ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಅಗರ್ತಲಾದಲ್ಲಿ (ತ್ರಿಪುರಾ) ವಾಸ್ತುಶಾಸ್ತ್ರ ಕುರಿತು ‘ಆನ್‌ಲೈನ್’ ಮೂಲಕ ಸಂಶೋಧನೆ ಮಂಡನೆ !
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಈ ಸಂಶೋಧನಾ ಪ್ರಬಂಧದ ಮಾರ್ಗದರ್ಶಕರಾಗಿದ್ದು ಶ್ರೀ.ರಾಜ ಕರ್ವೆ ಇವರು ಲೇಖಕರಾಗಿದ್ದಾರೆ.
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಅಕ್ಟೋಬರ್ ೨೦೧೬ ರಿಂದ ನವೆಂಬರ್ ೨೦೨೩ ರವರೆಗೆ ಒಟ್ಟು ೧೧೧ ವೈಜ್ಞಾನಿಕ ಪರಿಷತ್ತುಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದೆ, ಇದರಲ್ಲಿ ೧೮ ರಾಷ್ಟ್ರೀಯ ಮತ್ತು ೯೩ ಅಂತರರಾಷ್ಟ್ರೀಯ ಪರಿಷತ್ತುಗಳಿವೆ. ಇವುಗಳಲ್ಲಿ ೧೩ ಅಂತಾರಾಷ್ಟ್ರೀಯ ಪರಿಷತ್ತುಗಳಲ್ಲಿ ‘ಅತ್ಯುತ್ತಮ ಪ್ರಸ್ತುತಿ’ ಪ್ರಶಸ್ತಿಗಳನ್ನು ಪಡೆದಿದೆ.
ಫೋಂಡಾ – ‘ಯಾವ ರೀತಿ ವಾಸ್ತುವಿನಿಂದ ವ್ಯಕ್ತಿಯ ಮೇಲೆ ಪರಿಣಾಮವಾಗುತ್ತದೆಯೋ ಅದೇ ರೀತಿ ವ್ಯಕ್ತಿಯಿಂದಲೂ ವಾಸ್ತುವಿನ ಮೇಲೆ ಪರಿಣಾಮವಾಗುತ್ತದೆ. ಸಾಧನೆ ಮಾಡುವ ವ್ಯಕ್ತಿಯ ಸಕಾರಾತ್ಮಕ ಪರಿಣಾಮ ವಾಸ್ತುವಿನ ಮೇಲಾಗಿ ವಾಸ್ತು ದೋಷಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ’ ಎಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಜ್ಯೋತಿಷ್ಯ ವಿಶಾರದ ಮತ್ತು ವಾಸ್ತುಶಾಸ್ತ್ರ ಅಭ್ಯಾಸಕ ಶ್ರೀ. ರಾಜ ಕರ್ವೆ ಇವರು ಪ್ರತಿಪಾದಿಸಿದರು. ಕೇಂದ್ರೀಯ ಸಂಸ್ಕ್ರತ ವಿಶ್ವವಿದ್ಯಾಲಯ, ಏಕಲವ್ಯ ಕ್ಯಾಂಪಸ್, ಅಗರ್ತಲಾ ತ್ರಿಪುರಾದಲ್ಲಿ ಇತ್ತೀಚೆಗೆ ಪ್ರತ್ಯಕ್ಷ ಮತ್ತು ‘ಆನ್‌ಲೈನ್’ನಲ್ಲಿ ನಡೆದ ‘ನ್ಯಾಶನಲ್ ಸೆಮಿನಾರ ಆನ್ ಕಾಂಟ್ರಿಬ್ಯೂಶನ್ ಆಫ್ ವಾಸ್ತುಶಾಸ್ತ್ರ ಇನ್ ಮಾಡರ್ನ ಕಂಟೆಕ್ಸ್ಟ’ ಈ ಪರಿಷತ್ತಿನಲ್ಲಿ ಶ್ರೀ. ರಾಜ ಕರ್ವೆ ಇವರು ‘ಆನ್‌ಲೈನ್’ ಮೂಲಕ ಪಾಲ್ಗೊಂಡಿದ್ದರು. ಅವರು ‘ವಾಸ್ತುಶಾಸ್ತ್ರದ ಪ್ರಕಾರ ವಾಸ್ತುವನ್ನು ನಿರ್ಮಿಸುವುದರಿಂದಾಗುವ ಲಾಭಗಳು ಮತ್ತು ವಾಸ್ತುದೋಷಗಳ ನಿವಾರಣೆಗೆ ಸುಲಭವಾದ ಆಧ್ಯಾತ್ಮಿಕ ಪರಿಹಾರಗಳು ಮತ್ತು ‘ಸಾಧನೆ ಮಾಡುವ ಮಹತ್ವ !’ ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಇದರ ಮಾರ್ಗದರ್ಶಕರಾಗಿದ್ದು ಶ್ರೀ. ಕರ್ವೆ ಇವರು ಲೇಖಕರಾಗಿದ್ದಾರೆ.
ಶ್ರೀ. ರಾಜ ಕರ್ವೆ ಇವರು ಮಂಡಿಸಿದ ಅಂಶಗಳು
೧. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರವೇಶದ್ವಾರವು ಸರಿಯಾದ ಸ್ಥಾನದಲ್ಲಿರುವುದು ಮಹತ್ವದ್ದಾಗಿದೆ. ಪ್ರವೇಶದ್ವಾರ ಯೋಗ್ಯ ಜಾಗದಲ್ಲಿದ್ದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪ್ರವಹಿಸುತ್ತದೆ, ಅದೇ ರೀತಿ ಪ್ರವೇಶದ್ವಾರವು ನಿಷೇಧಿತ ಸ್ಥಾನದಲ್ಲಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವಹಿಸುತ್ತದೆ. ಇದು ‘ಯುನಿವರ್ಸಲ್ ಔರಾ ಸ್ಕಾನರ್ (ಯು.ಎ.ಎಸ್.)’ ಎಂಬ ಮಾಜಿ ಅಣುವಿಜ್ಞಾನಿ ಡಾ. ಮನ್ನಮ ಮೂರ್ತಿಯವರು ವಿಕಸಿತಗೊಳಿಸಿದ ವೈಜ್ಞಾನಿಕ ಉಪಕರಣಗಳ ಮೂಲಕ ನಡೆಸಿದ ಪ್ರಯೋಗಗಳಿಂದಲೂ ಕಂಡುಬಂದಿದೆ. ಸಂಕ್ಷಿಪ್ತ ವಾಗಿ ಹೇಳುವುದಾದರೆ, ವಾಸ್ತುಶಾಸ್ತ್ರದ ಪ್ರಕಾರ ಮನೆಯನ್ನು ಕಟ್ಟುವುದರಿಂದ ಮನೆಯಲ್ಲಿ ಸಕಾರಾತ್ಮಕ ಸ್ಪಂದನಗಳು ತಯಾರಾಗಿ ವ್ಯಕ್ತಿಗೆ ಸುಖ ಮತ್ತು ಶಾಂತಿ ಪ್ರಾಪ್ತಿಯಾಗುತ್ತದೆ.
೨. ಪ್ರಸ್ತುತ, ಹೆಚ್ಚಿನ ಮನೆಗಳು ವಾಸ್ತುಶಾಸ್ತ್ರದ ಪ್ರಕಾರ ಇರುವುದಿಲ್ಲ. ಆದ್ದರಿಂದ, ವಾಸ್ತುವಿನಲ್ಲಿರುವ ಶಕ್ತಿಯು ಅಸಮತೋಲನಗೊಂಡು ಅಲ್ಲಿ ವಾಸಿಸುವ ಸದಸ್ಯರು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಯದಲ್ಲಿ ವಾಸ್ತುದಲ್ಲಿನ ಶಕ್ತಿಯನ್ನು ಸಮತೋಲನಗೊಳಿಸಲು ವಾಸ್ತುವಿನಲ್ಲಿ ‘ರತ್ನಸಂಸ್ಕಾರ’ ಮಾಡಲಾಗುತ್ತದೆ. ರತ್ನಸಂಸ್ಕಾರ, ಎಂದರೆ ನಿರ್ದಿಷ್ಟ ರತ್ನಗಳನ್ನು ನಿರ್ದಿಷ್ಟ ದಿಕ್ಕಿನಲ್ಲಿ ನೆಲದಲ್ಲಿ ಹೂತಿಡುವುದು. ‘ರತ್ನಸಂಸ್ಕಾರ’ ಮಾಡುವುದರಿಂದ ವಾಸ್ತವಿನಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ’, ಎಂಬುದು ‘ಯು.ಎ.ಎಸ್.’ ಬಳಸಿ ಮಾಡಿದ ಪ್ರಯೋಗದಿಂದ ಕಂಡು ಬಂದಿತು.
೩. ನಮ್ಮ ವಾಸ್ತುವು ವಾಸ್ತುಶಾಸ್ತ್ರದ ಪ್ರಕಾರವಾಗಿದ್ದರೂ ಅಥವಾ ವಾಸ್ತುದೋಷವನ್ನು ಹೋಗಲಾಡಿಸಲು ‘ರತ್ನಸಂಸ್ಕಾರ’ದಂತಹ ವಿಧಿಗಳನ್ನು ಮಾಡಿದ್ದರೂ ವಾಸ್ತುವಿನಲ್ಲಿ ಉತ್ಪನ್ನವಾಗಿರುವ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಪ್ರತಿದಿನ ವಾಸ್ತುವನ್ನು ಶುದ್ಧೀಕರಿಸುವುದು ಆವಶ್ಯಕವಾಗಿದೆ. ‘ಸಾತ್ತ್ವಿಕ ಊದುಬತ್ತಿಯಿಂದ ಶುದ್ಧಿ ಮಾಡುವುದು, ಧೂಪ ತೋರಿಸುವುದು, ಗೋಮೂತ್ರವನ್ನು ಸಿಂಪಡಿಸುವುದು, ಬೇವಿನ ಸೊಪ್ಪಿನ ಧೂಪ ತೋರಿಸುವುದು, ಮನೆಯಲ್ಲಿ ಸಂತರು ಹಾಡಿದ ಭಜನೆ ಅಥವಾ ದೇವತೆಗಳ ನಾಮಜಪವನ್ನು ಹಾಕಿಡುವುದು’ ಇವೆಲ್ಲ ವಾಸ್ತುಶುದ್ಧಿಯ ಕೆಲವು ಸರಳ ಪರಿಹಾರಗಳಾಗಿವೆ.
೪. ವಾಸ್ತುವಿನಿಂದ ವ್ಯಕ್ತಿಯ ಮೇಲೆ ಪರಿಣಾಮ ಬೀರುವಂತೆಯೇ ವ್ಯಕ್ತಿಯಿಂದಲೂ ವಾಸ್ತುವಿನ ಮೇಲೆ ಪರಿಣಾಮವಾಗುತ್ತದೆ. ಒಬ್ಬ ವ್ಯಕ್ತಿಯಲ್ಲಿ ಸ್ವಭಾವದೋಷಗಳ ಮತ್ತು ಅಹಂನ ಪ್ರಮಾಣವು ಹೆಚ್ಚಿದ್ದಲ್ಲಿ ಅವನಿಂದ ಅನುಚಿತ ವರ್ತನೆಯಾಗಿ ವಾಸ್ತುವಿನಲ್ಲಿ ನಕಾರಾತ್ಮಕ ಸ್ಪಂದನಗಳು ಉಂಟಾಗುತ್ತವೆ, ಅದೇ ರೀತಿ ಒಬ್ಬ ವ್ಯಕ್ತಿಯು ಹೆಚ್ಚು ಉತ್ತಮ ಗುಣಗಳನ್ನು ಹೊಂದಿದ್ದರೆ, ಅವನಿಂದ ಯೋಗ್ಯ ಆಚರಣೆಯಾಗಿ ವಾಸ್ತುದಲ್ಲಿ ಸಕಾರಾತ್ಮಕ ಸ್ಪಂದನಗಳು ಬರುತ್ತವೆ. ಸಾಧನೆಯಿಂದ ವ್ಯಕ್ತಿಯಲ್ಲಿನ ಸ್ವಭಾವದೋಷಗಳು ಮತ್ತು ಅಹಂ ಕಡಿಮೆಯಾಗಿ ಸದ್ಗುಣಗಳು ಹೆಚ್ಚಾಗುತ್ತವೆ ಮತ್ತು ವ್ಯಕ್ತಿಯಲ್ಲಿ ರಜ ಮತ್ತು ತಮ ಗುಣಗಳು ಕಡಿಮೆಯಾಗಿ ಸತ್ವಗುಣವು ಹೆಚ್ಚಾಗುತ್ತದೆ. ವಾಸ್ತುವಿನ ಮೇಲೆ ಅದರಿಂದ ಶುಭ ಪರಿಣಾಮವಾಗಿ ಅದರ ಸಕಾರಾತ್ಮಕ (ಸಾತ್ತ್ವಿಕ) ಆಗುತ್ತದೆ.
ಇದರ ಉತ್ತಮ ಉದಾಹರಣೆ ಎಂದರೆ ಸಂತರ ವಾಸ್ತು !
ಸಂತರು ಸಾಧನೆ ಮಾಡುತ್ತಿರುವುದರಿಂದ ಅವರು ನೆಲೆಸಿರುವ ವಾಸ್ತು ಸಾತ್ತ್ವಿಕವಾಗುತ್ತದೆ. ಆದ್ದರಿಂದ ಭಾರತದಲ್ಲಿ ಸಂತರ ಜನ್ಮಸ್ಥಳ, ನಿವಾಸ, ಸಂತರು ಬಳಸುವ ವಸ್ತುಗಳು ಇತ್ಯಾದಿಗಳನ್ನು ಸಂರಕ್ಷಿಸುವ ಸಂಪ್ರದಾಯವಿದೆ. ಇದಕ್ಕಾಗಿ ಕೇರಳದಲ್ಲಿನ ಆದಿಶಂಕರಾಚಾರ್ಯ ಇವರ ಜನ್ಮಸ್ಥಳದ ಬಗ್ಗೆ ‘ಯು.ಎ.ಎಸ್.’ ಉಪಕರಣದಿಂದ ಮಾಡಿದ ಸಂಶೋಧನೆಯನ್ನು ಮಂಡಿಸಲಾಯಿತು.