ನ್ಯೂಯಾರ್ಕ್ – ಭಾರತದ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಅಮೆರಿಕಾದಲ್ಲಿ ‘ಇಂಡಿಯಾ ಡೇ ಪರೇಡ್’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಗಸ್ಟ್ 18 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜನರಿಗೆ ಶ್ರೀರಾಮ ಮಂದಿರದ ದರ್ಶನ ಮಾಡಲು ಸಿಗುವುದು. ಈ ಉತ್ಸವದಲ್ಲಿ ಅಮೆರಿಕಾದ ಸಾವಿರಾರು ಭಾರತೀಯ ನಾಗರಿಕರು ಭಾಗವಹಿಸಲಿದ್ದಾರೆ.
ಭಾರತದ ಖ್ಯಾತ ನಟ ಪಂಕಜ್ ತ್ರಿಪಾಠಿ ಅವರು ‘ಇಂಡಿಯಾ ಡೇ ಪರೇಡ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು ಎಂದು ‘ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್’ (‘ಎಫ್.ಐ.ಎ’.) ತಿಳಿಸಿದೆ. ಭಾರತೀಯ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಭಾರತದ ಹೊರಗೆ ಆಯೋಜಿಸಲಾಗುವ ಅತಿದೊಡ್ಡ ಕಾರ್ಯಕ್ರಮವೆಂದು ಪರಿಗಣಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ನ್ಯೂಯಾರ್ಕ್ ನಲ್ಲಿ ನಡೆಯುವ ವಿವಿಧ ಮಾಧ್ಯಮಗಳ ಮೂಲಕ ಭಾರತದ ಶ್ರೇಷ್ಠ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡಲಾಗುವುದು. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ‘ವಸುಧೈವ ಕುಟುಂಬಕಂ’ ಪರಿಕಲ್ಪನೆಯನ್ನು ಆಧರಿಸಿದೆ, ಎಂದು ‘ಎಫ್.ಐ.ಎ.’ನ ಅಧ್ಯಕ್ಷ ಡಾ. ಅವಿನಾಶ್ ಗುಪ್ತಾ ಹೇಳಿದರು.
India Day parade in New York to feature Ayodhya Ram Mandir tableau
The annual parade which attracts thousands of Indian Americans from in and around New York, highlights India’s rich cultural heritage, traditions and accomplishments.@FIANYNJCTNEpic.twitter.com/DTweOgNbp1
— Sanatan Prabhat (@SanatanPrabhat) July 11, 2024