ಬಹುತೇಕ ಸಿಖ್ಖರು ಖಲಿಸ್ತಾನದ ಬೇಡಿಕೆಯನ್ನು ಬೆಂಬಲಿಸುವುದಿಲ್ಲ.
ವಾಷಿಂಗ್ಟನ್ (ಅಮೇರಿಕಾ) – ಬಹುತೇಕ ಸಿಖ್ಖರು ಖಲಿಸ್ತಾನ್ ಬೇಡಿಕೆಯನ್ನು ಬೆಂಬಲಿಸುವುದಿಲ್ಲ. ಸಿಖ್ಖರು ಭಾರತ ಮತ್ತು ಅಮೇರಿಕೆಯಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಅವರಲ್ಲಿ ಕೆಲವೇ ಕೆಲವು ಕೈಬೆರಳೆಣಿಕೆಯಷ್ಟು ಜನರು ಖಲಿಸ್ತಾನ್ ಅನ್ನು ಬೆಂಬಲಿಸುತ್ತಿದ್ದಾರೆ ಎಂದು ಅಮೇರಿಕೆಯಲ್ಲಿರುವ ‘ಸಿಖ್ ಆಫ್ ಅಮೇರಿಕಾ’ ಸಂಘಟನೆಯ ಮುಖಂಡ ಜಸ್ಸಿ ಸಿಂಹ ಇವರು ಹೇಳಿದರು. ಜಸ್ಸಿ ಸಿಂಹ ಇವರು ಪಂಜಾಬ್‌ನ ಯುವಕರು ಮಾದಕ ವ್ಯಸನದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಇದರಿಂದ ಹೊರ ತರಲು ಹಾಗೂ ರಾಜ್ಯದಲ್ಲಿನ ಇತರ ಸಮಸ್ಯೆಗಳ ಪರಿಹಾರಕ್ಕೆ ಭಾರತ ಸರಕಾರ ಅಭಿವೃದ್ಧಿಗೆ ಹಣಕಾಸು ನೆರವು ಒದಗಿಸಬೇಕು ಎಂಬ ಆಗ್ರಹವಿದೆ.
ಜಸ್ಸಿ ಸಿಂಹ ಇವರು ಮೋದಿ ಸರಕಾರದ ಬಗ್ಗೆ ಮಾತನಾಡುತ್ತಾ, ಸಿಖ್ಖರ ಸಂದರ್ಭದಲ್ಲಿ ಹಿಂದಿನ ಸರಕಾರಗಳಿಗೆ ಹೋಲಿಸಿದರೆ ಮೋದಿ ಸರಕಾರ ಬಹಳಷ್ಟು ಮಾಡಿದೆ. ಆದಾಗ್ಯೂ ಇನ್ನೂ ಕೆಲವು ವಿಷಯಗಳ ಬಗ್ಗೆ ಗಮನಹರಿಸುವ ಆವಶ್ಯಕತೆಯಿದೆ. ಅದರಲ್ಲಿ 1984ರ ಸಿಖ್ ವಿರೋಧಿ ದಂಗೆಯೂ ಒಂದು ಅಂಶವಾಗಿದೆ.
ಸಂಪಾದಕೀಯ ನಿಲುವುಇಂತಹ ಸಿಖ್ಖರು ಸಾರ್ವಜನಿಕರ ಮುಂದೆ ಬಂದು ಖಲಿಸ್ತಾನದ ಬೇಡಿಕೆ ಮಾಡುವವರನ್ನು ಏಕೆ ವಿರೋಧಿಸುವುದಿಲ್ಲ? |