ಅಯೋಧ್ಯೆಯ ಪ್ರಭು ಶ್ರೀರಾಮನ ಮಂದಿರದಲ್ಲಿ ೨೨.೧.೨೦೨೪ ರಂದು ಶ್ರೀರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ದೂರದರ್ಶನವಾಹಿನಿಯಲ್ಲಿ ನೇರ ಪ್ರಸಾರ ಮಾಡಲಾಯಿತು. ಈ ದಿವ್ಯ ಸಮಾರಂಭವನ್ನು ನೋಡುತ್ತಿರುವಾಗ ದೇವರ ಕೃಪೆಯಿಂದಾದ ಸೂಕ್ಷ್ಮ ಪರೀಕ್ಷಣೆಯನ್ನು ಇಲ್ಲಿ ಕೊಡಲಾಗಿದೆ.
೧. ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿಯವರ ಜೊತೆಗೆ ದಾಸ್ಯಭಾವದಲ್ಲಿನ ಹನುಮಂತ, ಪ್ರಭು ಶ್ರೀರಾಮನ ದರ್ಶನಕ್ಕೆ ಬರುತ್ತಿರುವುದು ಅರಿವಾಗುವುದು
ಭಾರತದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿಯವರು ಶ್ರೀರಾಮ ಮಂದಿರದ ಪ್ರಾಂಗಣಕ್ಕೆ ಬಂದೊಡನೆÀ ‘ಅವರ ಜೊತೆಗೆ ದಾಸ್ಯಭಾವದಲ್ಲಿ ಹನುಮಂತನೂ, ಪ್ರಭು ಶ್ರೀರಾಮನನ್ನು ಭೇಟಿ ಯಾಗಲು ಕಾತುರದಿಂದ ಬರುತ್ತಿದ್ದಾನೆ’, ಎಂದು ನನಗೆ ಅರಿ ವಾಯಿತು. ಆ ದಿನ ಪ್ರಧಾನಮಂತ್ರಿ ಮೋದಿಯವರು ಎಂದಿ ಗಿಂತಲೂ ಹೆಚ್ಚು ತೇಜಸ್ವಿ ಮತ್ತು ಸಾತ್ತ್ವಿಕವಾಗಿ ಕಾಣಿಸುತ್ತಿದ್ದರು.
೨. ಯಾವಾಗ ಮೋದಿಯವರು ೫ ಮಂಟಪಗಳನ್ನು ದಾಟಿ ಮಂದಿರದ ಗರ್ಭಗುಡಿಯನ್ನು ಪ್ರವೇಶಿಸಿದರೋ, ಆಗ ದೇಹರೂಪಿ ಪಂಚಕೋಶಗಳನ್ನು ದಾಟಿ ಹನುಮಂತನು ಆತ್ಮಾರಾಮನ ದರ್ಶನ ಪಡೆದುದರ ಅರಿವಾಗುವುದು
ಯಾವಾಗ ಪ್ರಧಾನಮಂತ್ರಿ ಮೋದಿಯವರು ೫ ಮಂಟಪ ಗಳನ್ನು ದಾಟಿ ಮಂದಿರದ ಗರ್ಭಗುಡಿಯನ್ನು ಪ್ರವೇಶಿಸಿದರೋ, ಆಗ ಅವರ ಜೊತೆಗೆ ಬಂದ ಹನುಮಂತನೂ ದೇಹರೂಪಿ ಮಂದಿರದ ಮಂಟಪರೂಪಿ ಐದು ಕೋಶಗಳನ್ನು ದಾಟಿದನು. ಈ ಕೋಶಗಳೆಂದರೆ – ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ ಮತ್ತು ಆನಂದಮಯ ಕೋಶ ! ಪ್ರಧಾನಮಂತ್ರಿ ಮೋದಿಯವರು ಗರ್ಭಗುಡಿ ತಲುಪಿದಾಗ, ಅವರ ಜೊತೆಗೆ ಬಂದ ಹನುಮಂತನು ಸಹ ಗರ್ಭಗುಡಿಯನ್ನು ಪ್ರವೇಶಿಸಿ ಅಂತಃಕರಣದಲ್ಲಿನ ಪ್ರಭು ಶ್ರೀರಾಮರೂಪಿ ಆತ್ಮಾ ರಾಮನ ದರ್ಶನ ಪಡೆದುದರ ಅರಿವಾಯಿತು.
೩. ಸ್ಥೂಲದಿಂದ ಮಾಡಿದ ಶಂಖನಾದದಿಂದ ಸೂಕ್ಷ್ಮ ಸ್ತರದಲ್ಲಾದ ಪರಿಣಾಮ
ಅನಂತರ ಶಂಖನಾದವಾಯಿತು. ಈ ಶಂಖವು ಸಾಮಾನ್ಯ ಶಂಖವಾಗಿರದೇ, ಅದು ಶ್ರೀವಿಷ್ಣುವಿನ ಕರಕಮಲದಲ್ಲಿರುವ ಪಾಂಚಜನ್ಯ ಶಂಖವಾಗಿದೆ ಎಂದರಿವಾಯಿತು. ಆದುದರಿಂದ ಈ ಶಂಖದ ನಾದವನ್ನು ಕೇಳುತ್ತಿರುವಾಗ ‘ಭೂದೇವಿಯು, ಪ್ರಭು ಶ್ರೀರಾಮನೊಂದಿಗೆ ಭೂಮಿಯಲ್ಲಿ ಅವತರಿಸುವಂತೆ ದೇವಲೋಕ ದಲ್ಲಿನ ದೇವತೆಗಳಲ್ಲಿ ಮನಃಪೂರ್ವಕವಾಗಿ ಪ್ರಾರ್ಥಿಸುತ್ತಿದ್ದಾಳೆ’, ಎಂದು ಅರಿವಾಗುತ್ತಿತ್ತು. ಆದುದರಿಂದ ಈ ಶಂಖನಾದದ ಸೂಕ್ಷ್ಮ ಧ್ವನಿಯು ದೇವಲೋಕದ ವರೆಗೆ ತಲುಪಿ ದೇವತೆಗಳ ತತ್ತ್ವಲಹರಿಗಳನ್ನು ಭೂಮಿಯ ಕಡೆಗೆ ಆಕರ್ಷಿಸುತ್ತಿತ್ತು. ಇದರಿಂದ ಶಂಖನಾದದ ಆಧ್ಯಾತ್ಮಿಕ ವೈಶಿಷ್ಟ್ಯವು ಗಮನಕ್ಕೆ ಬಂದಿತು.
೪. ಆಚಮನದ ಸಮಯದಲ್ಲಿ ದಾಸ್ಯಭಾವದಲ್ಲಿದ್ದ ಹನುಮಂತನು ಪ್ರಭು ಶ್ರೀರಾಮನ ಚರಣತೀರ್ಥವನ್ನು ಸೇವಿಸಿದುದರ ಅರಿವಾಗುವುದು
ಪ್ರಾಣಪ್ರತಿಷ್ಠೆಯ ವಿಧಿಗಳ ಅಂತರ್ಗತ ಯಾವಾಗ ಶ್ರೀ. ಮೋದಿಯವರು ಆಚಮನ ಮಾಡುತ್ತಿದ್ದರೋ, ಆಗ ಅವರ ಜೊತೆಗೆ ಸೂಕ್ಷ್ಮ ರೂಪದಿಂದ ಉಪಸ್ಥಿತನಿದ್ದ ಹನುಮಂತನು ಸೂಕ್ಷ್ಮದಿಂದ ಉಪಸ್ಥಿತ ಶ್ರೀರಾಮನ ಚರಣ ತೀರ್ಥವನ್ನು ಸೇವಿಸುತ್ತಿರುವುದರ ಅರಿವಾಯಿತು. ಈ ದೃಶ್ಯವನ್ನು ನೋಡುತ್ತಿರುವಾಗ ನನ್ನ ಪ್ರಭು ಶ್ರೀರಾಮನ ಬಗೆಗಿನ ಭಕ್ತಿಭಾವವು ಜಾಗೃತವಾಗಿ ನನ್ನ ಕಣ್ಣುಗಳಲ್ಲಿ ಭಾವಾಶ್ರುಗಳು ಹರಿದು ಬಂದವು.
೫. ಶಿವನು ಶ್ರೀವಿಷ್ಣುವನ್ನು ಆವಾಹನೆ ಮಾಡಿದಾಗ ವೈಕುಂಠದಲ್ಲಿನ ಶೇಷಶಯನ ವಿಷ್ಣುವಿನ ಹೃದಯದಿಂದ ತಿಳಿನೀಲಿ ಬಣ್ಣದ ಒಂದು ದಿವ್ಯ ಜ್ಯೋತಿ ಪ್ರಕಟವಾಗುವುದು ಮತ್ತು ಅದು ಪೃಥ್ವಿಯತ್ತ ಬಂದು ಶ್ರೀರಾಮಲಲ್ಲಾನ ಮೂರ್ತಿಯಲ್ಲಿ ವಿಲೀನವಾಗುವುದು
ಶ್ರೀರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠೆಯು ನಡೆಯುವಾಗ ಕೈಲಾಸದಲ್ಲಿ ವಾಸಿಸುವ ಶಿವನು ಶ್ರೀರಾಮಲಲ್ಲ್ಲಾನ ಮಂದಿರದಲ್ಲಿ ಸೂಕ್ಷ್ಮದಿಂದ ಬಂದನು ಮತ್ತು ಅವನು ಶ್ರೀವಿಷ್ಣುವಿನ ಆವಾಹನೆ ಮಾಡಿದನು. ಅನಂತರ ವೈಕುಂಠದ ಶೇಷಶಯನ ವಿಷ್ಣುವಿನ ಹೃದಯದಲ್ಲಿ ತಿಳಿನೀಲಿ ಬಣ್ಣದ ಒಂದು ದಿವ್ಯ ಜ್ಯೋತಿಯು ಪ್ರಕಟವಾಯಿತು ಮತ್ತು ಅದು ಪೃಥ್ವಿಯ ಕಡೆಗೆ ವೇಗವಾಗಿ ಬಂದು ಶ್ರೀ ರಾಮಲಲ್ಲ್ಲಾನ ಮೂರ್ತಿಯಲ್ಲಿ ವಿಲೀನವಾಯಿತು. ಈ ರೀತಿ ಶ್ರೀ ರಾಮಲಲ್ಲ್ಲಾನ ಮೂರ್ತಿಯಲ್ಲಿ ಶ್ರೀವಿಷ್ಣುವಿನ ಚೈತನ್ಯರೂಪಿ ಪ್ರಾಣಜ್ಯೋತಿಯು ಪ್ರಜ್ವಲಿತವಾಗಿ ನಿಜವಾದ ಅರ್ಥದಲ್ಲಿ ಶ್ರೀರಾಮಲಲ್ಲ್ಲಾನ ಮೂರ್ತಿಯಲ್ಲಿ ಸೂಕ್ಷ್ಮದಿಂದ ಪ್ರಾಣಪ್ರತಿಷ್ಠಾಪನೆಯಾಯಿತು. ಆಗ ಶ್ರೀರಾಮಲಲ್ಲ್ಲಾನ ಮೂರ್ತಿಯ ಹೃದಯದ ಬಡಿತವು ಸೂಕ್ಷ್ಮದಿಂದ ಆರಂಭವಾಗಿರುವುದು ನನಗೆ ಅರಿವಾಯಿತು.
೬. ಶಿವನು ನೀಡಿದ ಆದೇಶಕ್ಕನುಸಾರ ವಾಯುದೇವನು ಪಂಚಪ್ರಾಣಗಳ ಐದು ಪ್ರವಾಹಗಳನ್ನು ಶ್ರೀರಾಮಲಲ್ಲಾನ ಮೂರ್ತಿಯಲ್ಲಿ ಪ್ರವಹಿಸುವುದು
ಪುರೋಹಿತರು ಶ್ರೀರಾಮಲಲ್ಲಾನ ಮೂರ್ತಿಯಲ್ಲಿ ಪಂಚಪ್ರಾಣಗಳ ಆವಾಹನೆಯನ್ನು ಮಾಡಿದಾಗ, ಶ್ರೀ. ಮೋದಿಜಿಯವರ ಪಕ್ಕದಲ್ಲಿ ನನಗೆ ಸೂಕ್ಷ್ಮದಿಂದ ಶಿವನ ದರ್ಶನ ವಾಯಿತು. ಶಿವನು ವಾಯುದೇವತೆಗೆ ‘ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ’, ಈ ಪಂಚಪ್ರಾಣಗಳನ್ನು ಮೂರ್ತಿಯಲ್ಲಿ ಪ್ರವಹಿಸಲು ಆದೇಶ ನೀಡಿದನು. ಅದರಂತೆ ವಾಯುದೇವನು ಪಂಚಪ್ರಾಣಗಳ ಐದು ಪ್ರವಾಹಗಳನ್ನು ಶ್ರೀ ರಾಮಲಲ್ಲ್ಲಾನ ಮೂರ್ತಿಯಲ್ಲಿ ಪ್ರವಹಿಸಿದನು. ಈ ಪ್ರವಾಹಗಳು ಮೂರ್ತಿಯಲ್ಲಿನ ಪ್ರಾಣಜ್ಯೋತಿಯೊಂದಿಗೆ ವಿಲೀನವಾದುದರಿಂದ ಮೂರ್ತಿಯಲ್ಲಿ ಜೀವಂತಿಕೆ ಬಂದಿತು ಮತ್ತು ನನಗೆ ಮೂರ್ತಿ ಸೂಕ್ಷ್ಮದಿಂದ ಸಜೀವವಾಗಿರುವುದು ಅರಿವಾಯಿತು. ಆಗ ನನಗೆ ಮೂರ್ತಿಯಲ್ಲಿರುವ ಶ್ರೀರಾಮಲಲ್ಲ್ಲಾನ ಶ್ವಾಸೋಚ್ಛಾಸ ಸೂಕ್ಷ್ಮದಿಂದ ಆರಂಭವಾಗಿರುವುದು ಅರಿವಾಯಿತು.
೭. ವಿವಿಧ ದೇವತೆಗಳು ಸೂಕ್ಷ್ಮದಿಂದ ಪುಷ್ಪವೃಷ್ಟಿ ಮಾಡಿದುದರಿಂದ ಸಂಪೂರ್ಣ ವಾತಾವರಣ ಆನಂದಮಯವಾಗುವುದು
ಶ್ರೀರಾಮಲಲ್ಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠೆಯ ವಿಧಿ ನಡೆದಿರುವಾಗ ಸ್ಥೂಲದಿಂದ ಒಂದು ಹೆಲಿಕ್ಯಾಪ್ಟರ್ ಶ್ರೀರಾಮಲಲ್ಲಾನ ಮಂದಿರದ ಮೇಲೆ ಪುಷ್ಪವೃಷ್ಟಿಯನ್ನು ಮಾಡಿತು, ಆಗ ಸೂಕ್ಷ್ಮದಿಂದ ಬ್ರಹ್ಮಾಂಡದÀ ಎಲ್ಲ ದೇವದೇವತೆಗಳು ಶ್ರೀ ರಾಮಲಲ್ಲಾನ ಮಂದಿರದ ಮೇಲೆ ದಿವ್ಯ ಹೂವುಗಳ ಮಳೆ ಗರೆದರು. ಈ ದಿವ್ಯ ಹೂವುಗಳ ದೈವೀ ಪರಿಮಳವು ಪೃಥ್ವಿಯ ವಾಯುಮಂಡಲದಲ್ಲಿ ಹರಡಿದ್ದರಿಂದ ಪೂರ್ಣ ವಾಯು ಮಂಡಲವು ಪರಿಮಳಯುಕ್ತವಾಯಿತು. ಆದುದರಿಂದ ಈ ಸಮಾರಂಭ ನೋಡುವ ರಾಮಭಕ್ತರಲ್ಲಿ ಶ್ರೀ ರಾಮಲಲ್ಲಾನ ಬಗ್ಗೆ ಇರುವ ಭಾವವು ಜಾಗೃತವಾಗಿ ಅವರ ಮನಸ್ಸು ಶ್ರೀರಾಮನ ಭಕ್ತಿಯಿಂದ ಪುಳಕಿತವಾಯಿತು. ಪುಷ್ಪಗಳಿಂದ ವ್ಯಕ್ತವಾಗುವ ಭಾವ ಮಯ ಗಂಧಲಹರಿಗಳಿಂದಾಗಿ ಶ್ರೀ ರಾಮಲಲ್ಲಾನ ಮೂರ್ತಿಯಲ್ಲಿದ್ದ ಮಾರಕ ತತ್ತ್ವವು ಕಡಿಮೆಯಾಗಿ ಅದರಲ್ಲಿ ತಾರಕತತ್ತ್ವವು ಹೆಚ್ಚಾಗಿ ರುವುದು ಅರಿವಾಯಿತು. ಆದುದರಿಂದ ಶ್ರೀರಾಮಲಲ್ಲಾನ ಮೂರ್ತಿಯಿಂದ ಸಂಪೂರ್ಣ ವಾಯುಮಂಡಲದಲ್ಲಿ ಆನಂದದ ವಲಯಗಳ ಪ್ರಕ್ಷೇಪಣೆಯಾಗಿ ಸಂಪೂರ್ಣ ವಾತಾವರಣವು ರಾಮಮಯವಾಯಿತು.
೮. ಯಕ್ಷ, ಗಂಧರ್ವ ಮತ್ತು ಕಿನ್ನರರು ವಿವಿಧ ಕಲೆಗಳನ್ನು ಪ್ರಸ್ತುತಪಡಿಸಿ ಆನಂದವನ್ನು ವ್ಯಕ್ತಪಡಿಸುವುದು
ಪ್ರಾಣಪ್ರತಿಷ್ಠೆ ವಿಧಿಯು ನಡೆಯುವಾಗ ಪೃಥ್ವಿಯ ಆಕಾಶ ಮಂಡಲದಲ್ಲಿ ಯಕ್ಷರು ಪ್ರಭು ಶ್ರೀರಾಮನ ಚರಿತ್ರೆಯಲ್ಲಿನ ವಿವಿಧ ಪ್ರಸಂಗಗಳನ್ನು ವರ್ಣಿಸುವ ವಿವಿಧ ಮುದ್ರೆಗಳನ್ನು ಮತ್ತು ಭಾವವನ್ನು ಪ್ರಕಟಿಸಿ ಅಭಿನಯದ ಮಾಧ್ಯಮದಿಂದ ಉತ್ಕೃಷ್ಟ ನಾಟ್ಯಕಲೆಯನ್ನು ಪ್ರಸ್ತುತಪಡಿಸಿದರು. ಗಂಧರ್ವರು ಸುಮಧುರ ಗಾಯನ ಮಾಡಿದರು ಮತ್ತು ಕಿನ್ನರರು ಮತ್ತು ಅಪ್ಸರೆಯರು ದೈವೀ ನೃತ್ಯವನ್ನು ಪ್ರಸ್ತುತಪಡಿಸಿ ಆನಂದ ವ್ಯಕ್ತಪಡಿಸಿದರು.
೯. ದೇವರ್ಷಿ ನಾರದರು ಮತ್ತು ತುಂಬರು ಇವರು ಭಗವಂತನ ಸ್ತುತಿಗಾನ ಮಾಡುವುದು
ಅನಂತರ ದೇವರ್ಷಿ ನಾರದರು ಮತ್ತು ತುಂಬರು ಇವರು ತಮ್ಮ ವೀಣೆಯಿಂದ ಮಧುರವಾಗಿ ನುಡಿಸಿ ಶ್ರೀವಿಷ್ಣುವನ್ನು ಸ್ತುತಿಯ ಶ್ಲೋಕದಿಂದ ಪ್ರಭು ಶ್ರೀರಾಮನ ಬಾಲರೂಪದ ಲೀಲೆ ಮತ್ತು ಮಹಿಮೆಯ ಕೀರ್ತನೆಯನ್ನು ಮಾಡಿದರು. ಆದುದರಿಂದ ಆಕಾಶಮಂಡಲದಲ್ಲಿ ನೆರೆದ ಎಲ್ಲ ಪುಣ್ಯಾತ್ಮಗಳು, ಧರ್ಮಾತ್ಮಗಳು ಮತ್ತು ದಿವ್ಯಾತ್ಮಗಳ ಮನಸ್ಸು ರಾಮಮಯವಾಗಿ ಅವರ ಭಾವಜಾಗೃತಿಯಾಯಿತು. ಅವರ ಕಣ್ಣುಗಳಿಂದ ಸೂಕ್ಷ್ಮದಿಂದ ಹರಿಯುವ ಭಾವಾಶ್ರುಗಳ ರೂಪಾಂತರ ಸುಂದರ ಮತ್ತು ಕೋಮಲ ಪಾರಿಜಾತ, ಮಲ್ಲಿಗೆ ಮತ್ತು ಕಮಲ ಈ ಹೂವುಗಳಲ್ಲಾಗಿ ಈ ಹೂವುಗಳು ಪೃಥ್ವಿಯಲ್ಲಿ ಶ್ರೀರಾಮಲಲ್ಲಾನ ಮೂರ್ತಿಯ ಚರಣಗಳಲ್ಲಿ ಅರ್ಪಿಸಲ್ಪಟ್ಟವು. ಆಗ ಸ್ಥೂಲದಿಂದ ಶ್ರೀ. ಮೋದಿಜಿಯವರು ಶ್ರೀರಾಮಲಲ್ಲಾನ ಚರಣಗಳ ಮೇಲೆ ಗುಲಾಬಿ ಬಣ್ಣದ ದೊಡ್ಡ ಕಮಲವನ್ನು ಅರ್ಪಿಸಿದರು. ಈ ರೀತಿ ‘ಯಾವುದೇ ಲೋಕದಲ್ಲಿರುವ ಭಕ್ತರ ಭಾವವು ಭಗವಂತನ ವರೆಗೆ ನಿಶ್ಚಿತವಾಗಿಯೂ ತಲುಪುತ್ತದೆ’, ಎಂಬ ಪುರಾವೆ ಸಿಕ್ಕಿತು.
೧೦. ಪೃಥ್ವಿಯ ಮೇಲೆ ನಡೆದಿರುವ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠೆಯ ದಿವ್ಯ ಸಮಾರಂಭವನ್ನು ನೋಡಲು ಧರ್ಮಲೋಕದಿಂದ ದಿವಂಗತ ಕಾರಸೇವಕರ ಧರ್ಮಾತ್ಮಗಳು ಪೃಥ್ವಿಯ ಆಕಾಶಮಂಡಲದಲ್ಲಿ ಸೇರಿರುವುದು ಅರಿವಾಗುವುದು
೧೯೯೦-೯೨ ರಲ್ಲಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರದ ಸ್ಥಾಪನೆಗಾಗಿ ಆಂದೋಲನದಲ್ಲಿ ಪ್ರಾಣಾರ್ಪಣೆ ಯನ್ನು ಮಾಡಿದ್ದ ಕಾರಸೇವಕರಿಗೆ ಮೃತ್ಯುವಿನ ನಂತರ ಧರ್ಮ ಲೋಕದಲ್ಲಿ (ಉಚ್ಚ ಸ್ವರ್ಗಲೋಕ ಮತ್ತು ಮಹರ್ಲೋಕ ಇವುಗಳ ನಡುವೆ) ಸ್ಥಾನ ದೊರಕಿತ್ತು. – ಸುಶ್ರೀ ಮಧುರಾ ಭೋಸಲೆ
೨೨.೧.೨೦೨೪ ರಂದು ಪೃಥ್ವಿಯಲ್ಲಿ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠೆಯ ‘ನ ಭೂತೋ ನ ಭವಿಷ್ಯತಿ |’, ಎಂಬಂತಹ ಈ ದಿವ್ಯ ಸಮಾರಂಭವನ್ನು ನೋಡಲು ಧರ್ಮಲೋಕದಿಂದ ದಿವಂಗತ ಕಾರಸೇವಕರ ಧರ್ಮಾತ್ಮಗಳು ಪೃಥ್ವಿಯ ಆಕಾಶಮಂಡಲದಲ್ಲಿ ಸೇರಿದ್ದವು. ನನಗೆ ಸೂಕ್ಷ್ಮದಿಂದ ಅವರಿದ್ದ ಸ್ಥಳದಲ್ಲಿ ಕೇಸರಿ ಬಣ್ಣದ (ಭಗವಾ) ಧರ್ಮಜ್ಯೋತಿ ಪ್ರಜ್ವಲಿಸುತ್ತಿರುವುದು ಕಾಣಿಸಿತು. ಅವರು ಒಂದೇ ಸ್ವರದಲ್ಲಿ ‘ಜಯ ಶ್ರೀರಾಮ |’ ಮತ್ತು ‘ಜಯ ಹನುಮಾನ |’ ಹೀಗೆ ಜಯಘೋಷ ಮಾಡುತ್ತಿದ್ದರು. ಅದರಿಂದ ಪೃಥ್ವಿಯ ಆಕಾಶಮಂಡಲವು ಈ ಜಯಜಯಕಾರದಿಂದ ತುಂಬಿತ್ತು.
೧೧. ದೇವತೆಗಳ ಶಿಲ್ಪಿ ವಿಶ್ವಕರ್ಮಾ ಇವರ ಕೃಪೆಯಿಂದ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಒಂದು ಅತ್ಯಂತ ದಿವ್ಯ ಮೂರ್ತಿ ಸಾಕಾರಗೊಂಡಿರುವುದು
ದೇವತೆಗಳ ಶಿಲ್ಪಿ ವಿಶ್ವಕರ್ಮಾ ಇವರ ಸೂಕ್ಷ್ಮ ಮಾರ್ಗದರ್ಶನದಿಂದ ಶ್ರೀ. ಅರುಣ ಯೋಗಿರಾಜ ಇವರು ಶ್ರೀ ರಾಮಲಲ್ಲಾನ ಮೂರ್ತಿಯನ್ನು ಬಹಳ ಭಕ್ತಿಭಾವದಿಂದ ನಿರ್ಮಿಸಿದ್ದಾರೆ. ಹಾಗೆಯೇ ದೇವತೆಗಳ ಶಿಲ್ಪಿ ವಿಶ್ವಕರ್ಮಾ ಇವರು ವಾಸ್ತುಶಿಲ್ಪಿ ಗಳಿಗೆ ಸೂಕ್ಷ್ಮದಿಂದ ನೀಡಿದ ಪ್ರೇರಣೆಯಿಂದ ಶ್ರೀರಾಮನ ಮಂದಿರವನ್ನು ನಿರ್ಮಿಸುವ ವಾಸ್ತು ಶಿಲ್ಪಿಗಳು ಬಹಳ ಕೌಶಲ್ಯದಿಂದ ಮಂದಿರದ ಕುಸುರಿ ಕೆತ್ತನೆಯ ಕೆಲಸವನ್ನು ಮಾಡಿದ್ದಾರೆ. ಆದುದರಿಂದ ಶ್ರೀ ರಾಮಲಲ್ಲಾನ ಮಂದಿರಕ್ಕೆ ದಿವ್ಯತ್ವ ಪ್ರಾಪ್ತವಾಗಿದ್ದು ಅಲ್ಲಿನ ಗರ್ಭಗೃಹದಲ್ಲಿ ಶ್ರೀ ರಾಮಲಲ್ಲಾನ ರೂಪ ದಿಂದ ಪ್ರಭು ಶ್ರೀರಾಮ ಮತ್ತು ವಿವಿಧ ರಾಮಭಕ್ತರ ಮೂರ್ತಿಗಳ ರೂಪದಲ್ಲಿ ವಿವಿಧ ದೇವತೆಗಳ ತತ್ತ್ವಗಳು ಕಾರ್ಯನಿರತವಾಗಿವೆ. ಆದುದರಿಂದ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಒಂದು ಅತ್ಯಂತ ದಿವ್ಯ ಮತ್ತು ಚೈತನ್ಯದಾಯಿ ಮಂದಿರವು ಸಾಕಾರಗೊಂಡಿದೆ. – ಸುಶ್ರೀ ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫) (ಸೂಕ್ಷ್ಮದಿಂದ ದೊರಕಿದ ಜ್ಞಾನ.), ಸನಾತನ ಆಶ್ರಮ. ರಾಮನಾಥಿ, ಗೋವಾ.(೨೨.೧.೨೦೨೪)
ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ. ಸೂಕ್ಷ್ಮಜ್ಞಾನದ ಚಿತ್ರ : ಕೆಲವು ಸಾಧಕರಿಗೆ ಯಾವುದಾದರೊಂದು ವಿಷಯದ ಬಗ್ಗೆ ಯಾವುದು ಅರಿವಾಗುತ್ತದೆಯೋ ಮತ್ತು ಅಂತರ್ದೃಷ್ಟಿಗೆ ಕಾಣಿಸುತ್ತದೆಯೋ, ಅದರ ಬಗ್ಗೆ ಅವರು ಕಾಗದದ ಮೇಲೆ ಬಿಡಿಸಿದ ಚಿತ್ರಕ್ಕೆ ‘ಸೂಕ್ಷ್ಮಜ್ಞಾನದ ಚಿತ್ರ’ ಎಂದು ಹೇಳುತ್ತಾರೆ. ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |