‘ಧರ್ಮಕಾರ್ಯದಲ್ಲಿನ ಅಡಚಣೆ ದೂರವಾಗಲು’, ಸ್ಥೂಲದೊಂದಿಗೆ ಆಧ್ಯಾತ್ಮಿಕ ಸ್ತರದ ಉಪಾಯ ಸಹ ಮಾಡಿ !

ಸಾಧಕರು ಮತ್ತು ಕಾರ್ಯಕರ್ತರಿಗೆ ಸೂಚನೆ

‘ಹಿಂದೂ ರಾಷ್ಟ್ರ ಸ್ಥಾಪನೆ’ಗಾಗಿ ಧರ್ಮಜಾಗೃತಿಯ ಉಪಕ್ರಮಗಳನ್ನು ಹಮ್ಮಿಕೊಳ್ಳುವಾಗ ವಿವಿಧ ಅಡಚಣೆಗಳು ಬರುತ್ತವೆ, ಉದಾ. ಪೊಲೀಸರ ಅನುಮತಿ ಸಿಗದಿರುವುದು, ಧರ್ಮದ್ರೋಹಿಗಳಿಂದ ಅಡಚಣೆ, ಸಾಧಕರಿಗಾಗುವ ತೊಂದರೆಗಳು ಇತ್ಯಾದಿ. ಈ ಅಡಚಣೆಗಳನ್ನು ಜಯಿಸಲು ಸ್ಥೂಲದ ಪ್ರಯತ್ನಗಳೊಂದಿಗೆ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನೂ ಮಾಡಬೇಕು. ಪ್ರಾಥಮಿಕ ಹಂತದಲ್ಲಿ ಯಾವುದೇ ಉಪಕ್ರಮದಲ್ಲಿ ಅಡಚಣೆ ಬರುತ್ತಿದ್ದಲ್ಲಿ ತಕ್ಷಣ ಅದಕ್ಕೆ ಸಂಬಂಧಿತ ಪ್ರಸಾರ ಸಾಹಿತ್ಯಗಳ ಮೇಲೆ (ಉದಾ. ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಗಳಲ್ಲಿ ಅಡಚಣೆಗಳು ಬರುತ್ತಿದ್ದರೆ ಅವುಗಳ ಭಿತ್ತಿಪತ್ರಗಳ ಮೇಲೆ) ತೆಂಗಿನಕಾಯಿ ನಿವಾಳಿಸಿ ಒಡೆಯಬೇಕು. ಈ ರೀತಿ ತೆಂಗಿನಕಾಯಿ ಅಡ್ಡ ಒಡೆಯುವ ತನಕ ತೆಂಗಿನಕಾಯಿಯನ್ನು ನಿವಾಳಿಸಿ ಒಡೆಯುತ್ತಲೇ ಇರಬೇಕು.

ಸದ್ಯ ಕೆಲವೆಡೆಗಳಲ್ಲಿ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಗಳಲ್ಲಿ ಬರುವ ಅಡಚಣೆಗಳನ್ನು ನಿವಾರಿಸಲು ಸಾಧಕರು ಈ ಆಧ್ಯಾತ್ಮಿಕ ಉಪಾಯ ಮಾಡುತ್ತಿದ್ದಾರೆ. ಅದರಿಂದ ಅವರಿಗೆ ಲಾಭವೂ ಆಗುತ್ತಿದೆ. ಈ ರೀತಿ ಹಿಂದೂ ಅಧಿವೇಶನ, ಹಿಂದೂ ಸಂಘಟನಾ ಮೇಳ, ರಾಷ್ಟ್ರ ಮತ್ತು ಧರ್ಮ ಜಾಗೃತಿಪರ ಚಿತ್ರ-ಪ್ರದರ್ಶನಗಳು, ದೊಡ್ಡ ಗ್ರಂಥ ಪ್ರದರ್ಶನಗಳು ಇಂತಹ ಸಮಷ್ಟಿಗೆ ಸಂಬಂಧಿಸಿದ ಉಪಕ್ರಮಗಳ ಆರಂಭದಲ್ಲಿ ಆಧ್ಯಾತ್ಮಿಕ ತೊಂದರೆ ದೂರವಾಗಲು ತೆಂಗಿನಕಾಯಿ ಒಡೆಯಬೇಕು.