ಭಾರತವು ಮೊಟ್ಟಮೊದಲ ಬಾರಿಗೆ ಸಂಯುಕ್ತ ಅರಬ್ ಅಮೀರತದಿಂದ ಕಚ್ಚಾ ತೈಲು ಖರೀದಿಸುವಾಗ ಡಾಲರ್ ಬದಲು ಭಾರತೀಯ ರೂಪಾಯಿಯ ಬಳಕೆ !


ನವ ದೆಹಲಿ – ಭಾರತವು ಮೊಟ್ಟಮೊದಲು ಬಾರಿಗೆ ಸಂಯುಕ್ತ ಅರಬ್ ಅಮೀರಾತ ದೇಶದಿಂದ ಕಚ್ಚಾ ತೈಲು ಖರೀದಿ ಮಾಡುವಾಗ ಅಂತರಾಷ್ಟ್ರೀಯ ಕರೆನ್ಸಿ ಆಗಿರುವ ಡಾಲರ್ ಬದಲು ಭಾರತೀಯ ರೂಪಾಯಿಯಲ್ಲಿ ವ್ಯವಹಾರ ಮಾಡಿದೆ. ಭಾರತ ಜಗತ್ತಿನಲ್ಲಿ ಮೂರನೆಯ ಇಂಧನ ತೈಲ ಖರೀದಿ ಮಾಡುವ ದೊಡ್ಡ ದೇಶವಾಗಿದೆ. ಭಾರತ ಶೇಕಡ ೮೫ ರಷ್ಟು ಕಚ್ಚಾ ತೈಲ ಆಮದು ಮಾಡುತ್ತದೆ. ಆದ್ದರಿಂದ ಭಾರತದ ಈ ಕೃತಿಗೆ ಬಹಳ ಮಹತ್ವವಿದೆ. ಈ ಹಿಂದೆ ಯುಕ್ರೇನ್ ಯುದ್ಧದ ಕಾಲದಲ್ಲಿ ರಷ್ಯಾದಿಂದ ತೈಲು ಖರೀದಿ ಮಾಡುವಾಗ ಭಾರತೀಯ ರೂಪಾಯಿಯಲ್ಲಿ ಹಣ ನೀಡಿತ್ತು. ಭಾರತೀಯ ರೂಪಾಯಿಯಲ್ಲಿ ವ್ಯವಹಾರ ಮಾಡಿದರೆ ನಮ್ಮ ಬಳಿ ಇರುವ ವಿದೇಶಿ ಕರೆನ್ಸಿ ಉಳಿತಾಯವಾಗುವುದು ಮತ್ತು ಅದರ ಲಾಭ ಭಾರತಕ್ಕೆ ಆಗುವುದು. ಜುಲೈ ೧೧, ೨೦೨೨ ರಂದು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಆಮದು ಮಾಡುವವರಿಗೆ ಹಣ ನೀಡುವಾಗ ಭಾರತೀಯ ರೂಪಾಯಿಯಲ್ಲಿ ಹಣ ನೀಡಲು ಅನುಮತಿ ನೀಡಿತ್ತು. ರಿಜರ್ವ ಬ್ಯಾಂಕ್ ಇಲ್ಲಿಯವರೆಗೆ ಜಗತ್ತಿನ ೨೨ ದೇಶಗಳ ಜೊತೆಗೆ ಭಾರತೀಯ ರೂಪಾಯಿಯಲ್ಲಿ ವ್ಯಾಪಾರ ಮಾಡುವುದಕ್ಕಾಗಿ ಅನುಮತಿ ಪಡೆದಿದೆ. ಆದರೂ ಇಲ್ಲಿಯವರೆಗೆ ತೈಲ ಉತ್ಪಾದಕ ದೇಶ ರೂಪಾಯಿಯಲ್ಲಿ ವ್ಯವಹಾರ ಮಾಡಲು ಸಿದ್ಧರಿಲ್ಲ.