೧. ಶ್ರೀ. ಮುಕುಂದ ಜಾಖೋಟಿಯಾ ಮತ್ತು ಅವರ ಪತ್ನಿ ಇವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರನ್ನು ಶ್ರೀ ಭದ್ರಕಾಳಿದೇವಿಯ ದರ್ಶನ ಪಡೆದ ನಂತರ ಮನೆಗೆ ಬರಲು ವಿನಂತಿಸಿಕೊಳ್ಳುವುದು ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ದರ್ಶನವಾದ ನಂತರ ನೋಡೋಣ’, ಎಂದು ಹೇಳುವುದು
‘ನವೆಂಬರ್ ೨೦೨೨ ರಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಜೊತೆಗೆ ನಾವು ಭಾಗ್ಯ ನಗರ (ಹೈದ್ರಾಬಾದ್) ಕ್ಕೆ ಪ್ರವಾಸಕ್ಕೆ ಹೋಗಿದ್ದೆವು. ಆ ಸಮಯದಲ್ಲಿ ನಾವು ವಾರಂಗಲ್ (ತೆಲಂಗಾಣಾ)ದಲ್ಲಿನ ಶ್ರೀ ಭದ್ರಕಾಳಿದೇವಿಯ ದರ್ಶನಕ್ಕೆ ಹೋಗಿದ್ದೆವು. ಮೂಲ ಸಾಂಗಲಿಯ ಮತ್ತು ಸದ್ಯ ವಾರಂಗಲ್‌ನಲ್ಲಿ ವಾಸಿಸುವ ಸಾಧಕ ಶ್ರೀ. ಮುಕುಂದ ಜಾಖೋಟಿಯಾ ಇವರು ತಮ್ಮ ಪತ್ನಿಯೊಂದಿಗೆ ನಮ್ಮನ್ನು ದೇವಿಯ ದರ್ಶನಕ್ಕೆ ಕರೆದುಕೊಂಡು ಹೋಗುª ವರಿದ್ದರು. ಶ್ರೀ. ಮತ್ತು ಸೌ. ಜಾಖೋಟಿಯಾ ಇವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ದೇವಿಯ ದರ್ಶನ ಪಡೆದ ನಂತರ ಮನೆಗೆ ಬರಲು ವಿನಂತಿಸಿದರು. ಆಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು, ”ದರ್ಶನವಾದ ನಂತರ ನೋಡೋಣ. ಅಲ್ಲಿ ಎಷ್ಟು ಸಮಯ ತಗಲುತ್ತದೆ ?, ಎಂಬುದು ನಿಶ್ಚಿತವಿಲ್ಲ”, ಎಂದು ಹೇಳಿದರು.
೨. ಆ ಊರಿನ ಸ್ಥಳೀಯ ಹಿಂದುತ್ವನಿಷ್ಠರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ಭೇಟಿಯಾಗಲು ಬಂದಿದ್ದರು. ಅವರೆಲ್ಲರೊಂದಿಗೆ ಮಾತನಾಡುತ್ತಾ ಬಹಳ ಸಮಯ ಕಳೆಯಿತು. ನಮ್ಮ ಮುಂದಿನ ಪ್ರವಾಸಕ್ಕಾಗಿ ಹೆಚ್ಚು ಸಮಯದ ಅವಶ್ಯಕತೆ ಇತ್ತು. ಆದುದರಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀ. ಮತ್ತು ಸೌ. ಜಾಖೋಟಿಯಾ ಇವರಿಗೆ ದೇವಸ್ಥಾನದಲ್ಲಿಯೇ ಆಶ್ರಮದ ಪ್ರಸಾದವನ್ನು ನೀಡಿದರು.
೩. ದೇವಸ್ಥಾನದಿಂದ ಬಂದು ವಾಹನದಿಂದ ಪ್ರವಾಸ ಮಾಡುತ್ತಿರುವಾಗ ಇದ್ದಕ್ಕಿದ್ದಂತೆಯೇ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಶ್ರೀ. ಜಾಖೋಟಿಯಾ ಇವರ ಮನೆಗೆ ಹೋಗೋಣ’, ಎಂದು ಹೇಳುವುದು
ಅಲ್ಲಿನ ಎಲ್ಲವನ್ನೂ ಹೊಂದಿಸಿಕೊಂಡು ನಾವು ನಮ್ಮ ಚತುಶ್ಚಕ್ರ ವಾಹನದಲ್ಲಿ ಕುಳಿತೆವು. ಶ್ರೀ. ಮತ್ತು ಸೌ. ಜಾಖೋಟಿಯಾ ಇವರಿಬ್ಬರೂ ತಮ್ಮ ಚತುಶ್ಚಕ್ರ ವಾಹನದಲ್ಲಿ ಕುಳಿತರು ಮತ್ತು ನಾವು ನಮ್ಮ ಹಿಂದಿರುಗುವ ಪ್ರಯಾಣವನ್ನು ಬೆಳೆಸಿದೆವು. ಶ್ರೀ. ಜಾಖೋಟಿಯಾ ಇವರ ಮನೆಗೆ ಹೋಗುವ ನಮ್ಮ ವಿಚಾರ ರದ್ದಾಗಿತ್ತು. ನಾವು ಮುಂದೆ ಬಂದ ನಂತರ ದಾರಿಯಲ್ಲಿ ಒಂದು ವೃತ್ತ ಬರುವ ಮೊದಲು ಇದ್ದಕ್ಕಿದ್ದಂತೆಯೇ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು, ”ನಾವು ಶ್ರೀ. ಜಾಖೋಟಿಯಾ ಇವರ ಮನೆಗೆ ಹೋಗೋಣ”, ಎಂದು ಹೇಳಿದರು. ಅವರ ಮಾತುಗಳನ್ನು ಕೇಳಿ ನಮಗೆಲ್ಲರಿಗೂ ಆಶ್ಚರ್ಯವಾಯಿತು. ನಂತರ ನಾವು ಶ್ರೀ. ಜಾಖೋಟಿಯಾ ಇವರಿಗೆ ಸಂಚಾರವಾಣಿ ಕರೆ ಮಾಡಿ, ”ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ನಿಮ್ಮ ಮನೆಗೆ ಬರಲಿದ್ದಾರೆ. ನೀವು ನಿಮ್ಮ ವಾಹನವನ್ನು ಮುಂದೆ ತೆಗೆದುಕೊಳ್ಳಿ. ನಾವು ನಿಮ್ಮ ವಾಹನದ ಹಿಂದೆ ಬರುತ್ತೇವೆ”, ಎಂದು ಹೇಳಿದೆವು. ನಂತರ ಅವರು ತಮ್ಮ ವಾಹನವನ್ನು ನಮ್ಮ ವಾಹನದ ಮುಂದೆ ತೆಗೆದುಕೊಂಡು ಬಂದರು. ನಾವು ಮೊದಲು ನಿಲ್ಲಿಸಿದ ವೃತ್ತದಿಂದ ಶ್ರೀ. ಜಾಖೋಟಿಯಾ ಇವರ ಮನೆಗೆ ಹೋಗುವ ದಾರಿ ಇತ್ತು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಆ ವೃತ್ತ ಸಮೀಪಿಸುವ ಮೊದಲು ಸ್ವಲ್ಪ ದೂರದಲ್ಲಿ ಶ್ರೀ. ಜಾಖೋಟಿಯಾ ಇವರ ಮನೆಗೆ ಹೋಗುವ ವಿಷಯವನ್ನು ಪ್ರಸ್ತಾಪಿಸಿದ್ದರು.
೪. ‘ಪ.ಪೂ. ಡಾಕ್ಟರರು ಶ್ರೀ. ಮುಕುಂದ ಜಾಖೋಟಿಯಾ ಇವರಿಗೆ ‘ನಿಮ್ಮ ಸ್ವಂತ ಮನೆಯಾದಾಗ, ನಾನು ಆ ಮನೆಗೆ ಖಂಡಿತವಾಗಿಯೂ ಬರುವೆನು’, ಎಂದು ಹೇಳುವುದು ಮತ್ತು ಅವರ ಮನೆಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚರಣಗಳ ಸ್ಪರ್ಶವಾದ ನಂತರ ಆ ಮಾತು ಪೂರ್ಣವಾಗುವುದು ಮತ್ತು ಅವರ ಮಾಧ್ಯಮದಿಂದ ಸಾಕ್ಷಾತ್ ಗುರುದೇವರು ಬಂದರು’, ಎಂದು ಶ್ರೀ. ಜಾಖೋಟಿಯಾ ಇವರು ಹೇಳುವುದು
ನಾವು ಶ್ರೀ. ಮತ್ತು ಸೌ. ಜಾಖೋಟಿಯಾ ಇವರ ಮನೆಗೆ ಹೋದ ನಂತರ ಅವರು ಎಲ್ಲರಿಗೂ ತಿಂಡಿಯನ್ನು ನೀಡಿದರು. ಶ್ರೀ. ಜಾಖೋಟಿಯಾ ಇವರಿಗೆ ಎಷ್ಟು ಆನಂದವಾಗಿತ್ತೆಂದರೆ, ‘ಏನು ಮಾಡಲಿ, ಏನು ಬಿಡಲಿ !’, ಎಂಬಂತಾಗಿತ್ತು. ಎಲ್ಲರೊಂದಿಗೆ ಮಾತನಾಡಿದ ನಂತರ, ಶ್ರೀ. ಜಾಖೋಟಿಯಾ ಇವರ ಕಣ್ಣುಗಳಲ್ಲಿ ಭಾವಾಶ್ರುಗಳು ಬಂದವು, ಅವರಿಗೆ ಭಾವಜಾಗೃತಿಯಾಯಿತು. ಅವರು, ”ನಾನು ಸಾಂಗಲಿಯಲ್ಲಿರುವಾಗ ೧೯೯೮ ರಿಂದ ೨೦೦೦ ಈ ಕಾಲಾವಧಿಯಲ್ಲಿ ಪ.ಪೂ. ಗುರುದೇವರೊಂದಿಗೆ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರೊಂದಿಗೆ) ನನ್ನ ಭೇಟಿಯಾಯಿತು. ಆ ಸಮಯದಲ್ಲಿ ನನ್ನ ಮನೆಯ ಸಮಸ್ಯೆಗಳಿಂದಾಗಿ ನನಗೆ ನಿವಾಸದ ಅಡಚಣೆ ಇತ್ತು. ಆಗ ಪ.ಪೂ. ಗುರುದೇವರು ನನಗೆ ಸಾಧಕರ ಮೂಲಕ, ‘ನಿನಗೇನಾದರೂ ಅಡಚಣೆಗಳಿದ್ದರೆ ಹೇಳು, ನಾವೆಲ್ಲರೂ ಅನುಕೂಲ ಮಾಡಿಕೊಡೋಣ’, ಎಂದು ಸಂದೇಶ ಕಳಿಸಿದರು. ಅನಂತರ ಅವರು ನನಗೆ ಎಲ್ಲ ಅನುಕೂಲತೆಗಳನ್ನು ಮಾಡಿ ಕೊಟ್ಟರು. ಒಂದು ಸಲ ಪ.ಪೂ. ಗುರುದೇವರು ನನಗೆ, ”ಯಾವಾಗ ನಿನ್ನ ಮನೆಯಾಗುವುದೋ, ಆಗ ನಾನು ಆ ಮನೆಗೆ ಖಂಡಿತವಾಗಿಯೂ ಬರುವೆನು”, ಎಂದು ಹೇಳಿದ್ದರು. ಮುಂದೆ ಸ್ವಲ್ಪ ಕಾಲಾವಧಿಯ ನಂತರ ನಾನು ನೌಕರಿಯ ನಿಮಿತ್ತ ಮುಂಬಯಿಗೆ ಹೋದೆನು. ಮುಂದೆ ನಾನು ವ್ಯವಸಾಯವನ್ನು ಆರಂಭಿಸಿದೆನು ಮತ್ತು ತೆಲಂಗಾಣ ರಾಜ್ಯದ ವಾರಂಗಲ್ ಎಂಬಲ್ಲಿ ಸ್ವಂತ ಮನೆ ಖರೀದಿಸಿ ಅಲ್ಲಿ ವಾಸಿಸತೊಡಗಿದೆನು. ಗುರುದೇವರು ಆ ಸಮಯದಲ್ಲಿ ನೀಡಿದ ಮಾತುಗಳನ್ನು ಈಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಈ ಮನೆಯಲ್ಲಿ ತಮ್ಮ ಚರಣಸ್ಪರ್ಶದಿಂದ ಪೂರ್ಣಗೊಳಿಸಿದರು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಪ.ಪೂ. ಗುರುದೇವರ ರೂಪವಾಗಿದ್ದಾರೆ. ನಮ್ಮ ಮನೆಗೆ ಇಂದು ಸಾಕ್ಷಾತ್ ಪ.ಪೂ. ಗುರುದೇವರೇ ಬಂದಿದ್ದಾರೆ”, ಎಂದು ಹೇಳುವಾಗ ಅವರಿಗೆ ಬಹಳ ಭಾವಜಾಗೃತಿಯಾಗುತ್ತಿತ್ತು.
೫. ‘ಗುರುಗಳು ಕೊಟ್ಟ ಮಾತನ್ನು ಯಾರೋ ಒಬ್ಬರ ಮೂಲಕ ನೆರವೇರಿಸುತ್ತಾರೆ’, ಎಂದು ಅನುಭವಿಸಲು ಸಿಗುವುದು
ಅವರ ಮಾತುಗಳನ್ನು ಕೇಳಿ ನಮ್ಮೆಲ್ಲರಿಗೂ ಪ.ಪೂ. ಗುರುದೇವರು ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಬಗ್ಗೆ ಕೃತಜ್ಞತೆ ಅನಿಸುತ್ತಿತ್ತು. ಪ.ಪೂ. ಗುರುದೇವರಿಗೆ ಅವರ ಅನಾರೋಗ್ಯದಿಂದಾಗಿ ಸ್ಥೂಲದಿಂದ ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ‘ಪ.ಪೂ. ಗುರುದೇವರು ನೀಡಿದ ಮಾತುಗಳ ಪಾಲನೆಯನ್ನು ಅವರ ಶಿಷ್ಯೆ ಪೂರ್ಣಗೊಳಿಸಿದರು’, ಎಂದು ನೋಡುವ ಭಾಗ್ಯ ನಮಗೆ ಸಿಕ್ಕಿತು. ಆಗ, ‘ಗುರುಗಳು ನುಡಿದ ಮಾತು ಎಂದಿಗೂ ವ್ಯರ್ಥಹೋಗುವುದಿಲ್ಲ. ನಾವು ಶ್ರದ್ಧೆಯಿಂದ ಸಾಧನೆ ಮಾಡಬೇಕು. ಗುರುಗಳು ತಮ್ಮ ಮಾತುಗಳನ್ನು ಯಾರ ಮೂಲಕವಾದರೂ ಪೂರ್ಣ ಮಾಡುತ್ತಾರೆ’, ಎಂದು ನಮ್ಮ ಗಮನಕ್ಕೆ ಬಂದಿತು.
೬. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ‘ಗುರುದೇವರು ಶ್ರೀ. ಜಾಖೋಟಿಯಾರ ಮನೆಗೆ ಹೋಗುವ ವಿಚಾರ ಸೂಚಿಸಿದರು’, ಎಂದು ಹೇಳುವುದು
ಶ್ರೀ. ಜಾಖೋಟಿಯಾ ಇವರ ಮಾತುಗಳನ್ನು ಕೇಳಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು, ”ನನಗೆ ಗುರುದೇವರೇ ಆ ವಿಚಾರವನ್ನು ಸೂಚಿಸಿದರು. ಆದುದರಿಂದ ಕೊನೆಯ ಕ್ಷಣದಲ್ಲಿ ನಾವು ಶ್ರೀ. ಜಾಖೋಟಿಯಾ ಇವರ ಮನೆಗೆ ಬಂದೆವು”, ಎಂದು ಹೇಳಿದರು. ‘ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಕೊನೆಯ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಶ್ರೀ. ಜಾಖೋಟಿಯಾ
ಇವರ ಮನೆಗೆ ಹೋಗುವುದು’, ಇದು ಗುರುದೇವರ ಕೃಪೆಯಾಗಿದೆ’, ಎಂದು ಗಮನಕ್ಕೆ ಬಂದಿತು.
೭. ಪ್ರಾರ್ಥನೆ
‘ಪ.ಪೂ. ಗುರುದೇವರೇ, ನಮಗೆ ನಿಮ್ಮ ಕೃಪೆಯನ್ನು ಅನುಭವಿಸಲು ಸಾಧ್ಯವಾಯಿತು. ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚರಣಗಳಲ್ಲಿ ನಮ್ಮೆಲ್ಲ ಸಾಧಕರ ಶ್ರದ್ಧೆಯು ಇದೇ ರೀತಿ ಅಖಂಡವಾಗಿ ಉಳಿಯಲಿ’, ಎಂದು ನಿಮ್ಮ ಚರಣಗಳಲ್ಲಿ ಪ್ರಾರ್ಥನೆ !’ – ಶ್ರೀ. ವಾಲ್ಮಿಕ ಭುಕನ್, ಚೆನ್ನೈ (೧.೧೦.೨೦೨೩)