ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಇವರು ಯಾವ ರೀತಿ ವಿಷಪೂರಿತ ಮತ್ತು ದ್ವೇಷಪೂರಿತ ಭಾಷಣ ಮಾಡಿ ಸನಾತನ ಧರ್ಮವನ್ನು ಕೊನೆಗಾಣಿಸುವ ಭಾಷೆಯನ್ನು ಮಾಡಿದ್ದರೋ, ತಮಿಳುನಾಡು ದ್ರಾವಿಡ ನಾಡು ಎಂದು ಜಂಬ ಕೊಚ್ಚಿಕೊಂಡಿದ್ದರೋ; ವಾಸ್ತವದಲ್ಲಿ ಆ ಭೂಮಿಯು ಅನೇಕ ಪ್ರಸಿದ್ಧ ದೇವಾಲಯಗಳ ಭೂಮಿಯಾಗಿದೆ. ಹೀಗಿದ್ದರೂ, ಅವರಂತಹ ರಾಜಕಾರಣಿಗಳಿಂದ ಈ ಭೂಮಿಯಲ್ಲಿ ವಾಸಿಸುವ ಕೆಲವು ಜನರ ಮಾನಸಿಕತೆಯೂ ಪ್ರತ್ಯೇಕತಾವಾದಿಯಾಗುತ್ತಾ ಹೋಗುತ್ತಿದೆ. ತಮಿಳುನಾಡಿನಲ್ಲಿ ಪ್ರವಾಸ ಮಾಡುವಾಗ ನನಗೆ ಇದರ ಅನುಭವ ಬಂದಿತು. ಆದರೆ ಕೆಲವು ಜನರಲ್ಲಿ ಮಾತ್ರ ದೇಶಹಿತದ ಮಾನಸಿಕತೆ ಇರುವುದು ಗಮನಕ್ಕೆ ಬಂದಿತು.
೧. ಹಿಂದಿ ಮತ್ತು ಹಿಂದೂ ವಿರೋಧದ ಮೂಲ – ಪೆರಿಯಾರ್ !
ಇ.ವಿ. ರಾಮಸಾಮಿ ನಾಯಕರ್ ಇವರಿಗೆ ಕೆಲವು ತಮಿಳರು ಪೆರಿಯಾರ್ (ಗೌರವಾನ್ವಿತ ವ್ಯಕ್ತಿ ಎಂದರ್ಥ) ಎಂಬ ಬಿರುದನ್ನು ನೀಡಿದರು. ಅವರು ೧೮೭೯ ರಲ್ಲಿ ತಮಿಳುನಾಡಿನ ಈರೋಡಾದಲ್ಲಿ ಜನಿಸಿದರು. ಅವರ ಮನೆಯಲ್ಲಿ ಧಾರ್ಮಿಕ ವಾತಾವರಣವಿದ್ದರೂ ಅವರು ಬುದ್ಧಿಪ್ರಾಮಾಣ್ಯವಾದಿಗಳಾಗಿದ್ದರು. ಅವರು ಹಿಂದೂ ಧರ್ಮಗ್ರಂಥಗಳು ಮತ್ತು ಧರ್ಮೋಪದೇಶ ಸತ್ಯತೆಯನ್ನು ಪ್ರಶ್ನಿಸುತ್ತಿದ್ದರು ಮತ್ತು ಪರಸ್ಪರ ವಿರೋಧಾಭಾಸಗಳು ಕಂಡು ಬಂದರೆ ಅವುಗಳನ್ನು ಲೇವಡಿ ಮಾಡುತ್ತಿದ್ದರು. ಅವರು ಹಿಂದೂ ಧರ್ಮಗ್ರಂಥಗಳನ್ನು ಸುಟ್ಟರು. ತಥಾಕಥಿತ ಬ್ರಾಹ್ಮಣವಾದವನ್ನು ವಿರೋಧಿಸಿದರು. ರಾವಣನನ್ನು ನಾಯಕನೆಂದು ಪರಿಗಣಿಸಿದರು. ಅವರು ತಂದೆಯೊಂದಿಗಿನ ಜಗಳದ ಕಾರಣದಿಂದ ಮನೆ ಬಿಟ್ಟು ಕಾಶಿಗೆ ಯಾತ್ರೆಗೆ ಹೋದರು. ಅಲ್ಲಿ ಅವರು ಜಾತಿ ವ್ಯವಸ್ಥೆ ಎದುರಿಸುವಂತಹ ಒಂದು ಪ್ರಸಂಗ ಘಟಿಸಿತು ಮತ್ತು ತದನಂತರ ಅವರು ಸಂಪೂರ್ಣ ನಾಸ್ತಿಕರಾದರು ಎಂದು ಹೇಳಲಾಗುತ್ತದೆ. ಅನಂತರ ಅವರ ರಾಜಕೀಯ ಪಯಣ ಕಾಂಗ್ರೆಸ್‌ನಿಂದ ಪ್ರಾರಂಭವಾಯಿತು, ನಂತರ ‘ಜಸ್ಟೀಸ್ ಪಾರ್ಟಿ’ಯ ಅಧ್ಯಕ್ಷರಾದರು. ಇದೇ ಪಕ್ಷದ ಹೆಸರನ್ನು ನಂತರ ‘ದ್ರಾವಿಡ್ ಕಳಘಮ್’ ಎಂದು ಬದಲಾಯಿಸಲಾಯಿತು. ಅವರ ಮೊದಲ ಪತ್ನಿ ತೀರಿಕೊಂಡ ನಂತರ ತಮಗಿಂತ ೪೦ ವರ್ಷ ಕಿರಿಯ ಹುಡುಗಿಯನ್ನು ಮದುವೆಯಾದರು. ಆ ಕಾರಣದಿಂದ ಮತ್ತು ಇನ್ನಿತರ ಕೆಲವು ಕಾರಣಗಳಿಂದಾಗಿ ‘ದ್ರಾವಿಡ ಕಳಘಮ್’ ಪಕ್ಷದ ಪದಾಧಿಕಾರಿಗಳೊಂದಿಗೆ ವಿವಾದ ನಡೆದು ‘ದ್ರಾವಿಡ ಕಳಘಮ್’ ಪಕ್ಷ ಇಬ್ಭಾಗವಾಗಿ ಎರಡು ಪಕ್ಷಗಳಾದವು. ಪೆರಿಯಾರ್ ತಮ್ಮ ಜೀವನದುದ್ದಕ್ಕೂ ಹಿಂದೂ ಧರ್ಮವನ್ನು ದ್ವೇಷಿಸುತ್ತಿದ್ದರು ಮತ್ತು ತಮ್ಮ ಅನುಯಾಯಿಗಳಿಗೂ ಅದೇ ರೀತಿ ಕಲಿಸಿದರು. ಪೆರಿಯಾರ್ ಅವರು ಹಿಂದೂ ದೇವತೆಗಳ ವಿಗ್ರಹಗಳನ್ನು ಕೈಗಾಡಿಯಲ್ಲಿ ಮುಖ್ಯ ಮಾರುಕಟ್ಟೆಗೆ ತಂದು ಅವುಗಳನ್ನು ಸುತ್ತಿಗೆಯಿಂದ ಒಡೆಯುತ್ತಾ ಟೀಕಿಸುತ್ತಿದ್ದರು ಎಂದು ಹೇಳಲಾಗುತ್ತದೆ.
೨. ಹಿಂದಿ ಭಾಷೆಗೆ ವಿರೋಧ
೧೯೩೭ ರಲ್ಲಿ, ಸಿ. ರಾಜಗೋಪಾಲಚಾರಿಯವರು ಅಂದಿನ ‘ಮದ್ರಾಸ್ ಪ್ರೆಸಿಡೆನ್ಸಿ’ಯ ಮುಖ್ಯಮಂತ್ರಿಗಳಾದರು. ಆಗ ಅವರು ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯ ಗೊಳಿಸಿದರು. ಪೆರಿಯಾರ್ ಇದನ್ನು ಬಲವಾಗಿ ವಿರೋಧಿಸಿದರು. ಅವರು ತೀವ್ರ ಆಂದೋಲನಗಳನ್ನು ಪ್ರೋತ್ಸಾಹಿಸಿದರು. ‘ಹಿಂದಿ ಭಾಷೆ ಜಾರಿಗೊಂಡರೆ, ತಮಿಳು ಸಂಸ್ಕ್ರತಿ ನಾಶವಾಗಬಹುದು, ತಮಿಳರು ಉತ್ತರ ಭಾರತೀಯರ ಅಧೀನರಾಗಬಹುದು’ ಎಂದು ಅವರು ನಂಬಿದ್ದರು. ಹಿಂದೂಗಳೆಂದರೆ ಆರ್ಯರು ಮತ್ತು ದ್ರಾವಿಡರು ಬೇರೆ. ಸ್ಥಳೀಯ ತಮಿಳರೇ ದ್ರಾವಿಡರೆಂಬ ವಿಷವನ್ನು ಪೆರಿಯಾರ್ ಅವರು ತಮಿಳರ ಮನಸ್ಸಿನಲ್ಲಿ ತುಂಬಿದರು. ಅವರು ಹಿಂದೂ ಧರ್ಮವಿರೋಧಿ ಪುಸ್ತಕಗಳನ್ನು ಬರೆದಿದ್ದಾರೆ. ದ್ರಾವಿಡ ಎಂಬ ಹೆಸರಿನಲ್ಲಿ ತಮಿಳುನಾಡಿನಲ್ಲಿ ಎರಡು ಪಕ್ಷಗಳಿವೆ. ಅದರಲ್ಲಿ ಒಂದು ಡಿ.ಎಂ.ಕೆ. ಮತ್ತು ಎರಡನೇಯದು ಎ.ಐ.ಎ.ಡಿ.ಎಂ.ಕೆ. ಎರಡೂ ಪಕ್ಷಗಳು ಬಿಜೆಪಿ ವಿರೋಧಿಯಾಗಿದ್ದರೂ ಜಯಲಲಿತಾ ಅವರ ಎ.ಐ.ಎ.ಡಿ.ಎಂ.ಕೆ. ಪಕ್ಷ ಭಾಜಪ ಪಕ್ಷದ ಪರವಾಗಿತ್ತು.
೩. ದೇವಾಲಯಗಳ ಭೂಮಿಯಾಗಿರುವ ತಮಿಳುನಾಡು ರಾಜ್ಯ !
ತಮಿಳುನಾಡಿನಲ್ಲಿ ಅತ್ಯಂತ ಪ್ರಾಚೀನ ೩೩ ಸಾವಿರ ಹಿಂದೂ ದೇವಸ್ಥಾನಗಳಿವೆ, ಅವುಗಳಲ್ಲಿ ಕೆಲವು ೩ ಸಾವಿರ ವμರ್Àಗಳಿಗಿಂತಲೂ ಹಳೆಯದಾಗಿವೆ. ತಮಿಳುನಾಡಿನಲ್ಲಿ ಸದ್ಯಕ್ಕೆ ೩ ಲಕ್ಷದ ೯೦ ಸಾವಿರದ ೬೧೫ ದೇವಾಲಯಗಳಿವೆ. ಅವುಗಳಲ್ಲಿ ಪ್ರಸಿದ್ಧವಾದ ರಾಮೇಶ್ವರಂ ಶಿವಲಿಂಗ ದೇವಸ್ಥಾನ, ವಿಶ್ವವಿಖ್ಯಾತ ಮಧುರೈನ ಮೀನಾಕ್ಷಿ ದೇವಸ್ಥಾನ, ವೆಲ್ಲೂರಿನ ಶ್ರೀ ಲಕ್ಷ್ಮೀನಾರಾಯಣನ ಸುವರ್ಣ ದೇವಸ್ಥಾನ, ಬೃಹದಾಕಾರದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಕನ್ಯಾಕುಮಾರಿ ದೇವಸ್ಥಾನ, ಮಹಾಬಲಿಪುರಂನ ದೇವಸ್ಥಾನ ಇತ್ಯಾದಿ ಒಳಗೊಂಡಿವೆ. ಕುಂಭಕೋಣಮ್ ಅನ್ನು ದೇವಾಲಯಗಳ ನಗರ ಎಂದು ಗುರುತಿಸಲಾಗುತ್ತದೆ, ಹಾಗೆಯೇ ಕಾಂಚೀಪುರಂನಲ್ಲಿ ಬಹಳ ಮತ್ತು ವೈಶಿμಟ್ಯ್Àಪೂರ್ಣ ದೇವಾಲಯಗಳಿವೆ. ತಮಿಳುನಾಡಿನಲ್ಲಿ ಹೆಚ್ಚುಕಡಿಮೆ ಪ್ರತಿಯೊಂದು ದೇವತೆಯ ವೈಶಿಷ್ಟ್ಯಪೂರ್ಣ ದೇವಸ್ಥಾನವಿದೆ. ಹೆಚ್ಚಿನ ದೇವಸ್ಥಾನಗಳು ಶಿವನಿಗೆ ಸಂಬಂಧಿಸಿದ್ದರೂ, ಭಗವಾನ ವಿಷ್ಣು, ಕಾರ್ತಿಕ ಸ್ವಾಮಿ, ಗಣಪತಿ, ಮಾರುತಿಯ ದೇವಾಲಯಗಳೂ ಇವೆ. ಭಾರತದಲ್ಲಿ ಅತಿ ಹೆಚ್ಚು ಹಿಂದೂ ದೇವಸ್ಥಾನಗಳನ್ನು ಹೊಂದಿರುವ ರಾಜ್ಯವನ್ನು ಅಲ್ಲಿನ ಹಿಂದೂ ವಿರೋಧಿ ಆಡಳಿತಗಾರರು ದ್ರಾವಿಡಸ್ಥಾನ, ದ್ರಾವಿಡಭೂಮಿ ಎಂದು ಪರಿಗಣಿಸಿರುವುದು, ಕೇವಲ ವಿರೋಧಾಭಾಸವಾಗಿದ್ದು, ಅದು ಹಿಂದೂ ಮತ್ತು ಹಿಂದಿ ಭಾಷಾ ವಿರೋಧದ ಪರಿಣಾಮವೇ ಆಗಿದೆ ಇದನ್ನು ಗಮನದಲ್ಲಿ ತೆಗೆದುಕೊಳ್ಳಬೇಕು.
೪. ಹಿಂದೂ ದೇವಸ್ಥಾನಗಳ ಸರಕಾರೀಕರಣ
ತಮಿಳುನಾಡಿನ ರಾಮೇಶ್ವರಂನಂತಹ ತೀರ್ಥಕ್ಷೇತ್ರದಲ್ಲಿ ರುವ ಅತಿಚಿಕ್ಕ ದೇವಸ್ಥಾನಗಳಲ್ಲಿಯೂ ನನಗೆ ಅನೇಕ ದೇಣಿಗೆ ಪೆಟ್ಟಿಗೆಗಳು (ಕಾಣಿಕೆ ಡಬ್ಬಿಗಳು) ಮತ್ತು ಅವುಗಳ ಮೇಲೆ ಕೆಲವು ಸಂಖ್ಯೆಗಳನ್ನು ಬರೆದಿರುವುದು ಕಂಡು ಬಂದಿತು. ಈ ವಿಷಯದಲ್ಲಿ ವಿಚಾರಿಸಿದಾಗ ಈ ದೇಣಿಗೆ ಪೆಟ್ಟಿಗೆಗಳು ಸರಕಾರದ್ದಾಗಿವೆ ಎಂದು ತಿಳಿದು ಬಂದಿತು. ಅಂದರೆ ಇಲ್ಲಿ ಭಕ್ತರು ಅರ್ಪಿಸಿದ ಹಣವನ್ನು ನೇರವಾಗಿ ಸರಕಾರದ ಖಜಾನೆಗೆ ಜಮೆ ಮಾಡುವ ವ್ಯವಸ್ಥೆ ಇದೆ. ಇಲ್ಲಿಯ ೩೬ ಸಾವಿರದ ೪೨೫ ದೇವಸ್ಥಾನಗಳು, ೫೬ ಮಠಗಳು, ೧೮೯ ಟ್ರಸ್ಟ್‌ಗಳು, ೧ ಸಾವಿರದ ೭೨೧ ಧಾರ್ಮಿಕ ಆಸ್ತಿ ಪಾಸ್ತಿಗಳು ಸರಕಾರದ ವಶದಲ್ಲಿವೆ. ದೇವಸ್ಥಾನಗಳ ಸಾವಿರಾರು ಎಕರೆ ಜಮೀನು ಸರಕಾರದ ವಶದಲ್ಲಿದೆ. ಅಂದರೆ, ಒಂದು ಕಡೆ ಸನಾತನ ಹಿಂದೂ ಧರ್ಮವನ್ನು ವಿರೋಧಿಸುವುದು, ತಥಾಕಥಿತ ದ್ರಾವಿಡ ಸಂಸ್ಕ್ರತಿಯನ್ನು ಪ್ರೋತ್ಸಾಹಿಸುವುದು ಮತ್ತು ಹಿಂದೂ ದೇವಸ್ಥಾನಗಳಲ್ಲಿನ ಹಣವನ್ನು ಲೂಟಿ ಮಾಡುವುದು. ಇಂತಹ ದ್ವಂದ್ವ ನಿಲುವು ತಮಿಳುನಾಡಿನಲ್ಲಿ ನಡೆಯುತ್ತಿದೆ. ದೇವಸ್ಥಾನಗಳಿಂದ ಸರಕಾರಕ್ಕೆ ಬಹಳ ಆದಾಯವಿದೆ. ಆದರೂ ಈ ದೇವಾಲಯಗಳು ಯಾವ ಧರ್ಮದ ಆಧಾರಶಿಲೆಯಾಗಿವೆಯೋ, ಆ ಧರ್ಮವನ್ನೇ ವಿರೋಧಿಸಲಾಗುತ್ತಿದೆ. ಇದು ಆಶ್ಚರ್ಯದ ಸಂಗತಿ ಆಗಿದೆ. ಅಲ್ಲದೆ ಇದರ ವಿರುದ್ಧ ಯಾರೂ ಧ್ವನಿ ಎತ್ತುವುದಿಲ್ಲ. ಇದು ಅದಕ್ಕಿಂತ ಹೆಚ್ಚು ಆಶ್ಚರ್ಯ ಮೂಡಿಸುತ್ತದೆ. ಶುಚಿಂದ್ರಮ್ ನಂತಹ ಮಾರುತಿ ದೇವಸ್ಥಾನಗಳಲ್ಲಿ ಅರ್ಚಕರು ದೇವರಿಗೆ ಅರ್ಪಿಸಲು ಬರುವ ಭಕ್ತರಿಗೆ ಬೆಣ್ಣೆ ಮಾರುವ ವ್ಯಾಪಾರ ಮಾಡಬೇಕಾಗುತ್ತಿದೆ; ಏಕೆಂದರೆ ದೇವಸ್ಥಾನದಲ್ಲಿ ಭಕ್ತರು ಅರ್ಪಿಸುವ ಕಾಣಿಕೆಗಳೆಲ್ಲವೂ ಸರಕಾರಿ ಖಜಾನೆಗೆ ಜಮೆ ಯಾಗುತ್ತವೆ. ತಮಿಳುನಾಡಿನ ಕೆಲವು ಪುರಾತನ ದೇವಾಲಯ ಗಳಲ್ಲಿ ಅರ್ಚಕರು ಪ್ರತಿ ತಿಂಗಳು ಕೇವಲ ೭೫೦ ರೂ.ಗಳ ಅತ್ಯಲ್ಪ ಬಿಡಿಗಾಸು ವೇತನವನ್ನು ಪಡೆಯುತ್ತಾರೆ. ಈ ವಿಷಯದಲ್ಲಿ ನ್ಯಾಯಾಲಯದಲ್ಲಿ ಸಂಬಂಧಪಟ್ಟ ಅರ್ಚಕರು ಪ್ರಕರಣ ದಾಖಲಿಸಿದ ಬಳಿಕ ಈ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಅರ್ಚಕರ ವೇತನವನ್ನು ಕಡಿಮೆಪಕ್ಷ ಪ್ರತಿ ತಿಂಗಳು ಕನಿಷ್ಠ ೧೦ ರಿಂದ ೧೨ ಸಾವಿರ ರೂಪಾಯಿ ಮಾಡಬೇಕು ಎನ್ನುವ ಬೇಡಿಕೆ ಇದೆ.
೫. ಹಿಂದಿ ಭಾಷಾ ವಿರೋಧದ ಪರಿಣಾಮ
ಚೆನೈನಲ್ಲಿ ಚೆನೈ ಹೆಸರು ಸೇರಿರುವ ೫ ಕ್ಕಿಂತ ಹೆಚ್ಚು ರೈಲು ನಿಲ್ದಾಣಗಳಿವೆ. ನನಗೆ ಇಲ್ಲಿಯ ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಹೋಗಬೇಕಾಗಿತ್ತು, ಆದುದರಿಂದ ನಾನು ಒಬ್ಬ ವ್ಯಕ್ತಿಗೆ ಹಿಂದಿಯಲ್ಲಿ ವಿಚಾರಿಸಿದಾಗ, ಅವನು ಬಹಳ ಕೋಪಗೊಂಡನು ಮತ್ತು ‘ನೀವು ವಿದ್ಯಾವಂತ ರಾಗಿದ್ದೀರಿ, ನಿಮಗೆ ಅರ್ಥ ಆಗಬೇಕಾಗಿತ್ತು’, ಇತ್ಯಾದಿ ಮಾತನಾಡತೊಡಗಿದನು. ಈ ಕಾರಣದಿಂದ ನಾನು ಆಂಗ್ಲ ಭಾಷೆಯಲ್ಲಿ ವಿಚಾರಿಸಬೇಕಾಗುತ್ತಿತ್ತು. ಚೆನೈಯಲ್ಲಿ ಹಿಂದಿಯ ಅಡಚಣೆ ಗಮನಕ್ಕೆ ಬಂದಿತು. ಒಂದು ಉಪಾಹಾರಗೃಹದಲ್ಲಿ ಊಟಕ್ಕಾಗಿ ನೌಕರನನ್ನು ಆಂಗ್ಲ ಭಾಷೆಯಲ್ಲಿ ಕೇಳಿದಾಗ, ಅವನಿಗೆ ಕೆಲವೊಂದು ಭಾಗ ಅರ್ಥವಾಯಿತು ಮತ್ತು ಕೆಲವೊಂದು ಭಾಗ ಅರ್ಥವಾಗಲಿಲ್ಲ. ಹಾಗಾಗಿ ಅವನು ಕೆಲವು ಪದಾರ್ಥಗಳನ್ನು ತಂದು ಕೊಟ್ಟನು. ಮುಂದಿನ ಭಾಗ ಅರ್ಥವಾಗದೇ ಇದ್ದಾಗ ಅವನು ಮಾಲೀಕನನ್ನು ಕರೆದನು, ಆದರೆ ಮಾಲೀಕನಿಗೆ ಆಂಗ್ಲ ಭಾಷೆ ಸ್ವಲ್ಪವೂ ತಿಳಿಯುವುದಿಲ್ಲ ಎಂದು ನನ್ನ ಗಮನಕ್ಕೆ ಬಂದಿತು. ಇದರಿಂದಾಗಿ ಗೋಡೆಯ ಮೇಲೆ ಹಾಕಿದ್ದ ಪದಾರ್ಥಗಳ ಚಿತ್ರವನ್ನು ತೋರಿಸಿ ‘ಇದು ಬೇಕಾಗಿದೆ’ ಎಂದು ಹೇಳಬೇಕಾಯಿತು. ಕನ್ಯಾಕುಮಾರಿಯ ಕೆಲವು ಒಳಗಿನ ಪ್ರದೇಶಗಳಿಗೆ ಹೋದಾಗ ಅಲ್ಲಿ ಹಿಂದಿಯಂತೂ ಇಲ್ಲವೇ ಇಲ್ಲ, ಆಂಗ್ಲ ಭಾಷೆಯೂ ಜನರಿಗೆ ಬರುವುದಿಲ್ಲ. ಇದರ ಪರಿಣಾಮದಿಂದ ಜನರೊಂದಿಗೆ ವ್ಯವಹರಿಸಲು ಬಹಳಷ್ಟು ಅಡಚಣೆಗಳು ಬರುತ್ತವೆ ಎಂಬುದು ಗಮನಕ್ಕೆ ಬಂದಿತು. ಇದರಿಂದಾಗಿ ಉಪಾಹಾರಗೃಹಗಳಲ್ಲಿ ಊಟ ಮತ್ತು ತಿಂಡಿಯನ್ನು ತರಿಸಿಕೊಳ್ಳುವಾಗ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ. ಹಿಂದಿಯಲ್ಲಿ ಮಾತನಾಡಿದರೆ, ಜನರು ನಿಮ್ಮನ್ನು ಬೇರೆ ಪ್ರದೇಶದಿಂದ ಬಂದವರು ಎಂಬಂತೆ ನೋಡುತ್ತಾರೆ.
೬. ಅನುಕೂಲಕ್ಕನುಸಾರ ಭಾಷಾಭಿಮಾನ
ತಮಿಳು ಜನರು ದುಬೈ ಮತ್ತು ಇತರ ಅರಬ ದೇಶಗಳಿಗೆ ಹೋದಾಗ ಆಗ ಅಲ್ಲಿ ಹಿಂದಿಯಲ್ಲಿ ಹೇಗೆ ಮಾತನಾಡುತ್ತಾರೆ ? ಎಂದು ರಾಮೇಶ್ವರಂ ಪ್ರವಾಸದಲ್ಲಿ ಭೇಟಿಯಾದ ಕೆಲವು ತಮಿಳುಭಾಷಿಗರು ಹೇಳಿದರು. ಭಾರತದಲ್ಲಿ ಮಾತ್ರ ಮಾತನಾಡುವುದಿಲ್ಲ. ರಾಮೇಶ್ವರಂ, ಕನ್ಯಾಕುಮಾರಿಯಂತಹ ದೊಡ್ಡ ತೀರ್ಥಕ್ಷೇತ್ರದಲ್ಲಿರುವ ತಮಿಳು ಜನರು ಹಿಂದಿಯಲ್ಲಿ ಮಾತನಾಡುತ್ತಾರೆ; ಏಕೆಂದರೆ ಇದು ಅವರ ಹೊಟ್ಟೆಪಾಡಿನ ಪ್ರಶ್ನೆಯಾಗಿರುವುದರಿಂದ ಅವರು ಪ್ರವಾಸಿಗರೊಂದಿಗೆ ಹಿಂದಿಯಲ್ಲಿ ಮಾತನಾಡಲೇ ಬೇಕಾಗುತ್ತದೆ. ತಮಿಳು ಭಾಷಿಗರು ನನ್ನೊಂದಿಗೆ ಮಾತನಾಡುತ್ತಾ, ‘ನಮಗೆ ಕೇಂದ್ರ ಸರಕಾರದ ಯೋಜನೆಯಡಿ ಹಿಂದಿಯನ್ನು ಉಚಿತವಾಗಿ ಕಲಿಯಬಹುದಾಗಿದೆ; ಆದರೆ ಇಲ್ಲಿನ ಆಡಳಿತದಾರರು ವಿಶೇಷವಾಗಿ ಸ್ಟಾಲಿನ್ ಹಣ ಕೊಟ್ಟು ಇಂಗ್ಲಿಷ ಕಲಿಯುವಂತೆ ಒತ್ತಡ ಹೇರುತ್ತಾರೆ’ ಎಂದು ಹೇಳಿದರು.
ತಮಿಳುನಾಡಿನ ಚರ್ಚ್ ಪುರಸ್ಕ್ರತ ಒಂದು ದೊಡ್ಡ ಶಿಕ್ಷಣ ಸಂಸ್ಥೆಯ ಕ್ರೈಸ್ತ ವ್ಯವಸ್ಥಾಪಕರು ಮಧುರೈನಿಂದ ರೇಣುಗುಂಠ ಪ್ರವಾಸದಲ್ಲಿ ನನ್ನ ಜೊತೆಗಿದ್ದರು. ಹಿಂದಿಯ ಬಗ್ಗೆ ಮಾತನಾಡಿದ ಅವರು, ‘ಚರ್ಚ್ ಶಾಲೆಗಳಲ್ಲಿ ನಾವು ಹಿಂದಿ ಭಾಷೆಯನ್ನು ಕಲಿಸುತ್ತಿದ್ದೇವೆ. ನನ್ನ ಮಕ್ಕಳಿಬ್ಬರೂ ಹಿಂದಿ ಕಲಿತು ಹಿಂದಿಯಲ್ಲಿ ಮಾತನಾಡುತ್ತಾರೆ; ಆದರೆ ರಾಜಕಾರಣಿಗಳು ಮಾತ್ರ ಇದಕ್ಕೆ ಅಡ್ಡಗಾಲಿಡುತ್ತಾರೆ. ನಮ್ಮಂತಹ ಪ್ರಜ್ಞಾವಂತರಿಂದ ಹಿಂದಿಗೆ ಬೇಡಿಕೆ ಇದೆ; ಆದರೆ ಹಿಂದಿವಿರೋಧಿ ಸರಕಾರ ಇದನ್ನು ವಿರೋಧಿಸುತ್ತಿದೆ’, ಎಂದು ಹೇಳಿದರು.
೭. ಜನರಲ್ಲಿಯೂ ಆಡಳಿತಗಾರರ ಪ್ರತ್ಯೇಕತಾವಾದಿ ಮಾನಸಿಕತೆ !
ಕನ್ಯಾಕುಮಾರಿಯಲ್ಲಿ ಭೇಟಿಯಾದ ಆಂಧ್ರಪ್ರದೇಶದ ಜನರು ಮಾತನಾಡಿ, ‘ಹೆಚ್ಚಿನ ತಮಿಳು ಜನರು ಪ್ರಾಬಲ್ಯತೆಯ ಮಾನಸಿಕತೆಯನ್ನು ಹೊಂದಿರುವುದರಿಂದ ಇತರೆ ೪ ಭಾಷಿಕರಿಂದ (ಮಲಯಾಳಂ, ಕನ್ನಡ, ತೆಲುಗು, ತುಳು) ತಮ್ಮನ್ನು ಪ್ರತ್ಯೇಕವೆಂದು ತಿಳಿದುಕೊಳ್ಳುತ್ತಾರೆ ಎಂದು ಅವರ ನೆರೆಯ ರಾಜ್ಯಗಳಿಗೆ ಅನಿಸುತ್ತದೆ’. ‘ತಮಿಳ ಸುಪ್ರಿಮಸಿ’ (ತಮಿಳು ಭಾಷೆಯನ್ನು ಎಲ್ಲಾ ಭಾಷೆಗಳಿಗಿಂತ ಶ್ರೇಷ್ಠ ಎಂದು ತಿಳಿದುಕೊಳ್ಳುವುದು) ಪ್ರಚಾರದಿಂದಾಗಿ ಜನಸಾಮಾನ್ಯರು ತಮಿಳು ಭಾಷೆ ಮತ್ತು ಸಂಸ್ಕ್ರತಿಯನ್ನು ಅತ್ಯಂತ ಪ್ರಾಚೀನವೆಂದು ತಿಳಿಯುತ್ತಾರೆ. ಕೆಲವು ತಿಂಗಳ ಹಿಂದೆ ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಒಂದು ತೀರ್ಪು ನೀಡುವಾಗ, ‘ಕೇವಲ ಸಂಸ್ಕೃತವಷ್ಟೇ ಅಲ್ಲ, ತಮಿಳು ಭಾಷೆಯೂ ದೇವರ ಭಾಷೆ ಆಗಿದೆ’ ಎಂದು ಹೇಳಿದ್ದರು. ಆದ್ದರಿಂದ ದೇಶಾದ್ಯಂತ ಇರುವ ಎಲ್ಲ ದೇವಸ್ಥಾನಗಳಲ್ಲಿ ತಮಿಳು ಭಾಷೆಯ ಸ್ತೋತ್ರಗಳನ್ನು ಹೇಳಬೇಕು ಎಂದು ಹೇಳಿದ್ದರು. ತಮಿಳು ಜನರು ದ್ರಾವಿಡ ಚಳವಳಿಯಿಂದಾಗಿ ತಮ್ಮನ್ನು ತಾವು ಶ್ರೇಷ್ಠರೆಂದು ತಿಳಿದುಕೊಳ್ಳುತ್ತಾರೆ. ಆದುದರಿಂದ ಇತರ ರಾಜ್ಯಗಳಾದ ಕೇರಳ ಮತ್ತು ಆಂಧ್ರಪ್ರದೇಶಗಳಿಂದ ತಮ್ಮನ್ನು ಪ್ರತ್ಯೇಕ ಎಂದು ತಿಳಿಯಲು ಪ್ರಾರಂಭಿಸಿದರು. ಈ ದ್ರಾವಿಡ ಭೂಮಿಯ ಆಗ್ರಹವು ಅವರನ್ನು ಪ್ರತ್ಯೇಕವಾಗಿಸಿತು. ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದರ ಸ್ಮಾರಕಕ್ಕೆ ಹೋಗಲು ಸರತಿ ಸಾಲಿನಲ್ಲಿ ನಿಂತಿದ್ದಾಗ ಒಂದು ಘಟನೆ ನಡೆಯಿತು. ತಮಿಳು ಮತ್ತು ತೆಲುಗು ಹೀಗೆ ಎರಡು ೫೦-೫೦ ಮಂದಿಯ ಎರಡು ಗುಂಪುಗಳು ಸರದಿ ಸಾಲಿನಲ್ಲಿ ಮುಂದೆ ಸರಿಯುತ್ತಿದ್ದವು. ಅವರಲ್ಲಿ ಒಬ್ಬ ತೆಲುಗು ವ್ಯಕ್ತಿಯಿಂದ ತಮಿಳು ವ್ಯಕ್ತಿಗೆ ದಬ್ಬಿದಂತಾಗಿ ಧಕ್ಕೆಯಾಯಿತು. ನಂತರ ಅವರ ನಡುವೆ ಪ್ರಾರಂಭವಾದ ಜಗಳವು ಅವರು ಪರಸ್ಪರ ದೂರವಾಗುವವರೆಗೂ ಮುಂದುವರೆಯಿತು. ವಿಶೇಷವೆಂದರೆ, ಇಬ್ಬರಿಗೂ ಪರಸ್ಪರರ ಭಾಷೆ ಅರ್ಥವಾಗುತ್ತಿರಲಿಲ್ಲ. ಆದರೆ, ‘ಇವನು ತೆಲುಗು ಆಗಿದ್ದು, ನಮ್ಮಲ್ಲಿಗೆ ಬಂದು ನಮಗೆ ದಾದಾಗಿರಿ ಮಾಡುತ್ತಿದ್ದಾನೆ’ ಎಂದು ತಮಿಳರು ಜಗಳವಾಡುತ್ತಿದ್ದರೆ, ತೆಲುಗರು ‘ತಮಿಳರ ದಬ್ಬಾಳಿಕೆಯನ್ನು ನಾವು ಸಹಿಸುವುದಿಲ್ಲ, ಇನ್ನೂ ಹೆಚ್ಚಿನ ಜನರನ್ನು ಕರೆತಂದು ನಿಮ್ಮನ್ನು ನೋಡಿಕೊಳ್ಳುತ್ತೇವೆ’, ಎಂದು ಹೇಳುತ್ತಿದ್ದರು.
೮. ತಮಿಳುನಾಡಿನ ಅತಿರೇಕದ ವ್ಯಕ್ತಿನಿಷ್ಠ
ರಾಮನಾಥಪುರದ ಅಂಗಡಿಗಳಲ್ಲಿ ದೇವತೆಗಳ ಚಿತ್ರಗಳಿಗಿಂತ ಸ್ಟಾಲಿನ್, ಕರುಣಾನಿಧಿಯ ಚಿತ್ರಗಳು ಅಧಿಕವಿವೆ. ತಮಿಳು ಜನರು ಸಿನಿಮಾ ನಟ, ನಟಿಯರನ್ನೇ ಸರ್ವಸ್ವ ಎಂದು ತಿಳಿದುಕೊಳ್ಳುತ್ತಾರೆ. ತಮಿಳುನಾಡಿನಲ್ಲಿ ಜಯಲಲಿತಾ ಮತ್ತು ಸದ್ಯದ ‘ಸೂಪರ್ ಸ್ಟಾರ್’ ರಜನಿಕಾಂತ್ ಇವರ ಮಂದಿರಗಳಿವೆ ಮತ್ತು ಜನರು ಅಲ್ಲಿ ಅವರ ಪೂಜೆಯನ್ನು ಮಾಡುತ್ತಾರೆ. ಅವರಿಗೆ ದೇವರ ಸ್ಥಾನಮಾನವಿದೆ. ಅವರಿಗೆ ಅಭಿಶೇಕವನ್ನೂ ಮಾಡಲಾಗುತ್ತದೆ. ಧಾರ್ಮಿಕ ಪರಂಪರೆ ಹೊಂದಿರುವ ತಮಿಳರು, ದ್ರಾವಿಡ ಭಾಷಿಕರ ಒತ್ತಾಯದಿಂದ, ಅತಿರೇಕದಿಂದ ಈ ರೀತಿ ಪತನಗೊಳ್ಳುತ್ತಿದ್ದಾರೆಂಬುದು ಅರಿವಾಯಿತು.
೯. ಬಹುಭಾಷಿಕ ನಗರಗಳ ಮಹತ್ವ ಹೆಚ್ಚಾಯಿತು !
ಕರ್ನಾಟಕದ ಬೆಂಗಳೂರು, ತೆಲಂಗಾಣದ ಭಾಗ್ಯನಗರದಲ್ಲಿ (ಹೈದರಾಬಾದ್‌ದಲ್ಲಿ) ಅನೇಕ ಭಾಷೆಗಳನ್ನು ಮಾತನಾಡುವ ಮತ್ತು ಅರ್ಥಮಾಡಿಕೊಳ್ಳುವ ಜನರಿದ್ದಾರೆ. ಅಲ್ಲಿ ಸ್ಥಳೀಯ ಭಾಷೆಗಳ ಜೊತೆಗೆ ದಕ್ಷಿಣದ ಭಾಷೆಗಳನ್ನು, ಹಿಂದಿ, ಇಂಗ್ಲಿಷ ಮಾತನಾಡಲಾಗುತ್ತದೆ. ಇದರಿಂದಾಗಿ ಅವುಗಳ ಮಹತ್ವ ಹೆಚ್ಚಾಗಿದೆ. ಉದ್ಯೋಗಗಳು (ಇಂಡಸ್ಟ್ರಿ) ವಿಶೇಷವಾಗಿ ಬೆಂಗಳೂರು ಮತ್ತು ಭಾಗ್ಯನಗರದಲ್ಲಿ ಕೇಂದ್ರೀಕೃತವಾಗಿವೆ, ಆದರೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಚೆನ್ನೈಯ ಮಹತ್ವ ಕಡಿಮೆಯಾಗುತ್ತಿದೆ. ಚೆನ್ನೈ ಮತ್ತು ತಮಿಳುನಾಡಿನಲ್ಲಿ ಉತ್ತರ ಭಾರತೀಯರನ್ನು, ವಿಶೇಷವಾಗಿ ಕೂಲಿಗಾಗಿ ಬಂದಂತಹ ಉತ್ತರಪ್ರದೇಶ ಮತ್ತು ಬಿಹಾರದ ಕಾರ್ಮಿಕರನ್ನು ಥಳಿಸುವ ಘಟನೆಗಳು ಆಗಾಗ ನಡೆಯುತ್ತವೆ.
ಒಟ್ಟಾರೆ ಇಲ್ಲಿ ಪೆರಿಯಾರ್ ನಿರ್ಮಾಣ ಮಾಡಿರುವ ದ್ರಾವಿಡ ಚಳುವಳಿಯಿಂದಾಗಿ ಕೆಲವು ತಮಿಳು ಜನರು ಮೂಲ ಭಾರತೀಯ ಸಂಸ್ಕ್ರತಿಯಿಂದ ದೂರ ಹೋಗುತ್ತಿದ್ದಾರೆ. ಇದರಲ್ಲಿ ವಿಶೇಷವೆಂದರೆ, ಧಾರ್ಮಿಕ ಪದ್ಧತಿಗಳ ಆಚರಣೆ, ದೇವಾಲಯ ಸಂಸ್ಕ್ರತಿಯಲ್ಲಿ ನಂಬಿಕೆಯಿರುವ ಜನರು ಮಾತ್ರ ತಮ್ಮ ಪರಂಪರೆಯನ್ನು ಪ್ರಾಮಾಣಿಕತನದಿಂದ ಮುನ್ನಡೆಸುತ್ತಿದ್ದಾರೆ. ವಿಶೇಷವಾಗಿ ಸಂಸ್ಕ್ರತಿಯನ್ನು ರಕ್ಷಿಸುವ ದೇವಸ್ಥಾನಗಳ ಅರ್ಚಕರು, ಪುರೋಹಿತ ವರ್ಗವು ದೇವಾಲಯ ಸಂಸ್ಕ್ರತಿಯನ್ನು ಹಿಡಿದಿಟ್ಟುಕೊಂಡಿರುವುದರಿಂದ ಪೆರಿಯಾರ ಮಾಡಿರುವ ಅನೇಕ ದಶಕಗಳ ಹೀನ ಪ್ರಚಾರದಲ್ಲಿಯೂ ಶ್ರದ್ಧಾಯುಕ್ತ ತಮಿಳರು, ತಮಿಳು ಸಮಾಜವು ಧರ್ಮಕ್ಕೆ ಅಂಟಿಕೊಂಡಿದೆ.
– ಶ್ರೀ. ಯಜ್ಞೇಶ ಸಾವಂತ, ಸನಾತನ ಆಶ್ರಮ, ದೇವದ, ಪನವೇಲ. (೧೦.೧೧.೨೦೨೩)