ಜನರ ದಾರಿ ತಪ್ಪಿಸಿದ ಸಾಮ್ಯವಾದಿ ಇತಿಹಾಸಕಾರರು ! – ಕೆ.ಕೆ. ಮಹಮ್ಮದ, ಮಾಜಿ ಸಂಚಾಲಕರು, ಭಾರತೀಯ ಪುರಾತತ್ತ್ವ ವಿಭಾಗ

ಕೆ.ಕೆ. ಮಹಮ್ಮದ

ರಾಮಜನ್ಮಭೂಮಿಯ ವಿವಾದವು ಬೆಳೆಯಲು ಸಾಮ್ಯವಾದಿ ಇತಿಹಾಸಕಾರರಾದ ಅಲೀಗಡ ಮುಸ್ಲಿಮ್‌ ವಿದ್ಯಾಪೀಠದ ಇರ್ಫಾನ್‌ ಹವೀನ, ಜವಾಹರಲಾಲ ನೆಹರು ವಿದ್ಯಾಪೀಠದ ರೋಮಿಲಾ ಥಾಪರ ಮತ್ತು ದೆಹಲಿ ವಿಶ್ವವಿದ್ಯಾಲಯದ ಆರ್‌.ಎಸ್. ಶರ್ಮಾ ಇವರೇ ಹೊಣೆಯಾಗಿದ್ದಾರೆ, ಎಂದು ಭಾರತೀಯ ಪುರಾತತ್ತ್ವ ವಿಭಾಗದ ಮಾಜಿ ಸಂಚಾಲಕರಾದ ಕೆ.ಕೆ. ಮಹಮ್ಮದ ಹೇಳುತ್ತಾರೆ.

ಉತ್ಖನನದಲ್ಲಿ ಪತ್ತೆಯಾದ ಶ್ರೀರಾಮ ಮಂದಿರ ಅವಶೇಷ

ಮಹಮ್ಮದ ಹೇಳುತ್ತಾರೆ, ಅಯೋಧ್ಯೆಯಲ್ಲಿನ ಉತ್ಖನನದಲ್ಲಿ ಅಲ್ಲಿನ ಮಾನವರ ಸಹಭಾಗದ ಕಾರ್ಯಕಾಲವು ೧೨೦೦-೧೩೦೦ ವರ್ಷಗಳ ಹಿಂದೆ ಇರುವ ಪುರಾವೆಗಳು ಸಿಕ್ಕಿವೆ. ಬಹುಶಃ ಇತರ ಸ್ಥಳಗಳಲ್ಲಿ ಉತ್ಖನನ ಮಾಡುವಾಗ ಮಾನವ ಕಾಲವು ಇನ್ನೂ ಹೆಚ್ಚು ಹಿಂದೆ ಹೋಗುವ ಸಾಧ್ಯತೆಯಿದೆ. ಅದಕ್ಕಾಗಿಯೇ ಸಾಮ್ಯವಾದಿ ಇತಿಹಾಸಕಾರರು ಅಯೋಧ್ಯೆಯಲ್ಲಿ ಮಾನವ ಹಸ್ತಕ್ಷೇಪದ ಪುರಾವೆ ಸಿಕ್ಕಿಲ್ಲವೆಂದು ಸಿದ್ಧಪಡಿಸಲು ಪ್ರಯತ್ನಿಸಿದ್ದರು. ಸಾಮ್ಯವಾದಿ ಇತಿಹಾಸಕಾರರು ಜನರ ದಾರಿ ತಪ್ಪಿಸಿದ್ದಾರೆ. ಆದ್ದರಿಂದ ಪ್ರಕರಣವು ಜಟಿಲವಾಗುತ್ತಾ ಹೋಯಿತು. ೭೦ ನೇ ಶತಮಾನದಲ್ಲಿ ಮತ್ತು ಅದರ ನಂತರವೂ ಅಲಾಹಾಬಾದ ಉಚ್ಚ ನ್ಯಾಯಾಲಯದ ಆದೇಶದಂತೆ ಮಾಡಿದ ಉತ್ಖನನದಲ್ಲಿ ಅಯೋಧ್ಯೆಯಲ್ಲಿ ಮಂದಿರದ ಅವಶೇಷಗಳು ಸಿಕ್ಕಿವೆ. ಈ ಅವಶೇಷಗಳೇ ಇಲ್ಲಿ ಈ ಹಿಂದೆ ಶ್ರೀವಿಷ್ಣುವಿನ ಭವ್ಯ ಮಂದಿರವಿತ್ತು ಎಂದು ಹೇಳುತ್ತವೆ. ನಮಗೆ ಉತ್ಖನನದಲ್ಲಿ ಮಸೀದಿಯ ಗೋಡೆಯಲ್ಲಿ ಮಂದಿರದ ಸ್ತಂಭ ಕಾಣಿಸಿತು. ಅಲ್ಲದೇ ಶಿವ-ಪಾರ್ವತಿಯರ ಮಣ್ಣಿನ ಮೂರ್ತಿಗಳು ಸಿಕ್ಕಿವೆ.