ಇಸ್ಲಾಮಾಬಾದ (ಪಾಕಿಸ್ತಾನ) – ಮುಂಬಯಿಯಲ್ಲಿ ನವಂಬರ್ ೨೬, ೨೦೦೮ ರಲ್ಲಿ ಜಿಹಾದಿ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರದಾರ ಮತ್ತು ಲಷ್ಕರ್-ಎ-ತೊಯ್ಬಾದ ಸಂಸ್ಥಾಪಕ ಭಯೋತ್ಪಾದಕ ಹಾಫಿಜ್ ಸಯಿದ್ ನನ್ನು ಭಾರತದ ವಶಕ್ಕೆ ಒಪ್ಪಿಸಲು ಭಾರತ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಸಾರ ಮಾಧ್ಯಮಗಳಲ್ಲಿ ಈ ವಾರ್ತೆ ಪ್ರಸಾರಗೊಂಡಿದೆ. ಭಾರತವು ಇಲ್ಲಿಯವರೆಗೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತವು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಬಳಿ ಅಧಿಕೃತವಾಗಿ ಹಾಫಿಜ್ ಸಯಿದ್ ನನ್ನು ಭಾರತಕ್ಕೆ ಒಪ್ಪಿಸಲು ಬೇಡಿಕೆ ಸಲ್ಲಿಸಿದೆ, ಈ ಬೇಡಿಕೆಯ ಬಗ್ಗೆ ಪಾಕಿಸ್ತಾನ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಹಾಫಿಜ್ ಸಯಿದ್ ನನ್ನು ಪಾಕಿಸ್ತಾನವು ೨೦೧೯ ರಲ್ಲಿ ಬಂಧಿಸಿತ್ತು. ಅವನಿಗೆ ನ್ಯಾಯಾಲಯವು ಭಯೋತ್ಪಾದನೆಗೆ ಧನಸಹಾಯ ಮಾಡಿರುವುದರಿಂದ ೧೫ ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಇನ್ನೊಂದು ಆರೋಪದ ಬಗ್ಗೆ ಅವನಿಗೆ ೩೧ ವರ್ಷದ ಶಿಕ್ಷೆ ವಿಧಿಸಲಾಗಿದೆ.
ಹಾಫಿಜ್ ಸಯಿದ್ ಇವನ ರಾಜಕೀಯ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲಿದೆ !
ಹಾಫಿಜ್ ಸಯಿದ್ ಈಗ ಪಾಕಿಸ್ತಾನದ ಜೈಲಿನಲ್ಲಿ ಇದ್ದರೂ ಅವನ ‘ಪಾಕಿಸ್ತಾನ ಮರಕಜಿ ಮುಸ್ಲಿಂ ಲೀಗ್’ ಪಕ್ಷ ಪಾಕಿಸ್ತಾನದ ಸಂಸತ್ತಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಆಫಿಜ್ ಸಯಿದ್ ಇವನ ಪುತ್ರ ತಲ್ಹ ಸಯಿದ್ ಲಾಹೊರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ.