ಉಡುಪಿ – ‘ಒಮ್ಮೆ ಮೋದಿ, ಯೋಗಿ ಹೋದರೆ ರಾಮಮಂದಿರವನ್ನು ಕೆಡವುತ್ತೇವೆ’ ಎಂದು ದೇಶದ ಕೆಲ ವಿರೋಧಿಗಳು ಹೇಳುತ್ತಾರೆ. ತುಂಬಾ ಹೋರಾಟ ಮಾಡಿದ ನಂತರ ಶ್ರಮದ ಫಲಸ್ವರೂಪವಾಗಿ ನಿರ್ಮಾಣವಾಗಿರುವ ಶ್ರೀ ರಾಮಮಂದಿರ ಅಮರ ಆಗಬೇಕು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಯಿತು. ಇದೀಗ ಮಥುರಾದ ಶ್ರೀಕೃಷ್ಣ ಮಂದಿರದ ಸಮೀಕ್ಷೆಗೆ ನ್ಯಾಯಾಲಯ ಅನುಮತಿ ನೀಡಿದೆ. ಈಗ ಅಲ್ಲಿ ಶ್ರೀಕೃಷ್ಣನ ಮಂದಿರ ಕಟ್ಟಿ ದೇಶ ಕಟ್ಟೋಣ. ರಾಮ-ಕೃಷ್ಣರ ಸೇವೆಯೇ ದೇಶಸೇವೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.
ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ”ಇನ್ನು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಿದರೆ ನಮ್ಮ ಕೆಲಸ ಮುಗಿಯಿತು ಎಂದು ಭಾವಿಸಬೇಡಿ. ಈಗ ನಮಗೆ ಹೊಸ ಜವಾಬ್ದಾರಿ ಬಂದಿದೆ. ಶ್ರೀರಾಮ ಮಂದಿರವನ್ನು ಇನ್ನೂ ಹಲವು ಶತಮಾನಗಳ ಕಾಲ ಉಳಿಸಬೇಕಾದರೆ ದೇಶದ ಹಿಂದೂಗಳು ‘ಹಿಂದೂ’ಗಳಾಗಿಯೇ ಉಳಿಯಬೇಕು. ಅದಕ್ಕಾಗಿ ಎಲ್ಲಾ ಹಿಂದೂಗಳು ತಮ್ಮ ಮಕ್ಕಳಿಗೆ ಮರುನಾಮಕರಣ ಮಾಡಬೇಕು. ಮಕ್ಕಳ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಅಥವಾ ಅರ್ಥಪೂರ್ಣವಾಗಿರಬೇಕು ಎಂದು ಹೇಳಿದರು.