ಶ್ರೀರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಯತ್ನ
ನವ ದೆಹಲಿ – ಜನವರಿ ೨೨ ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೂ ಮುನ್ನ ಪಾಕಿಸ್ತಾನ ಮತ್ತು ಚೀನಾದ ಹ್ಯಾಕರ್‌ಗಳು ಶ್ರೀರಾಮ ಮಂದಿರ, ಪ್ರಸಾರ ಭಾರತಿ ಮತ್ತು ಉತ್ತರ ಪ್ರದೇಶ ಸರಕಾರದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಭಾರತದ ಟೆಲಿಕಾಂ ಆಪರೇಷನ್ ಸೆಂಟರ್ ಶ್ರೀರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯ ಮೊದಲು ಸುಮಾರು ೨೬೪ ವೆಬ್‌ಸೈಟ್‌ಗಳನ್ನು ಮೇಲ್ವಿಚಾರಣೆ ಮಾಡುತ್ತಿತ್ತು. ಈ ಅವಧಿಯಲ್ಲಿ ಶ್ರೀರಾಮ ಮಂದಿರ ಮತ್ತು ಪ್ರಸಾರ ಭಾರತಿಯ ವೆಬ್‌ಸೈಟ್‌ಗಳನ್ನು ಗುರಿಯಾಗಿಸಿಕೊಂಡು ಸುಮಾರು ೧೪೦ ಕಂಪ್ಯೂಟರ್ ವಿಳಾಸಗಳು (ಐ.ಪಿ.) ಪತ್ತೆಯಾಗಿತ್ತು. ಈ ಅವಧಿಯಲ್ಲಿ ಸುಮಾರು ೧ ಸಾವಿರದ ೨೪೪ ಕಂಪ್ಯೂಟರ್ ವಿಳಾಸಗಳನ್ನು ನಿಷೇಧಿಸಲಾಗಿತ್ತು. ಅವರಲ್ಲಿ ೯೯೯ ಜನರು ಚೀನಾದವರಾಗಿದ್ದರೆ, ಉಳಿದವರು ಪಾಕಿಸ್ತಾನ, ಹಾಂಗ್ ಕಾಂಗ್ ಮತ್ತು ಕಾಂಬೋಡಿಯಾದಿಂದ ಆಗಿತ್ತು. ಇದಲ್ಲದೇ ಕೆಲವು ವಿಳಾಸಗಳು ಭಾರತಕ್ಕೆ ಸೇರಿದ್ದು, ಅದರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.