ಭಾರತ ಆತ್ಮವಿಶ್ವಾಸದಿಂದ ಮತ್ತು ವೇಗವಾಗಿ ಮುಂದೆ ಹೋಗುತ್ತಿದೆ ! – ಚೀನಾ

ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವ ದೆಹಲಿ – ಭಾರತ ಆತ್ಮವಿಶ್ವಾಸದಿಂದ ಮುಂದೆ ಸಾಗುತ್ತಿದೆ. ಜಗತ್ತಿಗಾಗಿ ಇದು ಒಂದು ಮಹತ್ವದ ದೇಶವಾಗಿದೆ. ಅಂತರಾಷ್ಟ್ರೀಯ ವ್ಯಾಪಾರ, ಸಂಸ್ಕೃತಿ, ಅರ್ಥವ್ಯವಸ್ಥೆ, ರಾಜಕಾರಣ ಸಹಿತ ಅನೇಕ ವಿಷಯಗಳಲ್ಲಿ ದೇಶ ವೇಗವಾಗಿ ಪ್ರಗತಿ ಮಾಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ನೇತೃತ್ವದಲ್ಲಿ ಭಾರತದ ವಿದೇಶ ನೀತಿಯಲ್ಲಿ ಸಕಾರಾತ್ಮಕ ಬದಲಾವಣೆ ಆಗಿದೆ ಎಂದು ಚೀನಾ ಸರಕಾರದ ಸಮಾಚಾರ ಪತ್ರ ಗ್ಲೋಬಲ್ ಟೈಮ್ಸ್ ನಲ್ಲಿ ಹೊಗಳಿದೆ. ಪುಡಾನ ಕಾಲೇಜ್‌ನ ‘ಸೆಂಟರ್ ಫಾರ್ ಸೌತ್ ಏಷಿಯನ್ ಸ್ಟಡೀಸ್’ನ ಸಂಚಾಲಕ ಜಾಂಗ್ ಜಿಯಾಡೊಂಗ ಇವರ ಈ ಲೇಖನ ‘ಗ್ಲೋಬಲ್ ಟೈಮ್ಸ್’ನಲ್ಲಿ ಪ್ರಕಾಶಿತಗೊಂಡಿದೆ. ಇದರಲ್ಲಿ ಅವರು ಮೇಲಿನಂತೆ ಹೊಗಳಿದ್ದಾರೆ. ಈ ಲೇಖನದಲ್ಲಿ ಜಿಯಾಡೊಂಗ ಇವರು, ಇತ್ತೀಚಿಗೆ ನಾನು ನನ್ನ ಎರಡನೆಯ ಭೇಟಿಗಾಗಿ ಭಾರತ ತಲುಪ್ಪಿದೆ. ೪ ವರ್ಷಗಳ ಹಿಂದೆ ನಾನು ನನ್ನ ಮೊದಲ ಭೇಟಿ ಭಾರತಕ್ಕೆ ನೀಡಿದ್ದೆ. ನಾನು, ಭಾರತದ ದೇಶಾಂತರ್ಗತ ಮತ್ತು ವಿದೇಶನೀತಿ ೪ ವರ್ಷಗಳಲ್ಲಿ ಸಂಪೂರ್ಣವಾಗಿ ಬದಲಾಗಿರುವುದು ನೋಡಿದೆ. ಭಾರತದ ಆರ್ಥಿಕವಿಕಾಸ ಮತ್ತು ಸಾಮಾಜಿಕ ಆಡಳಿತ ಇದರಲ್ಲಿ ಬಹಳ ಒಳ್ಳೆಯ ಪ್ರಗತಿ ಮಾಡಿದೆ. ಭಾರತದ ರಣತಂತ್ರದ ಕನಸನ್ನು ಮೀರಿ ವಾಸ್ತವಕ್ಕೆ ಹೊರಳಿದೆ ಎಂದು ಹೇಳಿದರು.

ಸಂಪಾದಕರ ನಿಲುವು

* ಚೀನಾ ಭಾರತವನ್ನು ಹೊಗಳಿದೆ ಎಂದು ಬೀಗುವ ಅವಶ್ಯಕತೆ ಇಲ್ಲ. ಯಾವಾಗಲೂ ಚೀನಾದಿಂದ ಭಾರತದ ವಿಶ್ವಾಸಘಾತವೇ ಆಗಿದೆ. ಅದರ ಹೊಗಳಿಕೆ ಮಾತಿನ ಮೇಲೆ ವಿಶ್ವಾಸ ಇಡಲು ಸಾಧ್ಯವಿಲ್ಲ !