ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೈ ಬೆರಳುಗಳಿಂದ, ಹಾಗೆಯೇ ಕಣ್ಣುಗಳಿಂದ ಪ್ರಕ್ಷೇಪಿಸುವ ತೇಜತತ್ತ್ವರೂಪಿ ಪ್ರಕಾಶದ ಪ್ರಯೋಗ

‘ಸಾಧನೆ ಮಾಡುವ ಉನ್ನತ ವ್ಯಕ್ತಿಯ ದೇಹದಿಂದ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳು ಸತತವಾಗಿ ಪ್ರಕ್ಷೇಪಿಸುತ್ತಿರುತ್ತವೆ. ಈ ಪಂಚತತ್ತ್ವಗಳಲ್ಲಿನ ತೇಜತತ್ತ್ವವನ್ನು ಅನುಭವಿಸುವುದು ಸ್ವಲ್ಪ ಸುಲಭವಾಗಿದೆ. ತೇಜತತ್ತ್ವವು ನಮಗೆ ಉಷ್ಣತೆ ಮತ್ತು ಪ್ರಕಾಶದ ಮಾಧ್ಯಮದಿಂದ ಅರಿವಾಗುತ್ತದೆ. ಇವುಗಳಲ್ಲಿನ ಪ್ರಕಾಶದ ಅನುಭೂತಿ ಯನ್ನು ಪಡೆಯಲಿಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೆಲವು ಪ್ರಯೋಗಗಳನ್ನು ಮಾಡಿದರು. ‘ಯಾವುದಾದರೊಂದು ಸ್ಥಳದ ಕಡೆಗೆ ಅವರು ಕೈ ಮಾಡಿದ ನಂತರ ಅಥವಾ ಆ ಸ್ಥಳದ ಕಡೆಗೆ ಅವರು ನೋಡಿದ ನಂತರ ಕೈ ಬೆರಳುಗಳಿಂದ ಅಥವಾ ಕಣ್ಣುಗಳಿಂದ ತೇಜತತ್ತ್ವ ಪ್ರಕಾಶದ ರೂಪದಲ್ಲಿ ಪ್ರಕ್ಷೇಪಿಸುವುದರಿಂದ ಆ ಜಾಗದಲ್ಲಿ ಯಾವ ಬದಲಾವಣೆಗಳನ್ನು ಅನುಭವಿಸಬಹುದು ?, ಈ ಸಂದರ್ಭದಲ್ಲಿ ಈ ಪ್ರಯೋಗವಿತ್ತು. ಇಲ್ಲಿ ಈ ಕುರಿತು ಬಂದಿರುವ ಅನುಭೂತಿಗಳನ್ನು ಮತ್ತು ಆ ಅನುಭೂತಿಗಳ ಹಿಂದಿನ ಶಾಸ್ತ್ರವನ್ನು ಕೊಡಲಾಗಿದೆ.

ಸದ್ಗುರು ಡಾ. ಮುಕುಲ ಗಾಡಗೀಳ

೧. ಪ್ರಯೋಗದಲ್ಲಿನ ಸಾಮಾನ್ಯ ಭಾಗಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಟ್ಯೂಬ್‌ಲೈಟ್‌ನ ಎದುರಿಗೆ ಸುಮಾರು ೫ ಮೀಟರ್ ದೂರದಲ್ಲಿ ಕುಳಿತು ಮುಂದಿನ ಪ್ರಯೋಗವನ್ನು ಮಾಡಿದರು.

೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಎದುರಿಗೆ ಕೈ ಮಾಡಿದಾಗ ಆ ಭಾಗದಲ್ಲಿನ ಬೆಳಕು ಹೆಚ್ಚಾಗುವುದು ಅಥವಾ ಕತ್ತಲು ಕಡಿಮೆಯಾಗುವುದು

೨ ಅ. ತೊಲೆ ಮತ್ತು ಅದಕ್ಕೆ ತಗಲಿಕೊಂಡಿರುವ ಚಪ್ಪರದ ಮೇಲೆ ಬಿದ್ದಿರುವ ಟ್ಯೂಬ್‌ಲೈಟ್‌ನ ಬೆಳಕಿನ ದಿಕ್ಕಿನಲ್ಲಿ ಕೈ ಮಾಡಿದಾಗ ‘ಬೆಳಕಿನಲ್ಲಿ ಏನು ಬದಲಾವಣೆಯಾಗುತ್ತದೆ ?, ಎಂದು ನೋಡುವುದು : ಪ್ರಯೋಗವನ್ನು ಮಾಡುವಾಗ ಉರಿಯುತ್ತಿರುವ ಟ್ಯೂಬ್‌ಲೈಟಿನ ಬೆಳಕು ತೊಲೆ ಮತ್ತು ಅದರ ಕಾಟಕೋನದಲ್ಲಿ ಅದಕ್ಕೆ ಹತ್ತಿರುವ ಕೋಣೆಯ ಚಪ್ಪರದ ಕೆಲವು ಭಾಗದ ಮೇಲೆ ಬಿದ್ದಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಟ್ಯೂಬ್‌ಲೈಟಿನ ಬೆಳಕು ಬಿದ್ದಿರುವ ದಿಶೆಯಲ್ಲಿ ತಮ್ಮ ಬಲಗೈಯನ್ನು ತೋರಿಸಿದರು. ಆ ಸಮಯದಲ್ಲಿ ಅವರು ಆ ಕೈ ಬೆರಳುಗಳನ್ನು ಸರಳವಾಗಿಟ್ಟಿದ್ದರು. ಮೊದಲಿಗೆ ಅವರು ತಮ್ಮ ಕೈಯನ್ನು ಸ್ಥಿರವಾಗಿಟ್ಟರು ಮತ್ತು ಸ್ವಲ್ಪ ಸಮಯದ ನಂತರ ಅವರು ಅದನ್ನು ಎಡಬದಿಗೆ-ಬಲಬದಿಗೆ ಸ್ವಲ್ಪ ಅಲುಗಾಡಿಸಿದರು. ಹಾಗೆ ಮಾಡಿದಾಗ ‘ಟ್ಯೂಬ್‌ಲೈಟ್‌ನಿಂದ ಬಿದ್ದಿರುವ ಬೆಳಕಿನಲ್ಲಿ ಏನು ಬದಲಾವಣೆಯಾಗುತ್ತದೆ ?, ಎಂಬುದನ್ನು ಅವರು ಪ್ರಯೋಗವನ್ನು ನೋಡುವ ನಮ್ಮೆಲ್ಲ ಸಾಧಕರಿಗೆ ಹೇಳಿದರು.

೨ ಅ ೧. ಅನುಭೂತಿ – ಟ್ಯೂಬ್‌ಲೈಟ್‌ನ ಬೆಳಕಿನಲ್ಲಿ ಸ್ವಲ್ಪ ಹೆಚ್ಚಳವಾಗುವುದು, ಅದು ಸ್ವಲ್ಪ ತಿಳಿನೀಲಿಯೂ ಕಾಣಿಸುವುದು ಮತ್ತು ಕೈಯನ್ನು ಅಲುಗಾಡಿಸಿದಾಗ ಬೆಳಕೂ ಅಲುಗಾಡುವುದು ಕಾಣಿಸುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಮ್ಮ ಕೈಯನ್ನು ಟ್ಯೂಬ್‌ಲೈಟಿನ ಪ್ರಕಾಶದ ಎದುರಿಗೆ ಮಾಡಿ ಅದನ್ನು ಸ್ಥಿರವಾಗಿಟ್ಟರು, ಆಗ ತೊಲೆ ಮತ್ತು ಚಪ್ಪರದ ಮೇಲೆ ಬಿದ್ದಿರುವ ಟ್ಯೂಬ್‌ಲೈಟಿನ ಬೆಳಕು ಸ್ವಲ್ಪ ಹೆಚ್ಚಾಯಿತು, ಹಾಗೆಯೇ ಅದು ಸ್ವಲ್ಪ ತಿಳಿನೀಲಿ ಆಗಿರುವುದು ಪ್ರಯೋಗವನ್ನು ನೋಡುವ ಸಾಧಕರಿಗೆ ಅರಿವಾಯಿತು. ನಂತರ ಅವರು ತಮ್ಮ ಕೈಯನ್ನು ಎಡಬದಿಗೆ-ಬಲಬದಿಗೆ ಸ್ವಲ್ಪ ಅಲುಗಾಡಿಸಿದಾಗ ತೊಲೆ ಮತ್ತು ಚಪ್ಪರದ ಮೇಲಿನ ಬೆಳಕೂ ಅಲುಗಾಡುವುದು ಕಾಣಿಸಿತು.

೨ ಅ ೧ ಅ. ಅನುಭೂತಿಯ ಹಿಂದಿನ ಶಾಸ್ತ್ರ : ಸಾಧನೆಯನ್ನು ಮಾಡುವುದರಿಂದ ದೇಹದಲ್ಲಿ ಸತ್ವಗುಣ ಹೆಚ್ಚಾಗುತ್ತದೆ ಮತ್ತು ದೇಹದಿಂದ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳು ಚೈತನ್ಯದ ಸ್ತರದಲ್ಲಿ ಪ್ರಕ್ಷೇಪಿಸುತ್ತವೆ. ದೇಹದಲ್ಲಿನ ಪಂಚತತ್ತ್ವಗಳು ಪ್ರಕ್ಷೇಪಿಸುವುದರಿಂದ ಯಾವ ಪಂಚತತ್ತ್ವದಿಂದ ಯಾವ ಅನುಭೂತಿಗಳು ಬರುತ್ತವೆ, ಎಂಬುದನ್ನು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.

೨ ಅ ೧ ಆ. ಪ್ರಕಾಶ ತಿಳಿನೀಲಿ ಕಾಣಿಸುವುದರ ಕಾರಣ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತೊಲೆ (ಬೀಮ್) ಮತ್ತು ಛಾವಣಿಯ ಮೇಲೆ ಬಿದ್ದಿರುವ ಟ್ಯೂಬ್‌ಲೈಟಿನ ಬೆಳಕಿನ ದಿಶೆಯಲ್ಲಿ ಕೈ ಮಾಡಿದಾಗ ಆ ಬೆಳಕು ಸ್ವಲ್ಪ ತಿಳಿ ನೀಲಿ ಕಾಣಿಸಿತು. ಇದಕ್ಕೆ ಕಾರಣವೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ವಿಷ್ಣುತತ್ತ್ವವಿದೆ, ಹಾಗೆಯೇ ಮಹರ್ಷಿಗಳು ‘ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀವಿಷ್ಣುವಿನ ಅವತಾರರಾಗಿದ್ದಾರೆ, ಎಂದು ಹೇಳಿದ್ದಾರೆ. ವಿಷ್ಣುತತ್ತ್ವವು ತಿಳಿನೀಲಿಯಾಗಿರುವುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಟ್ಯೂಬ್‌ಲೈಟಿನ ಬೆಳಕಿನ ದಿಶೆಯಲ್ಲಿ ಕೈ ಮಾಡಿದಾಗ ಆ ಪ್ರಕಾಶವು ತಿಳಿನೀಲಿ ಆಯಿತು, ಎಂದು ಗಮನಕ್ಕೆ ಬಂದಿತು, ಹಾಗೆಯೇ ಈಶ್ವರಭಕ್ತಿಯ ಸೂಕ್ಷ್ಮದ ಬಣ್ಣವೂ ತಿಳಿನೀಲಿ ಇದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಪರಾತ್ಪರ ಗುರು ಈ ಅಧ್ಯಾತ್ಮದಲ್ಲಿನ ಸರ್ವೋಚ್ಚ ಪದವಿಯಲ್ಲಿರುವುದರಿಂದ ಅವರಲ್ಲಿ ಈಶ್ವರಭಕ್ತಿ ಇದೆ. ನಿಜ ಹೇಳುವುದಾದರೆ ಅವರು ಈಶ್ವರನ ಸಗುಣ ರೂಪವೇ ಆಗಿದ್ದಾರೆ; ಆದ್ದರಿಂದ ಅವರಿಂದ ಟ್ಯೂಬ್‌ಲೈಟಿನ ಬೆಳಕೂ ತಿಳಿನೀಲಿಯಾಗಿರುವುದು ಕಾಣಿಸಿತು.

೨ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಟ್ಯೂಬ್‌ಲೈಟ್ ಉರಿಯುವಾಗ ಅದರ ದಿಶೆಯಲ್ಲಿ ಕೈ ಮಾಡುವುದು : ಉರಿಯುತ್ತಿರುವ ಅಡ್ಡ ಟ್ಯೂಬ್‌ಲೈಟಿನ ಮುಂದಿನ ತೊಲೆಯ ಮೇಲೆ ಅದರ ನೆರಳು ಬಿದ್ದಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಟ್ಯೂಬ್‌ಲೈಟ್‌ನ ದಿಶೆಯಲ್ಲಿ ತಮ್ಮ ಕೈಯನ್ನು ಹಿಡಿದರು. ಆಗ ಅವರು ನಮಗೆ ‘ಟ್ಯೂಬ್‌ಲೈಟ್‌ನ ನೆರಳಿನಲ್ಲಿ ಏನು ಬದಲಾವಣೆಯಾಗುತ್ತದೆ ?, ಎಂಬುದರ ನಿರೀಕ್ಷಣೆಯನ್ನು ಮಾಡಲು ಹೇಳಿದರು. ಅದು ಸ್ಪಷ್ಟವಾಗಿ ತಿಳಿಯಬೇಕೆಂದು ಅವರು ಟ್ಯೂಬ್‌ಲೈಟ್‌ನ ದಿಶೆಯಲ್ಲಿ ಹಿಡಿದ ಅವರ ಕೈಯನ್ನು ಹಿಂದೆ ತೆಗೆದರು ಮತ್ತು ಪುನಃ ಆ ಟ್ಯೂಬ್‌ಲೈಟ್‌ನ ದಿಶೆಯಲ್ಲಿ ಹಿಡಿದರು. ಹೀಗೆ ಅವರು ಎರಡು-ಮೂರುಬಾರಿ ಮಾಡಿದರು.

೨ ಆ ೧. ಅನುಭೂತಿ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಉರಿಯುತ್ತಿರುವ ಟ್ಯೂಬ್‌ಲೈಟ್‌ನ ದಿಶೆಯಲ್ಲಿ ತಮ್ಮ ಕೈಮಾಡಿದಾಗ ಅಡ್ಡ ಟ್ಯೂಬ್‌ಲೈಟ್‌ನ ಮುಂದಿನ ತೊಲೆಯ ಮೇಲೆ ಬಿದ್ದಿರುವ ಅದರ ನೆರಳು ತಿಳಿಯಾಯಿತು.

೨ ಆ ೧ ಅ. ಅನುಭೂತಿಯ ಹಿಂದಿನ ಶಾಸ್ತ್ರ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಟ್ಯೂಬಲೈಟ್‌ನ ದಿಶೆಯಲ್ಲಿ ತಮ್ಮ ಕೈಯನ್ನು ಹಿಡಿದಾಗ ಅವರ ಕೈಬೆರಳುಗಳಿಂದ ಪ್ರಕ್ಷೇಪಿತ ವಾದ ತೇಜತತ್ತ್ವರೂಪಿ ಪ್ರಕಾಶವು ಟ್ಯೂಬಲೈಟ್‌ನಲ್ಲಿ ಸೇರಿ ಕೊಂಡಿತು.

ಆದ್ದರಿಂದ ಟ್ಯೂಬಲೈಟ್‌ನ ಪ್ರಕಾಶವು ಹೆಚ್ಚಾಗಿರುವುದರಿಂದ ನೆರಳು ತಿಳಿಯಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಟ್ಯೂಬ್‌ಲೈಟಿನ ದಿಶೆಯಲ್ಲಿ ಮಾಡಿದ ಕೈಯನ್ನು ಹಿಂತೆಗೆದಾಗ ಟ್ಯೂಬ್‌ಲೈಟಿನ ತಿಳಿಯಾಗಿದ್ದ ನೆರಳು ದಟ್ಟವಾಗಿ ಅವರು ಟ್ಯೂಬ್‌ಲೈಟಿನ ದಿಶೆಯಲ್ಲಿ ಕೈ ಮಾಡಿದಾಗ ಟ್ಯೂಬ್‌ಲೈಟಿನ ನೆರಳು ಪುನಃ ತಿಳಿಯಾಗುತ್ತಿತ್ತು. ಇದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೈಬೆರಳು ಗಳಿಂದ ಪ್ರಕಾಶ ಪ್ರಕ್ಷೇಪಿಸುತ್ತದೆ, ಎಂಬುದು ಸಿದ್ಧವಾಯಿತು.

೨ ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತೊಲೆಯ ಮೇಲಿನ ಸ್ವಲ್ಪ ಕತ್ತಲಿರುವ ದಿಶೆಯಲ್ಲಿ ಕೈ ಮಾಡುವುದು, ಹಾಗೆಯೇ ಅವರು ಆ ಕತ್ತಲಿನ ಭಾಗದಲ್ಲಿ ತಮ್ಮ ಕೈಯನ್ನು ಎಡಬದಿಯಿಂದ ಬಲಬದಿಗೆ ಮತ್ತು ಬಲಬದಿಯಿಂದ ಎಡಬದಿಗೆ ಅಲುಗಾಡಿಸುವುದು : ತೊಲೆಯ ಮೇಲೆ ಟ್ಯೂಬ್‌ಲೈಟಿನ ಬಲಬದಿಯಲ್ಲಿನ ಭಾಗದಲ್ಲಿ ಸ್ವಲ್ಪ ಕತ್ತಲು ಇತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಆ ಕತ್ತಲಿನ ದಿಶೆಯಲ್ಲಿ ಕೈ ಮಾಡಿದರು ಮತ್ತು ‘ಆ ಕತ್ತಲಿನಲ್ಲಿ ಏನು ಬದಲಾವಣೆಯಾಗುತ್ತದೆ ?, ಎಂದು ನೋಡಲು ಹೇಳಿದರು, ಹಾಗೆಯೇ ಅವರು ಕತ್ತಲಿನ ದಿಶೆಯಲ್ಲಿ ಮಾಡಿದ ಕೈಯನ್ನು ಆ ಕತ್ತಲಿನ ಭಾಗದಲ್ಲಿ ಎಡಬದಿಯಿಂದ ಬಲಬದಿಗೆ ಮತ್ತು ಬಲಬದಿಯಿಂದ ಎಡಬದಿಗೆ ಅಲುಗಾಡಿಸಿದರು. ಆಗಲೂ ಅವರು ‘ಆ ಕತ್ತಲಿನಲ್ಲಿ ಏನು ಬದಲಾವಣೆಯಾಗುತ್ತದೆ ?, ಎಂದು ನೋಡಲು ಹೇಳಿದರು.

೨ ಇ ೧. ಅನುಭೂತಿ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತೊಲೆಯ ಮೇಲಿನ (ಛಾವಣಿಯ ಮೇಲಿನ ‘ಬೀಮ್ ಮೇಲೆ) ಸ್ವಲ್ಪ ಕತ್ತಲು ಇರುವ ದಿಶೆಯಲ್ಲಿ ಕೈ ಮಾಡಿದಾಗ ಅಲ್ಲಿನ ಕತ್ತಲು ಕಡಿಮೆಯಾಗುವುದು ಮತ್ತು ಅವರು ಕೈಯನ್ನು ಎಡಬದಿಯಲ್ಲಿ-ಬಲಬದಿಯಲ್ಲಿ ಅಲುಗಾಡಿಸಿದಾಗ ಕತ್ತಲಿನಲ್ಲಿ ಪ್ರಕಾಶದ ಪಟ್ಟಿಗಳು ಮೂಡಿರುವಂತೆ ಕಾಣಿಸುವುದು: ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತೊಲೆಯ ಮೇಲಿನ ಸ್ವಲ್ಪ ಕತ್ತಲಿರುವ ಭಾಗದ ದಿಶೆಯಲ್ಲಿ ಕೈ ಮಾಡಿದಾಗ ಅಲ್ಲಿನ ಕತ್ತಲು ಕಡಿಮೆಯಾಗಿರುವುದು ಗಮನಕ್ಕೆ ಬಂದಿತು, ಹಾಗೆಯೇ ಅವರು ಕೈಯನ್ನು ಸ್ಥಿರವಾಗಿಡದೇ ಕತ್ತಲು ಇರುವ ಭಾಗದಲ್ಲಿ ಎಡಬದಿಯಿಂದ ಬಲಬದಿಗೆ ಮತ್ತು ಬಲಬದಿಯಿಂದ ಎಡಬದಿಗೆ ೨-೩ ಬಾರಿ ಅಲುಗಾಡಿಸಿದರು. ಆಗ ಬಣ್ಣದ ‘ಬ್ರಶ್ನಿಂದ ಯಾವುದಾದರೊಂದು ಬಣ್ಣದ ಅಡ್ಡ ಪಟ್ಟಿಗಳನ್ನು ಹಚ್ಚಿದ ನಂತರ ಮೊದಲಿನ ಬಣ್ಣವು ಒರೆಸಿ ಹೊಸಬಣ್ಣದ ಪಟ್ಟಿಗಳು ಯಾವ ರೀತಿ ಕಾಣುತ್ತವೆಯೋ, ಅದೇ ರೀತಿ ‘ಕತ್ತಲು ದೂರವಾಗಿ ಪ್ರಕಾಶದ ಪಟ್ಟಿಗಳು ತೊಲೆಯ ಮೇಲೆ ಮೂಡುತ್ತಿರುವುದು ಕಾಣಿಸಿತು.

೨ ಇ ೧ ಅ. ಅನುಭೂತಿಗಳ ಹಿಂದಿನ ಶಾಸ್ತ್ರ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಯಾವಾಗ ತಮ್ಮ ಕೈ ಯನ್ನು ತೊಲೆಯ ಮೇಲಿನ ಸ್ವಲ್ಪ ಕತ್ತಲು ಇರುವ ಭಾಗದ ದಿಶೆಯಲ್ಲಿ ಮಾಡಿದರೋ, ಆಗ ಅವರ ಕೈಬೆರಳುಗಳಿಂದ ಪ್ರಕ್ಷೇಪಿಸುವ ಪ್ರಕಾಶದಿಂದ ಅಲ್ಲಿನ ಕತ್ತಲು ಸ್ವಲ್ಪ ಕಡಿಮೆ ಆಯಿತು. ಹಾಗೆಯೇ ಅವರು ತಮ್ಮ ಕೈಯನ್ನು ಯಾವಾಗ ಕತ್ತಲಿನ ಭಾಗದಲ್ಲಿ ಎಡಬದಿಯಿಂದ ಬಲಬದಿಗೆ ಅಲುಗಾಡಿ ಸುತ್ತಿದ್ದರೋ, ಆಗ ಅವರ ಬೆರಳುಗಳಿಂದ ಪ್ರಕ್ಷೇಪಿಸುವ ಪ್ರಕಾಶವೂ ಎಡಬದಿಯಿಂದ ಬಲಬದಿಗೆ ಹರಡುತ್ತಿತ್ತು ಮತ್ತು ಪ್ರಕಾಶದ ಪಟ್ಟಿ ಸಿದ್ಧವಾಗುತ್ತಿತ್ತು. ಆದ್ದರಿಂದ ಆಗ ‘ಆ ಪ್ರಕಾಶದ ಪಟ್ಟಿಯಿಂದ ಕತ್ತಲು ಅಳಿಸಿ ಹೋಗುತ್ತಿದೆ, ಎಂಬುದು ಅರಿವಾಗುತ್ತಿತ್ತು.

೨ ಈ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೋಣೆಯಲ್ಲಿ ೨ ಟ್ಯೂಬ್‌ಲೈಟ್‌ಗಳು ಉರಿಯುತ್ತಿರುವಾಗ ಗೋಡೆಯ ಮೇಲಿನ ಭಾಗದಲ್ಲಿ ಮೂಲೆಯ ದಿಶೆಯಲ್ಲಿ ಕೈ ಮಾಡುವುದು : ಈ ಪ್ರಯೋಗದಲ್ಲಿ ತೊಲೆಯ ಮೇಲಿನ ಟ್ಯೂಬ್‌ಲೈಟ್ ಉರಿಯುತ್ತಿತ್ತು, ಹಾಗೆಯೇ ಅಡ್ಡ ತೊಲೆಯ ಎರಡೂ ಬದಿಯಲ್ಲಿ ಕಾಟಕೋನದಲ್ಲಿರುವ ಎರಡೂ ಗೋಡೆ ಗಳ ಮೇಲಿನ ಟ್ಯೂಬ್‌ಲೈಟೂಗಳೂ ಉರಿಯುತ್ತಿದ್ದವು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತೊಲೆ, ಅದರ ಮುಂದಿನ ಗೋಡೆ ಮತ್ತು ಮೇಲಿನ ಛಾವಣಿ ಒಂದಕ್ಕೊಂದು ಜೋಡಿಸಿದ ಸ್ಥಳದಲ್ಲಿ ಆದ ತ್ರಿಕೋನದ ಮೂಲೆಯ ದಿಶೆಯಲ್ಲಿ ಕೈ ಮಾಡಿದರು.

೨ ಈ ೧. ಅನುಭೂತಿ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೈಯಿಂದ ಪ್ರಕಾಶಕಣಗಳು ಪ್ರಕ್ಷೇಪಿಸುವುದು ಕಾಣಿಸಿತು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮೂಲೆಯ ದಿಶೆಯಲ್ಲಿ ಕೈ ಮಾಡಿದಾಗ ಅಲ್ಲಿ ಪ್ರಕಾಶಮಾನ ದೈವೀಕಣಗಳು ಕಾಣಿಸಿದವು, ಹಾಗೆಯೇ ಪ್ರಕಾಶಕಣಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೈಯಿಂದ ಮೂಲೆಯ ದಿಶೆಯಲ್ಲಿ ಹೋಗುತ್ತಿರುವುದು ಕಾಣಿಸಿತು. ಆ ಪ್ರಕಾಶಮಾನ ಕಣಗಳಿಗೆ ವೇಗ(ಗತಿ)ಇತ್ತು.

೨ ಈ ೧ ಅ. ಅನುಭೂತಿಯ ಹಿಂದಿನ ಶಾಸ್ತ್ರ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬೆರಳುಗಳಿಂದ ತೇಜತತ್ತ್ವ ಪ್ರಕ್ಷೇಪಿಸುತ್ತದೆ. ಅದು ನಮ್ಮ ಕಣ್ಣುಗಳಿಗೆ ಪ್ರಕಾಶದ ರೂಪ ದಲ್ಲಿ ಕಾಣಿಸುತ್ತದೆ. ಚೈತನ್ಯವು ತೇಜತತ್ತ್ವದ ಇನ್ನೊಂದು ರೂಪವಾಗಿದೆ. ಅದು ಇನ್ನೂ ಸೂಕ್ಷ್ಮವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬೆರಳುಗಳಿಂದ ಪ್ರಕಾಶ ದೊಂದಿಗೆ ಚೈತನ್ಯವೂ ಪ್ರಕ್ಷೇಪಿಸುತ್ತಿರುತ್ತದೆ. ಅವರು ಸ್ಪರ್ಶಿಸಿದ ಯಾವುದೇ ವಸ್ತುಗಳು ಚೈತನ್ಯದಿಂದ ತುಂಬಿಕೊಳ್ಳುತ್ತವೆ. ಆದ್ದರಿಂದ ವಸ್ತುಗಳ ಸಕಾರಾತ್ಮಕ ಊರ್ಜೆ ಹೆಚ್ಚಾಗುತ್ತದೆ ಮತ್ತು ಅದನ್ನು ‘ಯುನಿವರ್ಸಲ್ ಔರಾ ಸ್ಕ್ಯಾನರ್ ಈ ಉಪಕರಣದಿಂದ ಅಳೆಯಬಹುದು. ೨೦೧೨ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇಹದ ಮೇಲೆ ಚೈತನ್ಯದ ಹಳದಿ ಬಣ್ಣದ ದೈವೀ ಕಣಗಳೂ ಕಾಣಿಸಿದ್ದವು, ಹಾಗೆಯೇ ‘ದೈವೀ ಕಣಗಳು ಅವರ ದೇಹ ದಿಂದ ಪ್ರಕ್ಷೇಪಿಸುತ್ತಿವೆ, ಎಂಬುದೂ ತಿಳಿದಿತ್ತು. (ಆಧಾರ : ಸನಾತನದ ಗ್ರಂಥ ‘ದೈವೀ ಕಣಗಳು) ಈಗಲೂ ‘ಅವರು ಕೋಣೆಯಲ್ಲಿನ ಮೂಲೆಯ ದಿಶೆಯಲ್ಲಿ ಕೈ ಮಾಡಿದಾಗ ಮತ್ತು ಕೋಣೆಯಲ್ಲಿನ ಇನ್ನೂ ೨ ಟ್ಯೂಬ್‌ಲೈಟ್‌ಗಳನ್ನು ಹಚ್ಚಿ ಪ್ರಕಾಶ ಹೆಚ್ಚಾದಾಗ ಅವರ ಕೈಬೆರಳುಗಳಿಂದ ಪ್ರಕಾಶಮಾನ ದೈವೀ ಕಣಗಳು ಮೂಲೆಯ ದಿಶೆಯಲ್ಲಿ ಹೋಗುತ್ತಿವೆ, ಎಂಬುದರ ಅನುಭೂತಿಯನ್ನು ಪಡೆದೆವು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬೆರಳುಗಳಿಂದ ಪ್ರಕ್ಷೇಪಿಸುವ ದೈವೀ ಪ್ರಕಾಶಮಾನ ಕಣಗಳೆಂದರೆ ಚೈತನ್ಯದ ಕಣಗಳು.

೨ ಉ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತೊಲೆಯ ಈಚೆಗಿನ ಕೋಣೆಯ ಮಧ್ಯಭಾಗದಲ್ಲಿರುವ ಛಾವಣಿಯ ಕಡೆಗೆ ಕೈ ಮಾಡಿದರು ಮತ್ತು ಅದರ ನಿರೀಕ್ಷಣೆ ಮಾಡಲು ಹೇಳಿದರು, ಹಾಗೆಯೇ ಚಪ್ಪರದ ಈ ಭಾಗದ ತುಲನೆಯನ್ನು ಅದರ ಬಲಬದಿಯಲ್ಲಿ ಇರುವ ಛಾವಣಿಯ ಭಾಗದೊಂದಿಗೆ ಮಾಡಲು ಹೇಳಿದರು.

೨ ಉ ೧. ಅನುಭೂತಿ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಚಪ್ಪರದ ದಿಶೆಯಲ್ಲಿ ಕೈ ಮಾಡಿದಾಗ ಅಲ್ಲಿ ಪ್ರಕಾಶ ಕಾಣಿಸುವುದು, ಚಪ್ಪರದ ಆ ಭಾಗವು ಸಜೀವವಾಗಿರುವುದಾಗಿ ಅರಿವಾಗುವುದು ಮತ್ತು ಅದರ ಕಡೆಗೆ ನೋಡಿ ಭಾವಜಾಗೃತ ಆಗುವುದು : ಕೋಣೆಯ ಮಧ್ಯಭಾಗದಲ್ಲಿರುವ ಛಾವಣಿಯ ಮೇಲೆ ಪ್ರಕಾಶ ಕಾಣಿಸಿತು. ಆ ತುಲನೆಯಲ್ಲಿ ಅದರ ಬಲಬದಿಯ ಇರುವ ಛಾವಣಿಯ ಭಾಗವು ನಿರ್ಜೀವ ಅನಿಸುತ್ತದೆ. ಚಪ್ಪರದ ಮಧ್ಯದ ಭಾಗದಲ್ಲಿರುವ ಪ್ರಕಾಶವನ್ನು ನೋಡಿ ಭಾವಜಾಗೃತವಾಯಿತು.

೨ ಉ ೧ ಅ. ಅನುಭೂತಿಗಳ ಹಿಂದಿನ ಶಾಸ್ತ್ರ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೋಣೆಯ ಮಧ್ಯಭಾಗ ದಲ್ಲಿರುವ ಛಾವಣಿಯ ದಿಶೆಯಲ್ಲಿ ಕೈ ಮಾಡಿದಾಗ ಅವರ ಕೈಯಿಂದ ಪ್ರಕ್ಷೇಪಿಸಿದ ತೇಜತತ್ತ್ವದಿಂದ ಅಲ್ಲಿ ಪ್ರಕಾಶ ಕಾಣಿಸಿತು. ಚಪ್ಪರದ ಈ ಮಧ್ಯದ ಭಾಗ ಮತ್ತು ಅದರ ಬಲ ಬದಿಯಲ್ಲಿರುವ ಛಾವಣಿಯ ಭಾಗದ ತುಲನೆ ಮಾಡಿದಾಗ ಚಪ್ಪರದ ಈ ಎರಡೂ ಭಾಗಗಳಲ್ಲಿನ ವ್ಯತ್ಯಾಸವು ಸಹಜವಾಗಿ ಗಮನಕ್ಕೆ ಬಂದಿತು. ಛಾವಣಿಯ ಮಧ್ಯದ ಭಾಗವು ಸ್ಪಲ್ಪ ಪ್ರಕಾಶಮಾನವಾಗಿ ಕಾಣಿಸುತ್ತಿತ್ತು, ಛಾವಣಿಯ ಇನ್ನೊಂದು ಭಾಗವು ಪ್ರಕಾಶಮಾನವಾಗಿ ಕಾಣಿಸುತ್ತಿರಲಿಲ್ಲ, ಹಾಗೆಯೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೈಯಿಂದ ಪ್ರಕಾಶ ಪ್ರಕ್ಷೇಪಿಸುವುದರೊಂದಿಗೆ ಚೈತನ್ಯವೂ ಪ್ರಕ್ಷೇಪಿಸುತ್ತದೆ. ಆದ್ದರಿಂದ ಅವರು ಕೋಣೆಯ ಮಧ್ಯಭಾಗದಲ್ಲಿರುವ ಛಾವಣಿಯ ದಿಶೆಯಲ್ಲಿ ಕೈ ಮಾಡಿದಾಗ ಅವರ ಕೈಯಿಂದ ಪ್ರಕ್ಷೇಪಿಸಿದ ಚೈತನ್ಯದಿಂದ ಛಾವಣಿಯ ಆ ಭಾಗವು ಸಜೀವ ವಾಗಿರುವಂತೆ ಅನಿಸಿತು. ಈ ಸಜೀವತೆಯು ಕಣ್ಣುಗಳಿಗೆ ‘ಆ ಚಪ್ಪರವು ಮೃದುವಾಗಿರುವುದಾಗಿ ಅರಿವಾಗುವುದು, ಈ ರೂಪದಲ್ಲಿ ಅರಿವಾಯಿತು. ಇದರ ಬದಲಾಗಿ ಛಾವಣಿಯ ಇತರ ಭಾಗಗಳು ನಿರ್ಜೀವ ಮತ್ತು ಬಿರುಸು ಅನಿಸಿದವು; ಏಕೆಂದರೆ ಅದರ ಕಡೆಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೈ ಮಾಡುತ್ತಿರಲಿಲ್ಲ. ಯಾವುದಾದರೊಂದು ಚೈತನ್ಯಮಯ ವಸ್ತುವನ್ನು ನೋಡಿ ತಾನಾಗಿಯೇ ಈಶ್ವರನ ಅನುಭೂತಿ ಬರುತ್ತದೆ ಮತ್ತು ಭಾವಜಾಗೃತವಾಗುತ್ತದೆ. ಆದ್ದರಿಂದ ಛಾವಣಿಯ ಮಧ್ಯ ಭಾಗದಲ್ಲಿರುವ ಪ್ರಕಾಶವನ್ನು ನೋಡಿ ಭಾವಜಾಗೃತವಾಯಿತು. (ಮುಂದುವರಿಯುವುದು)

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಹೆಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧.೧.೨೦೨೩)

ತಜ್ಞರಿಗೆ, ಅಧ್ಯಯನಕಾರರಿಗೆ ಮತ್ತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರಿಗೆ ವಿನಂತಿ !

‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಯವರ ಕೈಬೆರಳುಗಳಿಂದ, ಹಾಗೆಯೇ ಕಣ್ಣುಗಳಿಂದ ಪ್ರಕ್ಷೇಪಿಸುವ ತೇಜತತ್ತ್ವರೂಪಿ ಪ್ರಕಾಶದ ಪ್ರಯೋಗ, ಈ ಕುರಿತು ಸಂಶೋಧನೆಯನ್ನು ಮಾಡಿ ಅವುಗಳ ಕಾರ್ಯ ಕಾರಣಭಾವವನ್ನು ಶೋಧಿಸಿ ತೆಗೆಯಲು ಸಾಧಕರು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯೋಗದ ಸಂದರ್ಭದಲ್ಲಿ ಯಾವ ವೈಜ್ಞಾನಿಕ ಉಪಕರಣದಿಂದ ಸಂಶೋಧನೆಯನ್ನು ಮಾಡಬೇಕು ? ಈ ಸಂದರ್ಭದಲ್ಲಿ ತಜ್ಞರು, ಅಧ್ಯಯನ ಮಾಡುವವರು, ಈ ವಿಷಯದ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳು ಮತ್ತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆಯನ್ನು ಮಾಡುವವರ ಸಹಾಯವು ನಮಗೆ ಲಭಿಸಿದರೆ ನಾವು ಕೃತಜ್ಞರಾಗುವೆವು.

ಸಂಪರ್ಕ : ಶ್ರೀ. ಆಶಿಷ ಸಾವಂತ
ವಿ-ಅಂಚೆ : [email protected]