ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಬಳಿ ಹಾರುತ್ತಿದ್ದ ಡ್ರೋನ್‌ ಪತ್ತೆ !

ಕಾಲ್ತುಳಿತದ ಸಂಚು ಇರಬಹುದೆಂದು ಪೊಲೀಸರರಿಗೆ ಸಂದೇಹ

ಸಾಂದರ್ಭಿಕ ಚಿತ್ರ

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಶ್ರೀರಾಮ ಮಂದಿರದ ಸ್ಥಳದಲ್ಲಿ ಹಾರುತ್ತಿದ್ದ ಡ್ರೋನ್‌ ಅನ್ನು ಡ್ರೋನ್ ವಿರೋಧಿ ಪಡೆಯಿಂದ ಹೊಡೆದುರುಳಿಸಲಾಗಿದೆ. ಈ ಘಟನೆ ಫೆಬ್ರವರಿ 17 ರಂದು ಸಂಜೆ ಪ್ರವೇಶದ್ವಾರ ಸಂಖ್ಯೆ 3 ರಲ್ಲಿ ನಡೆದಿದೆ. ಈ ವೇಳೆ ಇಲ್ಲಿ ಜನಸಾಗರವೇ ನೆರೆದಿತ್ತು. ಡ್ರೋನ್ ಅನ್ನು ಹೊಡೆದುರುಳಿಸಿದ ನಂತರ, ಬಾಂಬ್ ಡಿಟೆಕ್ಟರ್ ಮತ್ತು ವಿಲೇವಾರಿ ತಂಡವನ್ನು ಕರೆಸಿ ಡ್ರೋನ್ಅನ್ನು ಪರಿಶೀಲಿಸಲಾಯಿತು. ಡ್ರೋನ್ ಹಾರಿಸಿದ ವ್ಯಕ್ತಿಗಾಗಿ ಶೋಧ ನಡೆಯುತ್ತಿದೆ. ಶ್ರೀರಾಮ ಮಂದಿರ ಪ್ರದೇಶದಲ್ಲಿ ಡ್ರೋನ್‌ಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ. ದೇವಾಲಯದ ಮೇಲೆ ವಿಮಾನಗಳಿಗೂ ಹಾರಾಟ ಮಾಡಲು ಅನುಮತಿ ಇಲ್ಲ. ಇದು ಕಾಲ್ತುಳಿತ ಘಟಿಸುವ ಸಂಚು ಇರಬಹುದು, ಎಂದು ಪೊಲೀಸರು ಶಂಕಿಸಿದ್ದಾರೆ.