Sanatan Prabhat Exclusive : ಹಿಂದೂ ರಾಷ್ಟ್ರ ಸ್ಥಾಪನೆಯಾಗಿ ನೋಟುಗಳ ಮೇಲೆ ಶ್ರೀರಾಮನ ಚಿತ್ರ ಮುದ್ರಿಸಲಾಗುವುದು !

ಪ್ರಯಾಗರಾಜ ಕುಂಭಮೇಳ 2025

ತಪಸ್ವಿ ಮಹಂತ್ ಚೇತನ ಗಿರಿ ಮಹಾರಾಜ ಅವರ ಭವಿಷ್ಯವಾಣಿ!

ಮಹಂತ್ ಚೇತನ ಗಿರಿ ಮಹಾರಾಜ್

ಪ್ರಯಾಗರಾಜ್, ಫೆಬ್ರವರಿ ೧೫ ಸುದ್ಧಿ.) – ಭಾರತವು ಹಿಂದೂ ರಾಷ್ಟ್ರವಾಗುತ್ತದೆ. ಹಿಂದೂ ರಾಷ್ಟ್ರದಲ್ಲಿ ನೋಟುಗಳು ಬದಲಾಗುತ್ತವೆ. ನೋಟುಗಳ ಮೇಲೆ ಭಗವಾನ ಶ್ರೀರಾಮನ ಚಿತ್ರ ಮುದ್ರಿಸಲಾಗುವುದು, ಎಂದು ಶ್ರೀ ಪಂಚದಶನಾಮ ಜುನಾ ಅಖಾಡಾದ ತಪಸ್ವಿ ಮಹಂತ ಚೇತನ ಗಿರಿ ಮಹಾರಾಜ ಇವರು ಭವಿಷ್ಯ ನುಡಿದಿದ್ದಾರೆ. ಮಹಾಕುಂಭಮೇಳದಲ್ಲಿ ‘ಸನಾತನ ಪ್ರಭಾತ’ವು ಮಹಂತ ಚೇತನ ಗಿರಿ ಮಹಾರಾಜ್ ಅವರನ್ನು ಭೇಟಿಯಾಯಿತು. ಹಿಂದೂ ರಾಷ್ಟ್ರದ ಬಗ್ಗೆ ಈಶ್ವರನ ಸಂಕೇತಗಳೇನು ? ಎಂದು ಕೇಳಿದಾಗ ಮಹಂತರು ಮೇಲಿನ ಮಾತುಗಳನ್ನು ಹೇಳಿದರು.

ಮಹಂತ ಚೇತನ ಗಿರಿ ಮಹಾರಾಜ್ ತಮ್ಮ ತಲೆಯ ಮೇಲೆ ಅನೇಕ ರುದ್ರಾಕ್ಷಿಗಳನ್ನು ಧರಿಸಿದ್ದಾರೆ. ಇದರ ಬಗ್ಗೆ ಅವರನ್ನು ಕೇಳಿದಾಗ ಅವರು, ‘ರುದ್ರಾಕ್ಷಿಗಳು ಭಗವಾನ್ ಶಿವನ ಕಣ್ಣೀರಿನಿಂದ ನಿರ್ಮಾಣವಾಗಿವೆ. ಆದ್ದರಿಂದ ಅವುಗಳನ್ನು ಅಮೃತವೆಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷಿಗಳು ಭಗವಾನ್ ಶಿವನ ಆಭರಣಗಳಾಗಿವೆ. ಜಗತ್ತಿಗೆ ಆನಂದ, ಶಾಂತಿ ನೀಡಲು, ಭಕ್ತರ ತೊಂದರೆಗಳನ್ನು ನಿವಾರಿಸಲು ಶಿವಗಣ ರುದ್ರಾಕ್ಷಿಗಳನ್ನು ಧರಿಸಿ ತಪಸ್ಸು ಮಾಡುತ್ತಾರೆ. ರುದ್ರಾಕ್ಷಿಗಳು ಪಂಚತತ್ವಗಳ ಸಂಕೇತವಾಗಿವೆ. ರುದ್ರಾಕ್ಷಿ ನೀರನ್ನು ಕುಡಿಯುವುದರಿಂದ ಹೃದಯ ಸಂಬಂಧಿ ಕಾಯಿಲೆಗಳೂ ವಾಸಿಯಾಗುತ್ತವೆ.’ ಎಂದರು.

ಮಹಂತರನ್ನು ಅವರ ಸಾಧನೆಯ ಬಗ್ಗೆ ಕೇಳಿದಾಗ ಅವರು, ನಾವು ಗುಹೆಯಲ್ಲಿ ವಾಸಿಸುತ್ತೇವೆ. ನಿರಂತರವಾಗಿ ಭಗವಾನ್ ಶಿವನ ಆರಾಧನೆ, ಧ್ಯಾನ ಮತ್ತು ಯೋಗಾಸನಗಳನ್ನು ಮಾಡುತ್ತೇವೆ. ೫ ಬಾರಿ ಸಂಧ್ಯಾವಂದನೆ ಮಾಡುತ್ತೇವೆ’, ಎಂದರು.

ಹಿಂದೂಗಳಿಗೆ ಸಾಧನೆಯ ಬಗ್ಗೆ ಕರೆ ನೀಡುವಾಗ ಮಹಂತರು, ‘ಬೆಳಿಗ್ಗೆ ಬೇಗ ಎದ್ದು ಸ್ನಾನ-ಧ್ಯಾನ ಮಾಡಬೇಕು. ತಂದೆ-ತಾಯಿಗೆ ವಂದಿಸಬೇಕು. ಹನುಮಾನ್ ಚಾಲೀಸಾ, ಸುಂದರಕಾಂಡ ಮುಂತಾದವುಗಳನ್ನು ಪಠಿಸಬೇಕು. ಯೋಗಾಸನಗಳನ್ನು ಮಾಡಬೇಕು. ಅವುಗಳನ್ನು ಮಾಡುವುದರಿಂದ ದೇಹವು ಆರೋಗ್ಯಕರ, ಮಂಗಳಕರ ಮತ್ತು ಆನಂದಮಯವಾಗಿರುತ್ತದೆ. ಬೆಳಿಗ್ಗೆ ಬೇಗ ಏಳುವವನಿಗೆ ಅಷ್ಟಸಿದ್ಧಿ, ಒಂಬತ್ತು ರಿದ್ಧಿಗಳು ಪ್ರಾಪ್ತವಾಗುತ್ತವೆ. ಬೆಳಿಗ್ಗೆ ಬೇಗ ಏಳುವವನಿಗೆ ಭಗವಾನ್ ಸೂರ್ಯ ಜ್ಞಾನವನ್ನು ನೀಡುತ್ತಾನೆ ಮತ್ತು ಅವನ ಮನೋಕಾಮನೆಯನ್ನು ಪೂರೈಸುತ್ತಾನೆ.’ ಎಂದರು.

ಮಂದಿರಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಿದ ಸ್ಥಳಗಳಲ್ಲಿ ಮತ್ತೆ ಮಂದಿರಗಳನ್ನು ನಿರ್ಮಿಸಲಾಗುವುದು !

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರವನ್ನು ನಿರ್ಮಿಸಲಾಗಿದೆ; ಆದರೆ ಮುಘಲರು ಕೆಡವಿದ ಇತರ ಮಂದಿರಗಳ ನಿರ್ಮಾಣ ಯಾವಾಗ ಆಗುತ್ತದೆ? ಎಂದು ಕೇಳಿದಾಗ ಮಹಂತ್ ಚೇತನ ಗಿರಿ ಮಹಾರಾಜ್ ಇವರು, ‘ಮುಘಲರು ಹಿಂದೂಗಳ ಮಂದಿರಗಳನ್ನು ಕೆಡವಿ ಮಜಾರ್ ಮತ್ತು ಮಸೀದಿಗಳನ್ನು ನಿರ್ಮಿಸಿದರು. ಎಲ್ಲೆಲ್ಲಿ ಮಜಾರ್ ಅಥವಾ ಮಸೀದಿಗಳನ್ನು ನಿರ್ಮಿಸಲಾಗಿದೆಯೋ, ಆ ಸ್ಥಳಗಳಲ್ಲಿ ಹಿಂದೂ ರಾಷ್ಟ್ರದಲ್ಲಿ ಮತ್ತೆ ಮಂದಿರಗಳನ್ನು ನಿರ್ಮಿಸಲಾಗುವುದು.’ ಎಂದರು.