ನಾವು ಭಾರತದಾದ್ಯಂತ ಅನೇಕ ಪ್ರದೇಶಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದು, ನಮಗೆ ಪರಸ್ಪರರಲ್ಲಿ ವಿಶ್ವಾಸವಿದೆ.-ಅಮೇರಿಕೆಯ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್

 ಅಮೇರಿಕೆಯ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್  ಇವರ ಹೇಳಿಕೆ! 

ಅಮೇರಿಕೆಯ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್

ದಾವೋಸ್ (ಸ್ವಿಟ್ಜರ್ಲೆಂಡ್) – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಮನಾರ್ಹ ವಿಷಯವನ್ನು(?)  ಮಾಡಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು ಅಸಾಧಾರಣ ಯಶಸ್ಸಿನ ಕಥೆಯನ್ನು ಬರೆಯುತ್ತಿದೆ. ಭಾರತ ಈಗ ಒಂದು ಹೊಸ ಹಂತವನ್ನು ತಲುಪಿದೆ. ಪ್ರಧಾನಮಂತ್ರಿ ಮೋದಿ ಮತ್ತು ಅಧ್ಯಕ್ಷ ಜೋ ಬೈಡನ್ ಒಟ್ಟಿಗೆ ಅಭಿವೃದ್ಧಿಯ ಮೇಲೆ ಕೆಲಸ ಮಾಡುತ್ತಿದ್ದಾರೆ. ನಾವು ಹಲವು ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದು, ನಮಗೆ ಪರಸ್ಪರರ ಮೇಲೆ ವಿಶ್ವಾಸವಿದೆ ಎಂದು ಅಮೇರಿಕೆಯ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್ ಅವರು ಹೇಳಿದ್ದಾರೆ. ಬ್ಲಿಂಕನ್ ಇವರು ಸಧ್ಯಕ್ಕೆ ನಡೆಯುತ್ತಿರುವ ‘ವಿಶ್ವ ಆರ್ಥಿಕ ವೇದಿಕೆ’ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ.

ಭಾರತದ ಆರ್ಥಿಕ ಪ್ರಗತಿ ಮತ್ತು ಮೂಲಭೂತಸೌಲಭ್ಯಗಳು  ಅಭಿವೃದ್ಧಿ ಆಗುತ್ತಿದ್ದರೂ, ಹಿಂದೂ ರಾಷ್ಟ್ರವಾದದ ಉದಯವು ಕಳವಳಕಾರಿ ವಿಷಯವಾಗಿದೆಯೇ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, ಬ್ಲಿಂಕನ್ ಇವರು, ಅಮೇರಿಕಾ ಮತ್ತು ಭಾರತ ಯಾವಾಗಲೂ ಚರ್ಚಿಸುತ್ತಲೇ ಬಂದಿದೆ. ಇದರಲ್ಲಿ ಪ್ರಜಾಪ್ರಭುತ್ವ ಮತ್ತು ಮೂಲಭೂತ ಅಧಿಕಾರಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ನಾವು ನಿಯಮಿತವಾಗಿ ಮತ್ತು ವಸ್ತುನಿಷ್ಠವಾಗಿ ಚರ್ಚಿಸುತ್ತಲೇ ಇರುತ್ತೇವೆ. (ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯು ಪ್ರಜಾಪ್ರಭುತ್ವದ ಅಂಶಗಳನ್ನು ಒಳಗೊಂಡಿರುತ್ತದೆ, ಇಲ್ಲ, ಇದರಿಂದಲೇ ಜನರ ಜೀವನವು ನಿಜವಾದ ಆನಂದಮಯವಾಗಿರುತ್ತದೆ, ಎನ್ನುವುದನ್ನು ಹಿಂದೂಗಳು  ಹಿಂದೂ ದ್ವೇಷಿಗಳಿಗೆ ಖಡಾಖಂಡಿತವಾಗಿ ಹೇಳಬೇಕು! – ಸಂಪಾದಕರು)

(ಸೌಜನ್ಯ: The Indian Express)

ಸಂಪಾದಕರ ನಿಲುವು

* ಇಂತಹ ಮೂರ್ಖತನದ ಮಾತುಗಳನ್ನಾಡುವುದಕ್ಕಿಂತ  ಭಾರತದ  ಮನಸ್ಸಿನಲ್ಲಿ ನಿಜವಾದ ಅರ್ಥದಲ್ಲಿ ವಿಶ್ವಾಸವನ್ನು ಮೂಡಿಸುವುದಿದ್ದರೆ, ಅಮೇರಿಕೆಯು ಖಲಿಸ್ತಾನಿ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು !