ಕಾಂಗ್ರೆಸ್ ಪಕ್ಷವು ನೆಹರು, ಇಂದಿರಾ ಗಾಂಧಿಯವರ ಕಾಲದಿಂದ ನಕ್ಸಲ್ ವಿಚಾರಗಳಿಗೆ ಪ್ರೋತ್ಸಾಹವನ್ನು ನೀಡಿತು. ಈಗ ರಾಹುಲ ಗಾಂಧಿಯವರು ನೀಡಿದ ಹೇಳಿಕೆಯ ಬಗ್ಗೆ ಪ್ರಧಾನಮಂತ್ರಿ ಮೋದಿಯವರು ‘ಕಾಂಗ್ರೆಸ್ ಪಕ್ಷವು ನಗರ ನಕ್ಸಲ್‌ವಾದದ ವಿಚಾರಶೈಲಿಯನ್ನು ‘ಔಟ್‌ಸೋರ್ಸ್’ (ಬಾಹ್ಯಸ್ರೋತ) ಮಾಡುತ್ತಿದೆ’, ಎಂದು ಹೇಳಿದ್ದರು. ‘ಸದ್ಯ ರಾಜಕೀಯ ಪಕ್ಷಗಳಲ್ಲಿ ನಗರ ನಕ್ಸಲರ ನುಸುಳುವಿಕೆಯು ಅರಾಜಕತೆಯ ಸೂಚನೆ ಆಗಿದೆ’, ಎಂಬ ಪ್ರಖರ ಅಭಿಪ್ರಾಯವನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆ ಇವರು ಮಂಡಿಸಿದರು. ‘ಹಿಂದೂಸ್ಥಾನ ಪೋಸ್ಟ್’ನ ಸಂಪಾದಕ ಶ್ರೀ. ಸ್ವಪ್ನಿಲ್ ಸಾವರಕರ ಇವರು ‘ನಗರ ನಕ್ಸಲ್‌ವಾದ’ದ ಬಗ್ಗೆ ಶ್ರೀ. ರಮೇಶ ಶಿಂದೆಯವರ ವಿಶೇಷ ಸಂದರ್ಶನವನ್ನು ತೆಗೆದುಕೊಂಡರು.
೧. ಇಂದಿರಾ ಗಾಂಧಿ ಹಾಗೂ ಕಾಂಗ್ರೆಸ್ಸಿನ ಮುಖಂಡರ ಸಾಮ್ಯವಾದಿಗಳೊಂದಿಗಿನ ಆತ್ಮೀಯತೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ವಿಷಯದಲ್ಲಿ ನೀಡಿದ ಈ ಮೇಲಿನ ಹೇಳಿಕೆಯು ‘ಕೇವಲ ಚುನಾವಣೆಯ ಪ್ರಚಾರದ ಹೇಳಿಕೆಯಾಗಿದೆ’, ಎಂದು ನಾವು ತಿಳಿದುಕೊಳ್ಳಬಾರದು. ಇದು ಅತ್ಯಂತ ಮಹತ್ವದ ಅಂಶ ವಾಗಿದೆ; ಏಕೆಂದರೆ ಕೆಲವೊಮ್ಮೆ ಚುನಾವಣೆಯ ಸಮಯದ ಪ್ರಚಾರದಲ್ಲಿ ವಿವಿಧ ವಿಷಯಗಳನ್ನು ಕೇವಲ ಪ್ರಸಿದ್ಧಿಗಾಗಿ ಹೇಳಲಾಗುತ್ತದೆ; ಆದರೆ ನಾವು ಕಾಂಗ್ರೆಸ್ಸಿನ ಇತಿಹಾಸವನ್ನು ನೋಡಿದರೆ, ಕಾಂಗ್ರೆಸ್ ಯಾವಾಗಲೂ ಸಾಮ್ಯವಾದಿ ವಿಚಾರಸರಣಿಯೊಂದಿಗೆ ಮೈತ್ರಿ ಇಟ್ಟುಕೊಂಡಿದೆ. ನೆಹರೂ ಕಾಲದಲ್ಲಿ ೧೯೬೨ ರ ಭಾರತ-ಚೀನಾ ಯುದ್ಧದ ವರೆಗೆ ‘ಹಿಂದೀ-ಚೀನೀ ಭಾಯಿ ಭಾಯಿ’, ಎಂದು ಅವರು ನಮ್ಮ ದೇಶದಲ್ಲಿ ಪ್ರಚಾರ ಮಾಡುತ್ತಿದ್ದರು. ಸಾಮ್ಯವಾದಿ ವಿಚಾರದ ಚೀನಾ ನಮ್ಮ ಮಿತ್ರ ಆಗಿದೆ, ಅದು ಎಂದಿಗೂ ಭಾರತದ ಮೇಲೆ ಆಕ್ರಮಣ ಮಾಡುವುದಿಲ್ಲ’, ಎಂದು ಅವರು ತಿಳಿದುಕೊಂಡಿದ್ದರು. ಅದರೆ ಪ್ರತ್ಯಕ್ಷದಲ್ಲಿ ಚೀನಾದ ಮಾವೋ ಭಾರತದ ಮೇಲೆ ಆಕ್ರಮಣ ಮಾಡಿ ಅವರನ್ನು ಕನಸಿನಿಂದ ಬಡಿದೆಬ್ಬಿಸಿದರು. ಅನಂತರ ಇಂದಿರಾ ಗಾಂಧಿಯವರು ಭಾರತದಲ್ಲಿ ತುರ್ತುಪರಿಸ್ಥಿತಿಯನ್ನು ಹೇರಿದ ನಂತರ ಅವರಿಗೆ ಮುಂದಿನ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೋಲಾಯಿತು. ಸೋಲನ್ನು ಎದುರಿಸಿದ ನಂತರ ಅವರು ಆ ಕಾಲದ ಸಾಮ್ಯವಾದಿಗಳೊಂದಿಗೆ ವೈಚಾರಿಕ ಆತ್ಮೀಯತೆಯನ್ನು ಬೆಳೆಸಿದರು. ಅವರು ಸಾಮ್ಯವಾದಿ ವಿಚಾರಗಳಿಗೆ ಮನ್ನಣೆ ನೀಡಿದರು. ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂವಿಧಾನದಲ್ಲಿ ೪೨ ನೇ ತಿದ್ದುಪಡಿ ಮಾಡಿ ‘ಸೆಕ್ಯುಲರ್‌ವಾದ’ (ಧರ್ಮನಿರಪೇಕ್ಷತೆ) ಹಾಗೂ ‘ಸಮಾಜವಾದ’ವನ್ನು ಭಾರತದ ಮೇಲೆ ಹೇರಿದರು. ಸಂವಿಧಾನ ದಲ್ಲಿ ಸಾಮ್ಯವಾದವನ್ನು ನೇರವಾಗಿ ತರಲು ಆಗದಿರುವುದರಿಂದ ಅವರು ಮೊದಲು ಸಮಾಜವಾದವನ್ನು ತಂದರು. ವಾಸ್ತವದಲ್ಲಿ ಸಮಾಜವಾದ ಹಾಗೂ ಸಾಮ್ಯವಾದದಲ್ಲಿ ಹೆಚ್ಚು ವ್ಯತ್ಯಾಸವೇನಿಲ್ಲ.
ತುರ್ತುಪರಿಸ್ಥಿತಿಯ ಕಾಲಾವಧಿಯ ನಂತರ ಪುನಃ ವಿಜಯ ಸಾಧಿಸಿದ ನಂತರ ಇಂದಿರಾ ಗಾಂಧಿಯವರು ದೆಹಲಿಯಲ್ಲಿನ ಜವಾಹರಲಾಲ ನೆಹರು ವಿಶ್ವವಿದ್ಯಾಲಯ (ಜೆ.ಎನ್.ಯು.)ವನ್ನು ಸಾಮ್ಯವಾದಿಗಳಿಗೆ ಉಡುಗೊರೆಯಾಗಿ ಕೊಟ್ಟುಬಿಟ್ಟರು. ಇದರಿಂದ ಕಾಂಗ್ರೆಸ್ ಹಾಗೂ ಸಾಮ್ಯವಾದಿ ವಿಚಾರಶೈಲಿಯ ಪಕ್ಷ ಮತ್ತು ಸಂಘಟನೆಗಳ ವೈಚಾರಿಕ ಆತ್ಮೀಯತೆಯು ಸ್ಪಷ್ಟವಾಗಿ ಕಾಣಿಸುತ್ತದೆ.
೨. ನಕ್ಸಲ್‌ವಾದವು ಭಯೋತ್ಪಾದನೆಯೇ ಆಗಿದೆ !
ರಾಜಕೀಯ ಪಕ್ಷ ಅಥವಾ ಸಂಘಟನೆಗಳೊಂದಿಗೆ ವೈಚಾರಿಕ ಆತ್ಮೀಯತೆಯು ಒಂದು ಪ್ರತ್ಯೇಕ ವಿಷಯವಾಗಿದೆ; ಆದರೆ ರಾಹುಲ ಗಾಂಧಿಯ ವಿದೇಶದಲ್ಲಿನ ಹೇಳಿಕೆಯ ನಂತರ ಈಗ ಮಾನ್ಯ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯ ಹುದ್ದೆಯಲ್ಲಿರುವಾಗ ಕಾಂಗ್ರೆಸ್ಸಿನ ಬಗ್ಗೆ ಮಾಡಿದ ಆರೋಪ ತುಂಬಾ ಗಂಭೀರ ವಿಷಯವಾಗಿದೆ; ಏಕೆಂದರೆ ಪ್ರಧಾನಮಂತ್ರಿಗಳು ಹೀಗೆ ಹೇಳುವುದರ ಅರ್ಥವೆಂದರೆ ಈಗ ಕಾಂಗ್ರೆಸ್ಸಿನವರ ಕಡೆ ತಮ್ಮದೇ ಆದ ಯಾವುದೇ ವೈಚಾರಿಕ ಕ್ಷಮತೆ ಉಳಿದಿಲ್ಲ. ಕಾಂಗ್ರೆಸ್ ತನ್ನ ಸ್ವಂತ ವಿಚಾರಗಳಿಂದ ನಡೆಯುವುದಿಲ್ಲ, ಕಾಂಗ್ರೆಸ್ ಈ ಹಿಂದೆ ಮಾಡುತ್ತಿದ್ದ ಪ್ರಚಾರಗಳಿಗೆ ಈಗ ತಿಲಾಂಜಲಿ ನೀಡಿದೆ. ಈಗ ಅದು ವಿಚಾರಗಳನ್ನು ಮತ್ತು ನಿಲುವುಗಳನ್ನು ‘ಔಟ್‌ಸೋರ್ಸ್’ ಮಾಡಿಕೊಳ್ಳುತ್ತಿದೆ. ಅವರ ಈ ವಿಚಾರಗಳು ಸಾಮ್ಯವಾದಿ ವಿಚಾರಗಳ ಆಧಾರದಲ್ಲಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಪ್ರಯತ್ನಿಸುವ ನಗರ ನಕ್ಸಲ್‌ವಾದಿಗಳದ್ದಾಗಿವೆ. ಸಾಮ್ಯವಾದಿಗಳ ಈ ವಿಚಾರಗಳನ್ನು ದೇಶದಲ್ಲಿನ ಪ್ರಜಾಪ್ರಭುತ್ವಕ್ಕೆ ಆಘಾತಕಾರಿ ಹಾಗೂ ಹಿಂಸೆಯ ಮಾರ್ಗದಲ್ಲಿ ನಡೆಯುವ ನಗರ ನಕ್ಸಲ್‌ವಾದಿಗಳಿಂದ ಆಯ್ದುಕೊಳ್ಳಲಾಗಿದೆ. ದೇಶದ ಒಂದು ಪ್ರಮುಖ ರಾಜಕೀಯ ಪಕ್ಷವನ್ನು ಈಗ ಇಂತಹ ವಿಚಾರ ಹಾಗೂ ನಿಲುವಿನ ಆಧಾರದಲ್ಲಿ ನಡೆಸಲಾಗುತ್ತಿದ್ದರೆ, ಇದು ತುಂಬಾ ಗಂಭೀರ ವಿಷಯವಾಗಿದೆ. ಈ ಸಾಮ್ಯವಾದಿ ವಿಚಾರಗಳ ವಿಚಾರವಂತರು ತಮ್ಮ ವಿದ್ಯಾಪೀಠದಿಂದ ಉಗ್ರವಾದ, ನಕ್ಸಲ್‌ವಾದ ಹಾಗೂ ಭಯೋತ್ಪಾದನೆಗಳನ್ನು ಬೇರೆ ಬೇರೆ ಎಂದು ತೋರಿಸಲು ಪ್ರಯತ್ನಿಸುತ್ತಾರೆ. ಅದರಲ್ಲಿ ಜಿಹಾದಿ ಭಯೋತ್ಪಾದನೆಗಿಂತಲೂ ಭಯಂಕರವಾಗಿರುವ ನಕ್ಸಲ್‌ವಾದವನ್ನು ಸೌಮ್ಯವಾಗಿ ತೋರಿಸುವ ಪ್ರಯತ್ನ ನಡೆಯುತ್ತದೆ.
ನಕ್ಸಲರ ಹೋರಾಟ, ಅಂದರೆ ಜನಸಾಮಾನ್ಯರ (ಆದಿವಾಸಿಗಳ) ರಾಜಕೀಯ ವ್ಯವಸ್ಥೆಯ ವಿರುದ್ಧದ ಹೋರಾಟವಾಗಿದೆ, ಎಂಬ ದೃಷ್ಟಿಕೋನವನ್ನು ಮಂಡಿಸಲಾಗುತ್ತದೆ. ಉಗ್ರವಾದವನ್ನು ಸಹ ಇದೇ ರೀತಿ ಸಮರ್ಥಿಸಲಾಗುತ್ತದೆ. ವಾಸ್ತವದಲ್ಲಿ ಜಿಹಾದಿ ಭಯೋತ್ಪಾದನೆ ಹಾಗೂ ನಕ್ಸಲ್‌ವಾದದ ಅಮಾನವೀಯ ಕೃತ್ಯಗಳಲ್ಲಿ ಅಂತಹ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ. ನಕ್ಸಲ್‌ವಾದ ಇದು ಕೇವಲ ಅರಣ್ಯಗಳಲ್ಲಿನ ಆದಿವಾಸಿಗಳಿಗಾಗುವ ಅನ್ಯಾಯದ ವಿರುದ್ಧದ ಹೋರಾಟವಲ್ಲ, ಅದು ಒಂದು ವಿಶಿಷ್ಟ ಉದ್ದೇಶದಿಂದ ಆರಂಭಿಸಿದ ಹೋರಾಟವಾಗಿದೆ. ಅವರ ಹೋರಾಟದ ಹಿಂದೆ ಖಂಡಿತವಾಗಿಯೂ ಸಾಮ್ಯವಾದಿ ವಿಚಾರಸರಣಿ ಕಾರ್ಯನಿರತವಿದೆ. ಈ ವಿಚಾರಸರಣಿಯ ಬೆಂಬಲಕ್ಕೆ ಅನೇಕ ಸಾಮ್ಯವಾದಿ ವಿಚಾರವಾದಿಗಳು ಸಿದ್ಧರಿದ್ದಾರೆ, ಅವರಲ್ಲಿ ಸ್ಟನ್ ಸ್ವಾಮಿ ಇರಲಿ, ಪ್ರಾ. ಸಾಯಿಬಾಬಾ ಇರಲಿ, ವರವರ ರಾವ್ ಇರಲಿ, ವಕೀಲ ಅರುಣ ಪೆರೇರಾ ಇರಲಿ, ಪ್ರಾ. ಆನಂದ ತೇಲತುಂಬಡೆ ಇರಲಿ, ಅಥವಾ ನಲಿನಿ ಸುಂದರ, ಸುಧಾ ಭಾರದ್ವಾಜ ಇವರಂತಹ ವಿದ್ವಾಂಸ ಮಹಿಳೆಯರಿರಲಿ, ಅವರ ಒಂದು ಬಹಳ ದೊಡ್ಡ ಶಕ್ತಿ ಇದೆ. ಗೌತಮ ನವಲಖಾರಿಂದ ಹಿಡಿದು ನಿಖಿಲ ವಾಗಳೆ, ಬರಖಾ ದತ್ತ, ರಾಜದೀಪ ಸರದೇಸಾಯಿ, ಸಿದ್ಧಾರ್ಥ ವರದರಾಜನ್, ರವೀಶ ಕುಮಾರ ಈ ಎಲ್ಲ ಸಾಮ್ಯವಾದಿ ವಿಚಾರಶೈಲಿಯ ಪತ್ರಕರ್ತರ ವಿಚಾರ ಸರಣಿಯು ನಕ್ಸಲ್‌ವಾದಿಗಳನ್ನೇ ಬೆಂಬಲಿಸುತ್ತದೆ. ಇಂದು ದುರದೃಷ್ಟವಶಾತ್, ‘ಹಿಂದೂ’ ಹೆಸರಿನ ‘ದ ಹಿಂದೂ’ ವರ್ತಮಾನಪತ್ರಿಕೆಯಲ್ಲಿಯೂ ನಗರ ನಕ್ಸಲ್‌ವಾದದ ವೈಚಾರಿಕ ಪ್ರಚಾರ ದೊಡ್ಡ ಪ್ರಮಾಣ ದಲ್ಲಾಗುತ್ತದೆ. ಈ ಪ್ರಚಾರ ಒಂದು ರೀತಿಯಲ್ಲಿ ನಕ್ಸಲ್‌ವಾದಿಗಳಿಂದಾಗುವ ಹತ್ಯಾಕಾಂಡಗಳನ್ನು ಬೆಂಬಲಿಸುತ್ತದೆ. ಇಂತಹ ವಿಚಾರಗಳೊಂದಿಗೆ ಕಾಂಗ್ರೆಸ್‌ನಂತಹ ರಾಜಕೀಯ ಪಕ್ಷ ಆತ್ಮೀಯತೆ ಬೆಳೆಸುವುದು ಹಾಗೂ ಅವರ ರಾಜಕೀಯ ನಿಲುವನ್ನು ‘ತಮ್ಮ ವೈಚಾರಿಕ ನಿಲುವು’ ಎಂದು ಮಂಡಿಸುವುದು, ಬಹಳ ಗಂಭೀರವಾಗಿದೆ.
೩. ನಕ್ಸಲ್‌ವಾದಿಗಳಿಂದ ಭಯೋತ್ಪಾದಕರಿಗಿಂತಲೂ ಹೆಚ್ಚು ಹತ್ಯೆಗಳು !
ಒಂದು ರಾಜಕೀಯ ಪಕ್ಷವು ಅಧಿಕಾರಕ್ಕೆ ಬಂದಾಗ ಆ ಪಕ್ಷದ ಬಳಿ ಎಲ್ಲ ವ್ಯವಸ್ಥೆಗಳು ತನ್ನಿಂತಾನೇ ಬರುತ್ತವೆ ಹಾಗೂ ಕಾನೂನು ತಯಾರಿಸುವ ಅಧಿಕಾರವೂ ಬರುತ್ತದೆ. ಅವರಲ್ಲಿ ಗೃಹವಿಭಾಗ ಇರುತ್ತದೆ, ಆದ್ದರಿಂದ ಪೊಲೀಸರ ಪೂರ್ಣ ನಿಯಂತ್ರಣ ಅವರಲ್ಲಿರುತ್ತದೆ. ಆದ್ದರಿಂದ ಕಾನೂನು-ವ್ಯವಸ್ಥೆಯ ಹೆಸರಿನಲ್ಲಿ ಅವರಿಗೆ ಬೇಕಾದ್ದೆಲ್ಲವನ್ನೂ ಮಾಡಲು ಸಾಧ್ಯವಾಗುತ್ತದೆ. ನಮ್ಮಲ್ಲಿ ಕೇಂದ್ರ ಮತ್ತು ರಾಜ್ಯಗಳ ದೃಷ್ಟಿಕೋನದಿಂದ ಭಿನ್ನ ಸಂಕಲ್ಪನೆಗಳಿವೆ. ಕೇಂದ್ರದ ಎಲ್ಲ ವ್ಯವಸ್ಥೆಗಳು ರಾಜ್ಯದಲ್ಲಿ ಉಪಯೋಗಿಸಲ್ಪಡು ವುದಿಲ್ಲ, ರಾಜ್ಯಗಳಿಗೂ ಸ್ವಾತಂತ್ರ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಂತಹ ಪಕ್ಷದ ನಾಯಕರು ಈ ನಗರ ನಕ್ಸಲ್‌ವಾದದ ಸಹಾಯ ಪಡೆದಿದ್ದರೆ, ಅದನ್ನು ‘ಔಟ್‌ಸೋರ್ಸ್’ ಮಾಡಿ ಅವರ ವಿಚಾರಶೈಲಿ ಯನ್ನು ಆಯ್ದುಕೊಂಡಿದ್ದರೆ, ಇದು ಬಹಳ ಗಂಭೀರ ವಿಷಯವಾಗಿದೆ; ಏಕೆಂದರೆ ನಕ್ಸಲ್‌ವಾದ ಈ ದೇಶದಲ್ಲಿ ನಿಜವಾಗಿಯೂ ಏನು ಮಾಡುತ್ತಿದೆ, ಎಂಬುದು ಜನರಿಗೆ ತಿಳಿದಿದೆ. ಈ ಸಾಮ್ಯವಾದಿ ವಿಚಾರದ ನಕ್ಸಲ್‌ವಾದವು ಸಾವಿರಾರು ಸೈನಿಕರು ಹಾಗೂ ಸಾಮಾನ್ಯ ನಾಗರಿಕರ ಹತ್ಯೆಯನ್ನು ಮಾಡಿದೆ. ೨೦೦೯ ರಿಂದ ೨೦೧೯ ಈ ೧೦ ವರ್ಷಗಳ ಅವಧಿಯನ್ನು ನೋಡಿದರೆ ನಕ್ಸಲ್‌ವಾದಿಗಳು ೨ ಸಾವಿರದ ೧೯೧ ರಷ್ಟು ಹತ್ಯೆಗಳನ್ನು ಮಾಡಿದ್ದಾರೆ. ಅದೇ ಅವಧಿಯಲ್ಲಿ ಜಿಹಾದಿ ಭಯೋತ್ಪಾದಕರಿಂದಾದ ಹತ್ಯೆಯ ಸಂಖ್ಯೆ ೩೯೯ ರಷ್ಟಿದೆ. ಇದರ ಅರ್ಥ ಜಿಹಾದಿ ಭಯೋತ್ಪಾದಕರ ತುಲನೆಯಲ್ಲಿ ನಕ್ಸಲ್‌ವಾದಿಗಳು ಸುಮಾರು ೫ ಪಟ್ಟಿಗಿಂತ ಹೆಚ್ಚು ಹತ್ಯೆಗಳನ್ನು ಮಾಡಿದ್ದಾರೆ. ಇದೇ ರೀತಿ ಸೈನಿಕರು ಮತ್ತು ಪೊಲೀಸರ ಹತ್ಯೆಗಳನ್ನು ನೋಡಿದರೆ ನಕ್ಸಲ್‌ವಾದಿಗಳು ೧ ಸಾವಿರದ ೩೪೨ ಮತ್ತು ಜಿಹಾದಿ ಭಯೋತ್ಪಾದಕರು ಮಾಡಿದ ಹತ್ಯೆ ೬೭೫, ಅಂದರೆ ನಕ್ಸಲ್‌ವಾದಿಗಳು ಎರಡುಪಟ್ಟು ಹೆಚ್ಚು ಹತ್ಯೆಗಳನ್ನು ಮಾಡಿದ್ದಾರೆ; ಆದರೆ ಈ ಭಯಂಕರ ನಕ್ಸಲ್‌ವಾದದ ಅರಿವನ್ನು ನಮ್ಮಲ್ಲಿನ ಪ್ರಗತಿಪರರೆಂದು ಹೇಳಿಕೊಳ್ಳುವ ಸಾಮ್ಯವಾದಿ ಪತ್ರಕರ್ತರು ಮಾಡಿಕೊಡುವುದಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹತ್ಯೆಗಳು ಆಗುತ್ತಿರುವಾಗ ಈ ಸಾಮ್ಯವಾದಿ ಪತ್ರಕರ್ತರು ನಕ್ಸಲ್‌ವಾದವನ್ನು ‘ಸ್ವಾತಂತ್ರ್ಯದ ಹೋರಾಟವಾಗಿದೆ’, ‘ಇದು ಅರಣ್ಯದಲ್ಲಿನ ದೀನ-ದಲಿತರ ಹೋರಾಟವಾಗಿದೆ’, ಇದು ಅನ್ಯಾಯಕಾರಿ ವ್ಯವಸ್ಥೆಯ ವಿರುದ್ಧ ಹೋರಾಟವಾಗಿದೆ’, ಎಂದು ಬಣ್ಣಿಸುತ್ತಾರೆ; ಆದರೆ ಈ ವ್ಯವಸ್ಥೆಯನ್ನು ಯಾರು ನಿರ್ಮಿಸಿದರು, ಈ ದೇಶದ ಜನರೇ ನಿರ್ಮಿಸಿದರು, ಈ ದೇಶದ ಜನರು ಅದನ್ನು ಸ್ವೀಕರಿಸಿದ್ದಾರೆ.
ಕಾಶ್ಮೀರದಲ್ಲಿ ಅಮಾಯಕ ಹಿಂದೂಗಳ ಮೇಲೆ ಅತ್ಯಾಚಾರ ಮಾಡಿ ಅಲ್ಲಿಂದ ಹೊರದಬ್ಬಲಾಯಿತು; ಆದರೆ ಅವರು ಈ ಅನ್ಯಾಯದ ವಿರುದ್ಧ ಸಿಡಿದೆದ್ದು ಕೈಯಲ್ಲಿ ಬಂದೂಕು ಹಿಡಿಯಲಿಲ್ಲ, ಹೀಗಿರುವಾಗ ನಕ್ಸಲ್‌ವಾದಿಗಳು ನ್ಯಾಯಕ್ಕಾಗಿ ಕೈಯಲ್ಲಿ ಬಂದೂಕು ಹಿಡಿದು ಭಯೋತ್ಪಾದಕ ಕೃತ್ಯಗಳನ್ನು ಏಕೆ ಮಾಡುತ್ತಾರೆ ? ಹಾಗೂ ಅವರನ್ನು ಬೆಂಬಲಿಸಲು ಪ್ರಗತಿಪರ ಪತ್ರಕರ್ತರು ಅಥವಾ ಇತರ ‘ಸೆಕ್ಯುಲರ್’ವಾದಿಗಳು ಮುಂಬರುತ್ತಿದ್ದಾರೆ, ಇದು ಅತ್ಯಂತ ದೌರ್ಭಾಗ್ಯದ ವಿಷಯವಾಗಿದೆ. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಸ್ತರದಲ್ಲಿ ಈ ‘ನಗರ ನಕ್ಸಲ್‌ವಾದ’ದ ವಿಚಾರಗಳನ್ನು ಸ್ವೀಕರಿಸಿದರೆ ಇಷ್ಟರ ವರೆಗೆ ಕೆಲವೆಡೆ ಸೀಮಿತವಾಗಿದ್ದ ಈ ನಕ್ಸಲ್‌ವಾದ ನಮ್ಮ ಸಮೀಪ ಬರಲು ತಡವಾಗಲಿಕ್ಕಿಲ್ಲ.
೪. ರಾಷ್ಟ್ರವನ್ನು ಒಡೆಯುವ ರಾಹುಲ ಗಾಂಧಿಯವರ ವಿಚಾರಧಾರೆ
ರಾಹುಲ ಗಾಂಧಿಯವರು ಇಂಗ್ಲೆಂಡ್‌ನ ಪ್ರವಾಸದಲ್ಲಿ ಭಾಷಣ ಮಾಡುವಾಗ ಮುಂದಿನಂತೆ ಹೇಳಿದರು, ‘ಭಾರತ ಒಂದು ರಾಷ್ಟ್ರವಲ್ಲ, ಅದು ಕೆಲವು ರಾಜ್ಯಗಳ ಒಂದು ಸಂಘ ವಾಗಿದೆ.’ ಆದರೆ ಡಾ. ಬಾಬಾಸಾಹೇಬ ಅಂಬೇಡ್ಕರರು ಮಂಡಿಸಿದ ಸಂಕಲ್ಪನೆಯಲ್ಲಿ ‘ರಾಜ್ಯಗಳ ಸಂಘ’ ಎಂದು ಹೇಳಿಲ್ಲ, ಆದರೆ ‘ಸಂಘೀಯ ದೃಷ್ಟಿಕೋನದಿಂದ ರಾಜ್ಯಗಳು’ ಎಂದು ಹೇಳಲಾಗಿದೆ. ಆದ್ದರಿಂದ ರಾಜ್ಯಗಳಿಗೆ ಸ್ವಾತಂತ್ರ್ಯವನ್ನು ನೀಡುವಾಗ ರಾಷ್ಟ್ರ ಎಂಬ ಸಂಕಲ್ಪನೆಗೆ ಅವರು ಮನ್ನಣೆ ನೀಡಿದ್ದರು. ಆದ್ದರಿಂದ ಅವರು ವಿಭಜನೆಯ ಸಮಯದಲ್ಲಿ ‘ಈ ದೇಶದ ಎಲ್ಲ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋದಾಗ ಹಾಗೂ ಅಲ್ಲಿರುವ ಎಲ್ಲ ಹಿಂದೂ ಸಮಾಜ ಭಾರತಕ್ಕೆ ಬಂದ ನಂತರವೇ ನಾವು ಈ ವಿಭಜನೆಯನ್ನು ಸ್ವೀಕರಿಸೋಣ; ಎಂದು ಹೇಳಿದ್ದರು. ಈಗ ರಾಹುಲ ಗಾಂಧಿ ಮಂಡಿಸುವ ಸಂಕಲ್ಪನೆಯು ಸಾಮ್ಯವಾದಿ ವಿಚಾರಶೈಲಿಯನ್ನು ಆಧರಿಸಿದ್ದು ಅವರ ಮಾನಸಿಕತೆ ಹೇಗಿದೆಯೆಂದರೆ, ‘ಬ್ರಿಟಿಷರು ಇಂದಿನ ಭಾರತವನ್ನು ನಿರ್ಮಿಸಿದರು, ರಾಷ್ಟ್ರ ಎಂಬ ಸಂಕಲ್ಪನೆಯನ್ನು ಬ್ರಿಟಿಷರು ಭಾರತಕ್ಕೆ ತಂದರು.’
ನನಗೆ ಏನು ಅನಿಸುತ್ತದೆ ಎಂದರೆ, ಇಷ್ಟು ದೊಡ್ಡ ನಾಯಕನಾಗಿ ಇಷ್ಟು ಮೂರ್ಖತನದಿಂದ ಮಾತನಾಡು ತ್ತಾರೆಂದರೆ, ಇದಕ್ಕಿಂತ ದೊಡ್ಡ ದೌರ್ಭಾಗ್ಯದ ವಿಷಯ ಬೇರೊಂದಿಲ್ಲ; ಏಕೆಂದರೆ ನಮ್ಮ ಋಗ್ವೇದ, ಅಥರ್ವವೇದ ಮುಂತಾದ ವೇದಗಳಲ್ಲಿ ‘ರಾಷ್ಟ್ರ’ದ ಉಲ್ಲೇಖವಿದೆ, ರಾಷ್ಟ್ರದ ಪ್ರಾರ್ಥನೆಯೂ ವೇದದಲ್ಲಿದೆ, ಅಂದರೆ ವೈದಿಕ ಕಾಲದಿಂದಲೂ ನಮ್ಮ ಇತಿಹಾಸವನ್ನು ನೋಡಿದರೆ, ಆ ಕಾಲದಲ್ಲಿ ರಾಷ್ಟ್ರ ಎಂಬ ಸಂಕಲ್ಪನೆಯನ್ನು ನಾವು ಮಂಡಿಸಿದ್ದೇವೆ, ಇಂದು ಕೂಡ ಸ್ವತಂತ್ರ ಭಾರತದಲ್ಲಿ ರಾಷ್ಟ್ರಗಾನ, ರಾಷ್ಟ್ರಭಾಷೆ, ರಾಷ್ಟ್ರಗೀತೆ ಇತ್ಯಾದಿ ಶಬ್ದಗಳೂ ನಮ್ಮ ಪ್ರಾಚೀನ ರಾಷ್ಟ್ರ ಸಂಕಲ್ಪನೆಯಿಂದಲೇ ಬಂದಿವೆ. ಆರ್ಯ ಚಾಣಕ್ಯರು ಕೂಡ ‘ರಾಷ್ಟ್ರ ನಿರ್ಮಾಣ ಮಾಡಲಿಕ್ಕಿದೆ’, ಎಂದು ಹೇಳಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ‘ಹಿಂದವೀ ಸ್ವರಾಜ್ಯ’ವೆಂದು ಈ ರಾಷ್ಟ್ರದ ಬೇರೆ ಸ್ವರೂಪವನ್ನು ಮಂಡಿಸಿದರು; ಆದರೆ ಅವರು ಕೂಡ ಹಿಂದವೀ ಸ್ವರಾಜ್ಯ ಸ್ಥಾಪಿಸಿದ ನಂತರ ಮೊತ್ತಮೊದಲಿಗೆ ಮಾಡಿದ ಮಹತ್ವದ ಕಾರ್ಯವೇನೆಂದರೆ, ನಮ್ಮ ಕಾಲಗಣನೆಯನ್ನು ಆರಂಭಿಸಿದರು, ಶಬ್ದ ವ್ಯವಹಾರ ಕೋಶವನ್ನು ತಯಾರು ಮಾಡಿದರು, ಭಾಷೆಯ ವಿವಿಧ ಅಷ್ಟಪ್ರಧಾನ ಮಂತ್ರಿಮಂಡಳ ರಚಿಸಿದರು, ಪ್ರಾಚೀನ ಕಾಲದಿಂದ ಭಾರತದಲ್ಲಿನ ಈ ಎಲ್ಲ ವಿಷಯ ಗಳನ್ನು ನೋಡಿದರೆ ರಾಹುಲ ಗಾಂಧಿ ಇಂಗ್ಲೆಂಡ್‌ನಂತಹ ದೇಶಕ್ಕೆ ಹೋಗಿ, ‘ಭಾರತಕ್ಕೆ ರಾಷ್ಟ್ರ ಎಂಬ ಸಂಕಲ್ಪನೆಯನ್ನು ಬ್ರಿಟಿಷರು ನೀಡಿದರು.’ ಎಂಬ ಹುಡುಗಾಟಿಕೆಯ ಮಾತಿನಿಂದ ಅವರ ಬೌದ್ಧಿಕ ಕ್ಷಮತೆಯ ಅರಿವಾಗುತ್ತದೆ. ಅಲ್ಲಿ ಅವರು ಚೀನಾ ಇದು ರಾಷ್ಟ್ರವಾಗಿದೆ, ಎಂದು ಹೇಳುತ್ತಾರೆ. ಏಕೆಂದರೆ ಚೀನಾದಲ್ಲಿ ‘ಎಲ್ಲೋ ರಿವರ್’ (ಹಳದಿ ನದಿ) ಸಂಪೂರ್ಣ ರಾಷ್ಟ್ರವನ್ನು ವ್ಯಾಪಿಸುತ್ತದೆ, ಅಂದರೆ ‘ನಮ್ಮಲ್ಲಿ ಗಂಗಾ ನದಿ ಇದೆ’, ಎಂಬುದು ಅವರಿಗೆ ಮರೆತು ಹೋಗಿದೆ ಹಾಗೂ ಗಂಗಾ ನದಿಯು ಕೇವಲ ಭಾರತ ಮಾತ್ರವಲ್ಲ, ಅದು ಬಾಂಗ್ಲಾದೇಶವನ್ನೂ ವ್ಯಾಪಿಸಿದೆ. ಆದ್ದರಿಂದ ಈ ದೃಷ್ಟಿಕೋನದಿಂದ ತಿಳಿದುಕೊಂಡರೆ, ಇದು ಕೇವಲ ಅವರ ಮೂರ್ಖತನದ ಹೇಳಿಕೆಯೆಂದು ಹೇಳಲು ಸಾಧ್ಯವಿಲ್ಲ, ಇದು ಕೇವಲ ಅವರ ತಲೆಯಿಂದ ಹೊರಬಿದ್ದ ಒಂದು ಸಾಮಾನ್ಯ ಸಂಕಲ್ಪನೆಯಲ್ಲ, ಇದು ಕೆಲವು ವಿಶಿಷ್ಟ ಉದ್ದೇಶದಿಂದ ನೀಡಿದ ಹೇಳಿಕೆಯಾಗಿದೆ. ಅರ್ಬನ್ ನಕ್ಸಲ್‌ವಾದಿಗಳಿಂದ ‘ಜೆ.ಎನ್.ಯು.’ನಲ್ಲಿ ‘ಭಾರತ ತೆರೆ ತುಕಡೆ ಹೋಂಗೆ’ಯ ಘೋಷಣೆಯ ಮೂಲಕ ಇದೇ ಸಂಕಲ್ಪನೆಯನ್ನು ಮಂಡಿಸಲಾಗಿತ್ತು. ಇದಕ್ಕೆ ಸಾಮ್ಯವಾದಿ ವಿಚಾರಗಳ ‘ಸೋವಿಯತ್ ಯೂನಿಯನ್’ನೊಂದಿಗೆ ಸಂಬಂಧವಿದೆ. ಈ ಹಿಂದೆ ಸಾಮ್ಯವಾದಿಗಳ ರಷ್ಯಾವನ್ನೇ ‘ಸೋವಿಯತ್ ಯೂನಿಯನ್’ ಎಂದು ಹೇಳಲಾಗುತ್ತಿತ್ತು. ಆಗ ಈ ಸೋವಿಯತ್ ಸಂಘದಲ್ಲಿ ೧೫ ರಾಜ್ಯಗಳಿದ್ದವು ಹಾಗೂ ಈ ೧೫ ರಾಜ್ಯಗಳಲ್ಲಿನ ಹೆಚ್ಚಿನ ರಾಜ್ಯಗಳು ಮುಸಲ್ಮಾನರದ್ದಾಗಿದ್ದವು. ಹಿಂದಿನ ಕಾಲದಲ್ಲಿ ಸಾಮ್ಯವಾದಿ ರಷ್ಯಾದ ವಿಸ್ತಾರವಾದಿ ಸೇನೆ ಎಲ್ಲೆಲ್ಲಿ ಹೋಗಿತ್ತೊ, ಆ ಎಲ್ಲ ಭೂಭಾಗವನ್ನು ತಮ್ಮ ವಶಕ್ಕೆ ಪಡೆಯುತ್ತಿತ್ತು. ಅವರ ಸೇನೆ ಅಫ್ಘಾನಿಸ್ತಾನದ ವರೆಗೂ ಬಂದಿತ್ತು. ಅವರು ಸಾಮ್ಯವಾದಿ ಶಕ್ತಿಯ ಆಧಾರದಲ್ಲಿ ಈ ರಾಜ್ಯಗಳನ್ನು ವಶದಲ್ಲಿಟ್ಟುಕೊಂಡರು; ಆದರೆ ಅಲ್ಲಿನ ಮೂಲ ಪರಂಪರೆ, ಅಂದರೆ ಅದು ತಜಾಕಿಸ್ತಾನ, ಅಝರಬೈಜಾನ, ಕಿರಗಿಝಿಸ್ತಾನ, ತುರ್ಕಮೆನಿಸ್ತಾನ ಇರಬಹುದು ಅಥವಾ ಕಝಕಿಸ್ತಾನವಿರಬಹುದು, ಅವರ ಸಂಸ್ಕೃತಿ ಹಾಗೂ ರಷ್ಯಾದ ಸಂಸ್ಕೃತಿ ಒಂದೇ ಆಗಿರಲಿಲ್ಲ; ಆದ್ದರಿಂದ ಅವರು ಸಾಮ್ಯವಾದಿ ಆಡಳಿತ ದುರ್ಬಲವಾದಾಗ ರಷ್ಯಾದ ಪ್ರಮುಖ ಗೋರ್ಬಾಚೇವ್ ಇವರ ಉತ್ತರಕಾಲದಲ್ಲಿ ಬಂಡಾಯವೆದ್ದು ‘ನಮಗೆ ಸ್ವತಂತ್ರ ರಾಷ್ಟ್ರಗಳು ಬೇಕು’, ಎಂಬ ಸಂಕಲ್ಪನೆಯನ್ನು ಮಂಡಿಸಿದರು. ಅವರಿಗೆ ಆ ಕಾಲದಲ್ಲಿ ಸ್ವಾತಂತ್ರ್ಯ ಸಿಕ್ಕಿತು.
ಸಾಮ್ಯವಾದಿ ಇತಿಹಾಸದಲ್ಲಿನ ಈ ಘಟನೆಗಳ ವಿಷಯದಲ್ಲಿ ರಾಹುಲ ಗಾಂಧಿಯ ಹೇಳಿಕೆಯ ಸಂಬಂಧವನ್ನು ನಾವು ತೆಗೆದುಕೊಂಡರೆ ಅದು ಅತ್ಯಂತ ಗಂಭೀರವಾಗಿದೆ. ರಾಹುಲ ಗಾಂಧಿಯ ಹೇಳಿಕೆಗನುಸಾರ ‘ಭಾರತ ಇದು ರಾಷ್ಟ್ರವಲ್ಲ, ಕೇವಲ ರಾಜ್ಯಗಳ ಸಂಘವಾಗಿದೆ’, ಎಂದು ಹೇಳಿದರೆ, ನಾಳೆ ಖಲಿಸ್ತಾನವಾದಿಗಳು ಪಂಜಾಬನ್ನು ತುಂಡು ಮಾಡುವ ಬೇಡಿಕೆಯನ್ನು ಮುಂದಿಡುವರು. ತಮಿಳುನಾಡಿನ ದ್ರಾವಿಡಿಯನ್ ವಿಚಾರದ ಮುಖಂಡರು ಬೇರೆಯೆ ದೇಶ ಬೇಕೆನ್ನುವರು. ಇದು ಭಾರತವನ್ನು ತುಂಡರಿಸುವ ಸಂಕಲ್ಪನೆಯಾಗಿದೆ. ಭಾರತವನ್ನು ತುಂಡು ಮಾಡುವ ಸಂಕಲ್ಪನೆಯನ್ನು ರಾಹುಲ ಗಾಂಧಿ ಈ ಮೂಲಕ ವಿದೇಶದಲ್ಲಿ ಮಂಡಿಸುತ್ತಿದ್ದಾರೆ. ನಿಜವಾಗಿ ನೋಡಿದರೆ ಭಾರತ ಪ್ರಾಚೀನ ಕಾಲದಿಂದಲೂ ರಾಷ್ಟ್ರವೆಂದು ಅಸ್ತಿತ್ವದಲ್ಲಿದೆ. ಸಣ್ಣ ಒಂದು ಉದಾಹರಣೆ ತೆಗೆದುಕೊಳ್ಳಿ, ನಮ್ಮಲ್ಲಿನ ಮಕರ ಸಂಕ್ರಾಂತಿ ಕಾಶ್ಮೀರದಲ್ಲಿ ‘ಉತ್ತರಾಯಣ’, ಪಂಜಾಬ್‌ನಲ್ಲಿ ‘ಲೋಹಡೀ’, ಹಿಮಾಚಲ ಪ್ರದೇಶದಲ್ಲಿ ‘ಮಾಘೀ ಸಾಜೀ’, ಆಸಾಮ್‌ನಲ್ಲಿ ‘ಮಾಘೀ ಬಿಹು’, ಮಧ್ಯಭಾರತದಲ್ಲಿ ‘ಸುಕರಾತ’, ‘ಸಂಕ್ರಾಂತಿ’ ಹಾಗೂ ಕೇರಳದಲ್ಲಿ ‘ಪೊಂಗಲ’ ಎಂದು ಆಚರಿಸಲಾಗುತ್ತದೆ. ಇದರ ಅರ್ಥ ಒಂದೇ ಮಕರ ಸಂಕ್ರಾಂತಿಯನ್ನು ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರಿನಲ್ಲಿ ಹಾಗೂ ವಿವಿಧ ಪದ್ಧತಿಯಲ್ಲಿ ಆಚರಿಸಲಾಗುತ್ತದೆ. ಸಂಪೂರ್ಣ ಭಾರತದಲ್ಲಿ ಸಾಂಸ್ಕೃತಿಕದೃಷ್ಟಿಯಲ್ಲಿ ಐಕ್ಯವಿಲ್ಲದೆ ಇದು ಹೇಗೆ ಸಾಧ್ಯ ?
ಆದ್ದರಿಂದ ‘ಭಾರತದಲ್ಲಿ ಹೆಸರುಗಳು ಬೇರೆ ಇದ್ದರೂ, ಭಾಷೆಗಳು ಬೇರೆ ಇದ್ದರೂ, ನಮ್ಮ ರಾಷ್ಟ್ರ ಒಂದೇ ಆಗಿದೆ’, ಎಂಬ ಮೂಲ ಸಂಕಲ್ಪನೆ ಇತ್ತು ಹಾಗೂ ರಾಹುಲ ಗಾಂಧಿ ಈ ಮೂಲ ಸಂಕಲ್ಪನೆಯನ್ನೇ ತುಂಡು ಮಾಡಲು ಹೊರಟಿದ್ದಾರೆ ಹಾಗೂ ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿಯವರು ‘ಕಾಂಗ್ರೆಸ್ಸಿನ ಮೇಲೆ ನಗರ ನಕ್ಸಲ್‌ವಾದದ ಉಡುಗೊರೆಯ ವಿಚಾರವನ್ನು ಮಂಡಿಸಿದ್ದಾರೆ.
(ಆಧಾರ : ‘ಹಿಂದುಸ್ಥಾನ ಪೋಸ್ಟ್, ಮರಾಠಿ’)