ರಾಮಜನ್ಮಭೂಮಿಯ ಮುಕ್ತಿಯ ಅವಿರತ ಸಂಘರ್ಷ !

ರಾಮಜನ್ಮಭೂಮಿಯ ಹೋರಾಟ ಎಷ್ಟು ವರ್ಷಗಳಿಂದ ನಡೆಯುತ್ತಾ ಬಂದಿದೆ ?’, ಇದರ ಉತ್ತರ ಹೆಚ್ಚಿನವರಿಗೆ ಗೊತ್ತಿಲ್ಲ. ಸಾಮಾನ್ಯ ತಪ್ಪು ತಿಳುವಳಿಕೆಯ ವಿರುದ್ಧ ಈ ಹೋರಾಟ ಕೆಲವು ದಶಮಾನದ್ದಾಗಿರದೆ, ಅದು ಕೆಲವು ಶತಮಾನಗಳಿಂದ ನಡೆಯುತ್ತಾ ಬಂದಿದೆ ! ಒಟ್ಟಾರೆ ಇತಿಹಾಸವನ್ನು ನೋಡಿದರೆ ಈ ಹೋರಾಟ ಕ್ರಿ.ಪೂ.ಕಾಲದಿಂದಲೆ ನಡೆಯುತ್ತಿದೆ ಎಂಬುದು ತಿಳಿಯುತ್ತದೆ.

ಡಾ. ಸಚ್ಚಿದಾನಂದ ಶೆವಡೆ

೧. ತೇಜಸ್ವೀ ಬಲಿದಾನ

ರಾಮಜನ್ಮಭೂಮಿ ಮುಕ್ತಿಗಾಗಿ ಒಟ್ಟು ೭೬ ಹೋರಾಟಗಳು ನಡೆದವು, ಎನ್ನುವ ಇತಿಹಾಸವಿದೆ. ಕ್ರಿ. ಪೂ. ೧೫೦ ರಲ್ಲಿ ಗ್ರೀಕ್ ರಾಜ ಮಿನಂಡರ್ (ಮಿಲಿಂದ) ಇವನು ಆಕ್ರಮಣ ಮಾಡಿ ಅಯೋಧ್ಯೆಯಲ್ಲಿನ ಶ್ರೀರಾಮ ಪುತ್ರ ಕುಶನು ನಿರ್ಮಿಸಿದ ಮಂದಿರವನ್ನು ಮೊತ್ತಮೊದಲು ಧ್ವಂಸ ಮಾಡಿದನು, ಎನ್ನುವ ವದಂತಿ ಅನೇಕ ಶತಮಾನಗಳವರೆಗೆ ನಡೆಯಿತು. ಮುಂದೆ ಶುಂಗನ ಕಾಲದಲ್ಲಿ ಮಿನಂಡರನು ಸೋತ ನಂತರ ರಾಮಜನ್ಮಭೂಮಿ ಮುಕ್ತವಾಯಿತು; ಆದರೆ ಅಯೋಧ್ಯೆಗೆ ಅದರ ಅಂಶಾತ್ಮಕ ಗತವೈಭವವು ಪುನಃ ಕ್ರಿ.ಪೂ. ೧೦೦ ರ ಸುಮಾರಿಗೆ ರಾಜ ವಿಕ್ರಮಾದಿತ್ಯ ಅಲ್ಲಿ ಪುನಃ ಮಂದಿರ ನಿರ್ಮಿಸಿದಾಗ ಸಿಕ್ಕಿತು. ಇದರ ನಂತರ ಹಿಂದೂಸ್ಥಾನದ ಮೇಲೆ ಇಸ್ಲಾಮೀ ಆಕ್ರಮಣಗಳು ಆರಂಭವಾದವು; ಆದರೆ ರಾಜ ದಾಹೀರನಂತಹ ಪರಾಕ್ರಮಿ ಪುರುಷನಿಂದಾಗಿ ಈ ಆಕ್ರಮಣಗಳಿಗೆ ಸಂಪೂರ್ಣ ಯಶಸ್ಸು ಸಿಗಲಿಲ್ಲ.

ಕ್ರಿ. ಶ. ೧೦೩೦ ರ ಸುಮಾರಿಗೆ ಗಝನಿಯ ಮಹಮ್ಮದನು ಹಿಂದೂಸ್ಥಾನದಲ್ಲಿ ನುಗ್ಗಿದನು ಹಾಗೂ ಇಲ್ಲಿನ ರಕ್ತರಂಜಿತ ಇತಿಹಾಸ ಪ್ರಾರಂಭವಾಯಿತು. ಇದೇ ಸಮಯದಲ್ಲಿ ಸೋರಟಿ ಸೋಮನಾಥನ ಭಂಜನವಾಯಿತು ! ನಂತರ ಅದರಲ್ಲಿನ ಗಾಝೀ ಮಸೂದ ಸಾಲಾರ ಎಂಬವನು ತನ್ನ ಸೇನೆಯನ್ನು ಅಯೋಧ್ಯೆಯ ಕಡೆಗೆ ಹೊರಳಿಸಿದನು. ಶ್ರೀವಸ್ತಿಯ ರಾಜ ಸುಹೇಲದೇವ ಹಾಗೂ ವಿವಿಧ ಆಖಾಡಗಳ ಸಾಧು-ಸಂತರು ಒಟ್ಟಾಗಿ ಸಾಲಾರನನ್ನು ಕಠೋರವಾಗಿ ಪ್ರತಿಕಾರ ಮಾಡಿದರು ಹಾಗೂ ಕೊನೆಗೆ ಬಹರಾಯಿಚ್‌ನಲ್ಲಿ ಅವನ ಸೈನ್ಯ ದಯನೀಯವಾಗಿ ಸೋತಿತು. ಅನಂತರ ಸುಮಾರು ೧೨೫ ವರ್ಷಗಳವರೆಗೆ ಹಿಂದೂಸ್ಥಾನದ ಮೇಲೆ ಇಸ್ಲಾಮೀ ಆಕ್ರಮಣಗಳ ಬಿಸಿ ತಟ್ಟಿರಲಿಲ್ಲ. ಆ ಮೇಲೆ ಮಾತ್ರ ಅಲ್ಲಾಉದ್ದೀನ ಖಿಲ್ಜಿಯ ಸ್ವರೂಪದಲ್ಲಿ ಮತ್ತೊಮ್ಮೆ ಅಮಾನುಷ ಹಿಂಸಾಚಾರ ಪ್ರಾರಂಭವಾಯಿತು. ಬಲಾಢ್ಯ ದೇವಗಿರಿ ಸಾಮ್ರಾಜ್ಯವೂ ಕುಸಿದುಬಿತ್ತು. ರಾಣಿ ಪದ್ಮಿನಿಯ ಸ್ವಾಭಿಮಾನಿ ಬಲಿದಾನದ ವಿಷಯವೂ ನಮಗೆ ತಿಳಿದಿದೆ. ಆಮೇಲೆ ಮುಂದಿನ ೨ ಶತಮಾನದ ನಂತರ ಬಾಬರ ಎಂಬ ಇನ್ನೊಬ್ಬ ಹಿಂಸಾಚಾರಿ ಆಕ್ರಮಕಣಕಾರಿಯು ಹಿಂದೂಸ್ಥಾನದ ಮೇಲೆ ದಾಳಿ ಮಾಡಿದನು. ಅವನ ವಿಷಯದಲ್ಲಿನ ಸವಿಸ್ತಾರವಾದ ಮಾಹಿತಿಯು ಈ ಲೇಖನದಲ್ಲಿ ಮುಂದೆ ಬಂದಿದೆ.

೨. ಬಾಬರ ಯಾರು ?

ಅತ್ಯಾಚಾರಿ ತುರ್ಕೀ ಆಡಳಿತಗಾರ ತೈಮೂರಲಂಗನ ೫ ನೆ ವಾರಸುದಾರನಾದ ಉಮರಶೇಖ್ ಮಿರ್ಝಾ ಹಾಗೂ ಅಷ್ಟೆ ಅತ್ಯಾಚಾರಿ ಮಂಗೋಲದ ಆಡಳಿತಗಾರ ಚಂಗೇಝಖಾನನ ೧೪ ನೇ ವಾರಸುದಾರನಾದ ಕುತಲುಗ ನಿಗಾರ ಖಾನಮನನ ಮಗ ಅಂದರೆ ಜಹಿರ ಉದ-ದಿನ ಮಹಮ್ಮದ ಬಾಬರ ! ತಂದೆಯ ಮರಣದ ನಂತರ ತನ್ನ ೧೨ ನೇ ವಯಸ್ಸಿನಲ್ಲಿ ಅವನಿಗೆ ಅಧಿಕಾರ ಸಿಕ್ಕಿತು. ಬೇಗಾ ಬೇಗಮ, ಆಯೇಶಾ ಸುಲ್ತಾನ ಬೇಗಮ, ಜೈನಾಬ ಸುಲ್ತಾನ ಬೇಗಮ, ಮೌಸಮಾ ಸುಲ್ತಾನ ಬೇಗಮ, ಮಹಮ ಬೇಗಮ, ಗುಲರುಖ ಬೇಗಮ, ದಿಲದಾರ ಬೇಗಮ, ಮುಬಾರಕಾ ಯುರುಫಝಾಯಿ, ಗುಲನಾರ ಅಘಾಚಾ, ನಾಝ್ಗುಲ ಅಘಾಚಾ ಹೀಗೆ ಅವನ ಬೇಗಮರ (ಪತ್ನಿಯರ) ತಿಳಿದಿರುವ ಪಟ್ಟಿ ! ದೆಹಲಿಯ ಬಾದಶಾಹ ಇಬ್ರಾಹಿಮ ಲೋದಿಯ ವಿರುದ್ಧ ಯುದ್ಧ ಸಾರಿ ಬಾಬರನು ಹಿಂದೂಸ್ಥಾನದ ರಾಜಕಾರಣದಲ್ಲಿ ಪ್ರವೇಶಿಸಿದನು. ‘ಪಾನಿಪತದ ಮೊದಲ ಯುದ್ಧ’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಯುದ್ಧದಲ್ಲಿ ಬಾಬರನ ಸೈನ್ಯವು ಲೋದಿಯ ಸೈನ್ಯವನ್ನು ಸೋಲಿಸಿತು. ಅನಂತರ ಬಾಬರ ಹಿಂದೂಸ್ಥಾನದಲ್ಲಿ ಕೆಲವು ಲೂಟಿ ಮಾಡಿ ಆ ಮೇಲೆ ಹೊರಟು ಹೋಗುವನು ಎಂಬ ನಿರೀಕ್ಷೆಯಿತ್ತು. ಅವನ ಮನಸ್ಸಿನಲ್ಲಿ ಮಾತ್ರ ದೆಹಲಿಯ ಸಿಂಹಾಸನವನ್ನು ವಶಪಡಿಸಿಕೊಳ್ಳುವ ವಿಚಾರ ದೃಢವಾಗಿತ್ತು. ಹಿಂದೂಸ್ಥಾನದಲ್ಲಿ ಅವನ ವಿಸ್ತರಣೆಯ ಮಾರ್ಗದಲ್ಲಿ ಮೇವಾಡದ ನರೇಶ ಮಹಾರಾಣಾ ಸಂಗ್ರಾಮಸಿಂಗ ಅಂದರೆ ರಾಣಾ ಸಂಗಾ ಇವರು ಪ್ರಮುಖ ಅಡಚಣೆ ಆಗಿದ್ದರು ! ರಾಣಾ ಸಂಗಾ ಮತ್ತು ಬಾಬರ ಇವರಲ್ಲಿ ಬಯಾನಾ ಮತ್ತು ಖಾನವಾ ಹೀಗೆ ಎರಡು ಯುದ್ಧಗಳು ನಡೆದವು. ಎರಡನೆಯ ಯುದ್ಧದಲ್ಲಿ ಬಾಬರನ ತೋಫಖಾನೆಯ ಮುಂದೆ ರಜಪೂತರು ಪರಾಕ್ರಮವನ್ನು ತೋರಿಸಲು ಪ್ರಯತ್ನಿಸಿದರೂ ಅವರಿಗೆ ಗೆಲುವಾಗಲಿಲ್ಲ ಹಾಗೂ ಬಾಬರನ ಆಡಳಿತ ಸ್ಥಾಪನೆಯ ಮಾರ್ಗ ಮುಕ್ತವಾಯಿತು. ಈ ಯುದ್ಧದ ನಂತರ ಬಾಬರನು ಹತ್ಯೆ ಮಾಡಿದ ರಜಪೂತ ಸೈನಿಕರ ರುಂಡಗಳ ಮಿನಾರ (ರಾಶಿ) ಮಾಡಿ ತನಗೆ ‘ಗಾಝೀ’ ಎಂಬ ಬಿರುದನ್ನು ಸೇರಿಸಿಕೊಂಡನು. ಜಿಹಾದ್‌ನಲ್ಲಿ ಸೇರಿ ಮುಸಲ್ಮಾನೇತರನ್ನು ಹತ್ಯೆ ಮಾಡುವ ವ್ಯಕ್ತಿಗೆ ‘ಗಾಝೀ’ ಎನ್ನುತ್ತಾರೆ.

೨ ಅ. ಬಾಬರನ ಚಾರಿತ್ರ್ಯ

ಬಾಬರನ ವಿಷಯದಲ್ಲಿ ಮರಾಠಿ ಸಾಹಿತ್ಯದಲ್ಲಿ ಸಾಕಷ್ಟು ಮಾಹಿತಿ ಸಿಗುವುದಿಲ್ಲ ಅಥವಾ ಕೇವಲ ಅವನ ಪ್ರಶಂಸೆಯ ಬಗ್ಗೆಯೆ ಓದಲು ಸಿಗುತ್ತದೆ. ಬಾಬರನ ಮೊಹಿನಿಯಿಂದ ಸ್ವತಃ ರಿಯಾಸತಕಾರ ದೇಸಾಯಿಯವರೂ ಮುಕ್ತರಾಗಲಿಲ್ಲ ! ಆ ಕಾಲದ ಇತರ ಸಾಹಿತ್ಯಗಳ ಅಭ್ಯಾಸ ಮಾಡಿದರೆ ಮಾತ್ರ ನಮಗೆ ಬಾಬರನ ವಿಕೃತ ಚಿತ್ರ ನೋಡಲು ಸಿಗುತ್ತದೆ ! ಆದಿಗ್ರಂಥ ಅಥವಾ ಗೋಸ್ವಾಮಿ ತುಲಸೀದಾಸರು ಮಾಡಿದ ಬಾಬರನ ವರ್ಣನೆಯನ್ನು ಬದಿಗಿಟ್ಟರೂ ಬಾಬರನು ‘ತುಜು ಕ-ಎ-ಬಾಬರಿ’ ಎಂಬ ಹೆಸರಿನಲ್ಲಿ ತನ್ನ ಆತ್ಮಕಥೆಯನ್ನು ಬರೆದಿದ್ದಾನೆ. ಮೂಲ ಚಗ್ತಾಯಿ ಭಾಷೆಯಲ್ಲಿರುವ ಈ ಗ್ರಂಥವನ್ನು ಬಾಬರನ ಮೊಮ್ಮಗ ಅಕ್ಬರನು ಪಾರಸಿ ಭಾಷೆಗೆ ಅನುವಾದ ಮಾಡಿಸಿಕೊಂಡನು, ಅದು ‘ಬಾಬರನಾಮಾ’ ಎಂಬ ಹೆಸರಿನಲ್ಲಿ ಪ್ರಸಿದ್ಧವಿದೆ. ಈ ಗ್ರಂಥದಿಂದಲೂ ಅವನು ಅತ್ಯಂತ ಅಮಲುಕೋರ, ಕುಡುಕ ಹಾಗೂ ಕ್ರೂರಿ ಆಗಿದ್ದನು ಎಂಬುದು ಸ್ಪಷ್ಟವಾಗುತ್ತದೆ.

೨ ಆ. ಬಾಬರನಿಂದ ಅಕ್ಬರನ ವರೆಗೆ ರಾಮಜನ್ಮಭೂಮಿಯ ವಿಷಯದಲ್ಲಿ ಆಗಿರುವ ಸಂಘರ್ಷ

ಬಾಬರನಿಗೆ ಖ್ವಾಜಾ ಅಬ್ಬಾಸ ಹಾಗೂ ಮುಸಾ ಆಶಿಕನ ಆಮೀ ಜಲಾಲಶಾಹ ಈ ಇಬ್ಬರು ಫಕೀರರು ರಾಣಾ ಸಂಗಾನ ವಿರುದ್ಧ ಗೆಲ್ಲುವ ಆಶೀರ್ವಾದ ನೀಡಿದ್ದರು ಹಾಗೂ ಅದರ ಬದಲಿಗೆ ಅವರು ‘ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಬೇಕು’, ಎಂದು ವಿನಂತಿಸಿದ್ದರು. ಪ್ರತ್ಯಕ್ಷದಲ್ಲಿ ಈ ಫಕೀರರು ಅಯೋಧ್ಯೆಯಲ್ಲಿ ಶ್ಯಾಮಾನಂದರ ಶಿಷ್ಯರೆಂದು ಇದ್ದರು; ಆದರೆ ಕೊನೆಗೆ ಅವರು ತಮ್ಮ ಬಣ್ಣವನ್ನು ತೋರಿಸಿದರು. ರಾಣಾ ಸಂಗಾನ ಪರಾಜಯದ ನಂತರ ತನ್ನ ವಚನವನ್ನು ಪೂರ್ಣಗೊಳಿಸಲು ಬಾಬರನು ತನ್ನ ಸೇನಾಪತಿಯಾಗಿದ್ದ ಮೀರ ಬಾಕಿಗೆ ಅಯೋಧ್ಯೆಯ ರಾಮಮಂದಿರವನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಲು ಹುಕುಮ್ (ಆಜ್ಞೆ) ನೀಡಿದನು. ಅವನಿಗೆ ಆ ಮಸೀದಿಯ ನಿರ್ಮಾಣ ಕಾರ್ಯವನ್ನು ಸಹಜವಾಗಿ ಪೂರ್ಣಗೊಳಿಸಲು ಸಾಧ್ಯವಾಯಿತೆಂದು ಹೇಳಲು ಸಾಧ್ಯವಿಲ್ಲ. ಮಹತಾಬ ಸಿಂಗ್, ಪಂಡಿತ ದೇವೀದೀನ ಪಾಂಡೆ, ರಾಣಾ ರಣವಿಜಯ ಮತ್ತು ರಾಣಿ ಜಯರಾಜಕುಮಾರಿ ಮುಂತಾದವರೊಂದಿಗೆ ಅಯೋಧ್ಯೆಯಲ್ಲಿನ ಸಾಧುಗಳು ಹಾಗೂ ನಾಗಾ, ನಿರ್ಮೋಹಿ, ನಿರ್ವಾಣಿ ಗೋರಕ್ಷ ಇತ್ಯಾದಿ ಆಖಾಡಗಳ ಮಹಂತರು ಮೀರ ಬಾಕಿಗೆ ಆಯಾ ಪ್ರಸಂಗಗಳಲ್ಲಿ ಪ್ರತಿಕಾರ ನೀಡಿದರು; ಆದರೆ ಈ ಎಲ್ಲ ನಾಯಕರ ಪರಾಜಯವಾಯಿತು ಹಾಗೂ ಅಯೋಧ್ಯೆಯಲ್ಲಿ ಬಾಬರೀ ಮಸೀದಿ ನಿರ್ಮಾಣವಾಯಿತು. ಇವೆಲ್ಲ ವರ್ಣನೆಯನ್ನು ಜಸವಂತ ಎಂಬ ಹೆಸರಿನ ಓರ್ವ ‘ಅವಧಿ’ ಭಾಷೆಯ ಕವಿಯು ಸುಮಾರು ೭೦ ಕವಿತೆಗಳ ಮೂಲಕ ಮಾಡಿಟ್ಟಿದ್ದಾನೆ. ಕವಿ ಜಸವಂತನು ರಾಣಿ ಜಯರಾಜಕುಮಾರಿಯ ಕಾಲದವನಾಗಿದ್ದನು, ಎಂದು ‘ಅವಧಿ’ ಭಾಷೆಯ ಅಭ್ಯಾಸಿಗರ ಅಭಿಪ್ರಾಯವಾಗಿದೆ. ಬಾಬರನ ಮಗ ಹುಮಾಯೂನ ಮತ್ತು ಅನಂತರ ಮೊಮ್ಮಗ ಅಕ್ಬರ ಅಧಿಕಾರಕ್ಕೆ ಬರುವ ವರೆಗೂ ಈ ರಾಮಜನ್ಮಭೂಮಿಯ ಮುಕ್ತಿಗಾಗಿ ಸಂಘರ್ಷ ನಡೆಯುತ್ತಿತ್ತು. ಅಕ್ಬರನು ಈ ಸಂಘರ್ಷಕ್ಕೆ ಒಳ್ಳೆಯ ನಿವಾರಣೋಪಾಯ ಮಾಡಿದನು. ಅವನು ವಿವಾದಾತ್ಮಕ ಸ್ಥಳದಲ್ಲಿ ಒಂದು ಚಬುತರಾವನ್ನು (ಕಟ್ಟೆಯನ್ನು) ಕಟ್ಟಿ ‘ಅಲ್ಲಿ ಹಿಂದೂಗಳು ಪೂಜಾರ್ಚನೆ ಮಾಡಬೇಕು ಹಾಗೂ ಅದಕ್ಕೆ ಯಾರೂ ಅಡಚಣೆ ಮಾಡಬಾರದು’, ಎಂದು ಶಾಹೀ ಆದೇಶ ನೀಡಿದ್ದನು. ಇದರಿಂದಾಗಿ ಸ್ವಲ್ಪ ಕಾಲವಾದರೂ ಸಂಘರ್ಷ ಶಾಂತವಾಯಿತು. ಈ ಕಟ್ಟೆ ‘ರಾಮಕಟ್ಟೆ’ ಎಂದು ಗುರುತಿಸಲು ಆರಂಭವಾಯಿತು. ಆಗ ಕೂಡ ಅಯೋಧ್ಯೆಯಲ್ಲಿನ ‘ರಾಮನವಮಿ ಉತ್ಸವ’ಕ್ಕಾಗಿ ದೇಶದಾದ್ಯಂತದ ಜನರು ಸೇರುತ್ತಿದ್ದರು ಎಂದು ಆ ಕಾಲದ ಮಾಹಿತಿ ಸಿಗುತ್ತದೆ. ಅಕ್ಬರನ ನಂತರ ಜಹಾಂಗೀರ ಮತ್ತು ಶಹಾಜಹಾನ ಇವರು ಈ ಪರಿಪಾಠವನ್ನು ಮುಂದುವರೆಸಿದರು.

೩. ಮತಾಂಧ ಔರಂಗಜೇಬನು ‘ರಾಮ ಕಟ್ಟೆಯನ್ನು’ ಧ್ವಂಸ ಮಾಡಿದನು !

ಅನಂತರ ಮಾತ್ರ ಇವೆಲ್ಲವನ್ನೂ ವಿರೋಧಿಸುವ ಮತಾಂಧ ಔರಂಗಜೇಬ ದೆಹಲಿಯ ಸಿಂಹಾಸನವನ್ನೇರಿದನು ಮತ್ತು ಈ ಚಿತ್ರಣ ಬದಲಾಯಿತು. ಔರಂಗಜೇಬನ ಕ್ರೌರ್ಯದ ಇತಿಹಾಸ ಹಾಗೂ ಅವನು ಕಾಶಿ, ಮಥುರಾ ಈ ಹಿಂದೂ ತೀರ್ಥಸ್ಥಳಗಳಿಗೆ ಮಾಡಿದ ಉಪದ್ರವಗಳ ಕುರಿತು ಆ ಕಾಲದ ಅನೇಕ ಕಾಗದಪತ್ರಗಳು ಸಿಗುತ್ತವೆ. ಈ ಔರಂಗಜೇಬನು ‘ರಾಮಕಟ್ಟೆ’ಯನ್ನು ಧ್ವಂಸ ಮಾಡಿದನು. ಎಲ್ಲಕ್ಕಿಂತ ಮೊದಲು ಈ ಕಾರ್ಯವನ್ನು ಮಾಡಲು ಬಂದಿದ್ದ ಸಯ್ಯದ ಹಸನ ಅಲೀಯ ಸೈನ್ಯವನ್ನು ಬಾಬಾ ವೈಷ್ಣವ ದಾಸರ ವಿನಂತಿಯಂತೆ ಸಹಾಯಕ್ಕೆ ಓಡಿಬಂದ ಹತ್ತನೆಯ ಗುರು ಗೋವಿಂದ ಸಿಂಗ್‌ಜೀ ಮಹಾರಾಜರು ಸೋಲಿಸಿದರು ಹಾಗೂ ಔರಂಗಜೇಬನ ಕನಸು ಅಪೂರ್ಣವಾಯಿತು. ಹೀಗೆ ೩ ಬಾರಿ ಘಟಿಸಿದ ನಂತರ ಅಸ್ವಸ್ಥನಾದ ಔರಂಗಜೇಬ ತಾನೇ ಅಯೋಧ್ಯೆಯ ಮೇಲೆ ಆಕ್ರಮಣ ಮಾಡಲು ಬಂದನು ಹಾಗೂ ಅವನು ‘ರಾಮಕಟ್ಟೆ’ಯನ್ನು ಅಗೆದು ಹಾಕಿದನು. ‘ಸೀತಾಕೀ ರಸೋಯಿ’ ಮತ್ತು ‘ಸ್ವರ್ಗ ದ್ವಾರಮ್’ ಈ ಎರಡು ಪವಿತ್ರ ಸ್ಥಳಗಳಲ್ಲಿ ಅವನು ಮಸೀದಿಗಳನ್ನು ನಿರ್ಮಾಣ ಮಾಡಿದನು. ಔರಂಗಜೇಬನ ನಂತರ ಬಾದಶಾಹಗಳ ಮಹತ್ವ ಕಡಿಮೆಯಾಗುತ್ತಾ ಹೋಯಿತು.

೪. ರಾಘೋಬಾದಾದಾ ಪೇಶ್ವೆ ಮತ್ತು ಸಫದರಜಂಗ ಇವರಲ್ಲಿ ಆಗಿರುವ ಒಪ್ಪಂದ ಹಾಗೂ ನವಾಬ ವಾಜೀದ ಅಲೀ ಶಾಹನು ಅವಲಂಬಿಸಿದ ಧೋರಣೆ

ನಂತರ ೧೮ ನೇ ಶತಮಾನದಲ್ಲಿ ಅಯೋಧ್ಯೆಯಲ್ಲಿ ನವಾಬರ ಆಡಳಿತ ಬಂತು. ನವಾಬ ಸಹಾದತ ಅಲೀ ಖಾನ್‌ನಿಂದ ನವಾಬ ವಾಜೀದ ಅಲೀ ಶಾಹ ಇವನ ವರೆಗಿನ ಆಡಳಿತದಲ್ಲಿಯೂ ಅಯೋಧ್ಯೆಯನ್ನು ಮುಕ್ತಗೊಳಿಸುವ ಪ್ರಯತ್ನ ಮುಂದುವರಿದಿತ್ತು. ಅಯೋಧ್ಯೆಯ ಮೂರನೇ ನವಾಬ ಶುಜಾಉದ್ದೌಲನು ಅಫ್ಘಾನೀ ಆಕ್ರಮಣದ ವಿರುದ್ಧ ಮರಾಠರಿಂದ ಸಹಾಯ ಕೇಳಿದನು. ಆಗ ರಘುನಾಥ ಪಂಥ ಯಾನೆ ರಾಘೋಬಾದಾದಾ ಪೇಶ್ವೆ ಹಾಗೂ ಸಫದರಜಂಗ ಇವರ ನಡುವೆ ‘ಅಯೋಧ್ಯೆ ಸಹಿತ ಹಿಂದೂಗಳ ೩ ಮಹತ್ವದ ಧಾರ್ಮಿಕ ಸ್ಥಳಗಳನ್ನು ಹಿಂದೂಗಳಿಗೆ ಒಪ್ಪಿಸಬೇಕು’, ಎಂಬ ಅರ್ಥದ ಒಂದು ಒಪ್ಪಂದವಾಯಿತು. ಕಾಗದಪತ್ರಗಳ ಮೂಲಕ ಆಗಿರುವ ಈ ಒಪ್ಪಂದವು ಕಾರ್ಯರೂಪಕ್ಕೆ ಬರಲೇ ಇಲ್ಲ. ನವಾಬ ವಾಜೀದ ಅಲೀ ಶಾಹ ಮಾತ್ರ ಇಂದಿನ ವರೆಗಿನ ಆಡಳಿತದಾರರ ತುಲನೆಯಲ್ಲಿ ಬೇರೆಯೆ ಧೋರಣೆಯನ್ನು ಅವಲಂಬಿಸಿದನು. ಅವನು ರಾಮಮಂದಿರದ ವಿಷಯದಲ್ಲಿ ಹಿಂದೂಗಳ ಶ್ರದ್ಧೆಯನ್ನು ಸಾಮರಸ್ಯದಿಂದ ವಿಚಾರ ಮಾಡಲು ಪ್ರಾರಂಭಿಸಿದನು; ಆದರೆ ಅದೇ ವೇಳೆಗೆ ಗುಲಾಮ ಹುಸೇನ ಎಂಬ ಒಬ್ಬ ಸುನ್ನಿ ಫಕೀರನು ‘ಮುಸಲ್ಮಾನರಿಗೆ ಇದು ಜಿಹಾದವೇ ಆಗಿದೆ’, ಎಂದು ಹೇಳಿ ಉದ್ರೇಕಿಸಲು ಪ್ರಾರಂಭಿಸಿದನು ಹಾಗೂ ಈ ಪ್ರಕರಣ ಉಲ್ಬಣಿಸಿತು. ಇದೇ ವೇಳೆಗೆ ರಾಮಜನ್ಮ ಭೂಮಿಗಾಗಿ ಇನ್ನೊಂದು ಹೊರಾಟ ನಡೆಯಿತು.

೫. ಬ್ರಿಟಿಷರ ಕಾಲದಲ್ಲಿ ರಾಮಜನ್ಮಭೂಮಿಗಾಗಿ ನಡೆದಿರುವ ಹೋರಾಟ

೧೮೫೭ ರಲ್ಲಿ ಮಾತ್ರ ಅಯೋಧ್ಯೆಯಲ್ಲಿನ ಹಿಂದೂ-ಮುಸಲ್ಮಾನರು ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಬ್ರಿಟಿಷರ ವಿರುದ್ಧ ಸಂಘಟಿತರಾಗಿ ಹೋರಾಡಿದರು; ಆದರೆ ಬ್ರಿಟಿಷರು ಈ ಹೋರಾಟವನ್ನು ಚಿವುಟಿ ಹಾಕಿದರು ಹಾಗೂ ಅದರಲ್ಲಿ ಭಾಗವಹಿಸಿದವರಿಗೆ ಶಿಕ್ಷೆ ನೀಡುವಾಗಲೇ ರಾಮಜನ್ಮಭೂಮಿಗಾಗಿ ಪ್ರಯತ್ನಶೀಲರಾಗಿದ್ದ ಬಾಬಾ ರಾಮಚರಣದಾಸರು ಹಾಗೂ ಅವರನ್ನು ವಿರೋಧಿಸುವ ಅಮೀರ ಅಲೀ ಇವರಿಬ್ಬರನ್ನೂ ನೇಣುಕಂಬಕ್ಕೇರಿಸಿದರು. ಇಲ್ಲಿಂದ ಮುಂದೆ ಅಯೋಧ್ಯೆಯ ಸಮಸ್ಯೆ ಇತ್ಯರ್ಥವಾಗಲೇ ಬಾರದೆಂದು ಬ್ರಿಟಿಷರು ಕಾಳಜಿವಹಿಸಿದರು, ಎಂಬುದು ನಮಗೆ ಅನೇಕ ನ್ಯಾಯಾಂಗ ಪ್ರಕ್ರಿಯೆಗಳನ್ನು ನೋಡಿದಾಗ ಸಹಜವಾಗಿ ಅರಿವಾಗುತ್ತದೆ.

೬. ಸ್ವಾತಂತ್ರ್ಯಪೂರ್ವ ಹಾಗೂ ನಂತರ ನಡೆದಿರುವ ನ್ಯಾಯಾಂಗ ಹೋರಾಟ

‘ರಾಮಜನ್ಮಭೂಮಿ ಮುಕ್ತಿಸಂಗ್ರಾಮ’, ಇದು ಕೇವಲ ರಣರಂಗದಲ್ಲಿ ಆಗಿರದೆ, ಅದು ನ್ಯಾಯಾಂಗ ಹೋರಾಟವೂ ಆಗಿದೆ. ೨೫ ಮೇ ೧೮೮೫ ರಲ್ಲಿ ಮಹಂತ ರಘುವರದಾಸ ಇವರಿಂದ ಅಯೋಧ್ಯೆಯ ರಾಮಮಂದಿರಕ್ಕಾಗಿ ಮೊದಲ ಮೊಕದ್ದಮೆಯನ್ನು (ಖಟ್ಲೆ) ಫೈಜಾಬಾದ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಿಸಲಾಯಿತು. ಅನೇಕ ವರ್ಷಗಳಿಂದ ಪೂಜೆ ನಡೆಯತ್ತಿರುವ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಅನುಮತಿ ನೀಡಬೇಕು’, ಎಂಬುದು ಅವರ ಬೇಡಿಕೆಯಾಗಿತ್ತು. ಬ್ರಿಟೀಶ್ ಸರಕಾರ ಮಾತ್ರ ಈ ಬೇಡಿಕೆಗೆ ಕಸದಬುಟ್ಟಿಯನ್ನು ತೋರಿಸಿ ‘ಹೇಗಿತ್ತೋ ಅದೇ ಸ್ಥಿತಿಯನ್ನು ಶಾಶ್ವತವಾಗಿಡಲು’ ಹೇಳಿತು. ಸ್ವಾತಂತ್ರ್ಯೋತ್ತರದ ಕಾಲದಲ್ಲ್ಲಿ ಈ ಚಿತ್ರಣವೇನು ಬದಲಾಗಲಿಲ್ಲ. ನಿಜವಾಗಿ ನೋಡಿದರೆ ೧೯೩೪ ರ ನಂತರ ಬಾಬರಿ ಮಸೀದಿಯಲ್ಲಿ ನಮಾಜು ನಡೆಯುತ್ತಿರಲಿಲ್ಲ. ೧೯೪೯ ರಲ್ಲಿ ಮಾತ್ರ ಅನಿರೀಕ್ಷಿತವಾಗಿ ‘ಅಲ್ಲಿ ನಮಾಜು ಮಾಡಲು ಅನುಮತಿ ನೀಡಬೇಕು ಹಾಗೂ ಹಿಂದೂಗಳು ಇಲ್ಲಿ ಪೂಜಾರ್ಚನೆಯನ್ನು ನಿಲ್ಲಿಸಬೇಕು’, ಎಂಬ ಬೇಡಿಕೆ ಆರಂಭವಾಯಿತು. ಈಗ ಮುಸಲ್ಮಾನರು ಮತ್ತು ಹಿಂದೂ ಹೀಗೆ ಇಬ್ಬರಿಗೂ ಅಲ್ಲಿ ಧಾರ್ಮಿಕ ವಿಧಿ ಮಾಡಲು ಅನುಮತಿ ನೀಡಲಾಯಿತು.

‘೨೨ ಮತ್ತು ೨೩ ಡಿಸೆಂಬರ ೧೯೪೯ ರ ರಾತ್ರಿ ಆ ವಿವಾದಾತ್ಮಕ ವಾಸ್ತುವಿನ ಒಳಗಿನಿಂದ ಒಂದು ಪ್ರಕಾಶ ಬಂದಿತು ಮತ್ತು ಆ ದೈವೀ ಪ್ರಕಾಶದಲ್ಲಿ ಓರ್ವ ಸುಂದರ ಬಾಲಕನ ಮುಖ ಕಾಣಿಸಿತು’, ಎಂದು ವಾಸ್ತುವಿನ ಕಾವಲುಗಾರ ಅಬ್ದುಲ ಬರಕತ ಎಂಬ ವ್ಯಕ್ತಿ ನ್ಯಾಯಾಲಯದ ಮುಂದೆ ಪ್ರತಿಜ್ಞೆ ಮಾಡಿ ಹೇಳಿದನು. ಈ ಪ್ರಸಂಗದ ನಂತರ ಅಲ್ಲಿ ರಾಮಲಲ್ಲಾನ ವಿಗ್ರಹ ಪ್ರಕಟವಾಯಿತು, ಮುಂದೆ ಅದಕ್ಕೆ ‘ರಾಮಲಲ್ಲಾ ವಿರಾಜಮಾನ’ ಎಂದು ಹೇಳಲು ಆರಂಭವಾಯಿತು. ೨೯ ಡಿಸೆಂಬರ ೧೯೪೯ ರಂದು ನ್ಯಾಯಾಧೀಶ ಕೆ.ಕೆ ನಾಯರ್ ಇವರು ಆ ಸ್ಥಳವನ್ನು ‘ವಿವಾದಾತ್ಮಕ’ವೆಂದು ಘೋಷಿಸಿದರು ಹಾಗೂ ಕಲಮ್ ೧೪೫ ಕ್ಕನುಸಾರ ಅದನ್ನು ತಮ್ಮ ವಶಕ್ಕೆ (ನ್ಯಾಯಾಲಯಕ್ಕೆ) ತೆಗೆದುಕೊಂಡರು. ೧೬ ಜನವರಿ ೧೯೫೦ ರಂದು ಠಾಕೂರ ಗೋಪಾಲ ಸಿಂಹ ವಿಶಾರದ ಇವರು ಖಟ್ಲೆಯನ್ನು ದಾಖಲಿಸಿದರು. ಅದರಲ್ಲಿ ಅನುಮತಿ ಸಿಕ್ಕಿದ್ದರೂ ಮುಸಲ್ಮಾನರು ಯಾರೂ ಬಾಬರಿಯಲ್ಲಿ ನಮಾಜು ಮಾಡಲು ಬರುವುದಿಲ್ಲ. ತದ್ವಿರುದ್ಧ ನಾವು ಹಿಂದೂಗಳು ಕಳೆದ ೧೫ ವರ್ಷಗಳಿಂದ ನಿರಂತರ ಪೂಜಾರ್ಚನೆ ಮಾಡುತ್ತಿದ್ದೇವೆ. ಆದ್ದರಿಂದ ಈ ಭೂಮಿ ನಮಗೆ ಸಿಗಬೇಕು. ಪ್ರತಿವಾದಿ ಮೂರ್ತಿಯನ್ನು ಅಲ್ಲಿಂದ ತೆಗೆಯಬಾರದು’, ಎಂಬ ಆದೇಶ ನೀಡಬೇಕೆಂದು ಸಹ ಅದರಲ್ಲಿ ವಿನಂತಿಸಲಾಗಿತ್ತು. ಅದಕ್ಕೆ ಮನ್ನಣೆ ಸಿಕ್ಕಿತು. ೫ ಡಿಸೆಂಬರ ೧೯೫೦ ರಂದು ಮಹಂತ ರಾಮಚಂದ್ರ ಪರಮಹಂಸ ಇವರು ಇನ್ನೊಂದು ದಾವೆ (ಮೊಕದ್ದಮೆ) ಹೂಡಿದರು. ಅದರಲ್ಲಿ ‘ವಿವಾದಾತ್ಮಕ ಸ್ಥಳ ಇದು ಹಿಂದೂಗಳ ಧಾರ್ಮಿಕ ಸ್ಥಾನ ಆಗಿದೆಯೆಂದು ಮನ್ನಣೆ ನೀಡಿ ಅದನ್ನು ಹಿಂದೂಗಳಿಗೆ ಒಪ್ಪಿಸಬೇಕು’, ಎಂದು ವಿನಂತಿಸಲಾಯಿತು. ಈ ಖಟ್ಲೆಯನ್ನು ಠಾಕೂರ ಗೋಪಾಲಸಿಂಹ ವಿಶಾರದ ಇವರ ಖಟ್ಲೆಯೊಂದಿಗೆ ಜೋಡಿಸಲಾಯಿತು.

ಅನಂತರ ೧೨ ವರ್ಷಗಳ ನಂತರ ೧೮ ಡಿಸೆಂಬರ ೧೯೬೧ ರಂದು ಸುನ್ನಿ ವಕ್ಫ್ ಬೋರ್ಡ್ ವಿವಾದಾತ್ಮಕ ಸ್ಥಳ ತಮ್ಮದೆಂದು ಹೇಳುವ ಖಟ್ಲೆಯನ್ನು ದಾಖಲಿಸಿತು. ವಾಸ್ತವದಲ್ಲಿ ‘ಭಾರತೀಯ ಅವಧಿ ಅಧಿನಿಯಮ’ (ಇಂಡಿಯನ್ ಲಿಮಿಟೇಶನ್ ಏಕ್ಟ್) ಕ್ಕನುಸಾರ ‘ಇಷ್ಟು ಸಮಯದ ನಂತರ ದಾವೆ ಹೂಡುವುದೇ ಕಾನೂನು ಬಾಹಿರವಾಗಿತ್ತು’; ಆದರೂ ಈ ಖಟ್ಲೆ ಸ್ವೀಕಾರವಾಯಿತು. ನಿಜವಾಗಿ ನೋಡಿದರೆ ಈ ಭೂಮಿಯ ವಿಷಯದಲ್ಲಿ ಸುನ್ನಿ ವಕ್ಫ್ ಬೋರ್ಡ್‌ಗೆ ಸಂಬಂಧವೇ ಇರಲಿಲ್ಲ; ಏಕೆಂದರೆ ೧೯೪೬ ರಲ್ಲಿ ವಕ್ಫ್‌ಬೋರ್ಡ್ ನೇಮಕ ಮಾಡಿದ ಸಮಿತಿ ‘ಈ ವಾಸ್ತು ಶಿಯಾ ಆಗಿದೆ’, ಎಂದು ಹೇಳಿತ್ತು; ಆದರೆ ಅಯೋಧ್ಯೆಯ ವಿಷಯದಲ್ಲಿ ದಾಖಲಿಸಿದ ಖಟ್ಲೆಯೆ ಮುಂದುವರಿಯಿತು ಹಾಗೂ ಕೊನೆಗೆ ೨೦೧೦ ರಲ್ಲಿ ಅಲಹಾಬಾದ ಉಚ್ಚ ನ್ಯಾಯಾಲಯ ಈ ಖಟ್ಲೆಯ ವಿಷಯದಲ್ಲಿ ತನ್ನ ನಿರ್ಣಯವನ್ನು ನೀಡುತ್ತ ವಿವಾದಿತ ಜಾಗವನ್ನು ೩ ಭಾಗಗಳನ್ನಾಗಿ ಮಾಡುವ ನಿರ್ಣಯವನ್ನು ನೀಡಿತು, ಈ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲನ್ನು (ಅಪೀಲ್) ಹಾಕಲಾಯಿತು ಹಾಗೂ ಸನ್ಮಾನ್ಯ ನ್ಯಾಯಾಧೀಶರ ಘೋಷಣೆಗನುಸಾರ ಜನವರಿ ೨೦೧೯ ರಿಂದ ಈ ಖಟ್ಲೆಯ ಆಲಿಕೆಯ ಕಾರ್ಯ ಆರಂಭವಾಯಿತು.

೭. ಬಾಬರಿ ಕಟ್ಟಡವನ್ನು ಕೆಡವಲು ಮಾಡಿದ ಕಾರಸೇವೆ ಹಾಗೂ ಅದರ ಹಿನ್ನೆಲೆ

‘ಕಾರಸೇವೆ’ ಈ ಶಬ್ದದ ಮೂಲ ಸಂಸ್ಕೃತ ಶಬ್ದ ‘ಕರಸೇವೆ’, ಅಂದರೆ ತನ್ನ ಕೈಯಿಂದ ಮಾಡಿದ ಸೇವೆ’, ಈ ಶಬ್ದದ ಅಪಭ್ರಂಶವಾಗಿ ಕಾರಸೇವೆ ಆಗಿದೆ. ೧೯ ಫೆಬ್ರವರಿ ೧೯೮೧ ರಂದು ತಮಿಳುನಾಡಿನ ಮೀನಾಕ್ಷಿಪುರಮ್‌ನಲ್ಲಿ ನೂರಾರು ಹಿಂದೂಗಳನ್ನು ಬಲವಂತದಿಂದ ಮತಾಂತರಿಸಿ ಮುಸಲ್ಮಾನರನ್ನಾಗಿ ಮಾಡಲಾಯಿತು. ದೇಶದಾದ್ಯಂತ ಈ ಘಟನೆಯ ಬಗ್ಗೆ ಆಕ್ರೋಶ ನಿರ್ಮಾಣವಾಯಿತು. ೧೯೬೪ ರಲ್ಲಿ ಜನಿಸಿದ ವಿಶ್ವ ಹಿಂದೂ ಪರಿಷತ್ತು ಈ ನಿಮಿತ್ತ ಮತಾಂತರದ ವಿರುದ್ಧ ಜನಜಾಗೃತಿ ಮಾಡಲು ದೇಶದಾದ್ಯಂತ ‘ವಿಶಾಲ ಹಿಂದೂ ಸಮ್ಮೇಳನ’ಗಳನ್ನು ಆಯೋಜಿಸಲು ಪ್ರಾರಂಭಿಸಿತು. ೬ ಮಾರ್ಚ್ ೧೯೮೩ ರಂದು ಆಯೋಜಿಸಿದ ಇಂತಹ ಒಂದು ವಿರಾಟ ಹಿಂದೂ ಸಮ್ಮೇಳನದಲ್ಲಿ ಕಾಂಗ್ರೆಸ್ಸಿನ ನಾಯಕ ದಾವೂ ದಯಾಳ ಖನ್ನಾ ಇವರು ಕಾಶಿ, ಮಥುರಾ ಹಾಗೂ ಅಯೋಧ್ಯೆ ಈ ಧಾರ್ಮಿಕ ಸ್ಥಳಗಳ ಮುಕ್ತಿಯ ಪ್ರಸ್ತಾಪವನ್ನು ಮಂಡಿಸಿದರು. ಅವರು ಈ ವಿಷಯದಲ್ಲಿ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರಿಗೆ ಪತ್ರ ಬರೆದು ತಿಳಿಸಿದ್ದರು. ಆದರೆ ಆ ಪತ್ರವನ್ನು ದುರ್ಲಕ್ಷಿಸಲಾಯಿತು. ಸೋಮನಾಥನ ಜೀರ್ಣೋದ್ಧಾರ ಮಾಡುವ ಉಕ್ಕಿನ ಪುರುಷ ಸರದಾರ ವಲ್ಲಭಭಾಯಿ ಪಟೇಲ, ಕೆ. ಎಮ್. ಮುನ್ಶಿ, ಡಾ. ರಾಜೇಂದ್ರಪ್ರಸಾದ ಇವರ ಕೃತಿಗನುಸಾರ ನಡೆಯುವುದನ್ನು ಕಾಂಗ್ರೆಸ್ ಈ ಹಿಂದೆಯೆ ನಿಲ್ಲಿಸಿದೆ. ಕಾಂಗ್ರೆಸ್ಸಿನಲ್ಲಿ ‘ಗಾಂಧಿ’ ಅಡ್ಡ ಹೆಸರಿನ ಏಕಾಧಿಕಾರಶಾಹಿಯ ಕಾಲ ಆರಂಭವಾಗಿತ್ತು ! ವಿಶೇಷವೆಂದರೆ ಶಿಯಾ ಮುಖಂಡ ಡಾ. ಹುಜೂರ ನವಾಬ ಇವರು ಮಾತ್ರ ಖನ್ನಾ ಇವರ ಬೇಡಿಕೆಗೆ ಬಹಿರಂಗವಾಗಿ ಬೆಂಬಲ ನೀಡಿದರು !

೭ ಅ. ‘ರಾಮಜನ್ಮಭೂಮಿ ಮುಕ್ತಿ ಯಜ್ಞ ಸಮಿತಿ’ಯ ಸ್ಥಾಪನೆ : ೧೯೮೪ ರಲ್ಲಿ ಮೊದಲು ಧರ್ಮಸಂಸತ್ತು ನೆರವೇರಿತು ಹಾಗೂ ಅದೇವೇಳೆಗೆ ‘ರಾಮಜನ್ಮಭೂಮಿ ಮುಕ್ತಿ ಯಜ್ಞ ಸಮಿತಿ’ಯನ್ನು ಸ್ಥಾಪಿಸಲಾಯಿತು. ಗೋರಕ್ಷ ಪೀಠಾಧೀಶ್ವರ ಮಹಂತ ಅವೈದ್ಯನಾಥ ಇವರನ್ನು ಸಮಿತಿಯ ಅಧ್ಯಕ್ಷರೆಂದು ನೇಮಿಸಲಾಯಿತು. ಇದುವರೆಗೆ ಅಯೋಧ್ಯೆಯ ಮಂದಿರದಲ್ಲಿ ಪುರೋಹಿತರು ಮತ್ತು ಅವರ ಸಹಾಯಕರಿಗೆ ಮಾತ್ರ ಪೂಜೆಗಾಗಿ ಹೋಗಲು ಅನುಮತಿಯಿತ್ತು. ಉಳಿದ ಸಮಯದಲ್ಲಿ ಅಲ್ಲಿ ಬೀಗ ಹಾಕಲಾಗುತ್ತಿತ್ತು. ಸಪ್ಟೆಂಬರ ೧೯೮೪ ರಲ್ಲಿ ‘ಶ್ರೀರಾಮ-ಜಾನಕಿ ಯಾತ್ರೆ’ ಹಾಗೂ ಅನಂತರ ‘ತಾಲಾ-ಖೋಲೋ ಆಂದೋಲನ’ (ಬೀಗ ತೆರೆಯಿರಿ ಆಂದೋಲನ) ಕೈಗೆತ್ತಿಕೊಳ್ಳಲಾಯಿತು. ಮಾರ್ಚ್ ೧೯೮೫ ರಲ್ಲಿ ಕಾಂಗ್ರೆಸ್ಸಿನ ಅಂದಿನ ರಾಜೀವ ಗಾಂಧಿ ಸರಕಾರಕ್ಕೆ ‘ಮುಂದಿನ ಒಂದು ವರ್ಷದಲ್ಲಿ ಸರಕಾರ ಬೀಗ ತೆಗೆಯದಿದ್ದರೆ ಬೀಗವನ್ನು ಮುರಿಯಲಾಗುವುದು’, ಎಂದು ಎಚ್ಚರಿಕೆ ನೀಡಲಾಯಿತು. ವಿಶೇಷವೆಂದರೆ, ಇಂದಿರಾ ಗಾಂಧಿ ಹತ್ಯೆಯ ನಂತರ ಅಧಿಕಾರಕ್ಕೆ ಬಂದಿರುವ ರಾಜೀವ ಗಾಂಧಿಯವರ ಅವಧಿಯಲ್ಲಿ ಒಂದರ ಹಿಂದೆ ಒಂದರಂತೆ ನ್ಯಾಯಾಂಗ ಪ್ರಕ್ರಿಯೆ ಆರಂಭವಾಯಿತು ಹಾಗೂ ೧ ಫೆಬ್ರವರಿ ೧೯೮೬ ರಂದು ಬೀಗ ತೆಗೆಯಲು ಆದೇಶ ನೀಡಲಾಯಿತು. ಅರ್ಥಾತ್ ಇದೇನೂ ಶ್ರದ್ಧೆ ಅಥವಾ ಸತ್ಯದ ಅರಿವಿನಿಂದಾದ ಬದಲಾವಣೆಯಾಗಿರಲಿಲ್ಲ, ಇದು ಶಹಾಬಾನೋ ಪ್ರಕರಣದ ನಂತರ ಹಿಂದೂಗಳನ್ನು ಸಂತೈಸಲು ರಾಜೀವ ಗಾಂಧಿಯವರು ಆಡಿದ ಆಟವಾಗಿತ್ತು. ಈ ನಿರ್ಣಯದ ವಿರುದ್ದವೂ ಸುನ್ನಿ ವಕ್ಫ್ ಬೋರ್ಡ್ ತಕ್ಷಣ ನ್ಯಾಯಾಲಯಕ್ಕೆ ಧಾವಿಸಿತು; ಆದರೆ ಅದರಿಂದ ಏನೂ ಉಪಯೋಗವಾಗಲಿಲ್ಲ.

೭ ಆ. ಮುಸಲ್ಮಾನ ಮುಖಂಡರು ಉದ್ರೇಕಕಾರಿ ಭಾಷಣಗಳನ್ನು ಮಾಡುತ್ತಾ ‘ಜಿಹಾದ್’ನ ಘೋಷಣೆಗಳನ್ನು ನೀಡುವುದು : ೧೯೮೭ ರಲ್ಲಿ ವಿಶ್ವ ಹಿಂದೂ ಪರಿಷತ್ತು ಹಿಂದೂ-ಸಿಕ್ಖ್ ಐಕ್ಯಕ್ಕಾಗಿ ಸದ್ಭಾವನಾ ಯಾತ್ರೆಯನ್ನು ಆರಂಭಿಸಿತು. ಇನ್ನೊಂದು ಕಡೆಯಲ್ಲಿ ಶಹಾಬಾನೋ ಪ್ರಕರಣದ ನಂತರ ಮುಸಲ್ಮಾನ ಕಟ್ಟರ ಪಂಥೀಯರು ವಿಷ ಕಾರಲು ಆರಂಭಿಸಿದ್ದರು. ೩೦ ಮಾರ್ಚ್ ೧೯೮೭ ರಂದು ದೆಹಲಿಯ ಬೋಟ್ ಕ್ಲಬ್‌ನಲ್ಲಿ ರ‍್ಯಾಲಿಯನ್ನು ನಡೆಸಲಾಯಿತು. ಈ ಪ್ರಸಂಗದಲ್ಲಿ ಶಾಹೀ ಇಮಾಮ ಸಹಿತ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವ ಪ್ರಮುಖ) ಇನ್ನೂ ಅನೇಕ ಮುಸಲ್ಮಾನ ಮುಖಂಡರು ಅತ್ಯಂತ ಉದ್ರೇಕಕಾರಿ ಭಾಷಣಗಳನ್ನು ಮಾಡುತ್ತಾ ‘ಜಿಹಾದ್’ನ ಘೋಷಣೆಯನ್ನು ನೀಡಿದರು. ಅನಂತರ ಸ್ವಲ್ಪ ಸಮಯದಲ್ಲಿ ಇದರ ದುಷ್ಪರಿಣಾಮ ಕಾಣಿಸಿತು ಹಾಗೂ ಮೇರಠ್ ಸಹಿತ ಅನೇಕ ಪ್ರದೇಶಗಳಲ್ಲಿ ಗಲಭೆ ಆರಂಭವಾಯಿತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಉದ್ರೇಕಿಸುವ ಭಾಷಣ ಮಾಡಿದವರ ವಿರುದ್ಧ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಅಂದಿನ ಮತ್ತು ಇಂದಿನ ಸ್ಥಿತಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ ?

೭ ಇ. ರಾಮಜನ್ಮಭೂಮಿಯ ಸ್ಥಳದಲ್ಲಿ ಶಿಲಾನ್ಯಾಸದ ಕಾರ್ಯಕ್ರಮ ನೆರವೇರುವುದು : ಈ ಎಲ್ಲ ವಾತಾವರಣದಲ್ಲಿ ಜನವರಿ ೧೯೮೯ ರಲ್ಲಿ ಪ್ರಯಾಗರಾಜದಲ್ಲಿ ಆಯೋಜಿಸಿದ ತೃತೀಯ ಧರ್ಮಸಂಸತ್ತಿನಲ್ಲಿ ಮುಂದಿನಂತೆ ಘೋಷಣೆಯನ್ನು ಮಾಡಲಾಯಿತು, ‘೩೦ ಸಪ್ಟೆಂಬರ ೧೯೮೯ ರಂದು ಎಲ್ಲ ಊರುಗಳಲ್ಲಿ ‘ಶ್ರೀರಾಮಶಿಲಾಪೂಜೆ’ಯ ಕಾರ್ಯಕ್ರಮ ನಡೆಯುವುದು ಹಾಗೂ ೯ ನವಂಬರ ೧೯೮೯ ರಂದು ಅಯೋಧ್ಯೆಯಲ್ಲಿ ಶಿಲಾನ್ಯಾಸದ ಕಾರ್ಯಕ್ರಮ ನೆರವೇರುವುದು. ಈ ನಡುವೆ ಶಿಯಾ ಮುಸಲ್ಮಾನರು ‘ಸುನ್ನಿ ವಕ್ಫ್ ಬೋರ್ಡ್ ವಿವಾದಾತ್ಮಕ ಭೂಮಿಯನ್ನು ಹಿಂದೂಗಳಿಗೆ ಒಪ್ಪಿಸಬೇಕು’, ಎಂದು ಪುನಃ ಕರೆ ನೀಡಿದರು. ರಾಮಮಂದಿರದ ವಿಷಯ ಭಾರತೀಯ ಜನತಾ ಪಕ್ಷದ ಕಾರ್ಯಕ್ರಮ ಪತ್ರಿಕೆಯಲ್ಲಿ ಬಂದಿತ್ತು. ಶಿಲಾನ್ಯಾಸದ ಕಾರ್ಯಕ್ರಮದಲ್ಲಿ ಅಡಚಣೆ ಉಂಟು ಮಾಡಲು ಸರಕಾರದ ಪ್ರಯತ್ನ ಆರಂಭವಾಯಿತು. ಎಲ್ಲ ಅಡಚಣೆಗಳನ್ನು ಮೆಟ್ಟಿನಿಂತು ನಿರ್ಧರಿಸಿದಂತೆ ೯ ನವಂಬರ ೧೯೮೯ ರಂದು ಶಿಲಾನ್ಯಾಸದ ಕಾರ್ಯಕ್ರಮ ನಡೆಯಿತು. ಶಿಲಾನ್ಯಾಸ ಆಯಿತು; ಆದರೆ ಮಂದಿರ ನಿರ್ಮಾಣದ ಬಗ್ಗೆ ಏನು ? ‘ನ್ಯಾಯಾಲಯದ ಆದೇಶ ಬರದಿರುವುದರಿಂದ ಅಂತಹ ಯಾವುದೇ ಹೆಜ್ಜೆ ಇಡಬಾರದು’, ಎಂದು ಆಡಳಿತದ ವತಿಯಿಂದ ಹೇಳಲಾಗಿತ್ತು. ಅಂದಿನ ಪ್ರಧಾನಮಂತ್ರಿ ವಿಶ್ವನಾಥ ಪ್ರತಾಪ ಸಿಂಗ್ ಇವರ ಧ್ವನಿಯೂ ಬದಲಾಗುತ್ತಿರುವುದು ಅರಿವಾಗುತ್ತಿತ್ತು.

೭ ಈ. ಸಮಾಜವಾದಿ ಪಕ್ಷದ ಮುಲಾಯಮಸಿಂಹ ಯಾದವ ಇವರು ಮಾಡಿದ ಕ್ರೌರ್ಯ : ಇದೇ ಅವಧಿಯಲ್ಲಿ ಭಾಜಪದ ನಾಯಕ ಲಾಲಕೃಷ್ಣ ಅಡ್ವಾಣಿ ಇವರು ಸೋಮನಾಥದಿಂದ ಅಯೋಧ್ಯೆಯ ವರೆಗೆ ರಥಯಾತ್ರೆ ನಡೆಸಿದರು. ಅಡ್ವ್ವಾಣಿ ಇವರನ್ನು ಬಂಧಿಸಲಾಯಿತು. ಮುಂದಿನ ೧ ವರ್ಷ ಸಾಕಷ್ಟು ಕೋಲಾಹಲ ನಡೆಯಿತು ಹಾಗೂ ಕೊನೆಗೆ ‘ಅಕ್ಟೋಬರ ೧೯೯೦ ರಲ್ಲಿ ಪುನಃ ಕಾರಸೇವರಕರು ಅಯೋಧ್ಯೆಯಲ್ಲಿ ಸೇರುವರು’, ಎಂದು ನಿರ್ಧರಿಸಲಾಯಿತು. ಆಗ ಮುಖ್ಯಮಂತ್ರಿ ಮುಲಾಯಮ ಸಿಂಹ ಯಾದವ ಇವರು ಅಯೋಧ್ಯೆಯಲ್ಲಿ ‘ಪರಿಂದಾ ಭೀ ಪರ ನಹೀ ಮಾರ್ ಸಕತಾ |’ (ಆ ಪರಿಸರದಲ್ಲಿ ಒಂದು ಪಕ್ಷಿಯೂ ಬರಲು ಸಾಧ್ಯವಿಲ್ಲ ) ಎಂದು ಘೋಷಣೆ ನೀಡಿದರು. ಆದರೂ ೩೦ ಅಕ್ಟೋಬರ ೧೯೯೦ ರಂದು ಪೊಲೀಸ್ ವ್ಯವಸ್ಥೆಯ ಕಣ್ಣು ತಪ್ಪಿಸಿ ಕಾರಸೇವಕರು ಅಯೋಧ್ಯೆಯಲ್ಲಿ ಸೇರಿದರು. ಕೊಠಾರಿ ಸಹೋದರರು ಬಾಬರಿಯ ಮೇಲೆ ಕೇಸರಿ ಹಾರಿಸಿದರು. ಈ ಎಲ್ಲ ಘಟನೆಗಳ ನಂತರ ಕಾರಸೇವಕರ ಮೇಲೆ ಆಕ್ರಮಣ ಮಾಡುವಂತೆ ಪೊಲೀಸರಿಗೆ ಆದೇಶ ನೀಡಲಾಯಿತು. ಅಶ್ರುವಾಯು ಹಾಗೂ ಗುಂಡಿನ ದಾಳಿ ಆರಂಭವಾಯಿತು ಹಾಗೂ ಅನೇಕ ಕಾರಸೇವಕರ ರಕ್ತದಿಂದ ಶರಯೂ ನದಿಯ ನೀರು ಕೆಂಪಾಯಿತು. ನಿಃಶಸ್ತ್ರರಾಗಿದ್ದ ರಾಮಭಕ್ತ ಕಾರಸೇವಕರ ಮೇಲೆ ಗುಂಡು ಹಾರಿಸುವ ಪರಾಕ್ರಮ’ ಮುಲಾಯಮಸಿಂಹ ಸರಕಾರ ಮಾಡಿತು. ಇದೆಲ್ಲವನ್ನೂ ಮಾಡುವಾಗ ಕಾರಸೇವಕರ ವಯಸ್ಸನ್ನೂ ಪರಿಗಣಿಸಲಿಲ್ಲ. ಕೊಠಾರಿ ಸಹೋದರರನ್ನು ಅವರ ಯೌವನಾವಸ್ಥೆಯಲ್ಲಿಯೆ ಯಮಲೋಕಕ್ಕೆ ಕಳುಹಿಸಲಾಯಿತು. ‘ಬಿಬಿಸಿ’ ಪ್ರಸಾರ ಮಾಡಿದ ವಾರ್ತೆಗನುಸಾರ ಸುಮಾರು ೫೦೦ ಕ್ಕಿಂತಲೂ ಹೆಚ್ಚು ಕಾರಸೇವಕರು ಸಾಯಿಸಲ್ಪಟ್ಟರು. ದೇಶದಾದ್ಯಂತ ಈ ಹತ್ಯಾಕಾಂಡದ ವಿಷಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಅನೇಕ ಸ್ಥಳಗಳಲ್ಲಿ ಮಾಜಿ ಸೈನ್ಯಾಧಿಕಾರಿಗಳ ಪತ್ನಿಯರೂ ಈ ಹತ್ಯಾಕಾಂಡದ ವಿರುದ್ಧ ಮೆರವಣಿಗೆ ತೆಗೆದರು.

೭ ಉ. ಕೊನೆಗೂ ಬಾಬರಿ ಕಟ್ಟಡ ನೆಲಸಮವಾಯಿತು ! : ಇವೆಲ್ಲ ಘಟನೆಗಳ ನಂತರ ರಾಮಜನ್ಮಭೂಮಿ ಆಂದೋಲನಕ್ಕೆ ಹೆಚ್ಚು ಬಲ ಸಿಕ್ಕಿತು. ಏಪ್ರಿಲ್ ೧೯೯೧ ರಲ್ಲಿನ ಧರ್ಮಸಂಸತ್ತು ಮತ್ತು ಅನಂತರ ಬೋಟ್ ಹೌಸ್‌ನಲ್ಲಿ ಆಯೋಜಿಸಿದ ಸಭೆಯಿಂದ ರಾಮಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣದ ಸಂಕಲ್ಪವನ್ನು ಮತ್ತೊಮ್ಮೆ ಘೋಷಿಸಲಾಯಿತು. ಈಗ ಕೇಂದ್ರದಲ್ಲಿ ಕಾಂಗ್ರೆಸ್ಸಿನ ಪಿ.ವಿ ನರಸಿಂಹ ರಾವ್ ಹಾಗೂ ಉತ್ತರಪ್ರದೇಶದಲ್ಲಿ ಭಾಜಪದ ಕಲ್ಯಾಣ ಸಿಂಗ ಇವರ ಸರಕಾರ ಬಂದಿತ್ತು. ಅಯೋಧ್ಯೆಯಲ್ಲಿ ಯಾವುದೇ ಅಪ್ರಿಯ ಘಟನೆ ಘಟಿಸಬಾರದೆಂದು ಸನ್ಮಾನ್ಯ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು. ರಾಮಮಂದಿರದ ವಿಷಯದಲ್ಲಿ ಯಾವುದೇ ಚಟುವಟಿಕೆ ನಡೆಯುವುದು ಕಾಣಿಸುತ್ತಿರಲಿಲ್ಲ. ಹೀಗೆಯೆ ೫ ನೇ ಮತ್ತು ೬ ನೇ ಧರ್ಮ ಸಂಸತ್ತು ನೆರವೇರಿತು ಹಾಗೂ ೧೯೯೨ ಆಗಮಿಸಿತು.

ರಾವ್ ಸರಕಾರಕ್ಕೆ ಪುನಃ ಅಯೋಧ್ಯೆಯ ವಿಷಯದಲ್ಲಿ ವಿಚಾರಿಸಿದಾಗ ಆಡಳಿತದ ನೈತಿಕ ಹೊಣೆಗಾರಿಕೆ ಇತ್ಯಾದಿ ವಿಷಯದ ಕಾರಣವನ್ನು ಮುಂದಿಡಲಾಯಿತು. ಒಟ್ಟಾರೆ ಆಡಳಿತದ ಇಚ್ಛಾಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೊನೆಗೆ ವಿಶ್ವ ಹಿಂದೂ ಪರಿಷತ್ತಿನಿಂದ ಪುನಃ ೬ ಡಿಸೆಂಬರ ೧೯೯೨ ರಂದು ‘ಕಾರಸೇವೆ’ ಘೋಷಣೆಯನ್ನು ಮಾಡಲಾಯಿತು. ಅದೇ ದಿನ ವಿವಾದಾತ್ಮಕ ವಾಸ್ತುವಿನ ಮೂರೂ ಗುಮ್ಮಟಗಳನ್ನು ನೆಲಸಮಗೊಳಿಸಲಾಯಿತು.

ದೇಶದಾದ್ಯಂತ ಈ ಘಟನೆಯ ಬಗ್ಗೆ ವಿವಿಧ ಪ್ರತಿಕ್ರಿಯೆಗಳು ಬರಲಾರಂಭಿಸಿದವು.

‘ಈ ಘಟನೆ ನಿಯೋಜಿತ ಅಥವಾ ಯೋಗ್ಯವೂ ಆಗಿರಲಿಲ್ಲ’, ಇಂತಹ ಪ್ರತಿಕ್ರಿಯೆಗಳು ಭಾಜಪದ ನಾಯಕರಿಂದ ಕೇಳಿಬರುತ್ತಿದ್ದವು. ಈ ಕೋಲಾಹಲದ ನಡುವೆಯೆ ‘ಘುಮ್ಮಟದ ಮೇಲೆ ಏರಿದ ಕಾರಸೇವಕರು ಶಿವಸೈನಿಕರಾಗಿದ್ದರು’, ಎಂದು ಭಾಜಪದ ನಾಯಕ ಸುಂದರಸಿಂಗ್ ಭಂಡಾರಿ ಇವರು ಪ್ರತಿಕ್ರಿಯೆ ನೀಡಿದರು. ಅದಕ್ಕನುಸಾರ ಪತ್ರಕರ್ತೆ ಸುಜಾತಾ ಆನಂದನ್ ಇವರು ಶಿವಸೇನಾ ಪ್ರಮುಖ ಬಾಳಾಸಾಹೇಬ ಠಾಕರೆ ಇವರಿಗೆ ಪ್ರತಿಕ್ರಿಯೆ ಕೇಳಿದಾಗ ಅವರು ನೀಡಿದ ಪ್ರತಿಕ್ರಿಯೆ ಬಹಳಷ್ಟು ಪ್ರಸಾರವಾಯಿತು. ಬಾಳಾಸಾಹೇಬ ಹೇಳಿದರು, “ಒಂದು ವೇಳೆ ನನ್ನ ಶಿವಸೈನಿಕರು ಬಾಬರಿ ಕೆಡವಿದ್ದಾರೆ ಎಂದಾದರೆ, ನನಗೆ ಅವರ ಬಗ್ಗೆ ಅಭಿಮಾನವಿದೆ !”

೮. ‘ರಾಮ ದೀಪಾವಳಿ’ಗೆ ಮಹತ್ವದ ಅರ್ಥ ಪ್ರಾಪ್ತಿಯಾಗುವುದು

ವಿವಾದಾತ್ಮಕ ವಾಸ್ತು ನೆಲಸಮವಾಯಿತು; ಆದರೆ ಹಾಗಾಗಿರುವುದರಿಂದ ವಿವಾದಾತ್ಮಕ ಸ್ಥಳದ ಸಮಸ್ಯೆ ಮಾತ್ರ ಪರಿಹಾರವಾಗುತ್ತಿರಲಿಲ್ಲ. ಅದು ನ್ಯಾಯಾಲಯದಲ್ಲಿಯೆ ಪರಿಹಾರವಾಗಬೇಕಾಗಿತ್ತು ! ದಿವಾಣಿ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯದ ವರೆಗೆ ಪ್ರವಾಸ ಮಾಡಿ ರಾಮಲಲ್ಲಾ ತನ್ನ ಹಕ್ಕಿನ ಸ್ಥಾನವನ್ನು ಇಂದು ಪ್ರಾಪ್ತಿ ಮಾಡಿಕೊಂಡಿದ್ದಾನೆ. ಈ ನಿರಂತರ ಸಂಘರ್ಷದ ಪೂರ್ಣ ವಿರಾಮವನ್ನು ನೋಡಲು ನಮಗೆ ಸಿಗುವುದೆಂದರೆ ಅದರಷ್ಟು ಆನಂದದ ಕ್ಷಣ ಹಿಂದೂಗಳಿಗೆ ಇನ್ಯಾವುದಿರಬಹುದು ? ಆದರೆ ಮಂದಿರ ನಿರ್ಮಾಣದ ವಿಜೃಂಭಣೆಯಲ್ಲಿ ರಾಮಕಾರ್ಯಕ್ಕಾಗಿ ರಕ್ತ ಹರಿಸಿದ ಪ್ರತಿಯೊಬ್ಬರಿಗೂ ವಂದನೆಗಳನ್ನು ಸಲ್ಲಿಸುವುದು ಹಾಗೂ ಅದಕ್ಕಾಗಿ ಮೂಲತಃ ಈ ಸಂಘರ್ಷವನ್ನು ತಿಳಿದುಕೊಳ್ಳುವುದು, ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ, ಹಾಗೆ ಆದರೆ ಮಾತ್ರ ಜನವರಿಯಲ್ಲಿ ಮಂದಿರ ಉದ್ಘಾಟನೆಯ ನಿಮಿತ್ತದಲ್ಲಿ ಆಗುವ ‘ರಾಮದೀಪಾವಳಿ’ಗೆ ಮಹತ್ವಪೂರ್ಣ ಅರ್ಥ ಪ್ರಾಪ್ತವಾಗಬಹುದು.

– ಡಾ. ಸಚ್ಚಿದಾನಂದ ಶೆವಡೆ, ಹಿಂದೂ ತತ್ತ್ವನಿಷ್ಠ ವ್ಯಾಖ್ಯಾನಕಾರರು ಹಾಗೂ ವೈದ್ಯ ಪರೀಕ್ಷಿತ ಶೆವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಲಿ. (೧೮.೧೧.೨೦೨೩)