ಸರಕಾರವು ಸಂಸತ್ತಿನ ಅಧಿವೇಶನದಲ್ಲಿ ೧೩೮ ವರ್ಷಗಳಷ್ಟು ಹಳೆಯ ಭಾರತೀಯ ಟೆಲಿಗ್ರಾಫ್ ಕಾನೂನು ಸಹಿತ ೩ ಕಾನೂನುಗಳನ್ನು ಬದಲಾಯಿಸುವ ಮಸೂದೆಯನ್ನು ಸಲ್ಲಿಸಿತು. ಈ ಮಸೂದೆಗಳು ಕಾನೂನಿನಲ್ಲಿ ರೂಪಾಂತರವಾದಾಗ ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ಯಾವುದೇ ದೇಶದ ಅಥವಾ ವ್ಯಕ್ತಿಯ ದೂರಸಂಚಾರಸೇವೆಗೆ ಜೋಡಿಸಲ್ಪಟ್ಟಿರುವ ಉಪಕರಣಗಳನ್ನು ವಶಪಡಿಸಿಕೊಳ್ಳುವ ಅಥವಾ ಅದಕ್ಕೆ ನಿರ್ಬಂಧ ಹೇರುವ ಅಧಿಕಾರ ಸರಕಾರಕ್ಕಿರಲಿದೆ. ಇದರ ಜೊತೆಗೆ ಕೇಂದ್ರೀಯ ಗೃಹಸಚಿವರು ಸಲ್ಲಿಸಿದ ಸಾಕ್ಷಿದಾರರ ಭದ್ರತೆ, ಮಹಿಳೆಯರಿಗೆ ಇ-ಪ್ರಥಮ ಮಾಹಿತಿಯ ವರದಿ ಹಾಗೂ ‘ಗುಂಪುಗಳಿಂದ ಮಾಡುವ ಹತ್ಯೆಗಳಿಗೆ ಗಲ್ಲುಶಿಕ್ಷೆ’ ಹೀಗೆ ೩ ಮಸೂದೆಗಳನ್ನೂ ಸಮ್ಮತಿಸಲಾಯಿತು. ಇಷ್ಟರ ವರೆಗೆ ಇರುವ ‘ಭಾರತೀಯ ದಂಡ ಸಂಹಿತೆ’ಯ ಬದಲು ಈಗ ‘ಭಾರತೀಯ ನ್ಯಾಯ ಸಂಹಿತೆ-೨೦೨೩’ ಅಸ್ತಿತ್ವಕ್ಕೆ ಬರಲಿದೆ. ಈ ಎರಡೂ ಮಸೂದೆಗಳಿಂದ ಭಾರತ ಹೊಸ ಸುಧಾರಣೆಯ ದಿಕ್ಕಿನಲ್ಲಿ ಇಟ್ಟಿರುವ ಹೆಜ್ಜೆ ಆಶಾದಾಯಕವಾಗಿದೆ.
ಸಮಯಮಿತಿಯಲ್ಲಿ ತೀರ್ಪು ಸಿಗುವ ಸಾಧ್ಯತೆ !
ಕೇಂದ್ರ ಗೃಹಸಚಿವ ಅಮಿತ ಷಾ ಇವರ ಹೇಳಿಕೆಗನುಸಾರ ಪ್ರಸ್ತಾಪಿತ ಕಾನೂನು ವ್ಯಕ್ತಿಸ್ವಾತಂತ್ರ್ಯ, ಮಾನವಾಧಿಕಾರ ಹಾಗೂ ಎಲ್ಲರಿಗೂ ಸಮಾನ ಸ್ಥಾನಮಾನ ಎನ್ನುವ ೩ ತತ್ತ್ವಗಳ ಮೇಲಾಧಾರಿತವಾಗಿದೆ. ಇಷ್ಟರತನಕ ಇಂತಹ ಒಂದು ಖಟ್ಲೆಯ ನಿರ್ಣಯ ಇಂತಿಷ್ಟೇ ಸಮಯದೊಳಗೆ ಆಗಬೇಕೆಂಬ ವ್ಯವಸ್ಥೆ ವರ್ತಮಾನದ ಕಾನೂನಿನಲ್ಲಿ ಇರಲಿಲ್ಲ. ಆದ್ದರಿಂದ ನ್ಯಾಯಾಲಯಕ್ಕೆ ಹೋಗುವುದೆಂದರೆ ‘ತಾರೀಕಿನ ಮೇಲೆ ತಾರೀಕು’, ಎನ್ನುವ ಸಮೀಕರಣ ಆಗಿದೆ. ಖಟ್ಲೆಯನ್ನು ಯಾವಾಗದೊಳಗೆ ಮುಗಿಸಬೇಕು ಎಂಬ ನಿರ್ಬಂಧವಿಲ್ಲದ ಕಾರಣ ಇಂದು ಕೋಟಿಗಟ್ಟಲೆ ಖಟ್ಲೆಗಳು ನೆನೆಗುದಿಯಲ್ಲಿವೆ. ಹೊಸ ಮಸೂದೆಯಲ್ಲಿ ಪೊಲೀಸರಿಗೆ ಮತ್ತು ನ್ಯಾಯಾಲಯಗಳಿಗೆ ಸಮಯಮಿತಿಯನ್ನು ನಿರ್ಧರಿಸಲಾಗಿದೆ. ಘಟನೆ ಸಂಭವಿಸಿ ಎಫ್.ಐ.ಆರ್. ದಾಖಲಿಸಿದ ನಂತರ ೧೪ ದಿನಗಳ ಒಳಗೆ ಪ್ರಾಥಮಿಕ ತನಿಖೆ ಆರಂಭವಾಗಬೇಕು ಹಾಗೂ ೨೪ ದಿನಗಳ ಒಳಗೆ ನ್ಯಾಯಾಧೀಶರಿಗೆ ಅದರ ವರದಿಯನ್ನು ಸಲ್ಲಿಸಬೇಕು. ಯಾವುದೇ ಪರಿಸ್ಥಿತಿಯಲ್ಲಿ ಪೊಲೀಸರು ೯೦ ದಿನಗಳಲ್ಲಿ ಆರೋಪಪತ್ರವನ್ನು ದಾಖಲಿಸಬೇಕು ಹಾಗೂ ಸುಮಾರು ೩ ವರ್ಷದೊಳಗೆ ತೀರ್ಪು ಬರಬೇಕು ಎನ್ನುವ ಏರ್ಪಾಡು ಮಾಡಲಾಗಿದೆ. ತೀರ್ಪು ನೀಡಿದ ನಂತರ ೭ ದಿನಗಳೊಳಗೆ ಅದನ್ನು ‘ಆನ್‌ಲೈನ್’ (ಜಾಲತಾಣದಲ್ಲಿ) ನಲ್ಲಿ ಲಭ್ಯ ಮಾಡಿಕೊಡಬೇಕು, ಎನ್ನುವ ಮಹತ್ವದ ನಿರ್ಣಯ ಅನ್ವಯವಾಗುತ್ತದೆ. ಆದ್ದರಿಂದ ಭವಿಷ್ಯದಲ್ಲಿ ಖಟ್ಲೆಗಳ ತೀರ್ಪುಗಳ ಅವಧಿ ನಿರ್ಧರಿಸಿರುವುದರಿಂದ ಶೀಘ್ರವಾಗಿ ಇತ್ಯರ್ಥವಾಗುವುವು ಹಾಗೂ ಸ್ವಲ್ಪ ಮಟ್ಟಿಗಾದರೂ ನಾಗರಿಕರಿಗೆ ಶೀಘ್ರದಲ್ಲಿ ನ್ಯಾಯ ದೊರಕಬಹುದು.
ಯಾರಾದರೊಬ್ಬರ ವಿರುದ್ಧ ಯಾವುದೇ ಪ್ರದೇಶದಿಂದ ದೂರವಾಣಿಯ ಮೂಲಕವೂ ದೂರು ದಾಖಲಿಸುವ ಏರ್ಪಾಡು ಮಾಡಲಾಗಿದ್ದು ‘ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋಗಲೇ ಬೇಕು’, ಎಂದೇನಿಲ್ಲ. ಇಂದಿನ ತನಕದ ಕಾನೂನಿನಲ್ಲಿ ‘ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಖಟ್ಲೆ ನಡೆಸುವ ಅವಕಾಶವಿರಲಿಲ್ಲ !
ಆದ್ದರಿಂದ ಆರೋಪಿ ಅಪರಾಧ ಮಾಡಿ ಬೇರೆ ದೇಶಕ್ಕೆ ಪಲಾಯನ ಮಾಡುತ್ತಾನೆ, ಆಗ ಯಾರು ಕೂಡ ಅವನಿಗೆ ಏನೂ ಮಾಡುವ ಹಾಗಿರಲಿಲ್ಲ. ಹೊಸ ಕಾನೂನಿನಲ್ಲಿ ‘ಪಲಾಯನ’ ಮಾಡಿದ ಆರೋಪಿಯ ವಿರುದ್ಧ ಖಟ್ಲೆ ನಡೆಸಿ ಅವನಿಗೆ ಶಿಕ್ಷೆ ನೀಡುವ ವ್ಯವಸ್ಥೆ ಇದೆ.
ಕಾನೂನಿನಲ್ಲಿನ ಕಠೋರ ಏರ್ಪಾಡು !
‘ಲವ್ ಜಿಹಾದ್’ನ ಹೆಚ್ಚಿನ ಘಟನೆಗಳಲ್ಲಿ ಮುಸಲ್ಮಾನ ಯುವಕರು ಹಿಂದೂ ಹೆಸರನ್ನಿಟ್ಟುಕೊಂಡು ಹಿಂದೂ ಯುವತಿ-ಮಹಿಳೆಯರೊಂದಿಗೆ ವಿವಾಹವಾಗುತ್ತಾರೆ. ಈ ಪ್ರಸಂಗಗಳಲ್ಲಿ ಹಿಂದೂ ಮಹಿಳೆ ದೂರು ದಾಖಲಿಸಿದರೂ ಅದರಿಂದ ಹೆಚ್ಚಿನ ಪರಿಣಾಮವಾಗುವುದಿಲ್ಲ. ಈಗ ಹೊಸ ಕಾನೂನಿನಲ್ಲಿ ತನ್ನ ಗುರುತನ್ನು ಅಡಗಿಸಿ, ಸುಳ್ಳು ಕಾರಣ ನೀಡಿ ಯಾವುದೇ ಮಹಿಳೆಯೊಂದಿಗೆ ಸಂಬಂಧವಿಟ್ಟುಕೊಳ್ಳುವ ವ್ಯಕ್ತಿಗೆ ಕಠೋರ ಶಿಕ್ಷೆಯ ಏರ್ಪಾಡು ಮಾಡಲಾಗಿದೆ. ಆದ್ದರಿಂದ ‘ಲವ್ ಜಿಹಾದ್’ನ ಘಟನೆಗಳಲ್ಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಒಂದು ಯೋಗ್ಯವಾದ ಮಾರ್ಗ ಸಿಕ್ಕಿದ್ದು ಸುಳ್ಳು ಹೆಸರಿನೊಂದಿಗೆ ಅಲೆದಾಡುವ ಮುಸಲ್ಮಾನ ಯುವಕರಿಗೆ ಹಾಗೂ ಅವರಿಗೆ ಸಹಕರಿಸುವ ಮಿತ್ರರು, ಸಂಬಂಧಿಕರು ಇವರೆಲ್ಲರ ಮೇಲೆ ಕ್ರಮ ತೆಗೆದು ಕೊಳ್ಳಲು ಕಾನೂನುರೀತ್ಯಾ ಬಲ ಸಿಗಲಿಕ್ಕಿದೆ.
ಕಾಂಗ್ರೆಸ್ಸಿನ ಆಡಳಿತದ ಅವಧಿಯಲ್ಲಿ ಆಗಿರುವ ಅನೇಕ ಹಗರಣಗಳಲ್ಲಿ ‘ಸ್ಪೆಕ್ಟ್ರಮ್’ ಹಗರಣ ಒಂದಾಗಿತ್ತು. ‘ಈ ಹಗರಣದಿಂದ ಭಾರತದ ದೂರಸಂಚಾರ ವಿಭಾಗಕ್ಕೆ ೧ ಲಕ್ಷ ದ ೮೦ ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ’, ಎಂದು ಹೇಳಲಾಯಿತು. ಅದರಲ್ಲಿ ವಿವಿಧ ಕಂಪನಿಗಳಿಗೆ ‘ಸ್ಪೆಕ್ಟ್ರಮ್’ನ ಹಂಚುವಿಕೆಯೇ ಅತ್ಯಂತ ಮಹತ್ವದ ಅಂಶ ವಾಗಿತ್ತು, ಈಗ ಅದಕ್ಕೆ ಹೊಸ ಮಸೂದೆಯಿಂದ ಅಂಕುಶ ಹಾಕಲು ಪ್ರಯತ್ನಿಸಲಾಗಿದೆ. ಈಗ ತಂತ್ರಜ್ಞಾನ ಮುಂದು ವರಿಯುತ್ತಿದ್ದು ಅದು ದೂರಸಂಚಾರಕ್ಕಿಂತ ಮುಂದಿನ ಹಂತಕ್ಕೆ ಹೋಗಿದೆ. ಈಗ ಕೆಲವು ಖಾಸಗಿ ಕಂಪನಿಗಳು ಉಪಗ್ರಹ ಸೇವೆಗಳಿಗಾಗಿ ಆಸಕ್ತಿ ತೋರಿಸುತ್ತಿವೆ. ಅವರಿಗೆ ಈ ಮಸೂದೆಯಿಂದ ಉಪಗ್ರಹದ ಸ್ಪೆಕ್ಟ್ರಮ್‌ನ ಹಂಚುವಿಕೆಗಾಗಿ ಯೋಗ್ಯ ಮಾರ್ಗವನ್ನು ತೋರಿಸುವ ಏರ್ಪಾಡು ಇದೆ. ಇದನ್ನು ಎಲ್ಲ ಪರಿಸ್ಥಿತಿಗಳಲ್ಲಿ ಸಂಪೂರ್ಣ ಆಡಳಿತಾತ್ಮಕ ಸ್ತರ ದಲ್ಲಿ ನಿಯಂತ್ರಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಸದ್ಯ ಎಲ್ಲ ಕಡೆ ಮಾಯಾಜಾಲದ್ದೇ ಪ್ರಭಾವ ಇರುವುದರಿಂದ ಯಾವುದೇ ಸಕಾರಾತ್ಮಕ ಅಥವಾ ನಕಾರಾತ್ಮಕ ವಿಷಯವು ಸಂಚಾರಿವಾಣಿಯ ಮೂಲಕ ಬೇಗ ಹರಡುತ್ತದೆ. ಕಳೆದ ಕೆಲವು ತಿಂಗಳಿನಿಂದ ಮಣಿಪುರ ಹಾಗೂ ವಿವಿಧ ರಾಜ್ಯಗಳಲ್ಲಿ ಸಂಚಾರಿವಾಣಿಯ ಮೂಲಕ ತಪ್ಪು ಸಂದೇಶಗಳ ಹರಡುವಿಕೆಯಿಂದ ಗಲಭೆ, ಬೆಂಕಿ ಹಚ್ಚುವಂತಹ ಘಟನೆಗಳು ಘಟಿಸಿವೆ. ಹೊಸ ಮಸೂದೆಯಿಂದ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಘಟನೆಗಳಿಗೆ ಕಡಿವಾಣ ಹಾಕಲು ಈ ಕಾನೂನು ಉಪಯೋಗವಾಗಲಿಕ್ಕಿದೆ.
ದೇಶ ಸ್ವತಂತ್ರ ಕಾನೂನುಗಳ ದಿಕ್ಕಿನಲ್ಲಿ !
೧೯೪೭ ರಲ್ಲಿ ಭಾರತ ಸ್ವತಂತ್ರವಾದಾಗ ಭಾರತ ಸ್ವ’ತಂತ್ರ’ವೆಂಬ ಸ್ವದೇಶಿ ಕಾನೂನುಗಳನ್ನು ಮಾಡುವುದು ಅತ್ಯಂತ ಆವಶ್ಯಕವಾಗಿತ್ತು; ದುರದೃಷ್ಟವಶಾತ್ ಹಾಗಾಗಲಿಲ್ಲ. ಇಂದು ಕೂಡ ಭಾರತದಲ್ಲಿ ‘ಭಾರತೀಯ ದಂಡ ಸಂಹಿತೆ ೧೮೬೦’ರ ಕಾನೂನು ನಡೆಯುತ್ತಿದೆ. ವಾಸ್ತವದಲ್ಲಿ ಆಂಗ್ಲರು ಭಾರತದಲ್ಲಿ ಪುನಃ ೧೮೫೭ ರಂತಹ ಬಂಡಾಯವಾಗ ಬಾರದೆಂದು ಕ್ರಾಂತಿಕಾರಿಗಳನ್ನು ನಿಯಂತ್ರಣದಲ್ಲಿಡಲು ಈ ಕಾನೂನನ್ನು ತಯಾರಿಸಿದ್ದರು. ಅದೇ ಕಾನೂನು ಇಂದಿನ ವರೆಗೆ ನಡೆಯುತ್ತಿರುವುದು ಆಶ್ಚರ್ಯಜನಕವಾಗಿದೆ. ಕೇವಲ ಕಾನೂನು ವ್ಯವಸ್ಥೆಯೇ ಅಲ್ಲ, ದೂರಸಂಚಾರ, ಕಟ್ಟಡ ಕಾಮಗಾರಿ ಹಾಗೂ ಹೆಚ್ಚುಕಮ್ಮಿ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಕಾನೂನುಗಳು ಆಂಗ್ಲರ ಕಾಲದ್ದಾಗಿವೆ. ಈ ಎಲ್ಲ ಕಾನೂನುಗಳು ಆಡಳಿತ ವ್ಯವಸ್ಥೆಗೆ-ಜನಪ್ರತಿನಿಧಿಗಳಿಗೆ ರಕ್ಷಣೆ ನೀಡುವ ಹಾಗೂ ಜನಸಾಮಾನ್ಯರನ್ನು ಶೋಷಿಸು ವಂತಹದ್ದಾಗಿವೆ. ಸಂಸತ್ತಿನ ಮೂಲಕ ಈಗ ಆಗುತ್ತಿರುವ ಬದಲಾವಣೆಯು ಸ್ವಲ್ಪ ಮಟ್ಟಿಗಾದರೂ ಸಾಮಾನ್ಯ ನಾಗರಿಕರಿಗೆ ನ್ಯಾಯ ನೀಡುವಂತಹದ್ದಾಗಿದೆ. ಕೇಂದ್ರ ಸರಕಾರವು ಮುಂದಿನ ಭವಿಷ್ಯಕಾಲದಲ್ಲಿಯೂ ಪ್ರತಿಯೊಂದು ವ್ಯವಸ್ಥೆಯನ್ನು ‘ಭಾರತೀಕರಣ’ ಮಾಡಿದರೆ ದೇಶವು ಪ್ರಗತಿಯ ಅತ್ಯುತ್ತಮ ಪಥದಲ್ಲಿ ಸಾಗಬಹುದು !