ವಿಜಯಪುರದಲ್ಲಿ ಅಫಝಲ್‌ಖಾನನ ೬೩ ಬೇಗಂರ (ಹೆಂಡತಿಯರ) ಸಮಾಧಿಗಳು !

೧೯ ಡಿಸೆಂಬರ್‌ ೨೦೨೩ ರಂದು ‘ಶಿವಪ್ರತಾಪದಿನ’ (ಛತ್ರಪತಿ ಶಿವಾಜಿ ಮಹಾರಾಜರು ಅಫಝಲ್‌ಖಾನನನ್ನು ವಧಿಸಿದ ದಿನ)ವಾಗಿದೆ. ಆ ನಿಮಿತ್ತ….

ವಿಜಯಪುರದ ಬಳಿ ೫ ಕಿಲೋಮೀಟರ್‌ ದೂರದಲ್ಲಿ ಅಫಝಲ್‌ಖಾನನ ೬೩ ಹೆಂಡತಿಯರ ಸಮಾಧಿಗಳಿವೆ. ಈ ಸ್ಥಳವನ್ನು ‘ಸಾಠ್‌ ಕಬರ್’ ಹೆಸರಿನಿಂದ ಗುರುತಿಸ ಲಾಗುತ್ತದೆ. ೫ ಎಕರೆ ನಿರ್ಜನ ಜಾಗದಲ್ಲಿ ಒಂದು ಎತ್ತರದ ಜಗಲಿಯ ಮೇಲೆ ಒಂದೇ ಆಕಾರದ ೬೩ ಸಮಾಧಿಗಳನ್ನು ಕಟ್ಟಲಾಗಿದೆ. ಈ ಸಮಾಧಿಗಳ ಬಗೆಗಿನ ಇತಿಹಾಸವನ್ನು ಇಲ್ಲಿ ಕೊಟ್ಟಿದೆ. ಈ ಇತಿಹಾಸದಿಂದ ‘ಅಫಝಲ್‌ಖಾನ್‌ ಎಷ್ಟು ಕ್ರೂರಿಯಾಗಿದ್ದನು’, ಎಂಬುದು ಗಮನಕ್ಕೆ ಬರುತ್ತದೆ.

ಸ್ವರಾಜ್ಯದ ಮೇಲೆ ದಂಡೆತ್ತಿ ಹೋಗುವ ಮೊದಲು ಓರ್ವ ಮೌಲ್ವಿ ಬಾಬಾ ಇವರು ಅಫಝಲ್‌ಖಾನನಿಗೆ ಜೀವಕ್ಕೆ ಅಪಾಯವಿರುವುದರಿಂದ ಯುದ್ಧಕ್ಕೆ ಹೋಗಬೇಡ’ ಎಂದು ಹೇಳುವುದು ಅಫಝಲ್‌ಖಾನನು ಆದಿಲಶಾಹನ ದರ್ಬಾರದಲ್ಲಿ ಒಣಜಂಬಕೊಚ್ಚಿ ಛತ್ರಪತಿ ಶಿವಾಜಿ ಮಹಾರಾಜರನ್ನು ಕೊಲ್ಲುವೆನೆಂಬ ಪಣತೊಟ್ಟಿದ್ದನು. ಅನಂತರ ಅಫಝಲ್‌ಖಾನನು ಸ್ವರಾಜ್ಯದ ಮೇಲೆ ದಂಡೆತ್ತಿ ಹೋಗುವವನಿದ್ದನು. ಅದಕ್ಕೂ ಮೊದಲು ಖಾನನ ಒಂದು ನಿಯಮವಿತ್ತು, ಯಾವಾಗೆಲ್ಲ ಅವನು ಯುದ್ಧಕ್ಕೆ ಹೊರಡುತ್ತಿದ್ದನೋ, ಆಗ ಅವನು ಓರ್ವ ಮೌಲ್ವಿ ಬಾಬಾರ ಬಳಿಗೆ ಹೋಗಿ ಅವರಿಂದ ಭವಿಷ್ಯ ಕೇಳುತ್ತಿದ್ದನು. ‘ಆ ಬಾಬಾರಿಗೆ ಪ್ರಾಪ್ತವಾದ ಸಿದ್ಧಿಯಿಂದ ಮುಂದೆ ಭವಿಷ್ಯದಲ್ಲಿ ಏನಾಗಲಿದೆ, ಎಂದು ತಿಳಿಯುತ್ತಿತ್ತು’, ಎಂದು ಅಫಝಲ್‌ಖಾನನು ನಂಬಿದ್ದನು. ಆದುದರಿಂದ ಸ್ವರಾಜ್ಯದ ಮೇಲೆ ದಂಡೆತ್ತಿ ಹೋಗುವ ಮೊದಲು ಖಾನ್‌ನು ಅವರ ಬಳಿ ಭವಿಷ್ಯ ಕೇಳಲು ಹೋದನು. ಆಗ ಬಾಬಾರಿಗೆ ದೃಷ್ಟಾಂತವಾಯಿತು. ಅವರಿಗೆ ಅಫಝಲ್‌ಖಾನನ ಕೇವಲ ಮುಂಡವೇ ಕಾಣಿಸಿತು; ಆದರೆ ರುಂಡ ಇರಲಿಲ್ಲ. ಅವರು ಖಾನನಿಗೆ, ‘ಈ ಯುದ್ಧಕ್ಕೆ ಹೋಗಬೇಡ. ನಿನ್ನ ಜೀವಕ್ಕೆ ಅಪಾಯವಿದೆ’, ಎಂದು ಹೇಳಿದರು. ಆದರೆ ಖಾನನು ಒಣಜಂಬದಿಂದ ತುಂಬಿದ ಆಸ್ಥಾನದಲ್ಲಿ ‘ಕೌನ ಸಿವಾ (ಯಾವ ಶಿವಾಜಿ) ?’, ಎಂದು ಹೇಳುತ್ತಾ ಪಣತೊಟ್ಟಿದ್ದನು. ಆದುದರಿಂದ ಸ್ವರಾಜ್ಯದ ಮೇಲೆ ದಂಡೆತ್ತಿ ಹೋಗದಿದ್ದರೆ, ತನ್ನ ಮರ್ಯಾದೆ ಹೋಗುವುದೆಂದು ಬೇರೆ ಉಪಾಯವಿಲ್ಲದೇ ಅಫಝಲ್‌ಖಾನನು ಯುದ್ಧಕ್ಕೆ ಸಿದ್ಧನಾದನು.

ಯುದ್ಧಕ್ಕಿಂತ ಮೊದಲು ಅಫಝಲ್‌ಖಾನನು ತನ್ನ ೬೩ ಹೆಂಡತಿಯರನ್ನು ಕೊಂದು ಅವರ ಸಮಾಧಿಗಳನ್ನು ಕಟ್ಟುವುದು ಹೀಗಿದ್ದರೂ, ‘ತನ್ನ ನಂತರ ತನ್ನ ಹಿಂದೆ ಬೇಗಂರ ಗತಿ ಏನು ?’, ಎಂಬ ವಿಚಾರದಿಂದ ಅಫಝಲ್‌ನು ಹತಾಶನಾದನು; ಏಕೆಂದರೆ ಆ ಸಮಯದಲ್ಲಿ ಪ್ರತಿಯೊಬ್ಬ ಸರದಾರನ ಪ್ರತ್ಯೇಕ ಜನಾನಖಾನೆ ಇರುತ್ತಿತ್ತು. ಒಬ್ಬ ಸರದಾರ ಯುದ್ಧದಲ್ಲಿ ಸಾವನ್ನಪ್ಪಿದರೆ ಅವನ ಬೇಗಂರು ಇತರ ಸರದಾರರ ಜನಾನಖಾನೆಯಲ್ಲಿ ಭರ್ತಿಯಾಗುತ್ತಿದ್ದರು.

ಇದರಿಂದ ಚಿಂತಿತನಾದ ಅಫಝಲ್‌ಖಾನನು ಒಂದು ಕ್ರೂರ ನಿರ್ಣಯವನ್ನು ತೆಗೆದುಕೊಂಡನು. ಅವನು ಮಧುರವಾಗಿ ಮಾತನಾಡಿ ಅವರನ್ನೆಲ್ಲ ವಿಜಯಪುರಕ್ಕೆ ಕರೆತಂದು ಅಲ್ಲಿರುವ ಬಾವಿಯಲ್ಲಿ ೬೩ ಬೇಗಂರನ್ನು ನೀರಿನಲ್ಲಿ ಮುಳುಗಿಸಿ ಕೊಂದು ಹಾಕಿದನು. ಅನಂತರ ಅವನು ಅವರಿಗಾಗಿ ಒಂದೇ ರೀತಿಯ ಸಮಾಧಿಗಳನ್ನು ಕಟ್ಟಿಸಿದ ನಂತರವೇ ಸ್ವರಾಜ್ಯದ ಮೇಲೆ ದಾಳಿ ಮಾಡಿದನು. ಮುಂದೆ ಪ್ರತ್ಯಕ್ಷದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕ್ರೂರ ಅಫಝಲ್‌ಖಾನನ ಕರುಳುಗಳನ್ನು ಬಗೆದು ಅವನನ್ನು ಯಮಸದನಕ್ಕಟ್ಟಿದ ಇತಿಹಾಸ ಎಲ್ಲರಿಗೂ ಗೊತ್ತೇ ಇದೆ.

(ಆಧಾರ : abchandorkar.wordpress.com)