‘ಫಾಲ್ತು’ (ನಿಷ್ಪ್ರಯೋಜಕ) ಫೆಮಿನಿಸಮ್‌ !

ಕಳೆದ ಅನೇಕ ವರ್ಷಗಳಿಂದ ಅಭಿನಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನೀನಾ ಗುಪ್ತಾ ಇವರು ಸಂದರ್ಶನವೊಂದರಲ್ಲಿ ‘ಫೆಮಿನಿಸಮ್‌ (ಸ್ತ್ರೀವಾದ) ಇದು ‘ಫಾಲ್ತು’ (ನಿಷ್ಪ್ರಯೋಜಕ) ವಿಷಯವಾಗಿದೆ’, ಎಂದು ಹೇಳಿದುದರಿಂದ ‘ಸ್ತ್ರೀವಾದ’ದ ಚರ್ಚೆ ಪುನಃ ಮುನ್ನೆಲೆಗೆ ಬಂದಿದೆ. ಒಳ್ಳೆಯದು, ನೀನಾ ಗುಪ್ತಾ ಇವರ ಮೇಲೆ ‘ಸ್ತ್ರೀದ್ರೋಹಿ’ ಅಥವಾ ‘ಸ್ತ್ರೀವಿರೋಧಿ’ ಎಂಬ ಮುದ್ರೆಯನ್ನು ಒತ್ತಲು ಸಾಧ್ಯವಿಲ್ಲ; ಏಕೆಂದರೆ ಜೀವನದಲ್ಲಿ ತೆಗೆದುಕೊಂಡ ಅನೇಕ ಸ್ಫೋಟಕ ನಿರ್ಧಾರಗಳಿಂದಾಗಿ ಅವರು ಮಹಿಳಾ ಸ್ವಾತಂತ್ರ್ಯದ ಪ್ರತಿಪಾದಕರ ಕೊರಳಿನ ತಾಯಿತವಾಗಿದ್ದಾರೆ. ಆದುದರಿಂದ ಸ್ತ್ರೀಮುಕ್ತಿವಾದಿಗಳು ಉಭಯಸಂಕಟಕ್ಕೆ ಸಿಲುಕಿದ್ದಾರೆ. ಹಾಗೆ ನೋಡಿದರೆ ಸ್ತ್ರೀಮುಕ್ತಿವಾದವು ಬಹಳ ಹಳೆಯ ವಿಷಯವಾಗಿದೆ. ‘ಸ್ತ್ರೀಯನ್ನು ಸ್ತ್ರೀಯೆಂದು ನೋಡದೇ ವ್ಯಕ್ತಿಯೆಂದು ನೋಡಿ’, ‘ಸ್ತ್ರೀಯರನ್ನು ಕಾಲುಗಳಲ್ಲಿನ ಚಪ್ಪಲಿಯೆಂದು ತಿಳಿಯುವುದನ್ನು ಬಿಟ್ಟುಬಿಡಿ’, ಎಂಬ ಸಂವಾದವು ಈಗ ಹಳೆಯದಾಗಿದ್ದು ಸದ್ಯ ‘ಮೈ ಬಾಡಿ, ಮೈ ಚಾಯ್ಸ್‌’ನ (ನನ್ನ ಶರೀರ, ನನ್ನ ಆಯ್ಕೆ) ಘೋಷಣೆಯನ್ನು ನೀಡಲಾಗುತ್ತಿದೆ. ಹೀಗಿದ್ದರೂ ಕಳೆದ ಕೆಲವು ವರ್ಷಗಳಲ್ಲಿ ಸ್ತ್ರೀಮುಕ್ತಿವಾದದ ಟೊಳ್ಳುತನ ಬಹಿರಂಗವಾಗುತ್ತಿದೆ. ಇದು ಪಾಶ್ಚಿಮಾತ್ಯ ದೇಶಗಳಿಂದ ಭಾರತಕ್ಕೆ ಆಮದು ಮಾಡಿದ ಚಳುವಳಿಯಾಗಿದೆ. ಈ ಚಳುವಳಿ ೧೮೪೮ ರಲ್ಲಿ ಅಮೇರಿಕ ದಲ್ಲಿ ಆರಂಭವಾಯಿತು. ಭಾರತದಲ್ಲಾಗಲಿ ಅಥವಾ ಜಾಗತಿಕ ಸ್ತರದಲ್ಲಾಗಲಿ ಸ್ತ್ರೀಯರಿಗೆ ಪುರುಷರಷ್ಟೇ ಸಮಾನ ಅಧಿಕಾರ ಸಿಗಬೇಕೆಂದು ಹಮ್ಮಿಕೊಂಡ ಚಳುವಳಿಯು ಇಂದು ದಾರಿ ತಪ್ಪಿದ ಮತ್ತು ಸಮಾಜಘಾತವಾಗಿದೆ. ಈ ಚಳುವಳಿಯಿಂದಾಗಿ ಪುರುಷಪ್ರಾಬಲ್ಯವು ಈಗ ಸ್ತ್ರೀಪ್ರಾಬಲ್ಯಕ್ಕೆ ಬದಲಾಗಿದೆ. ಯಾವುದೇ ಸಾಮಾಜಿಕ ಅಥವಾ ಇತರ ಚಳುವಳಿಗಳ ಮೇಲೆ ಸಾಮ್ಯವಾದಿಗಳ ಪ್ರಭಾವ ಬೀರಿದಾಗ ಆ ಚಳುವಳಿಯು ಸಮಾಜದ ಮೂಲದಲ್ಲಿ ಮೂಡುತ್ತದೆ ಇದು ಇಂದಿನವರೆಗಿನ ಇತಿಹಾಸವಾಗಿದೆ. ಸ್ತ್ರೀಮುಕ್ತಿ ಚಳುವಳಿಯು ಸಹ ಇದೇ ರೀತಿ ಆಗಿದೆ. ಈ ಚಳುವಳಿ ಎಂದರೆ ಮಾರ್ಕ್ಸ್‌ವಾದದ ಸಂತಾನವಾಗಿದೆ ! ಅಮೇರಿಕದಲ್ಲಿ ಈ ಚಳುವಳಿಯ ಮೊದಲು ಸ್ವಲ್ಪ ಪ್ರಮಾಣದಲ್ಲಿ ಕುಟುಂಬವ್ಯವಸ್ಥೆ ಉಳಿದುಕೊಂಡಿತ್ತು; ಆದರೆ ಈ ಚಳುವಳಿಯಿಂದಾಗ ಅದು ನೆಲಕ್ಕುರುಳಿದೆ. ಈ ಚಳುವಳಿ ಅಲ್ಲಿನ ಸ್ತ್ರೀಯರನ್ನು ಸ್ವತಂತ್ರವಲ್ಲ, ಆದರೆ ನಿರಂಕುಶ, ವಿಕೃತ ಮತ್ತು ಸ್ವಾರ್ಥಿಯನ್ನಾಗಿಸಿದೆ. ಈ ನಿರೀಕ್ಷಣೆ ಅಲ್ಲಿನ ಸ್ತ್ರೀವಿರೋಧಿ ಮಂಡಳಿಯದ್ದಾಗಿರದೇ ಅಮೇರಿಕದ ಸ್ತ್ರೀಮುಕ್ತಿ ಚಳುವಳಿಯ ಹರಿಕಾರ ಕೇಟ್‌ ಮಿಲೆಟ್‌ ಇವರ ಸಹೋದರಿ ಮ್ಯಲರಿ ಮಿಲೆಟ್‌ ಇವರದ್ದಾಗಿದೆ.

ಸ್ತ್ರೀಮುಕ್ತಿವಾದಿಗಳಿಗೆ ಕೇಟ್‌ ಮಿಲೆಟ್‌ ದೇವತೆಯಾಗಿದ್ದಾರೆ. ಕೆಟ್‌ ಮಿಲೆಟ್‌ ಇವರು ಕೇವಲ ಅಮೇರಿಕದಲ್ಲಷ್ಟೇ ಅಲ್ಲದೇ, ಜಗತ್ತಿನಾದ್ಯಂತದ ಸ್ತ್ರೀಮುಕ್ತಿ ಚಳುವಳಿಗೆ ಬಲಿಷ್ಠ ಧ್ವನಿಯಾಗಿದ್ದರು. ಅವರ ‘ಸೆಕ್ಸುವಲ್‌ ಪಾಲಿಟಿಕ್ಸ್‌’ ಈ ಪುಸ್ತಕವು ಇಡೀ ಸ್ತ್ರೀಮುಕ್ತಿವಾದಿಗಳಿಗಾಗಿ ಪವಿತ್ರ ಗ್ರಂಥವೆಂದು ನಂಬಲಾಗುತ್ತದೆ. ಮ್ಯಲರಿ ಮಿಲೆಟ್‌ ಇವರು ಸಹ ಸ್ತ್ರೀವಾದಿಯಾಗಿದ್ದಾರೆ. ಕೇಟ್‌ ಮಿಲೆಟ್‌ ಇವರು ಅಮೇರಿಕದಲ್ಲಿ ಸ್ತ್ರೀಮುಕ್ತಿ ಚಳುವಳಿಯನ್ನು ಆರಂಭಿಸಿದಾಗ ಕೆಲವು ಸಮಯ ಮ್ಯಲರಿ ಮಿಲೆಟ್‌ ಸಹ ಅವರೊಂದಿಗಿದ್ದರು; ಆದರೆ ಈ ಚಳುವಳಿಯ ಟೊಳ್ಳುತನ ಮತ್ತು ಅದಕ್ಕಿಂತಲೂ ಹೆಚ್ಚು ಸಮಾಜಘಾತಕ ಸ್ವರೂಪ ಬಹಿರಂಗವಾದಾಗ ಅವರು ಈ ಚಳುವಳಿಯ ವಿರುದ್ಧ ಧ್ವನಿಯನ್ನು ಎತ್ತಿದರು. ಆದುದರಿಂದಲೇ ಅವರ ಅಭಿಪ್ರಾಯಗಳು ಸಮಸ್ತ ಸ್ತ್ರೀಮುಕ್ತಿವಾದಿಗಳ ಕಣ್ಣುಗಳಲ್ಲಿ ಅಂಜನ ಹಾಕಿದಂತಾಗುತ್ತದೆ.

ಸ್ತ್ರೀಮುಕ್ತಿ ಚಳುವಳಿಯ ವೈಫಲ್ಯ !

ಮ್ಯಲರಿ ಮಿಲೆಟ್‌ ಇವರು ನೀಡಿದ ಸಂದರ್ಶನದಲ್ಲಿ ಅಥವಾ ಅವರು ಮಂಡಿಸಿದ ವಿಚಾರಗಳನ್ನು ಆರಂಭದಿಂದಲೇ ಓದಬೇಕು. ಇದರಿಂದ ಸ್ತ್ರೀಮುಕ್ತಿ ಚಳುವಳಿಯ ಭೀಕರ ಸ್ವರೂಪ ನಮ್ಮ ಗಮನಕ್ಕೆ ಬರುತ್ತದೆ. ಅವರು ಮಂಡಿಸಿದ ವಿಚಾರಗಳಲ್ಲಿ ಕೇಟ್‌ ಮಿಲೆಟ್‌ರ ಬಗ್ಗೆ ಕಹಿತನ ಅಥವಾ ಮತ್ಸರವಿಲ್ಲ. ಆ ವಿಚಾರಗಳು ಸ್ಪಷ್ಟವಾಗಿದ್ದು ಅದರಲ್ಲಿ ಅವರ ವೈಚಾರಿಕ ಸುಸ್ಪಷ್ಟತೆ ಗಮನಕ್ಕೆ ಬರುತ್ತದೆ. ‘ಜಗತ್ತಿನಲ್ಲಿ ಎಲ್ಲ ಕಾನೂನುಗಳನ್ನು ಪುರುಷರು ಮಾಡಿದುದರಿಂದ ಅವುಗಳನ್ನು ಪಾಲಿಸಬೇಡಿ. ಅದನ್ನು ಖಂಡಿಸಲು ಅಸಭ್ಯತೆಯಿಂದ ವರ್ತಿಸಿ’, ಎಂಬ ಆಘಾತಕಾರಿ ಶಿಕ್ಷಣವನ್ನು ಕೇಟ್‌ ಮಿಲೆಟ್‌ ಇವರು
ನೀಡಿದ್ದಾರೆ. ಇದರಿಂದ ಸಮಾಜದಲ್ಲಿ ಸ್ವೇಚ್ಛಾಚಾರ ಉದ್ಭವಿಸಿದೆ, ಎಂದು ಮ್ಯಲರಿ ಮಿಲೆಟ್‌ ಇವರ ಸ್ಪಷ್ಟ ಅಭಿಪ್ರಾಯವಿದೆ !

‘ಕೆಟ್‌ ಮಿಲೆಟ್‌ ಇವರ ಸ್ತ್ರೀಮುಕ್ತಿ ಚಳುವಳಿಯು ಕುಟುಂಬದಿಂದ ತಾಯಿಯನ್ನು ಕಿತ್ತುಕೊಂಡಿದೆ’, ಎಂಬ ಅವರ ಅಭಿಪ್ರಾಯದಿಂದ ಈ ಆಂದೋಲನವು ಸಮಾಜದ ಮೇಲೆ ಎಷ್ಟು ಪರಿಣಾಮವನ್ನು ಬೀರಿದೆ’, ಎಂಬುದು ನಮಗೆ ಅರಿವಾಗುತ್ತದೆ.

ಕುಫರಮನ್‌ರ ಕಾಳಜಿ !

ಈಗ ೧೯೬೦ ರ ದಶಕದ ಸ್ತ್ರೀಮುಕ್ತಿವಾದಿ ಬ್ರಿಟಿಷ್‌ ಲೇಖಕಿ ಜೆನೆಟ್‌ ಕುಫರಮನ್‌ ಇವರು ಮಂಡಿಸಿದ ವಿಚಾರಗಳ ಕಡೆಗೆ ಹೊರಳೋಣ ! ಅವರು ಸ್ತ್ರೀಮುಕ್ತಿ ಚಳುವಳಿ ಯಿಂದ ಮಹಿಳೆಯರಲ್ಲಿ ಉದ್ಭವಿಸಿದ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಈ ಚಳುವಳಿಯಿಂದಾಗಿ ಸ್ತ್ರೀಯರು ಭಾವನಾತ್ಮಕವಾಗಿ ಬಳಲಿದ್ದಾರೆ ಎಂದು ಅವರು ಹೇಳುತ್ತಾರೆ. ‘ಸಮಾನತೆಗಾಗಿ ನಾನು ನಡೆಸಿದ ಹೋರಾಟಕ್ಕೆ ನನ್ನ ಮೊಮ್ಮಗಳು ಬೆಲೆ ತೆರಬೇಕೆ ?’, ಎಂಬ ಚಿಂತೆಯು ಕುಫರಮನ್‌ ಇವರನ್ನು ದಿಗಿಲುಗೊಳಿಸುತ್ತಿದೆ. ‘ಸ್ತ್ರೀವಾದದಿಂದ ಇಂದಿನ ಹುಡುಗಿಯರ ಜೀವನದಲ್ಲಾದ ಉತ್ಕ್ರಾಂತಿಯನ್ನು ನೋಡಿ ನನ್ನ ಮನಸ್ಸು ಕಂಪಿಸುತ್ತದೆ. ಸಮಾನತೆಯ ಹೋರಾಟದಲ್ಲಿ ಇಂದಿನ ಯುವತಿಯರಿಗೆ ಲಾಭವಾಯಿತೇ ಅಥವಾ ಹಾನಿ ?’, ಎಂಬುದನ್ನು ಈಗ ಪರಿಶೀಲಿಸುವುದು ಆವಶ್ಯಕವಾಗಿದೆ ಎಂದು ಅನಿಸುತ್ತದೆ. ಸ್ತ್ರೀಮುಕ್ತಿ ಚಳುವಳಿಯು ಇಂದಿನ ಮಹಿಳೆಯರಿಗೆ ಹಕ್ಕು ನೀಡಿತು; ಆದರೆ ಅವರ ಜೀವನವು ಕ್ಲಿಷ್ಟಕರ ಮತ್ತು ದುಃಖದಾಯಕವಾಗಿದೆ. ಇದರಿಂದ ಸಮಾನತೆಯಿಂದ ದೊರಕಿದ ಅವಕಾಶ ಬಹಳ ಕಡಿಮೆ ಎಂದು ಸಾಬೀತಾಗಿದೆ’, ಎಂದು ಕುಫರಮನ್‌ ಇವರಿಗೆ ಅನಿಸುತ್ತದೆ.

ಮ್ಯಲರಿ ಮಿಲೆಟ್‌ ಅಥವಾ ಜೆನೆಟ್‌ ಕುಫರಮನ್‌ ಇವರ ವಿಚಾರಗಳು ಪ್ರತಿಯೊಬ್ಬ ಸ್ತ್ರೀಮುಕ್ತಿವಾದಿಯನ್ನು ಚಿಂತನೆಗೆ ಪ್ರೇರೇಪಿಸುತ್ತದೆ. ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡುವುದು ಆವಶ್ಯಕವೇ ಆಗಿದೆ; ಆದರೆ ಸ್ತ್ರೀಯರಿಗೆ ಹಕ್ಕು ದೊರಕಿಸಿಕೊಡುವಾಗ ಇತರರ ಹಕ್ಕನ್ನು ನಾವು ಕಸಿದು ಕೊಳ್ಳುತ್ತಿಲ್ಲವಲ್ಲ ? ಎಂದೂ ನೋಡಬೇಕು. ಸ್ತ್ರೀಮುಕ್ತಿ ಚಳುವಳಿಯು ನಿರ್ದಿಷ್ಟವಾಗಿ ಇಲ್ಲಿಯೇ ಎಡವಿದೆ. ಸ್ತ್ರೀಯರನ್ನು ಬಲಿಷ್ಠ ಮಾಡುವಾಗ ಪುರುಷರನ್ನು ‘ಖಳನಾಯಕ’ನೆಂದು ತೋರಿಸಲಾಯಿತು. ಮನೋರಂಜನೆ ಸೃಷ್ಟಿ, ಸಾಹಿತ್ಯ ಇತ್ಯಾದಿ ವಿವಿಧ ಮಾಧ್ಯಮಗಳಿಂದ ಸತತವಾಗಿ ಅದನ್ನು ಸಮಾಜದ ಮನಸ್ಸಿನಲ್ಲಿ ಬಿಂಬಿಸಲಾಯಿತು. ಆದುದರಿಂದ ಸಮಾನತೆಯ ಈ ಹೋರಾಟ ದಾರಿ ತಪ್ಪಿತು, ಸ್ತ್ರೀವರ್ಚಸ್ಸಿನ ಹೋರಾಟ ಆರಂಭವಾಯಿತು. ‘ಸ್ತ್ರೀ-ಪುರುಷರು ಸಮಾನರಾಗಿರದೇ ಸ್ತ್ರೀಯರು ಪುರುಷರಿಗಿಂತ ಬಹಳ ವಿಷಯಗಳಲ್ಲಿ ಬಲಿಷ್ಠ ಇದ್ದಾರೆ’, ಎಂದು ಹೇಳುವ ಸ್ಪರ್ಧೆಯು ಸ್ತ್ರೀಮುಕ್ತಿವಾದಿಗಳಲ್ಲಿ ಹುಟ್ಟಿಕೊಂಡಿತು. ಆದುದರಿಂದ ಸಮಾಜದಲ್ಲಿ ಮೂಡಿದ ಒಡಕು ಎಲ್ಲರ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆ ಯಲ್ಲಿ ನೀನಾ ಗುಪ್ತಾ ಇವರು ‘ಫೆüಮಿನಿಸಮ್‌’ಅನ್ನು ನಿಷ್ಪ್ರಯೋಜಕ ಎಂದು ಕರೆದರೆ ಸ್ತ್ರೀಮುಕ್ತಿವಾದಿಗಳಿಗೆ ಸಿಟ್ಟು ಗೊಳ್ಳಬೇಕಾಗಿಲ್ಲ. ‘ಸ್ತ್ರೀಯನ್ನು ಯಾವುದರಿಂದ ಮುಕ್ತ ಮಾಡಬೇಕು’, ಈ ಸಂದರ್ಭದಲ್ಲಿ ಸದ್ಯ ಸ್ತ್ರೀಮುಕ್ತವಾದಿಗಳಲ್ಲಿ ಗೊಂದಲವಿರುವುದು ಕಂಡು ಬರುತ್ತದೆ. ಆದುದರಿಂದ ಸ್ತ್ರೀಮುಕ್ತಿಯ ಗುತ್ತಿಗೆ ತೆಗೆದುಕೊಂಡವರು ಈ ಚಳುವಳಿಯನ್ನು ವಿರೋಧಿಸುವವರ ಮೇಲೆ ಬೆಂಕಿಯನ್ನು ಕಾರುವ ಬದಲು ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕು. ‘ಸ್ತ್ರೀಯರ ಕಲ್ಯಾಣ ಮತ್ತು ಅವರ ಉತ್ಕರ್ಷ ಯಾವುದರಲ್ಲಿದೆ ? ಮತ್ತು ಈ ಉತ್ಕರ್ಷ ಇಂತಹ ಚಳುವಳಿಗಳಿಂದ ಸಾಧ್ಯವಾಗಬಹುದೇ ?’, ಎಂಬ ವಿಚಾರ ಮಾಡುವ ಸಮಯ ಬಂದಿದೆ.

ಸಂಘಟಿತ ಶಕ್ತಿಯ ಮಹತ್ವವನ್ನು ಹಿಂದೂಗಳು ಯಾವಾಗ ತಿಳಿದುಕೊಳ್ಳುವರು ?

ಮುಸಲ್ಮಾನರು ಮತ್ತು ಕ್ರೈಸ್ತರು ಹಿಂದೂಗಳಿಗಿಂತ ಬಹಳ ಕಡಿಮೆ ಸಂಖ್ಯೆಯಲ್ಲಿದ್ದರೂ, ಅವರ ಧಾರ್ಮಿಕಶ್ರದ್ಧೆಗಳ ಬಗ್ಗೆ ಪ್ರಶ್ನೆಯನ್ನು ಎತ್ತಿದಾಗ, ಅವರು ಹಿಂದೂಗಳಿಗಿಂತ ಅನೇಕ ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟಿಸುತ್ತಾರೆ ! ಆದ್ದರಿಂದ ಆಡಳಿತಗಾರರು ಅವರ ಧರ್ಮವನ್ನು ಕಾಪಾಡಲು ಜಾಗೃತರಾಗಿರುತ್ತಾರೆ. ಮುಸಲ್ಮಾನರು ಮತ್ತು ಕ್ರೈಸ್ತರು ಅರ್ಥ ಮಾಡಿಕೊಂಡಂತೆ ಸಂಘಟಿತ ಶಕ್ತಿಯ ಮಹತ್ವವನ್ನು ಹಿಂದೂಗಳು ಯಾವಾಗ ಅರ್ಥಮಾಡಿಕೊಳ್ಳುತ್ತಾರೆ ?