ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರ ಮಾಡುವ ದೃಷ್ಟಿಯಿಂದ ಕಾರ್ಯ ಮಾಡಬೇಕಿದೆ ! – ಮಾತಾಜಿ ಅಮೃತಾನಂದಮಯಿ, ಸಚ್ಚಿದಾನಂದ ಆಶ್ರಮ, ಸಿದ್ಧಾರೂಢ ಮಠ, ಬೀದರ
ಕಲಬುರಗಿ : ‘ನಮ್ಮ ಶ್ರೇಷ್ಠ ಸನಾತನ ಹಿಂದೂ ಧರ್ಮವನ್ನು ದುರ್ಬಲಗೊಳಿಸಲೆಂದೆ ಧರ್ಮಾ ಚರಣೆಯನ್ನು ಹೇಳಿಕೊಡದ ‘ಕಾನ್ವೆಂಟ್’ ಶಾಲೆಗಳನ್ನು ಬ್ರಿಟಿಷರು ಪ್ರಾರಂಭಿಸಿದರು. ಇಂದು ಕಾನ್ವೆಂಟ್ ಶಾಲೆಗಳ ಪರಿಣಾಮದಿಂದ ಸಮಾಜವು ಧರ್ಮಚರಣೆಯನ್ನು ಮರೆತಿದೆ ಮತ್ತು ದುಃಖದಲ್ಲಿ ಮುಳುಗುತ್ತಿದೆ. ಇದನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಮಕ್ಕಳ ಮೇಲೆ ಧರ್ಮದ ಸಂಸ್ಕಾರ ಮಾಡುವ ದೃಷ್ಟಿಯಿಂದ ಕಾರ್ಯ ಮಾಡಬೇಕಿದೆ ಈ ಮೂಲಕ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಬುನಾದಿಯನ್ನು ಹಾಕೋಣ, ಎಂದು ಬೀದರನ ಸಿದ್ಧಾರೂಢ ಮಠದ ಸಚ್ಚಿದಾನಂದ ಆಶ್ರಮದ ಮಾತಾಜಿ ಅಮೃತಾನಂದಮಯಿ ಇವರು ಕರೆ ನೀಡಿದರು ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನವೆಂಬರ ೨೫ ಮತ್ತು ೨೬, ೨೦೨೩ ರಂದು ಇಲ್ಲಿ ನಡೆದ ಪ್ರಾಂತೀಯ ಹಿಂದೂ ರಾಷ್ಟ್ರದ ಅಧಿವೇಶನದಲ್ಲಿ ಮಾತನಾಡುತ್ತಿದ್ದರು;
ಆರಂಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಉತ್ತರ ಪ್ರಾಂತದ ಉಪಾಧ್ಯಕ್ಷರಾದ ಶ್ರೀ. ಲಿಂಗರಾಜ ಅಪ್ಪ, ಕಲ್ಬುರ್ಗಿ ಜಿಲ್ಲೆಯ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀ. ರವಿ ಲಾತೂರಕರ, ಬೀದರನ ಸಚ್ಚಿದಾನಂದ ಆಶ್ರಮ ಸಿದ್ಧಾರೂಢ ಮಠದ ಮಾತಾಜಿ ಅಮೃತಾನಂದಮಯಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಉದ್ಘಾಟನೆ ಮಾಡಿದರು.
ಎಲ್ಲರೂ ಒಟ್ಟಾಗಿ ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಇಡಬೇಕಿದೆ – ಶ್ರೀ. ಗುರುಪ್ರಸಾದ ಗೌಡ
ಇಂದು ದೇಶದ ಹಲವು ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಜಿಹಾದಿ ಸಂಘಟನೆಗಳು ೨೦೪೭ ರಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ತಯಾರಿಯಲ್ಲಿವೆ, ಆದರೆ ಹಿಂದೂ ಸಮಾಜವು ಇದನ್ನು ಎದುರಿಸಲು ಸಕ್ಷಮ ಇದೆಯೇ ಇದನ್ನು ಅರ್ಥ ಮಾಡಿಕೊಂಡು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಣೆ ಮಾಡುವ ಬೇಡಿಕೆ ಇಡಬೇಕಿದೆ, ಅದಕ್ಕಾಗಿ ನಾವೆಲ್ಲ ಹಿಂದೂ ಸಂಘಟನೆಗಳು ಒಟ್ಟಾಗಿ ಪ್ರಯತ್ನಿಸಬೇಕು. ಇದು ಕಾಲದ ಆವಶ್ಯಕತೆಯೂ ಆಗಿದೆ