ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಕುರಿತು ಗಮನಕ್ಕೆ ಬಂದ ಅದ್ವಿತೀಯತೆ

ಸೌ. ಅಂಜಲಿ ಗಾಡಗೀಳ ಇವರು ೨೦೦೦ ನೇ ಇಸ್ವಿಯಲ್ಲಿ ಸನಾತನ ಸಂಸ್ಥೆಗೆ ಬಂದರು. ಆಗ ೧-೨ ದಿನಗಳಲ್ಲೇ ‘ಅವರು ಮಾನಸಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಲ್ಲಿ ಭಿನ್ನವಾಗಿದ್ದಾರೆ’, ಎಂಬುದು ನನಗೆ ಅರಿ ವಾಯಿತು; ಆದರೆ ‘ಹೇಗೆ ಬೇರೆಯಾಗಿದ್ದಾರೆ ?’, ಎಂಬುದು ನನ್ನ ಗಮನಕ್ಕೆ ಬರಲಿಲ್ಲ. ೧-೨ ವರ್ಷಗಳಲ್ಲೇ ‘ನನಗೆ ಹೇಗೆ ಸೂಕ್ಷ್ಮದ್ದು ತಿಳಿಯುತ್ತದೋ ಹಾಗೆ ಅವರಿಗೂ ತಿಳಿಯುತ್ತದೆ’, ಎಂಬುದು ನನ್ನ ಗಮನಕ್ಕೆ ಬಂತು. ಇನ್ನೂ ೪-೫ ವರ್ಷಗಳ ನಂತರ ‘ನನಗೆ ಸೂಕ್ಷ್ಮದಲ್ಲಿ ತಿಳಿಯದಿರುವುದು ಸಹ ಅವರಿಗೆ ತಿಳಿಯುತ್ತದೆ’, ಎಂಬುದನ್ನು ನಾನು ಅನುಭವಿಸಿದೆ. ನಂತರವೂ ಅದೇ ಸ್ಥಿತಿಯಿತ್ತು. ಆಗ ಅವರಿಗೆ ಏನಾದರೂ ಕಲಿಸಬೇಕು ಎಂದು ಸನಾತನ ಸಂಸ್ಥೆಯಲ್ಲಿ ಇತರ ಸಾಧಕರಿಗೆ ಕಲಿಸುವ ಹಾಗೂ ಸ್ವಭಾವದೋಷ ನಿರ್ಮೂಲನೆ ಮಾಡಲು ಇತರರಿಗೆ ಕಲಿಸುತ್ತಿದ್ದ ಹಾಗೆ ಅವರಿಗೆ ಕಲಿಸಲು ಆರಂಭಿಸಿದೆ. ಕೆಲವೇ ವಾರಗಳಲ್ಲಿ, ‘ನನಗೆ ಬುದ್ಧಿಯಿಂದ ಏನೂ ತಿಳಿಯುತ್ತದೆಯೋ ಅದು ಅವರಿಗೆ ಸೂಕ್ಷ್ಮದಲ್ಲಿ ತಿಳಿಯುತ್ತದೆ’ ಎಂಬುದು ಗಮನಕ್ಕೆ ಬಂದಿತು. ಆದ್ದರಿಂದ ನಾನು ಅವರಿಗೆ ಅದನ್ನು ಕಲಿಸುವುದನ್ನು ನಿಲ್ಲಿಸಿದೆ.

ಮುಂದೆ, ಅವರು ಇತರರಿಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ಮಾಡಬಹುದು ಎಂದು ನನಗೆ ಗಮನಕ್ಕೆ ಬಂತು; ಆದ್ದರಿಂದ ನಾನು ಅವರಿಗೆ ಆಶ್ರಮದಲ್ಲಿ ಇಲ್ಲದಿರುವ ಹಾಗೂ ವಿವಿಧ ಜಿಲ್ಲೆಗಳಲ್ಲಿ ಇರುವ ಸಾಧಕರಿಗೆ ಮಾರ್ಗದರ್ಶನ ಮಾಡುವ ಸೇವೆ ನೀಡಿದೆ. ಇದೆಲ್ಲವನ್ನು ಮಾಡುವಾಗ ಅವರಿಗೆ ಸೂಕ್ಷ್ಮದಲ್ಲಿ ಅರಿವಾಗುವ ಅನೇಕ ಅಂಶಗಳನ್ನು ನಾನು ಅವರಿಂದ ಕಲಿತುಕೊಂಡೆ. ಅವರಿಗೆ ಹೇಗೆ ಕೆಟ್ಟ ಶಕ್ತಿಗಳ ಬಗ್ಗೆ ತಿಳಿಯುತ್ತದೆ, ಅದೇ ರೀತಿ ಒಳ್ಳೆ ಶಕ್ತಿಗಳ ಬಗ್ಗೆಯೂ ತಿಳಿಯುತ್ತದೆ’, ಇದು ನನಗೆ ಗಮನಕ್ಕೆ ಬಂತು. ಅಂದಿನಿಂದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಅವರ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದನ್ನು ಆರಂಭಿಸಿದೆ. ಈಗ ಅವರಿಗೆ ಅನೇಕ ದೇವಸ್ಥಾನಗಳ ಅರ್ಚಕರು ಹಾಗೂ ದೇವಸ್ಥಾನದ ವಿಶ್ವಸ್ಥರ ಪರಿಚಯವಾಗಿದೆ. ಅದರೊಂದಿಗೆ ಸೂಕ್ಷ್ಮವನ್ನು ಅರಿತುಕೊಳ್ಳುವ ಸಂತರೂ ಸಹ ಇವರನ್ನು ಗುರುತಿಸಿದರು. ಆ ಸಂತರ ಮಾತುಕತೆಯಿಂದ ಸೌ. ಕಾಕು ಅವರ ಮಹತ್ವ ನನ್ನ ಗಮನಕ್ಕೆ ಬಂದಿತು. ಅಲ್ಲಿಯವರೆಗೆ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಅವರನ್ನು ತೊಡಗಿಸಿಕೊಳ್ಳುವ ಮಹತ್ವವನ್ನು ತಿಳಿದುಕೊಂಡೆ ಹಾಗೂ ಅದೇ ರೀತಿ ನಾನು ಆರಂಭಿಸಿದೆ. ಸೌ. ಕಾಕುರವರ ಮಾಧ್ಯಮದಿಂದ ಈ ಕಾರ್ಯದಲ್ಲಿ ಕೆಲವು ಸಂತರ ಸಹಾಯವೂ ಸಿಗಲಾರಂಭಿಸಿತು.

ಆದ್ದರಿಂದ ಈಗ ಸ್ಥೂಲ ಮತ್ತು ಸೂಕ್ಷ್ಮ ಅದೇ ರೀತಿ ವ್ಯಷ್ಟಿ ಮತ್ತು ಸಮಷ್ಟಿಯ ಬಗ್ಗೆ ಸಾಧಕರಿಗೆ ಏನಾದರೂ ಅಡಚಣೆಗಳಿದ್ದರೆ ಅದನ್ನು ಸೌ. ಕಾಕೂ ಅವರು ಪರಿಹರಿಸುತ್ತಾರೆ. ಸೂಕ್ಷ್ಮದಲ್ಲಿನ ನನ್ನ ಒಟ್ಟು ಕಾರ್ಯಗಳ ಪೈಕಿ ಹೆಚ್ಚಿನ ಕಾರ್ಯವನ್ನು ಸೌ. ಅಂಜಲಿ ಗಾಡಗೀಳರು ಮಾಡುತ್ತಾರೆ. ಈ ಬಗ್ಗೆ ಅವರನ್ನು ಹೊಗಳಿದಷ್ಟೂ ಕಡಿಮೆಯೇ ಆಗಿದೆ !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೬.೧೨.೨೦೨೩)