ಎಲ್ಲಿ ಪೃಥ್ವಿಯ ಮೇಲೆ ರಾಜ್ಯವನ್ನಾಳುವ ಧ್ಯೇಯವನ್ನು ಇಟ್ಟುಕೊಂಡಿರುವ ಕೆಲವು ಪಂಥಗಳು ಮತ್ತು ಎಲ್ಲಿ ಪ್ರತಿಯೊಬ್ಬರಿಗೂ ಈಶ್ವರಪ್ರಾಪ್ತಿ ಯಾಗಬೇಕು, ಎಂಬ ಧ್ಯೇಯವನ್ನಿಟ್ಟುಕೊಂಡಿರುವ ಮಹಾನ ಹಿಂದೂ ಧರ್ಮ !
ವಿಜ್ಞಾನವು ಬಾಲವಾಡಿಯ ಶಿಕ್ಷಣಕ್ಕೆ ಸಮಾನ !
ಅಧ್ಯಾತ್ಮದ ಅಧ್ಯಯನ ಮತ್ತು ಸಾಧನೆಯನ್ನು ಮಾಡಿದ ನಂತರ, ವಿಜ್ಞಾನವು ಬಾಲವಾಡಿಯ ಶಿಕ್ಷಣಕ್ಕೆ ಸಮಾನವಾಗಿದೆ ಎಂಬುದು ತಿಳಿಯುತ್ತದೆ.
ತಥಾಕಥಿತ ಬುದ್ಧಿಜೀವಿಗಳು !
ವಿಜ್ಞಾನದ ಯಥಾರ್ಥ ಅಧ್ಯಯನ ಮಾಡುವವರು ಮಾತ್ರ ವಿಜ್ಞಾನದ ಇತಿಮಿತಿಗಳನ್ನು ಅರಿಯಬಲ್ಲರು. ಇತರ ತಥಾಕಥಿತ ಬುದ್ಧಿಜೀವಿಗಳು ವಿಜ್ಞಾನವನ್ನು ತಲೆಯ ಮೇಲೆ ಕೂರಿಸಿಕೊಂಡು ಕೊಂಡಾಡುತ್ತಾರೆ !
ಹಿಂದೂಗಳನ್ನು ಕೇವಲ ಧರ್ಮ ಒಂದೇ ಒಗ್ಗೂಡಿಸಬಹುದು !
’ಭಾರತದ ಹಿಂದೂಗಳಲ್ಲಿ, ಹಿಂದೂ ಧರ್ಮವನ್ನು ಹೊರತು ಪಡಿಸಿ ಭಾಷೆ, ಹಬ್ಬ, ಉತ್ಸವ, ಬಟ್ಟೆ ಇತ್ಯಾದಿಗಳ ಸಂದರ್ಭಗಳಲ್ಲಿ ವಿವಿಧ ರಾಜ್ಯಗಳಲ್ಲಿ ವೈವಿಧ್ಯತೆ ಇದೆ. ಆದ್ದರಿಂದ ಕೇವಲ ಧರ್ಮವೇ ಹಿಂದೂಗಳನ್ನು ಒಗ್ಗೂಡಿಸ ಬಲ್ಲದು. ಹಿಂದೂಗಳು ಈಗಲಾದರೂ ಧರ್ಮದ ಮಹತ್ವವನ್ನು ಅರಿತು ಎಲ್ಲರನ್ನೂ ಒಗ್ಗೂಡಿಸಲು ಪ್ರಯತ್ನಿಸುವುದು ಆವಶ್ಯಕ.’
ಢೋಂಗಿ ಬುದ್ಧಿಜೀವಿಗಳು !
ವೈದ್ಯರು ಮತ್ತು ವಕೀಲರು ಹೇಳಿದ ಮಾತುಗಳನ್ನು ಬುದ್ಧಿಜೀವಿಗಳು ತಕ್ಷಣ ನಂಬುತ್ತಾರೆ. ಏಕೆ, ಹೇಗೆ ? ಎಂದು ಅವರನ್ನು ಕೇಳುವುದಿಲ್ಲ; ಆದರೆ ಸಂತರು ಏನಾದರೂ ಹೇಳಿದರೆ, ಬುದ್ಧಿಜೀವಿಗಳ ಮನಸ್ಸಿನಲ್ಲಿ ಏಕೆ ಮತ್ತು ಹೇಗೆ ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ !
ಹಿಂದೂಗಳ ನಡೆ, ವಿನಾಶದೆಡೆಗೆ !
ಎಲ್ಲಿ ಅರ್ಥ ಮತ್ತು ಕಾಮಗಳನ್ನು ಆಧರಿಸಿರುವ ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಎಲ್ಲಿ ಧರ್ಮ ಮತ್ತು ಮೋಕ್ಷಗಳನ್ನು ಆಧಾರಿತ ಹಿಂದೂ ಸಂಸ್ಕೃತಿ ! ಹಿಂದೂಗಳು ಪಾಶ್ಚಾತ್ಯರ ಅಂಧಾನುಕರಣೆ ಮಾಡುತ್ತಿರುವ ಕಾರಣ ವೇಗವಾಗಿ ವಿನಾಶದೆಡೆಗೆ ಸಾಗುತ್ತಿದ್ದಾರೆ !
ಹಾಸ್ಯಾಸ್ಪದ ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿ !
ಪಾಶ್ಚಿಮಾತ್ಯ ಶಿಕ್ಷಣವು ಯಾವುದೇ ಸಮಸ್ಯೆಯ ಮೂಲ ಕಾರಣಗಳ ತನಕ, ಉದಾ. ಪ್ರಾರಬ್ಧ, ಅನಿಷ್ಟ ಶಕ್ತಿ, ಕಾಲಮಹಿಮೆ ಇವುಗಳ ತನಕ ತಲುಪಲು ಸಾಧ್ಯವಿಲ್ಲ. ಅವರ ಪರಿಹಾರಗಳು, ಕ್ಷಯರೋಗಕ್ಕೆ ಕ್ಷಯರೋಗದ ಜಂತು ಗಳನ್ನು ನಾಶ ಮಾಡುವ ಔಷಧಿ ನೀಡದೆ ಕೇವಲ ಕೆಮ್ಮಿನ ಔಷಧಿ ನೀಡುವಂತಹ ಪರಿಹಾರಗಳಾಗಿವೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ