ಜಮ್ಮು-ಕಾಶ್ಮೀರದಲ್ಲಿ ‘ಕಲಂ ೩೭೦’ ರದ್ದುಗೊಳಿಸುವ ಕೇಂದ್ರ ಸರಕಾರದ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದ ಸಮ್ಮತಿ !

(‘ಕಲಂ ೩೭೦’ ಎಂದರೆ ಜಮ್ಮು-ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ)

ಜಮ್ಮು- ಕಾಶ್ಮೀರದ ಕಲಂ ೩೭೦ ಮತ್ತು ೩೫ (ಅ) ರದ್ದುಗೊಳಿಸಿರುವ ಕೇಂದ್ರ ಸರಕಾರದ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ಸಮ್ಮತಿಸಿದೆ. ಈ ಸಂದರ್ಭದಲ್ಲಿ ಸಂವಿಧಾನಪೀಠದ ತೀರ್ಪು ಇತ್ತೀಚೆಗಷ್ಟೇ ಪ್ರಕಟವಾಗಿದೆ. ಈ ವಿಷಯದಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದ (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ ಇವರು ಮಾಡಿದ ವಿಶ್ಲೇಷಣೆಯನ್ನು ನೋಡೋಣ.

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೧. ಆಗಿನ ಕಾಂಗ್ರೆಸ್‌ ಸರಕಾರದಿಂದ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ

ಭಾರತದ ಆಗಿನ ಪ್ರಧಾನಮಂತ್ರಿ ಜವಾಹರಲಾಲ ನೆಹರುರವರು ‘ಆಲ್‌ ಜಮ್ಮು ಎಂಡ್‌ ಕಾಶ್ಮೀರ ಮುಸ್ಲಿಂ ಕಾನ್ಫರೆನ್ಸ’ನ ಶೇಖ ಅಬ್ದುಲ್ಲಾ ಮತ್ತು ಮುಸಲ್ಮಾನರನ್ನು ಓಲೈಸಲು ೧೯೪೯ ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ‘ವಿಶೇಷ ರಾಜ್ಯದ ಸ್ಥಾನಮಾನವನ್ನು’ ನೀಡಿದ್ದರು. ಈ ನಿರ್ಧಾರವನ್ನು ಕೇಂದ್ರ ಸಂಪುಟ ಸಚಿವ ಶ್ಯಾಮ ಪ್ರಸಾದ ಮುಖರ್ಜಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವು ತೀವ್ರವಾಗಿ ವಿರೋಧಿಸಿತ್ತು. ಶ್ಯಾಮ ಪ್ರಸಾದ್‌ ಮುಖರ್ಜಿ ಇವರು ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಂದಿನ ಕಾಂಗ್ರೆಸ್‌ ಸರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ನಂತರ, ಸಾವಿರಾರು ಕೋಟಿ ರೂಪಾಯಿ ದಾನ ಮಾಡಿತು. ಜಿಹಾದಿ ಹಾಗೂ ಪ್ರತ್ಯೇಕತಾವಾದಿಗಳನ್ನು ತೆರಿಗೆದಾರರ ಹಣದಲ್ಲಿ ಸಾಕಿ ಬೆಳೆಸಿತು.

೨. ಜಮ್ಮು-ಕಾಶ್ಮೀರದಲ್ಲಿನ ಲಕ್ಷಾಂತರ ಹಿಂದೂಗಳ ನರಸಂಹಾರದ ಕಡೆಗೆ ಆಗಿನ ಕಾಂಗ್ರೆಸ್‌ ಸರಕಾರದ ಅಕ್ಷಮ್ಯ ನಿರ್ಲಕ್ಷ್ಯ

೧೯.೧.೧೯೯೦ ರಂದು ಮಸೀದಿಯ ಧ್ವನಿವರ್ಧಕಗಳ ಮೂಲಕ ಹಿಂದೂಗಳಿಗೆ ‘ಕಾಶ್ಮೀರವನ್ನು ಬಿಟ್ಟು ತೊಲಗಿ, ಅಥವಾ ಮುಸಲ್ಮಾನರಾಗಿ, ಇಲ್ಲದಿದ್ದರೆ ಸಾಯಲು ಸಿದ್ಧರಾಗಿ’ ಎನ್ನುವ ಎಚ್ಚರಿಕೆಯನ್ನು ನೀಡಲಾಯಿತು. ಇದರೊಂದಿಗೆ ಹಿಂದೂಗಳ ಮನೆಗಳ ಹೊರಗೆ ಭಿತ್ತಿಪತ್ರಗಳನ್ನು ಅಂಟಿಸಲಾಯಿತು. ತದನಂತರ, ಜಿಹಾದಿ ಭಯೋತ್ಪಾದಕರು ನೂರಾರು ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು ಮತ್ತು ಹಿಂದೂಗಳ ನರಸಂಹಾರ ಮಾಡಿದರು. ಅಲ್ಲದೇ ನಾಲ್ಕೂವರೆ ಲಕ್ಷ ಹಿಂದೂಗಳು ಪಲಾಯನಗೈಯ್ಯುವಂತೆ ಮಾಡಿದರು. ಆವಾಗಿನಿಂದ ಇಂದಿನವರೆಗೆ ೩೩ ವರ್ಷ ಕಾಶ್ಮೀರಿ ಹಿಂದೂಗಳಿಗೆ ತಮ್ಮ ಜನ್ಮಭೂಮಿಗೆ ಮರಳಲು ಸಾಧ್ಯವಾಗಿಲ್ಲ. ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳ ಕೇಸರಿ ಮತ್ತು ಸೇಬಿನ ತೋಟಗಳಿದ್ದವು, ಅವರ ವ್ಯವಸಾಯವಿತ್ತು. ಒಂದು ಕ್ಷಣದಲ್ಲಿ ಇದ್ದದ್ದು ಎಲ್ಲವೂ ಇಲ್ಲವಾಯಿತು. ಹಿಂದೂಗಳು ಪಲಾಯನದ ಬಳಿಕ ಅವರು ಚಳಿಗಾಲದ ಕೊರೆಯುವ ಚಳಿಯಲ್ಲಿ ಮತ್ತು ಬೇಸಿಗೆಯ ಬಿರುಬಿಸಿಲಿನ ಉಷ್ಣತೆಯಲ್ಲಿ ನಿರಾಶ್ರಿತರ ಡೇರೆಗಳಲ್ಲಿ ಅನೇಕ ವರ್ಷಗಳ ವರೆಗೆ ವಾಸಿಸಬೇಕಾಯಿತು. ಅದರಲ್ಲಿಯೇ ಅನೇಕ ಜನರು ಮರಣಹೊಂದಿದರು. ಮಾನವೀಯತೆಯನ್ನೇ ನಡುಗಿಸುವಂತಹ ಘಟನೆಗಳಾದ ಬಳಿಕವೂ ಯಾರ ಮೇಲೆಯೂ ಕ್ರಮ ಕೈಗೊಳ್ಳಲಿಲ್ಲ. ಈ ವಿಷಯದಲ್ಲಿ ಇಡೀ ಭಾರತ ಮೌನವಾಗಿತ್ತು.

ಶೇಖ್‌ ಅಬ್ದುಲ್ಲಾ ಮತ್ತು ‘ಪೀಪಲ್ಸ್ ಡೆಮಾಕ್ರಟಿಕ್‌ ಪಾರ್ಟಿ’ಯ ಮುಫ್ತಿ ಸಯೀದ್‌ ಅವರ ಕುಟುಂಬಗಳು, ಹಾಗೆಯೇ ಪಾಕಿಸ್ತಾನಿ ಪರವಾಗಿರುವ ಜನರು ಕಾಶ್ಮೀರದಲ್ಲಿ ಹಲವು ವರ್ಷಗಳ ಕಾಲ ಅಧಿಕಾರವನ್ನು ಅನುಭವಿಸಿದರು. ಅಷ್ಟು ಅಲ್ಲ, ದೇಶವಿರೋಧಿ ಸಂಚುಗಳನ್ನೂ ರಚಿಸಿದರು. ಈ ಕಾಲಾವಧಿಯಲ್ಲಿ ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಕೇಂದ್ರ ಸರಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಿತು. ಅದನ್ನು ಅಲ್ಲಿನ ಅಧಿಕಾರರೂಢ ಜನರು ನುಂಗಿದರು. ಕಾಲಾಂತರದಲ್ಲಿ, ಕಾಶ್ಮೀರಿ ಹಿಂದೂಗಳು ‘ಪನೂನ್‌ ಕಾಶ್ಮೀರ್’ ಮತ್ತು ‘ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿ’ ಸಂಘಟನೆಗಳನ್ನು ಸ್ಥಾಪಿಸಿದರು. ಈ ಮಾಧ್ಯಮಗಳ ಮೂಲಕ ಅವರು ನ್ಯಾಯ ಪಡೆಯಲು ಹೋರಾಟ ನಡೆಸಿದರು. ಹಾಗೆಯೇ ಅವರು ದೇಶ-ವಿದೇಶಗಳಲ್ಲಿ ಧ್ವನಿ ಎತ್ತಿದರು. ಹಲವು ದಶಕಗಳಿಂದ ಭಯೋತ್ಪಾದಕರು ಭಾರತೀಯ ಸೇನೆಯನ್ನು ಗುರಿ ಮಾಡಿದರು. ಅಲ್ಲಿನ ಮತಾಂಧರು ಭಯೋತ್ಪಾದಕರಿಗೆ ಸಹಾಯ ಮಾಡಲು ಸೈನಿಕರ ಮೇಲೆ ಕಲ್ಲು ತೂರಾಟ ಮಾಡಿದರು.

೩. ‘ಕಲಂ ೩೭೦’ ಮತ್ತು ‘೩೫ ಅ’ ಅನ್ನು ರದ್ದುಗೊಳಿಸಿದ ಭಾಜಪದ ಮೋದಿ ಸರಕಾರ

ಪ್ರಾರಂಭದಿಂದಲೇ ‘೩೭೦ ನೇ ಕಲಂ’ ಮತ್ತು ‘೩೫ ಅ’ ಅನ್ನು ರದ್ದುಗೊಳಿಸುತ್ತೇವೆ ಎಂದು ಸಂಘ ಪರಿವಾರ ಮತ್ತು ಭಾರತೀಯ ಜನತಾ ಪಕ್ಷದಿಂದ ಹೇಳಲಾಗಿತ್ತು. ಅದಕ್ಕಾಗಿ ಅವರು ದೊಡ್ಡ ಆಂದೋಲನವನ್ನೇ ಆರಂಭಿಸಿದ್ದರು. ೨೦೧೪ ರಲ್ಲಿ ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತ ಬಂದ ನಂತರ, ಈ ಎರಡೂ ಕಲಂಗಳನ್ನು ರದ್ದುಗೊಳಿಸುವ ದೃಷ್ಟಿಯಿಂದ ಪ್ರಯತ್ನ ಆರಂಭವಾಯಿತು. ಕೊನೆಗೆ, ೫ ಆಗಸ್ಟ್ ೨೦೧೯ ರಂದು ಸಂಸತ್ತು ಜಮ್ಮು-ಕಾಶ್ಮೀರದಿಂದ ಸೆಕ್ಷನ್‌ ೩೭೦ ಮತ್ತು ಸೆಕ್ಷನ್‌ ‘೩೫ ಅ’ ಅನ್ನು ತೆಗೆದುಹಾಕಿತು. ಅದರ ನಂತರವೂ ಭಯೋತ್ಪಾದಕರು ಕಾಶ್ಮೀರಿ ಹಿಂದೂಗಳನ್ನು ಕಾಶ್ಮೀರಕ್ಕೆ ಬರುವುದನ್ನು ತಡೆದರು. ಕಾಶ್ಮೀರದಲ್ಲಿ ಉದ್ಯೋಗಕ್ಕಾಗಿ ಬಂದಂತಹ ಹಿಂದೂಗಳನ್ನು ಹೆಕ್ಕಿ ಹೆಕ್ಕಿ ಕೊಲ್ಲಲಾಯಿತು.

೪. ಕೇಂದ್ರ ಸರಕಾರದ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದ ಸಮ್ಮತಿ

೩೭೦ ನೇ ಕಲಂನ್ನು ರದ್ದುಗೊಳಿಸಿದ ಬಳಿಕ ಮತಾಂಧರು ಮಾತ್ರವಲ್ಲ ಪ್ರಗತಿಪರರು ಸಹ ಸರ್ವೋಚ್ಚ ನ್ಯಾಯಾಲಯದಲ್ಲಿ ಅನೇಕ ಅರ್ಜಿಗಳನ್ನು ಸಲ್ಲಿಸಿದರು. ಈ ಎಲ್ಲಾ ಅರ್ಜಿಗಳನ್ನು ೫ ಹಿರಿಯ ನ್ಯಾಯಾಧೀಶರ ಮುಂದೆ ವಿಚಾರಣೆ ನಡೆಸಲಾಯಿತು ಮತ್ತು ೧೧ ಡಿಸೆಂಬರ್‌ ೨೦೨೩ ರಂದು ಈ ಎರಡೂ ಕಲಂಗಳನ್ನು ರದ್ದುಗೊಳಿಸಿರುವ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿಯಿತು. ಈ ಪ್ರಕರಣದಲ್ಲಿ ಒಟ್ಟು ೩ ತೀರ್ಪುಗಳನ್ನು ನೀಡಲಾಗಿದೆ. ಅದರಲ್ಲಿ ಒಂದು ತೀರ್ಪನ್ನು ಸ್ವತಃ ಮುಖ್ಯ ನ್ಯಾಯಮೂರ್ತಿಗಳಾದ ಧನಂಜಯ ಚಂದ್ರಚೂಡ, ನ್ಯಾಯಮೂರ್ತಿ ಗವಯಿ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ ಶರ್ಮಾ ಇವರು ನೀಡಿದ್ದಾರೆ. ನ್ಯಾಯಮೂರ್ತಿ ಕೆ.ಎಸ್. ಕೌಲ್‌ ಇವರು ಸ್ವತಂತ್ರ ತೀರ್ಪನ್ನು ನೀಡಿದ್ದಾರೆ ಮತ್ತು ನ್ಯಾಯಮೂರ್ತಿ ಸಂಜೀವ ಖನ್ನಾ ಇವರು ಎರಡೂ ತೀರ್ಪುಗಳಿಗೆ ಸಮ್ಮತಿ ನೀಡಿದ್ದಾರೆ. ೫ ಸದಸ್ಯರ ವಿಭಾಗೀಯಪೀಠದ ಎರಡನೇ ನ್ಯಾಯಮೂರ್ತಿ ಕೌಲ್‌ ಇವರು ಕಾಶ್ಮೀರದ ಪರಿಸ್ಥಿತಿಯನ್ನು ಸುಧಾರಿಸಲು ‘ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ಕಳೆದ ಅನೇಕ ದಶಕಗಳಿಂದ ಆಗಿರುವ ಗಾಯಗಳನ್ನು ಗುಣಪಡಿಸುವುದು ಪರಸ್ಪರ ಸ್ನೇಹ ಸಂಬಂಧದ ದೃಷ್ಟಿಯಿಂದಲೂ ಮಹತ್ವದ್ದಾಗಿರುವುದರಿಂದ ಅದಕ್ಕಾಗಿ ‘ಸತ್ಯ ಮತ್ತು ಸಮನ್ವಯ ಆಯೋಗ’ವನ್ನು (ಟ್ರೂತ್‌ ಎಂಡ ರಿಕನ್ಸಿಲೇಶನ ಕಮಿಶನ) ಸ್ಥಾಪಿಸಬೇಕು’, ಎಂದು ಶಿಫಾರಸ್ಸು ಮಾಡಿದ್ದಾರೆ.

೫. ಕಾಶ್ಮೀರಿ ಹಿಂದೂಗಳ ನರಮೇಧದ ಬಗ್ಗೆ ‘ಟ್ರೂತ್‌ ಎಂಡ್‌ ರಿಕನ್ಸಿಲೇಶನ ಕಮಿಶನ’ ರಚಿಸುವಂತೆ ಸರ್ವೋಚ್ಚ ನ್ಯಾಯಾಲಯದ ಸೂಚನೆ

ಸದ್ಯ ನ್ಯಾಯಮೂರ್ತಿ ಎಸ್‌.ಕೆ. ಕೌಲ ಇವರು ನೀಡಿರುವ ೧೨೧ ಪುಟಗಳ ತೀರ್ಪಿನ ಕುರಿತು ಚರ್ಚೆಗಳು ನಡೆಯುತ್ತಿವೆ. ತಮ್ಮ ತೀರ್ಪಿನಲ್ಲಿ ನ್ಯಾಯಮೂರ್ತಿ ಕೌಲ ಹೇಳುತ್ತಾರೆ, ‘ಕಾಶ್ಮೀರದಲ್ಲಿನ ಹಿಂಸಾಚಾರವನ್ನು ತಾನು ಹತ್ತಿರದಿಂದ ನೋಡಿದ್ದೇನೆ, ಮತ್ತು ಅದಕ್ಕೆ ಸಾಕ್ಷಿದಾರರಾಗಿದ್ದಾರೆ. ‘ಸ್ಟೇಟ್ಸ ಸ್ಪಾನ್ಸರ್ಡ ಟೆರರಿಸಂ’ (ರಾಜ್ಯ ಪ್ರಾಯೋಜಿತ ಭಯೋತ್ಪಾದನೆ) ಮತ್ತು ‘ನಾನ್‌ ಸ್ಟೇಟ ಸ್ಪಾನ್ಸರ್ಡ ಟೆರರಿಸಂ’ (ಇತರ ದೇಶಗಳಿಂದ ನಡೆಸಲಾಗುವ ಭಯೋತ್ಪಾದನೆ) ಭಯಾನಕವಾಗಿತ್ತು. ‘ಕೇಂದ್ರ ಸರಕಾರವು ಒಂದು ‘ಸತ್ಯ ಮತ್ತು ಸಮನ್ವಯ ಆಯೋಗ’ವನ್ನು (ಟ್ರೂತ ಎಂಡ ರಿಕನ್ಸ್ಸಿಲೇಶನ ಕಮಿಶನ) ಸ್ಥಾಪಿಸಬೇಕು. ಜನರ ಸ್ಮರಣೆ ಜಾಗೃತವಾಗಿರುವವರೆಗೆ, ಪ್ರಸಾರಮಾಧ್ಯಮಗಳಿಗೆ, ಭಾರತೀಯ ಜನತೆಗೆ ಮತ್ತು ಅಂತಾರಾಷ್ಟ್ರೀಯ ಸಮುದಾಯದ ವರೆಗೆ ಕಾಶ್ಮೀರಿ ಹಿಂದೂಗಳ ಮೇಲಾದ ದೌರ್ಜನ್ಯದ ಘಟನೆಗಳನ್ನು ಈ ಆಯೋಗದ ಮೂಲಕ ತಲುಪಿಸಲು ಸಾಧ್ಯವಾಗುವುದು’, ಎಂದು ಹೇಳಿದರು. ಅವರ ಪ್ರಕಾರ, ದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ದ್ವೇಷದಿಂದ ನರಮೇಧವಾಗಿತ್ತು. ತದನಂತರ ಅಲ್ಲಿ ಈ ರೀತಿಯ ಆಯೋಗವನ್ನು ನೇಮಿಸಲಾಗಿತ್ತು. ಆ ಆಯೋಗದ ಎದುರಿಗೆ ಛಾಯಾಚಿತ್ರಕದೊಂದಿಗೆ (ಕ್ಯಾಮರಾ) ಪೀಡಿತರು ಬಹಿರಂಗವಾಗಿ ತಮ್ಮ ಮೇಲಾದ ದೌರ್ಜನ್ಯಗಳನ್ನು ವಿವರಿಸಿದರು. ತದನಂತರ ಈ ದೌರ್ಜನ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಲಾಯಿತು.

ನ್ಯಾಯಮೂರ್ತಿ ಕೌಲ್‌ ಅವರು ತಮ್ಮ ತೀರ್ಪನ್ನು ‘ವಿ ದ ಪೀಪಲ್‌ ಆಫ್‌ ಜಮ್ಮು ಎಂಡ ಕಾಶ್ಮೀರ ಆರ್‌ ಎಟ್‌ ದಿ ಹಾರ್ಟ ಆಫ್‌ ದಿ ಡಿಬೇಟ್’ (ನಾವು ಜಮ್ಮು ಮತ್ತು ಕಾಶ್ಮೀರದ ಜನರು ಚರ್ಚೆಯ ಕೇಂದ್ರಬಿಂದುವಾಗಿದ್ದೇವೆ) ಎನ್ನುವ ವಾಕ್ಯದಿಂದ ಪ್ರಾರಂಭಿಸಿದರು. ನ್ಯಾಯಮೂರ್ತಿ ಕೌಲ ತಮ್ಮ ತೀರ್ಪಿನಲ್ಲಿ ಹೀಗೆಂದಿದ್ದಾರೆ, ”ಕಾಶ್ಮೀರದಲ್ಲಿ ಸೈನ್ಯವನ್ನು ಕರೆಸಬೇಕಾಯಿತು. ೧೯೯೦ ರಿಂದ ಇಂದಿನವರೆಗೆ ಕಾಶ್ಮೀರದಲ್ಲಿ ಸಾಮಾಜಿಕ ಸ್ಥಿರತೆ ಮತ್ತು ಸಹೋದರತ್ವ ಕಂಡುಬಂದಿಲ್ಲ. ಇದಕ್ಕೆ ವಿರುದ್ಧವಾಗಿ, ಹಿಂದೂಗಳ ಹತ್ಯೆ, ಹಿಂದೂ ಮಹಿಳೆಯರ ಬಲಾತ್ಕಾರ, ಭಾರತೀಯ ಸೈನಿಕರ ಮೇಲೆ ಕಲ್ಲೆಸೆತ, ದೊಡ್ಡ ಪ್ರಮಾಣದಲ್ಲಿ ಸೈನಿಕರ ಹತ್ಯೆ ಮತ್ತು ಅವರ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಆಗಿನ ಹಿಂದೂದ್ವೇಷಿ ಕಾಂಗ್ರೆಸ್‌ ಸರಕಾರವು ಸೈನ್ಯಕ್ಕೆ ಮತಾಂಧರೊಂದಿಗೆ ಸದ್ಭಾವನಾ ದಿನ, ಸದ್ಭಾವನಾ ತಿಂಗಳು ಮತ್ತು ಸದ್ಭಾವನಾ ಕೃತಿಗಳನ್ನು ತೋರಿಸುವಂತೆ ಹೇಳುತ್ತಿದ್ದರು. ಇದರರ್ಥ ಸೈನಿಕರು ತಮ್ಮ ಮೇಲಿನ ದಾಳಿಗೆ ಸೇಡು ತೀರಿಸಿ ಕೊಳ್ಳಬಾರದು ಎಂದು ಅವರಿಗೆ ಹೇಳಲಾಗುತ್ತಿತ್ತು.’’

ನ್ಯಾಯಮೂರ್ತಿ ಕೌಲ್‌ ಹೇಳುತ್ತಾರೆ, ”ಸತ್ಯ ಜಗತ್ತಿನೆದುರಿಗೆ ಬರಲಿ, ಇಲ್ಲಿಯವರೆಗೆ ಜಗತ್ತಿಗೆ ಹೇಳಲಾಗುತ್ತಿದ್ದ, ‘ಕಥಾನಕ(ನರೇಟಿವ್‌)’ ಬೇರೆಯಾಗಿತ್ತು ಮತ್ತು ವಾಸ್ತವ ಬೇರೆ ಇದೆ, ಎಂಬುದು ಜಗತ್ತಿನೆದುರಿಗೆ ಬರಬೇಕು. ಕಾನೂನು ರಚಿಸುವ ಕೆಲಸ ಶಾಸಕಾಂಗದ್ದಾಗಿದೆ; ಆದರೆ ವಿಶೇಷ ಪರಿಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯವೂ ಮಾರ್ಗದರ್ಶಿ ಅಂಶಗಳನ್ನು ಸೂಚಿಸುತ್ತಿರುತ್ತದೆ ಮತ್ತು ಮುಂದೆ ಅಂತಹ ಕಾನೂನುಗಳನ್ನೂ ಸರಕಾರವು ರಚಿಸುತ್ತದೆ.

‘ವಿಶಾಖಾ ವಿರುದ್ಧ ರಾಜಸ್ಥಾನ ಸರಕಾರ’ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಳಿಕ ಕೇಂದ್ರ ಸರಕಾರವು ಸಂಸ್ಥೆಗಳಲ್ಲಿ (ಆಫೀಸಗಳಲ್ಲಿ) ನೌಕರಿ ಮಾಡುವ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ವಿರುದ್ದ ‘ಸೆಕ್ಸ್ಶುವಲ್‌ ಹರಾಸಮೆಂಟ ಆಫ್‌ ವುಮನ ಎಟ್‌ ವರ್ಕಪ್ಲೇಸ (ಪ್ರಿವೆನ್ಶನ್‌ ಪ್ರೊಹಿಬಿಶನ್‌ ಎಂಡ್‌ ರಿಡ್ರೆಸಲ್) ಎಕ್ಟ ಆಫ್‌ ೨೦೧೩’ (ನೌಕರಿಯ ಸ್ಥಳದಲ್ಲಿ ಸ್ತ್ರೀಯರಿಗಾಗುವ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ ನಿಷೇಧ ಮತ್ತು ಪರಿಹಾರ) ಅಧಿನಿಯಮ ೨೦೧೩) ಈ ಕಾನೂನು ರಚಿಸಿತು’’.

೬. ಕಾಶ್ಮೀರಿ ಹಿಂದೂಗಳ ನರಮೇಧದ ಸತ್ಯ ಜಗತ್ತಿನೆದುರಿಗೆ ಬರುವುದು ಆವಶ್ಯಕ !

ಮಾನ್ಯ ನ್ಯಾಯಮೂರ್ತಿ ಸಂಜಯ್‌ ಕೌಲ್‌ ಅವರು ಆಯೋಗವನ್ನು ರಚಿಸುವ ವಿಷಯದಲ್ಲಿ ನೀಡಿರುವ ಸೂಚನೆಗಳನ್ನು ಕೇಂದ್ರ ಸರಕಾರ ಖಂಡಿತವಾಗಿಯೂ ಪಾಲಿಸಲಿದೆ. ಕೇರಳದ ‘ಮೊಪ್ಲಾಹ ದಂಗೆ’ಯಲ್ಲಿಯೂ ಹಿಂದೂಗಳ ನರಮೇಧವನ್ನು ನಡೆಸಲಾಗಿತ್ತು. ಆ ಸಮಯ ದಲ್ಲಿ ಮೋಹನದಾಸ ಗಾಂಧಿ ಅವರು, ‘ಈ ಗಲಭೆಯು ಬಡತನದ ವಿರುದ್ಧ ಶ್ರೀಮಂತಿಕೆ ಆರ್ಥಿಕ ಅಸಮಾನತೆಯ ಕಾರಣದಿಂದ ನಡೆದಿದೆ’ ಎಂದು ಹೇಳುತ್ತಿದ್ದರು. ಅದೇ ರೀತಿ, ಜಮ್ಮು ಮತ್ತು ಕಾಶ್ಮೀರದಲ್ಲಿನ ಆಗಿನ ಕಾಂಗ್ರೆಸ್‌ ಸರಕಾರವು ತಮಗೆ ಅಪೇಕ್ಷಿತವಿರುವ ತೀರ್ಪು ಬರಬೇಕು ಎನ್ನುವ ಉದ್ದೇಶದಿಂದ ಆಯೋಗವನ್ನು ರಚಿಸಿತು. ಕರ್ಮ ಧರ್ಮದ ಕಾಕತಾಳಿಯಿಂದಾಗಿ, ವಸ್ತುನಿಷ್ಠ ವರದಿ ಹೊರಬಂದರೂ, ಸರಕಾರ ಆ ವರದಿಯನ್ನು ಸ್ವೀಕರಿಸಿರಲಿಲ್ಲ; ಆದರೆ ಈಗ ಹಿಂದುತ್ವನಿಷ್ಠ ಸರಕಾರ ಈ ಎಲ್ಲ ವಿಷಯಗಳನ್ನು ಹೊರಗೆ ಹಾಕುವುದು ಮತ್ತು ಹಿಂದೂಗಳ ನರಮೇಧದ ಸತ್ಯ ಜಗತ್ತಿನ ಎದುರಿಗೆ ಬರುವುದು. ಈ ಸತ್ಯ ಜಗತ್ತಿನೆದುರಿಗೆ ಬರಬೇಕು ಎಂದು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಅನಿಸುತ್ತದೆ.’

|| ಶ್ರೀ ಕೃಷ್ಣಾರ್ಪಣಮಸ್ತು ||

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೧೪.೧೨.೨೦೨೩)