ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಜೆನೈದಾಹ ಜಿಲ್ಲೆಯ ಘೋಷಪಾರ ಪ್ರದೇಶದಲ್ಲಿ ಜನವರಿ ೯ ರಂದು ಅಪರಿಚಿತರು ಬೊರೂನ ಘೋಷ ಎಂಬ ಹಿಂದೂ ಯುವಕನನ್ನು ಮನೆಯಿಂದ ಹೊರಗೆ ಕರೆದೊಯ್ದು ಹತ್ಯೆ ಮಾಡಿದರು. ಘೋಷರವರ ಕಾಲುಗಳನ್ನು ಕತ್ತರಿಸಿ ನಂತರ ಕೊಲೆ ಮಾಡಿ ಎಲ್ಲಾ ಆರೋಪಿಗಳು ಪರಾರಿಯಾದರು. ಈ ಪ್ರಕರಣದಲ್ಲಿ ಇದುವರೆಗೂ ಇನ್ನೂ ಯಾರನ್ನೂ ಬಂಧಿಸಿಲ್ಲ. ಘೋಷ ಆಡಳಿತ ಆವಾಮಿ ಲೀಗ್ ಪಕ್ಷದ ಸ್ಥಳೀಯ ಕಾರ್ಯಕರ್ತ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಘೋಷಪಾರದಲ್ಲಿ ಅವಾಮಿ ಲೀಗ್ ಸೋಲನುಭವಿಸಿತ್ತು.
ಅವಾಮಿ ಲೀಗ್‌ನ ಇಲ್ಲಿಯ ಅಭ್ಯರ್ಥಿ ಸಾಮಿ ಇವರು, ರಾಜಕೀಯ ಕಾರಣಗಳಿಂದಾಗಿ ಘೋಷ್‌ನನ್ನು ಕೊಲ್ಲಲಾಗಿದೆ ಎಂದಿದ್ದಾರೆ. ಈ ಕೊಲೆಯ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲ ಎಂದು ಪೋಲೀಸರು ಹೇಳಿಕೆಯಾಗಿದೆ.
Hindu man Borun Ghosh hacked to death in Bangladesh post-poll violence, Islamists suspected in targeted attackhttps://t.co/zddMiMaZkn
— OpIndia.com (@OpIndia_com) January 10, 2024
ಸಂಪಾದಕರ ನಿಲುವು* ಪ್ರಧಾನಿ ಶೇಖ ಹಸೀನಾ ತಮ್ಮದೇ ಪಕ್ಷದ ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡಡು ಸಾಧ್ಯವಿಲ್ಲ, ಅಲ್ಲಿ ಅವರು ದೇಶದ ಇತರ ಹಿಂದೂಗಳನ್ನು ಹೇಗೆ ರಕ್ಷಣೆ ಮಾಡುವರು ? |