ಹಿಂದೂ ಮಂದಿರಗಳೆಲ್ಲ ಸ್ವತಂತ್ರವಾದಾಗ ಭಾರತವನ್ನು ‘ಹಿಂದೂ ರಾಷ್ಟ್ರವೆಂದು ಘೋಷಿಸಲು ತಡೆಯಲಾಗದು ! – ಪೂ. (ನ್ಯಾಯವಾದಿ) ಹರಿ ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ

ಪೂ. (ನ್ಯಾಯವಾದಿ) ಹರಿ ಶಂಕರ ಜೈನ್‌

ಪೂ. (ನ್ಯಾಯವಾದಿ) ಹರಿ ಶಂಕರ ಜೈನ್‌ ಇವರು ರಾಮಜನ್ಮ ಭೂಮಿ ಪ್ರಕರಣದಲ್ಲಿ ಹಿಂದೂ ಮಹಾಸಭಾ ಇದರ ಪರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ನಡೆಸಿದ್ದರು. ಈ ಮೊಕದ್ದಮೆಯ ಬಗ್ಗೆ, ಅಯೋಧ್ಯೆಯಲ್ಲಿ ನಿರ್ಮಿಸಿದ ಶ್ರೀರಾಮ ಮಂದಿರ ಮತ್ತು ಪುನಃ ಹೊಸತಾಗಿ ಕಟ್ಟಲಾಗುವ ಬಾಬರಿ ಮಸೀದಿ ಬಗ್ಗೆ ಪೂ. (ನ್ಯಾಯವಾದಿ) ಹರಿ ಶಂಕರ ಜೈನ್‌ ಇವರು ಮಂಡಿಸಿದ ಅಭಿಪ್ರಾಯವನ್ನು ಕೊಡುತ್ತಿದ್ದೇವೆ.

೧. ೩೦ ವರ್ಷಗಳ ಹೋರಾಟದ ನಂತರ ಬಾಬರಿ ಕಟ್ಟಡವನ್ನು ತೆಗೆಯಲಾಯಿತು !

ರಾಮಜನ್ಮಭೂಮಿಯ ಮೊಕದ್ದಮೆಯಲ್ಲಿ ನಾನು ೧೯೮೯ ರಿಂದ ಹಿಂದೂ ಮಹಾಸಭಾದ ಪರವಾಗಿ ನ್ಯಾಯವಾದಿಯಾಗಿ ಮೊಕದ್ದಮೆಯನ್ನು ನಡೆಸಿದೆನು. ಆ ಕಾಲದಲ್ಲಿ, ಹಿಂದುತ್ವದ ವಿಷಯ ಅಥವಾ ಪ್ರಖರ ರಾಷ್ಟ್ರವಾದದ ಬಗ್ಗೆ ಮಾತನಾಡುವುದು ಬಹಳ ದೂರದ ಮಾತಾಗಿತ್ತು. ರಾಮಜನ್ಮಭೂಮಿಯ ಮೊಕದ್ದಮೆಯನ್ನು ಅಂದಿನ ಕೇಂದ್ರ ಸರಕಾರವು ನಡೆಸುತ್ತಿದ್ದ ರೀತಿ ನೋಡುವಾಗ ನಮ್ಮ ಕನಸು ನನಸಾಗುವುದು ಮತ್ತು ನಾವು ಭವ್ಯ ದೇವಸ್ಥಾನವನ್ನು ನಿರ್ಮಿಸುವೆವು ಎಂದು ಎಂದಿಗೂ ಯಾರಿಗೂ ಅನಿಸಿರಲಿಲ್ಲ. ನಾವು ೧೯೮೯ ರಿಂದ ೨೦೧೯ ರ ವರೆಗೆ (೩೦ ವರ್ಷ) ಸತತ ಸಂಘರ್ಷ ಮಾಡಿದೆವು. ನಮ್ಮದು ಕಾನೂನುತಜ್ಞರ ಒಂದು ಗುಂಪಿತ್ತು ಮತ್ತು ನಾನೂ ಆ ಗುಂಪಿನ ಒಬ್ಬ ಸಾಮಾನ್ಯ ಸದಸ್ಯನಾಗಿದ್ದೆನು. ನಾವೆಲ್ಲರೂ ಸೇರಿ ಯಾವ ರೀತಿ ಹೋರಾಡಿದೆವೆಂದರೆ, ಇತರ ಧರ್ಮೀಯರ ಬಾಯಿ ಕಹಿಯಾಗುತ್ತಾ ಹೋಯಿತು. ಆ ಜನ್ಮಭೂಮಿ ಕೇವಲ ಭಗವಾನ ಶ್ರೀರಾಮನಿಗೆ ಸೇರಿದೆ ಮತ್ತು ಆ ಭೂಮಿಯಲ್ಲಿ ಬಾಬರಿ ಕಟ್ಟಡ ನಿರ್ಮಾಣವು ಕಾನೂನಿನ ವಿರುದ್ಧವಾಗಿದೆ, ಎಂದು ಜಿಲ್ಲಾ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯದ ವರೆಗೆ ಸಿದ್ಧವಾಯಿತು. ಸರ್ವೋಚ್ಚ ನ್ಯಾಯಾಲಯದಲ್ಲಿಯೂ ನಮಗೆ ಯಶಸ್ಸು ಸಿಕ್ಕಿದ್ದರಿಂದ ಸರ್ವೋಚ್ಚ ನ್ಯಾಯಾಲಯವು ಆ ಕಟ್ಟಡವನ್ನು ಕೆಡವಲು ಆದೇಶ ನೀಡಿತು.

೨. ‘ಭಗವಾನ ರಾಮ ಈ ದೇಶದ ಪ್ರಾಣನಾಗಿದ್ದಾನೆ’, ಎಂದು ಹೇಳಿದ ಅಲಾಹಾಬಾದ್‌ ಉಚ್ಚ ನ್ಯಾಯಾಲಯ !

ನಾನು ತಮಗೆ ಒಂದು ಘಟನೆಯನ್ನು ಹೇಳುತ್ತೇನೆ, ಬಾಬರಿ ಕಟ್ಟಡವನ್ನು ಕೆಡವಿದ ನಂತರ ಹಿಂದೂಗಳಿಗೆ ಶ್ರೀರಾಮರ ಪೂಜೆಯನ್ನು ನಿಷೇಧಿಸಲಾಗಿತ್ತು. ಭಗವಾನ ರಾಮರ ಪೂಜೆಯನ್ನು ನಿಲ್ಲಿಸಲಾಯಿತು. ಆಗ ನಾವು ‘ವಿಶ್ವ ಹಿಂದೂ ನ್ಯಾಯವಾದಿಗಳು’ ಈ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ೨೧ ಡಿಸೆಂಬರ್‌ ೧೯೯೨ ರಂದು ಅಂದರೆ ಸರಿಯಾಗಿ ೧೫ ದಿನಗಳ ನಂತರ ಅಲಾಹಾಬಾದ್‌ ಉಚ್ಚ ನ್ಯಾಯಾಲಯದಲ್ಲಿ ಒಂದು ರಿಟ್‌ ಅರ್ಜಿಯನ್ನು ಸಲ್ಲಿಸಿದೆವು. ಈಶ್ವರನ ಕೃಪೆಯಿಂದ ನ್ಯಾಯಾಲಯಕ್ಕೆ ಚಳಿಗಾಲದ ರಜೆ ಇದ್ದರೂ ಅದನ್ನು ಆಲಿಸಲಾಯಿತು ಮತ್ತು ಆ ವಿಚಾರಣೆಯಲ್ಲಿ ಒಂದು ಅದ್ಭುತ ತೀರ್ಪು ಬಂದಿತು, ಅದು ಹಿಂದೂ ಸಮಾಜಕ್ಕೆ ಅಸಾಧ್ಯ ಎಂದು ಅನಿಸಿದ್ದು ನಿಜವಾಗಿ ಸಂಭವಿಸಿತು. ಆ ತೀರ್ಪು ಎಂದರೆ ‘ಭಗವಾನ ರಾಮ ಈ ದೇಶದ ಪ್ರಾಣನಾಗಿದ್ದಾನೆ. ಭಗವಾನ ರಾಮನ ಒಂದು ಕಾನೂನುಬದ್ಧ ಅಸ್ತಿತ್ವವಿದೆ. ‘ಭಗವಾನ ರಾಮನ ಪೂಜೆ ಮಾಡುವುದು’, ಇದು ಪ್ರತಿಯೊಬ್ಬ ಹಿಂದೂವಿನ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಮತ್ತು ಅವರ ಅಧಿಕಾರವೂ ಆಗಿದೆ.’ ಈ ತೀರ್ಪು ೧.೧.೧೯೯೩ ಈ ದಿನದಂದು ಬಂದಿತ್ತು. ಭಗವಾನ ರಾಮನ ಚಿತ್ರವನ್ನು ಸಂವಿಧಾನದ ಪುಟದ ಮೇಲೆಯೂ ಮುದ್ರಿಸಲಾಗಿದೆ ಎಂದು ನಾನು ಹೇಳುತ್ತೇನೆ. ಈ ವಿಷಯ ಇತರರಿಗೆ ಯಾರಿಗೂ ಗೊತ್ತಿಲ್ಲ.
ಈ ಮೊಕದ್ದಮೆಯ ನಂತರವೇ ಎಲ್ಲರಿಗೂ ಮೇಲಿನ ವಿಷಯ ಗೊತ್ತಾಯಿತು ಮತ್ತು ಇಂದು ರಾಮಮಂದಿರದ ಬಗ್ಗೆ ಏನೆಲ್ಲ ಘಟಿಸುತ್ತಿದೆಯೋ, ಅದು ತಮ್ಮೆದುರಿನಲ್ಲಿದೆ. ರಾಮಮಂದಿರದ ನಿರ್ಮಾಣ ಇದು ಯಾವುದೇ ಸಾಮಾನ್ಯ ಘಟನೆಯಲ್ಲ; ಏಕೆಂದರೆ, ಯಾವಾಗ ಮಂದಿರದ ನಿರ್ಮಿತಿಯ ಮೊದಲ ಪ್ರಕ್ರಿಯೆ ಆರಂಭವಾಗಿತ್ತೋ, ಆಗ ಮೊಕದ್ದಮೆ ಇನ್ನೂ ನಡೆಯುತ್ತಿತ್ತು.

೩. ಅಲಾಹಾಬಾದ್‌ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸುವಾಗಿನ ಸ್ಥಿತಿ ಮತ್ತು ನ್ಯಾಯಾಲಯ ನೀಡಿದ ತೀರ್ಪು

ರಾಮಮಂದಿರದ ಮೊಕದ್ದಮೆಯಲ್ಲಿ ಬಹಳಷ್ಟು ಬಾರಿ ಎಂತಹ ಕ್ಷಣಗಳು ಬಂದವೆಂದರೆ, ಆ ಕ್ಷಣಗಳ ಬಗ್ಗೆ ನನಗೆ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಏನು ಘಟಿಸಿತೋ ಗೊತ್ತಿಲ್ಲ ? ಈಶ್ವರನು ನಮ್ಮ ಜನರಿಗೆ ನೀಡಿದ ಶಕ್ತಿ ಮತ್ತು ಸಾಮರ್ಥ್ಯದಿಂದ, ಅಲಾಹಾಬಾದ್‌ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆಯು ಮುಂದುವರಿಯಿತು. ಕಾರಣಾಂತರಗಳಿಂದ ಇದರಲ್ಲಿ ಯಾರ್ಯಾರದ್ದೋ ಸಂಬಂಧಿಕರಾದ ಕೆಲವು ನ್ಯಾಯಾಧೀಶರೂ ಇದ್ದರು. ಈ ಮೊಕದ್ದಮೆಯಲ್ಲಿ ನಾವು ಮಾನ್ಯ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ, ‘ಮಾನ್ಯ ನ್ಯಾಯಮೂರ್ತಿಗಳೇ ತಾವು ಪಕ್ಷಕಾರರ ಹೇಳಿಕೆಯನ್ನು ಕೇಳಲಾರಿರಿ; ಏಕೆಂದರೆ ನೀವು ಇಂತಹ ವ್ಯಕ್ತಿಗಳ ಸಂಬಂಧಿಕರಾಗಿದ್ದೀರಿ’, ಎಂಬ ಹೇಳಿಕೆ ನೀಡುವ ಅರ್ಜಿಯನ್ನೂ ಸಲ್ಲಿಸಿದ್ದೆವು. ಅನಂತರ ಅವಸರದಲ್ಲಿ ಇನ್ನೊಂದು ವಿಚಾರಣೆ ನಡೆಯಿತು ಮತ್ತು ೩.೯.೨೦೧೦ ರಂದು ಅಲಾಹಾಬಾದ್‌ ಉಚ್ಚ ನ್ಯಾಯಾಲಯವು ನಮಗೆ ಅಪೂರ್ಣ ತೀರ್ಪು ನೀಡಿತು, ಅದರಲ್ಲಿ ಅದು ರಾಮಜನ್ಮಭೂಮಿಯನ್ನು ೩ ಭಾಗಗಳಲ್ಲಿ ವಿಂಗಡಿಸಿತು. ಅದು ಬಹಳ ದೊಡ್ಡ ತಪ್ಪಾಗಿತ್ತು.

೪. ರಾಮಜನ್ಮಭೂಮಿಯ ಮೊಕದ್ದಮೆಯನ್ನು ಸಮರ್ಪಣಾ ಭಾವದಿಂದ ಹೋರಾಡಿದ್ದರಿಂದ ವಿಜಯಪ್ರಾಪ್ತ

ನಾನು ಮತ್ತು ನನ್ನೊಂದಿಗಿದ್ದ ಅನೇಕ ಹಿಂದೂ ನ್ಯಾಯವಾದಿ ಸಹಚರರು, ಹಿಂದುತ್ವನಿಷ್ಠರು, ಪಕ್ಷಕಾರರು, ಎಲ್ಲರೂ ಸೇರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿಯನ್ನು (ಅಪೀಲ್) ಸಲ್ಲಿಸಿದೆವು. ಸರ್ವೋಚ್ಚ ನ್ಯಾಯಾಲಯವು ೯.೧.೨೦೧೯ ಈ ದಿನದಂದು, ‘ಸಂಪೂರ್ಣ ಭೂಮಿ ಹಿಂದೂಗಳದ್ದಾಗಿದೆ’, ಎಂದು ತೀರ್ಪು ನೀಡಿತು. ಈ ವಿಜಯದಿಂದ ನಮ್ಮ ಶ್ರೀರಾಮ ಮಂದಿರದ ನಿರ್ಮಿತಿಯಾಗುತ್ತಿದೆ. ನಾವು ಯಾವುದಾದರೊಂದು ಕಾರ್ಯವನ್ನು ಪೂರ್ಣ ಜಾಗರೂಕತೆಯಿಂದ, ಶುದ್ಧ ಮನಸ್ಸಿನಿಂದ ಮತ್ತು ಸಮರ್ಪಣಾಭಾವದಿಂದ ಮಾಡಿದಾಗ ಅದು ಪೂರ್ಣಗೊಳ್ಳುತ್ತದೆ ಎಂದು ನಾನು ಹೇಳಬಲ್ಲೆ. ಬಹಳಷ್ಟು ಮೊಕದ್ದಮೆಗಳು ನಡೆಯುತ್ತಿರುತ್ತವೆ, ಅಲ್ಲಿ ಕೇವಲ ನ್ಯಾಯವಾದಿ ಗಳಿರುತ್ತ್ತಾರೆ; ಆದರೆ ನನ್ನ ಅನಿಸಿಕೆಯೆಂದರೆ, ಅವರು ಕೇವಲ ನ್ಯಾಯವಾದಿಗಳಾಗಿರುವುದಿಲ್ಲ. ಈ ಎಲ್ಲ ಪ್ರಕರಣಗಳಲ್ಲಿ ನಾವು ನಮ್ಮ ಪ್ರಾಣವನ್ನು ಪಣಕ್ಕಿಟ್ಟು ಮತ್ತು ಅಂತಃಕರಣದಿಂದ ಆ ಕಾರ್ಯ ಮಾಡುವುದು ಆವಶ್ಯಕವಾಗಿರುತ್ತದೆ. ನನಗೆಂತಹ ಅನುಭೂತಿ ಬಂದಿತೆಂದರೆ, ಇದು ನನ್ನಲ್ಲಿ ಬಹಳಷ್ಟು ಆತ್ಮವಿಶ್ವಾಸ ವನ್ನು ಮೂಡಿಸಿದೆ ಮತ್ತು ರಾಮಜನ್ಮ ಭೂಮಿಯ ಪ್ರಕರಣದಲ್ಲಿ ನಾವು ಯಶಸ್ವಿಯಾಗಿದ್ದೇವೆಂದು ನನಗೆ ಬಹಳ ಆನಂದವಾಯಿತು.

೫. ರಾಮಮಂದಿರದ ನಂತರ ಕಾಶಿ ಮತ್ತು ಮಥುರಾ ಇವುಗಳ ಮುಕ್ತಿಯ ಕಾರ್ಯ ಆರಂಭ !

ಇಂದು ಶ್ರೀರಾಮನ ಭವ್ಯ ಮಂದಿರದ ನಿರ್ಮಿತಿಯ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ರಾಮಜನ್ಮಭೂಮಿಯ ತೀರ್ಪಿನ ನಂತರ ನನ್ನ ಮುಂದಿನ ನ್ಯಾಯಾಂಗ ಹೋರಾಟದ ಸಿದ್ಧತೆ ಆರಂಭವಾಯಿತು. ದೇಶದಲ್ಲಿ ಕಾಶಿ, ಮಥುರಾ ಸೇರಿದಂತೆ ಅನೇಕ ದೇವಸ್ಥಾನಗಳಿದ್ದು ಅವುಗಳ ಮುಕ್ತಿಯ ಕಾರ್ಯ ಮುಂದುವರಿದಿದೆ. ನಂತರ ನಾವು ಎಲ್ಲಕ್ಕಿಂತ ಮೊದಲು ಮಥುರಾದ ಶ್ರೀಕೃಷ್ಣಜನ್ಮಭೂಮಿ ದೇವಸ್ಥಾನದ ಪ್ರಕರಣವನ್ನು ಕೈಗೆತ್ತಿಕೊಂಡೆವು. ಈ ಮೊಕದ್ದಮೆಯನ್ನು ಕೆಳ ನ್ಯಾಯಾಲಯದಿಂದ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಮಥುರೆಯ ಶ್ರೀಕೃಷ್ಣಜನ್ಮ ಭೂಮಿಯ ಮೊಕದ್ದಮೆಯ ಸದ್ಯದ ಸ್ಥಿತಿ ಹೇಗಿದೆಯೆಂದರೆ, ಈಗ ಅಲಾಹಾಬಾದ್‌ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈಗ ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಈದ್ಗಾ ಮಸೀದಿಯ ಸಮೀಕ್ಷೆಯ ಆದೇಶವನ್ನು ಅಲಾಹಾಬಾದ್‌ ಉಚ್ಚ ನ್ಯಾಯಾಲಯವು ನೀಡಿದೆ. ‘ಭಗವಾನ ಶ್ರೀಕೃಷ್ಣನ ಜನ್ಮಸ್ಥಾನವು ಸ್ವತಂತ್ರವಾಗಬೇಕು’, ಎಂದು ನಮ್ಮೆಲ್ಲರ ಪ್ರಾರ್ಥನೆಯಾಗಿದೆ. ಭಗವಾನ ಶ್ರೀಕೃಷ್ಣನು ನಮ್ಮ ಪ್ರಾರ್ಥನೆ ಕೇಳುವನು ಎಂದು ನಾವು ಖಂಡಿತ ಭಾವಿಸುತ್ತೇವೆ. ಕಾಶಿಯ ಬಾಬಾ ಭೋಲೆನಾಥರ ಜ್ಞಾನವಾಪಿ ಪರಿಸರದ ಮೊಕದ್ದಮೆಯ ಪ್ರಕರಣದಲ್ಲಿ ನ್ಯಾಯಾಲಯವು ನೀಡಿದ ಆದೇಶ ಕ್ಕನುಸಾರ ಸಮೀಕ್ಷೆಯಾಯಿತು. ಅದರಲ್ಲಿ ಒಂದು ಭವ್ಯ ಶಿವಲಿಂಗ ಸಿಕ್ಕಿದೆ. ‘ಆ ಶಿವಲಿಂಗವನ್ನು ಪೂಜಿಸುವ ಹಕ್ಕನ್ನು ಹಿಂದೂಗಳಿಗೆ ನೀಡಬೇಕು ಮತ್ತು ಭಗವಾನ ಶಿವನ ದೇವಸ್ಥಾನವನ್ನು ಕೆಡವಿ ನಿರ್ಮಿಸಿದ ಗುಲಾಮಗಿರಿಯ ಸಂಕೇತವಾಗಿರುವ, ಜ್ಞಾನವಾಪಿ ಕಟ್ಟಡವನ್ನು ತೆಗೆದು ಹಾಕಬೇಕು’, ಎಂಬುದು ನಮ್ಮ ಬೇಡಿಕೆಯಾಗಿದೆ. ಈ ದೃಷ್ಟಿಯಿಂದ ನಮ್ಮೆಲ್ಲರ ಪ್ರಯತ್ನ ಮುಂದುವರಿದಿದೆ ಮತ್ತು ಇದನ್ನು ಬೇಗನೆ ಪೂರ್ಣಗೊಳಿಸುತ್ತೇವೆ ಎಂದು ಆಶಿಸುತ್ತೇನೆ.

ಎಲ್ಲ ಹಿಂದೂಗಳು ಹಿಂದೂಗಳ ಎಲ್ಲ ದೇವಸ್ಥಾನಗಳನ್ನು ಮರಳಿ ಪಡೆಯುವೆವು ಎಂಬ ಪ್ರತಿಜ್ಞೆ ಮಾಡಬೇಕು !

ಕಾಶಿ, ಮಥುರಾ ಮತ್ತು ಅಯೋಧ್ಯೆ ಈ ಮೂರೂ ಪ್ರಕರಣಗಳು ಬೀಗ ಜಡಿದ ದೇವಸ್ಥಾನಗಳಾಗಿವೆ. ಅವುಗಳನ್ನು ಮುಕ್ತ ಮಾಡಲೇಬೇಕು. ನಾನು ಈ ಮೊದಲೂ ಕರೆ ನೀಡಿದ್ದೆನು ಮತ್ತು ಈಗಲೂ ಕರೆ ನೀಡುತ್ತೇನೆ ಮತ್ತು ಈ ಮುಂದೆಯೂ ನೀಡುತ್ತಲೇ ಇರುವೆನು, ‘ಹಿಂದೂಗಳೇ ಜಾಗರೂಕರಾಗಿ ಯಾವೆಲ್ಲ ಸ್ಥಳಗಳಲ್ಲಿ ಆಕ್ರಮಣಕಾರರು ದೇವಸ್ಥಾನಗಳನ್ನು ಕೆಡವಿ ಕಟ್ಟಡವನ್ನು (ಮಸೀದಿ) ಕಟ್ಟಿದ್ದಾರೋ, ಅವು ದೇವಸ್ಥಾನಗಳಿರುವ ಬಗ್ಗೆ ಪುರಾವೆಗಳು ಸಿಗುತ್ತಿವೆ. ಅವು ತೀರಾ ಚಿಕ್ಕ ಎರಡೂವರೆಯಿಂದ ಮೂರು ಅಡಿ ಗುಡಿಸಲಾದರೂ ಸರಿ ಅಥವಾ ಇನ್ಯಾರದ್ದೇ ಹೆಸರಿನಲ್ಲಿರಲಿ, ಹಿಂದೂಗಳು ಆ ಎಲ್ಲ ದೇವಸ್ಥಾನಗಳನ್ನು ಮರಳಿ ಪಡೆಯುವ ಪ್ರತಿಜ್ಞೆಯನ್ನು ಮಾಡಬೇಕು. ಹಿಂದೂಗಳು ನಿರ್ಭಯರಾಗಿ ಮತ್ತು ಒತ್ತಡಕ್ಕೆ ಒಳಗಾಗದೇ ಈ ಕಾರ್ಯವನ್ನು ಮಾಡಬೇಕು. ಎಲ್ಲ ಹಿಂದೂ ದೇವಸ್ಥಾನಗಳು ಸ್ವತಂತ್ರವಾದ ದಿನ ಈ ದೇಶವನ್ನು ‘ಹಿಂದೂ ರಾಷ್ಟ್ರ’ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

– ಪೂ. (ನ್ಯಾಯವಾದಿ) ಹರಿ ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ.