ಚೀನಾದ ರಾಯಭಾರಿ ಕಚೇರಿಯ ಅಧಿಕಾರಿಗಳಿಂದ ನಾಗಪುರದ ಸಂಘ ಕಾರ್ಯಾಲಯಕ್ಕೆ ಭೇಟಿ !

ನಾಗಪುರ – ಡಿಸೆಂಬರ್ ೨೦೨೩ ರಲ್ಲಿ ಇಲ್ಲಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯಕ್ಕೆ ಚೀನಾದ ರಾಯಭರಿ ಕಚೇರಿಯ ಕೆಲವು ಅಧಿಕಾರಿಗಳು ಭೇಟಿ ನೀಡಿರುವ ಸಮಾಚಾರ ಒಂದು ಇಂಗ್ಲಿಷ್ ದೈನಿಕದಲ್ಲಿ ಪ್ರಸಾರ ಮಾಡಲಾಗಿದೆ. ಇದರಲ್ಲಿ ಸಂಘದ ಓರ್ವ ಪದಾಧಿಕಾರಿಗಳು ಕೂಡ ಅನುಮೋದಿಸಿದ್ದಾರೆ. ಯಾವುದಾದರೂ ಹಿಂದುತ್ವನಿಷ್ಟ ಸಂಘಟನೆಯ ಕಾರ್ಯಾಲಯಕ್ಕೆ ಅಥವಾ ಮುಖ್ಯಾಲಯಕ್ಕೆ ಚೀನಾ ಅಧಿಕಾರಿ ಭೇಟಿ ನೀಡುವುದು ಇದು ಮೊದಲ ಬಾರಿ ಆಗಿದೆ. ಪ.ಪೂ. ಸರಸಂಘ ಚಾಲಕ ಡಾ. ಮೋಹನಜಿ ಭಾಗವತ ಪ್ರವಾಸದಲ್ಲಿರುವುದರಿಂದ ಅವರ ಜೊತೆಗೆ ಚೀನಾ ಅಧಿಕಾರಿಗಳ ಭೇಟಿ ಆಗಲು ಸಾಧ್ಯವಾಗಿಲ್ಲ; ಆದರೆ ಸಂಘದ ಓರ್ವ ಹಿರಿಯ ಅಧಿಕಾರಿಗಳಿಂದ ಈ ಅಧಿಕಾರಿಗಳ ಸ್ವಾಗತ ಮಾಡಿ ಮತ್ತು ಅವರಿಗೆ ಮುಖ್ಯಾಲಯ ತೋರಿಸಿದ್ದಾರೆ. ಯಾವ ಅಧಿಕಾರಿಗಳು ಈ ಭೇಟಿ ನೀಡಿದ್ದರು ಅವರ ನೇಮಕ ದೆಹಲಿ ಮತ್ತು ಮುಂಬಯಿಯ ರಾಯಭಾರಿ ಕಚೇರಿಯಲ್ಲಿ ಆಗಿದೆ.