿಗೆ ಗೌರವ ನೀಡಿ ಮತ್ತು ಅವರ ಉಪಸ್ಥಿತಿಯಲ್ಲಿ ಈ ಸಮಾರಂಭ ನಡೆಯಿತು. ರಾಮಲಲ್ಲ ಮತ್ತೊಮ್ಮೆ ರಾಮ ಮಂದಿರದಲ್ಲಿ ಪ್ರತಿಷ್ಠಾಪಿತವಾಗುವುದು ಇದು ರಾಮ ರಾಜ್ಯದ ನಾಂದಿಯೇ ಆಗಿದೆ, ಎಂದು ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಪ್ರತಿಪಾದಿಸಿದರು.

ಐತಿಹಾಸಿಕ ಮತ್ತು ಅಭೂತಪೂರ್ವವಾದಂತಹ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿನ ಮೂರ್ತಿಯ ಭವ್ಯ ದಿವ್ಯ ಪ್ರತಿಷ್ಠಾಪನೆ ಸಮಾರಂಭಕ್ಕೆ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ ಉತ್ತರಾಧಿಕಾರಿಗಳಾದ ಶ್ರೀ ಸತ್ ಶಕ್ತಿ ( ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವಂದನಿಯ ಉಪಸ್ಥಿತಿ ಲಭಿಸಿತು. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಕಾರ್ಯದರ್ಶಿ ಶ್ರೀ. ಚಂಪತರಾಯ ಇವರು ಸನಾತನ ಸಂಸ್ಥೆಯ ಇಬ್ಬರು ಆಧ್ಯಾತ್ಮಿಕ ಉತ್ತರಾಧಿಕಾರಿಗಳಿಗೆ ಗೌರವಪೂರ್ವಕ ಆಮಂತ್ರಣ ನೀಡಿದ್ದರು.

ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಪ್ರತಿಯೊಬ್ಬರನ್ನು ಐಕ್ಯತೆಯ ಬಂಧನದಲ್ಲಿ ಜೋಡಿಸುವ ಶ್ರೀರಾಮ, ಇದೊಂದು ಅಲೌಕಿಕ ರಾಷ್ಟ್ರ ಸೂತ್ರವಾಗಿದೆ !

ಪ್ರತಿಯೊಬ್ಬರ ಮನಸ್ಸಿನಲ್ಲಿದ್ದ ಶ್ರೀರಾಮ ಮಂದಿರದ ಸ್ಥಾಪನೆಯು ಇದು ಒಂದು ಕೇವಲ ಅಧರ್ಮದ ಮೇಲೆ ಧರ್ಮದ ವಿಜಯ ಮಾತ್ರವಲ್ಲ; ಅದರ ಜೊತೆಗೆ ಕಲಿಯುಗಾಂತರ್ಗತ ಸತ್ಯಯುಗದ ನವನಿರ್ಮಾಣದ, ಹಿಂದುಗಳ ಅಲೌಕಿಕ ಹಿಂದೂ ರಾಷ್ಟ್ರ ನಿರ್ಮಿತಿಯ ಎಂದರೆ ಸ್ವಧರ್ಮಾದೃಷ್ಟಿತ ಸ್ವರಾಷ್ಟ್ರ, ಸರ್ವ ಶಕ್ತಿ ಸಂಪನ್ನ, ಸುವ್ಯವಸ್ಥೆ ಪ್ರಧಾನ, ಎಲ್ಲಾ ಸೌಲಭ್ಯಗಳಿಂದ ಕೂಡಿರುವ, ಸುಖಕರ , ಸಮೃದ್ಧ, ಸುಸಂಸ್ಕೃತ ಸುರಾಜ್ಯದ ಸೂರ್ಯೋದಯದ ನಾಂದಿ ಆಗಿದೆ, ಎಂದು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಈ ಸಮಯದಲ್ಲಿ ಪ್ರತಿಪಾದಿಸಿದರು .

ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಸಹಭಾಗಿ ಆಗಲು ಸಾಧ್ಯವಾದುದಕ್ಕಾಗಿ ಇಬ್ಬರು ಉತ್ತರಾಧಿಕಾರಿಗಳು ಶ್ರೀ ರಾಮನಿಗೆ ಕೋಟಿ ಕೋಟಿ ಕೃತಜ್ಞತೆಗಳು ವ್ಯಕ್ತಪಡಿಸಿದರು.
ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಲಖನೌ ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಆಗಮಿಸಿದ ನಂತರ ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಪದಾಧಿಕಾರಿಗಳು ಹಾಗೂ ಉತ್ತರಪ್ರದೇಶ ಸರಕಾರದ ರಾಜ ಶಿಷ್ಟಾಚಾರ ಇಲಾಖೆಯ ಅಧಿಕಾರಿಯ ವತಿಯಿಂದ ಅವರನ್ನು ಸ್ವಾಗತಿಸಲಾಯಿತು ಮತ್ತು ಗೌರವಿಸಲಾಯಿತು.