ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಸಿಂಧಿ ಜನಾಂಗದಿಂದ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆ !
ಗಾಂಧಿನಗರ (ಕೊಲ್ಲಾಪುರ ಜಿಲ್ಲೆ) – ಕರವೀರ ತಾಲೂಕಿನ ಗಾಂಧಿನಗರದ ಒಂದು ಕಟ್ಟಡದ ಮಾಳಿಗೆಯ ಮೇಲೆ ೬ ವರ್ಷದ ಹುಡುಗಿಯ ಮೇಲೆ ಬಲತ್ಕಾರ ಮಾಡುವ ಪ್ರಯತ್ನ ಮಾಡಿರುವ ೧೨ ವರ್ಷದ ಹುಡುಗನನ್ನು ಹುಡುಗಿಯ ಕುಟುಂಬದವರು ಹಿಡಿದರು. ಮತ್ತು ಅವಳ ಕುಟುಂಬದವರು ಅವನಿಗೆ ಥಳಿಸಿ ಗಾಂಧಿನಗರ ಪೊಲೀಸರಿಗೆ ಒಪ್ಪಿಸಿದರು. ಈ ಹುಡುಗನ ಮೇಲೆ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿರುವುದರಿಂದ ಪೊಲೀಸ್ ಠಾಣೆ ಎದುರು ಸಿಂಧಿ ಜನಾಂಗದ ನಾಗರಿಕರು ಧರಣಿ ಹೂಡಿದರು. ಅದೇ ಸಮಯದಲ್ಲಿ ಸಿಂಧಿ ಜನಾಂಗದವರು ಅಪ್ರಾಪ್ತ ಹುಡುಗನನ್ನು ವೈದ್ಯಕೀಯ ಪರೀಕ್ಷೆ ನಡೆಸಿ ಹಿಂತಿರುಗಿ ಕರೆದಿರುವಾಗ ಥಳಿಸಿದರು. ಅದರ ನಂತರ ಗುಂಪನ್ನು ಚದರಿಸಲು ಪೊಲೀಸರು ಲಘು ಲಾಟಿ ಪ್ರಹಾರ ಮಾಡಿದರು.
ಆ ಸಮಯದಲ್ಲಿ ಗಾಂಧಿನಗರ ವ್ಯಾಪಾರಿ ಸಂಘಟನೆಯಿಂದ ಬಂದಗೆ ಕರೆ ನೀಡಿರುವುದರಿಂದ ಗಾಂಧಿನಗರ ಪರಿಸರದಲ್ಲಿನ ಬಹಳಷ್ಟು ಅಂಗಡಿಗಳು ದಿನವಿಡೀ ಮುಚ್ಚಿದ್ದರು. ಇದರಿಂದ ಗಾಂಧಿನಗರ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಿದ್ದರು ಹಾಗೂ ಗಲಭೆ ನಿಗ್ರಹ ತಂಡಕ್ಕೂ ಕರೆಸಿದ್ದರು. ಹುಡುಗನ ಮೇಲೆ ಕಠೋರ ಕ್ರಮ ಕೈಗೊಳ್ಳಲು ಆಗ್ರಹಿಸಿ ತಡರಾತ್ರಿಯವರೆಗೆ ಸಿಂಧಿ ಜನಾಂಗದ ಜನರು ಪೊಲೀಸ ಠಾಣೆಯ ಎದುರು ಠಿಕಾಣಿ ಹೂಡಿದರು. ಹುಡುಗನ ವಿರುದ್ಧ ತಡರಾತ್ರಿ ದೂರು ದಾಖಲಿಸಿಕೊಂಡಿದ್ದಾರೆ.
ಸಂಪಾದಕೀಯ ನಿಲುವುಧರ್ಮಾಚರಣೆ ಇಲ್ಲದಿರುವುದರಿಂದ ಸಮಾಜದ ನೈತಿಕತೆ ಮುಗುತ್ತಿರುವುದರಿಂದ ಈ ರೀತಿಯ ಘಟನೆಗಳು ಘಟಿಸುತ್ತಿವೆ ಮತ್ತು ಧರ್ಮಾಧಿಷ್ಠಿತ ಶಿಕ್ಷಣ ಪದ್ಧತಿ ಅಳವಡಿಸುವುದೇ ಇದಕ್ಕೆ ಏಕೈಕ ಉತ್ತರವಾಗಿದೆ ! |