“ಮಹಾಕುಂಭದ ವಿಶಾಲತೆಯನ್ನು ನೋಡಿದರೆ, ಅದನ್ನು ‘ಸನಾತನ ಕುಂಭ’ ಎಂದು ಕರೆಯಿರಿ!” – ಜುನಾ ಅಖಾಡಾದ ಮಹಾಮಂಡಲೇಶ್ವರ ಆಚಾರ್ಯ ಅವಧೇಶಾನಂದ ಗಿರಿ

ಜುನಾ ಅಖಾಡಾದ ಮಹಾಮಂಡಲೇಶ್ವರ ಆಚಾರ್ಯ ಅವಧೇಶಾನಂದ ಗಿರಿ ಇವರ ಹೇಳಿಕೆ

ಪ್ರಯಾಗರಾಜ್ (ಉತ್ತರ ಪ್ರದೇಶ) – ನಾವು ಭಾರತದ ಜನರು ಭಾವದ ಮಟ್ಟದಲ್ಲಿ ಬದುಕುತ್ತೇವೆ. 50 ಕೋಟಿಗೂ ಹೆಚ್ಚು ಜನರು ಮಹಾಕುಂಭಕ್ಕೆ ಭೇಟಿ ನೀಡಿದ್ದಾರೆ. ಈ ಮಹಾಕುಂಭಕ್ಕೆ ಭಕ್ತರು ಬರುತ್ತಿರುವ ರೀತಿಯನ್ನು ನೋಡಿದರೆ, ಮಹಾಕುಂಭ ಎಂಬ ಪದವು ಚಿಕ್ಕದಾಗಿದೆ ಎಂದು ನನಗೆ ಅನಿಸುತ್ತದೆ. ಇದನ್ನು ‘ವಿರಾಟ್’, ‘ಅನಂತ’ ಅಥವಾ ‘ಸನಾತನ ಕುಂಭ’ ಎಂದು ಕರೆಯಬೇಕು. ದೇಶದ ಅತಿದೊಡ್ಡ ಪಂಚ ದಶನಾಮ ಜುನಾ ಅಖಾಡಾದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಅವರು ಈ ಹೇಳಿಕೆ ನೀಡಿದ್ದಾರೆ.

ಮಹಾಮಂಡಲೇಶ್ವರ ಆಚಾರ್ಯ ಅವಧೇಶಾನಂದ ಗಿರಿ ಅವರು ಹೇಳಿದರು…,

1. ಈ ದೇಶದಲ್ಲಿ ಕ್ರೀಡೆಗಳ ಕುಂಭ, ರೈತರ ಕುಂಭ ಮತ್ತು ವಿದ್ಯಾರ್ಥಿಗಳ ಕುಂಭವನ್ನು ಸಹ ಆಯೋಜಿಸಲಾಗುತ್ತದೆ. ಕುಂಭ ಎಂದರೆ ವಿಶಾಲತೆ. ಪ್ರಯಾಗರಾಜ್‌ನ ಮಹಾಕುಂಭಕ್ಕೆ ಭಕ್ತರು ಬರುತ್ತಿರುವ ರೀತಿಯನ್ನು ನೋಡಿದರೆ, ಇದನ್ನು ‘ಸನಾತನ ಕುಂಭ’ ಎಂದು ಕರೆಯಬೇಕು ಎಂದು ನನಗೆ ಅನಿಸುತ್ತದೆ.

2. ನಮ್ಮ (ಹಿಂದೂಗಳ) ಎಲ್ಲವೂ ಅನಂತವಾಗಿದೆ, ಅಜೇಯವಾಗಿದೆ. ನಾವು ಪ್ರಾಚೀನರು, ಶಾಶ್ವತರು. ಹಿಂದೂ ಧರ್ಮವು ಅನಾದಿ ಕಾಲದಿಂದಲೂ ಇದೆ. ನಮ್ಮ ಸಂಪ್ರದಾಯಗಳು ಪ್ರಾಚೀನವಾಗಿವೆ.

3. ಕುಂಭ ಇಂದಿನದಲ್ಲ. ಇದು ಸತ್ಯಯುಗದ ಕಾಲದಿಂದಲೂ ಇದೆ. ದೇವರು ಮತ್ತು ದಾನವರ ನಡುವಿನ ಯುದ್ಧದ ಸಮಯದಲ್ಲಿ ಸಮುದ್ರ ಮಂಥನವು ಪ್ರಯಾಗರಾಜ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್‌ನಲ್ಲಿ ಅಮೃತದ ಹನಿಗಳು ಬಿದ್ದವು. ಅಂದಿನಿಂದ ಕುಂಭ ಮೇಳವನ್ನು ಆಚರಿಸಲಾಗುತ್ತದೆ.

4. ಸನಾತನ ಧರ್ಮದಿಂದಲೇ ಇಲ್ಲಿ ಪ್ರತಿಯೊಬ್ಬರೂ ಬರುತ್ತಿದ್ದಾರೆ. ಮಹಾಕುಂಭಕ್ಕೆ ಎಷ್ಟು ಸ್ವೀಕೃತಿ ಸಿಕ್ಕಿದೆ ಎಂದು ಕಲ್ಪಿಸಿಕೊಳ್ಳಿ. ಯಾರು ಬರಲು ಸಾಧ್ಯವಾಗಲಿಲ್ಲವೋ ಅವರೂ ಇದರಲ್ಲಿ ಭಾಗವಹಿಸಿದ್ದಾರೆ. ಕುಂಭವು ಜಗತ್ತಿನಲ್ಲಿ ಮಾನ್ಯತೆ ಪಡೆದಿದೆ. ಮಹಾಕುಂಭದಲ್ಲಿ ಜಾತಿ ಅಥವಾ ಪಂಥದ ಯಾವುದೇ ನಿರ್ಬಂಧವಿಲ್ಲ. ಯಾರೂ ಜಾತಿಯ ಬಗ್ಗೆ ಕೇಳುವುದಿಲ್ಲ. ಇಲ್ಲಿ ಸಾಮಾಜಿಕ ಸೌಹಾರ್ದತೆ ಮತ್ತು ವೈವಿಧ್ಯತೆಯಲ್ಲಿ ಏಕತೆ ಕಂಡುಬರುತ್ತದೆ.

5. ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಯತ್ನದಿಂದಲೇ ಇಂತಹ ಉತ್ತಮ ಮಹಾಕುಂಭವನ್ನು ಆಯೋಜಿಸಲಾಗುತ್ತಿದೆ ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಯುವಕರಲ್ಲಿ ಸತ್ಯವನ್ನು ತಿಳಿದುಕೊಳ್ಳುವ ಹಂಬಲ ಇರುವುದರಿಂದಲೇ ಅವರು ಮಹಾಕುಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ! – ಮಹಾಮಂಡಲೇಶ್ವರ ಆಚಾರ್ಯ ಅವಧೇಶಾನಂದ ಗಿರಿ

ಮಹಾಮಂಡಲೇಶ್ವರ ಆಚಾರ್ಯ ಅವಧೇಶಾನಂದ ಗಿರಿ ಅವರು ಮಾತನಾಡಿ, ಇಂದಿನ ಯುವಕರು ಬಹಳ ಜಾಗರೂಕರಾಗಿದ್ದಾರೆ. ಮಹಾಕುಂಭಕ್ಕೆ ಬಂದ ಯುವಕರಲ್ಲಿ ನಾವು ಸತ್ಯವನ್ನು ತಿಳಿದುಕೊಳ್ಳುವ ಹಂಬಲವನ್ನು ಕಂಡೆವು. ಈ ಕುಂಭವು ಕೇವಲ ಭಾರತೀಯರಿಗೆ ಮಾತ್ರವಲ್ಲ, ವಿದೇಶಗಳಲ್ಲಿಯೂ ಇದು ಬಹಳ ಆಕರ್ಷಣೆಯಾಗಿದೆ. ಈ ಸಮಯದಲ್ಲಿ ವಿದೇಶಿ ಭಕ್ತರು ಇಲ್ಲಿ ಯೋಗ, ಆಯುರ್ವೇದ ಮತ್ತು ಉಪನಿಷತ್ತುಗಳ ಬಗ್ಗೆ ಜಿಜ್ಞಾಸೆ ವ್ಯಕ್ತಪಡಿಸಿದರು. ಈ ಪರಿಸ್ಥಿತಿಯನ್ನು ನೋಡಿದರೆ, ಸನಾತನ ಸೂರ್ಯನ ಬೆಳಕು ಮತ್ತು ತೇಜಸ್ಸು ಜಗತ್ತಿನಾದ್ಯಂತ ಹರಡುತ್ತಿದೆ ಎಂದು ನಾನು ಹೇಳಬಲ್ಲೆ. ನೀರು, ಬೆಂಕಿ, ಗಾಳಿ, ತೇಜೋಮೇಘ ಮತ್ತು ನಕ್ಷತ್ರಗಳಲ್ಲಿ ಯಾವ ಸಂಸ್ಕೃತಿಯ ಸಾರ ಅಡಗಿದೆಯೋ ಅದನ್ನು ಯುವಕರು ತಿಳಿದುಕೊಳ್ಳಲು ಬಯಸುತ್ತಾರೆ. ಒಂದು ಬ್ರಹ್ಮವು ಸರ್ವವ್ಯಾಪಿಯಾಗಿದೆ. ಇಲ್ಲಿ ಏಕತೆ ಕಂಡುಬರುತ್ತದೆ.