ರಾಮಜನ್ಮಭೂಮಿಯ ಖಟ್ಲೆಯಲ್ಲಿ ‘ರಾಮಲಲ್ಲಾ ವಿರಾಜಮಾನ’ ವತಿಯಿಂದ ೪೦ ವರ್ಷ ಖಟ್ಲೆಯನ್ನು ನಡೆಸಿದ ೯೨ ವರ್ಷದ ಹಿರಿಯ ನ್ಯಾಯವಾದಿ ಕೆ. ಪರಾಸರನ್‌ !

೯ ನವೆಂಬರ್‌ ೨೦೧೯ ರಂದು ಸರ್ವೋಚ್ಚ ನ್ಯಾಯಾಲಯವು ರಾಮಜನ್ಮ ಭೂಮಿಯ ಖಟ್ಲೆಯ ತೀರ್ಪನ್ನು ನೀಡಿತು. ಕಳೆದ ಅನೇಕ ದಶಕಗಳಿಂದ ಈ ಖಟ್ಲೆಯು ನೆನೆಗುದಿಯಲ್ಲಿತ್ತು. ಹೀಗಿದ್ದರೂ ಕಳೆದ ೪೦ ವರ್ಷಗಳಿಂದ ಹಿರಿಯ ನ್ಯಾಯವಾದಿ ಕೆ. ಪರಾಶರನ್‌ (೯೨ ವರ್ಷ) ಇವರು ಸಮರ್ಪಕವಾಗಿ ಕಾರ್ಯವನ್ನು ನಿರ್ವಹಿಸಿದರು. ಈ ಖಟ್ಲೆಯಲ್ಲಿ ಹೇಗೆ ಹಿಂದೂ ಮತ್ತು ಮುಸಲ್ಮಾನರು ಪಕ್ಷಕಾರರಾಗಿದ್ದರೋ, ಅದೇ ರೀತಿ ಸ್ವತಃ ಪ್ರಭು ಶ್ರೀ ರಾಮನೇ, ಅಂದರೆ ‘ಶ್ರೀರಾಮಲಲ್ಲಾ’ನೇ ಓರ್ವ ಪಕ್ಷಕಾರರು ಆಗಿದ್ದರು. ಈ ಖಟ್ಲೆಯ ನ್ಯಾಯವಾದಿ ಕೆ. ಪರಾಸರನ್‌ ಇವರು ತುಂಬಾ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾ ಅಧ್ಯಯನಪೂರ್ಣ ಹಾಗೂ ಗಾಂಭೀರ್ಯದಿಂದ ವಿಷಯವನ್ನು ಮಂಡಿಸಿದರು. ಇದರಿಂದಲೇ ಎಲ್ಲ ರಾಮಭಕ್ತರಿಗೆ ಅಪೇಕ್ಷಿತವಿರುವ ನಿರ್ಣಯವೇ ಸರ್ವೋಚ್ಚ ನ್ಯಾಯಾಲಯದಿಂದ ಬಂದಿದೆ. ಈ ಖಟ್ಲೆಯ ನಿಮಿತ್ತದಿಂದ ನ್ಯಾಯವಾದಿ ಪರಾಸರನ್‌ ಇವರ ಗುಣಪರಿಚಯವಾಗುತ್ತದೆ.

ನ್ಯಾಯವಾದಿ ಕೆ. ಪರಾಸರನ್‌ರ ಛಲ ಮತ್ತು ತಾಳ್ಮೆ !

ನ್ಯಾಯವಾದಿ ಪರಾಸರನ್‌ ಇವರ ಸಹಾಯಕ್ಕಾಗಿ ಯುವ ನ್ಯಾಯವಾದಿಗಳ ಒಂದು ಸಮೂಹವಿದೆ ಮತ್ತು ಅವರು ರಾಮಜನ್ಮಭೂಮಿಯ ಖಟ್ಲೆಯಲ್ಲಿ ಕೆಲಸ ವನ್ನೂ ಮಾಡಿದ್ದಾರೆ. ಆ ಯುವಕರು ೯೨ ವರ್ಷ ವಯಸ್ಸಿನ ನ್ಯಾಯವಾದಿ ಕೆ. ಪರಾಸರನ್‌ ಇವರ ಖಟ್ಲೆಗಳ ಅನೇಕ ಆಲಿಕೆಗಳಲ್ಲಿ ಅವರ ಛಲ, ತಾಳ್ಮೆ ಮತ್ತು ಅಧ್ಯಯನವನ್ನು ನೋಡಿ ನಮಗೂ ಹುರುಪು ಬರುತ್ತಿತ್ತು ಎನ್ನುತ್ತಾರೆ. ನ್ಯಾಯವಾದಿ ಪರಾಸರನ್‌ ಕಳೆದ ೪೦ ವರ್ಷಗಳಿಂದ ಈ ಖಟ್ಲೆಯ ಕೆಲಸವನ್ನು ಮಾಡುತ್ತಿದ್ದಾರೆ; ಆದರೆ ಅವರು ಒಮ್ಮೆಯೂ ಸೋಲೊಪ್ಪಿಕೊಳ್ಳಲಿಲ್ಲ.

ರಾಮಜನ್ಮಭೂಮಿ ಪ್ರಕರಣದ ಸಂಪೂರ್ಣ ಅಧ್ಯಯನ !

ನ್ಯಾಯವಾದಿ ಕೆ. ಪರಾಸರನ್‌ ಇವರಿಗೆ ಅಯೋಧ್ಯೆಯ ಖಟ್ಲೆಯ ಬಗ್ಗೆ ಎಷ್ಟು ಅಧ್ಯಯನವಿದೆ ಎಂದರೆ, ಅವರು ಬಹಳಷ್ಟು ಸಲ ನ್ಯಾಯಾಲಯದಲ್ಲಿನ ಖಟ್ಲೆಯ ಮಹತ್ವದ ದಿನಾಂಕಗಳನ್ನು ನಿಖರವಾಗಿ ಹೇಳುತ್ತಿದ್ದರು. ‘ಯಾವ ದಿನ ಏನಾಗಿತ್ತು ?’, ಎಂಬುದನ್ನು ಅವರು ಅಂಕಿಅಂಶಗಳ ಸಹಿತ ಹೇಳುತ್ತಿದ್ದರು. ಅವರು ಅಯೋಧ್ಯೆ’ಯ ವಿಷಯದಲ್ಲಿ ಎಷ್ಟು ಸಂಶೋಧನೆ ಮತ್ತು ವಾಚನವನ್ನು ಮಾಡಿದ್ದಾರೆಂದರೆ, ಅದರ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದು.

(ಆಧಾರ : ದೈನಿಕ ಸಾಮನಾ, ೧೦.೧೧.೨೦೧೯)