ಓಝರ (ಪುಣೆ) ನಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಜ್ಯ ಮಟ್ಟದ ಮಹಾರಾಷ್ಟ್ರ ದೇವಸ್ಥಾನ – ನ್ಯಾಸ್ ಸಮ್ಮೇಳನದಲ್ಲಿ ಸಂತರು ಮತ್ತು ಗಣ್ಯರ ವಿಚಾರಮಂಥನ !
ಓಝರ (ಜಿಲ್ಲೆ ಪುಣೆ), ಡಿಸೆಂಬರ 2 (ಸುದ್ದಿ.) – ಪ್ರಾಚೀನ ಕಾಲದಿಂದಲೂ ದೇವಸ್ಥಾನಗಳಿಂದ ಧರ್ಮ ಶಿಕ್ಷಣದ ಕೇಂದ್ರಗಳಾಗಿವೆ. ಧರ್ಮ, ಸಂಸ್ಕೃತಿಯನ್ನು ಜೀವಂತವಾಗಿಡುವ ಕಾರ್ಯ ಕಾಲಕಾಲಕ್ಕೆ ದೇವಸ್ಥಾನಗಳ ಮೂಲಕ ನಡೆಯುತ್ತಿತ್ತು. ಆದ್ದರಿಂದ, ನಮ್ಮಲ್ಲಿ ವಿವಿಧ ಆಡಳಿತದವರೂ(ಅರಸರು?) ದೇವಸ್ಥಾನಗಳನ್ನು ನಿರ್ಮಿಸಿದರು. ದೇವಾಲಯ ಸಂಸ್ಕೃತಿಯನ್ನು ಉತ್ತೇಜಿಸಲು ಎಲ್ಲಾ ರೀತಿಯ ಸಹಾಯವನ್ನು ನೀಡಲಾಯಿತು. ಇಂದಿನ ವಿಜ್ಞಾನ ಯುಗದಲ್ಲೂ ದೇವಸ್ಥಾನಗಳತ್ತ ಜನರ ಆಕರ್ಷಣೆ ಗಮನಾರ್ಹವಾಗಿದೆ. ಇಂದು ಯಾವುದೇ ಜಾತಿ, ಪಕ್ಷ, ಗುಂಪು, ಸಂಘಟನೆ, ಭಾಷೆಯ ಹಿಂದೂವಾಗಿದ್ದರೂ, ಅವರು ದೇವಸ್ಥಾನಗಳಲ್ಲಿಯೇ ಸಂಘಟಿತರಾಗುತ್ತಾರೆ. ಎಲ್ಲಾ ಭೇದಗಳನ್ನು ಮರೆತು, ಹಿಂದೂ ಕೇವಲ ದೇವಸ್ಥಾನದಲ್ಲಿಯೇ ದೇವರಿಗೆ ಶರಣಾಗುತ್ತಾನೆ. ದೇವಸ್ಥಾನದ ಮೂಲಕ ಸಮಾಜವನ್ನು ಒಂದುಗೂಡಿಸುವ ಪ್ರಕ್ರಿಯೆಗೆ ಒಂದು ವಿಶಿಷ್ಟ ಮಹತ್ವವಿದೆ.
ದೇವರುಗಳನ್ನು ಗೌರವಿಸದಿದ್ದರೆ ವಿಜ್ಞಾನವೂ ಸೋಲನ್ನು ಒಪ್ಪಿಕೊಳ್ಳಬೇಕಾಗುತ್ತದೆ! – ರಮೇಶ ಶಿಂಧೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ
ದೇವರುಗಳನ್ನು ಗೌರವಿಸದಿದ್ದರೆ ವಿಜ್ಞಾನವೂ ಸೋಲನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂಬುದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಉತ್ತರಾಖಂಡದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರು ಸುರಕ್ಷಿತವಾಗಿ ಹೊರಗೆ ಬಂದಿರುವುದು. ಸುರಂಗ ಕಾಮಗಾರಿ ನಡೆಯುತ್ತಿರುವಾಗಲೇ ಅಲ್ಲಿದ್ದ ಬಾಬಾ ಬೌಖ್‌ನಾಗ ದೇವಸ್ಥಾನವನ್ನು ಕೆಡವಲಾಯಿತು; ಆದರೆ 3 ವರ್ಷ ಕಳೆದರೂ ಪುನರ್ ಪ್ರತಿಷ್ಠಾಪನೆ ಮಾಡಲಿಲ್ಲ. ಆಸ್ಟ್ರೇಲಿಯಾದಿಂದ ಬಂದಿದ್ದ ಸುರಂಗತಜ್ಞ ಅರ್ನಾಲ್ಡ್ ಡಿಕ್ಸ್ ಕೂಡ ಬಾಬಾ ಬೌಖನಾಗ್‌ಗೆ ಶರಣಾಗಿ ಪ್ರಾರ್ಥಿಸಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು. ಪ್ರಾರ್ಥನೆ ಮಾಡಿ ತಮ್ಮ ಕಾರ್ಯವನ್ನು ಪ್ರಾರಂಭಿಸಿದ್ದರಿಂದಲೇ ಅವರಿಗೆ ಯಶಸ್ಸು ಸಿಕ್ಕಿತು. ಹಾಗಾಗಿ ವಿಜ್ಞಾನಿಗಳೂ ದೇವರಿಗೆ ಶರಣಾಗಬೇಕಾಯಿತು.
… ಹಾಗಾದರೆ ಮುಂದಿನ ಸಮ್ಮೇಳನವನ್ನು ರಾಷ್ಟ್ರ ಮಟ್ಟದಲ್ಲಿ ನಡೆಸಬೇಕಾಗುತ್ತದೆ! – ಸುನಿಲ ಘನವಟ, ಸಮನ್ವಯಕರು, ಮಹಾರಾಷ್ಟ್ರ ದೇವಸ್ಥಾನ ಮಹಾಸಂಘ
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದೇವಸ್ಥಾನದ ಧರ್ಮದರ್ಶಿಗಳ ಅಧಿವೇಶನ ಸದ್ಯದ ಸ್ಥಿತಿಯಲ್ಲಿ ರಾಜ್ಯವ್ಯಾಪಿ ಯಾಗಿದೆ. ಈ ಸಮ್ಮೇಳನಕ್ಕೆ 634 ಧರ್ಮದರ್ಶಿಗಳು ನೋಂದಾಯಿಸಿಕೊಂಡಿದ್ದು ಮತ್ತು ನೂರಾರು ಧರ್ಮದರ್ಶಿಗಳು ಭಾಗವಹಿಸಿದ್ದಾರೆ. ಧಾರ್ಮಿಕ ಕಾರ್ಯದಲ್ಲಿ ನಿಷ್ಠಾವಂತರ ಇದೇ ರೀತಿಯ ಭಾಗವಹಿಸುವಿಕೆ ಸಾಧಿಸಿದರೆ, ಮುಂದಿನ ದೇವಾಲಯ-ನ್ಯಾಸ ಸಮ್ಮೇಳನ ರಾಷ್ಟ್ರಮಟ್ಟದಲ್ಲಿ ನಡೆಸಬೇಕಾಗುತ್ತದೆ.
ದೇವಸ್ಥಾನಗಳ ಮೇಲಿನ ಇಸ್ಲಾಮಿಕ್ ದಾಳಿಯ ವಿರುದ್ಧ ಒಗ್ಗಟ್ಟಿನ ಬಲ ಅಗತ್ಯ! – ಬಬನರಾವ್ ಮಂಡೆ, ಧರ್ಮದರ್ಶಿ, ವಿಘ್ನಹರ ದೇವಸ್ಥಾನ, ಓಝರ
ಭಕ್ತಾದಿಗಳೆಲ್ಲ ಒಂದೆಡೆ ಸೇರಿರುವುದು ಇದೊಂದು ಐತಿಹಾಸಿಕ ಕ್ಷಣವಾಗಿದೆ.. ದೇವಸ್ಥಾನವೆಂದರೆ ‘ದೇವಾಲಯ’, ಅಂದರೆ ‘ಭಗವಂತನು ಸಾಕ್ಷಾತ್ ವಾಸವಾಗಿರುವ ಸ್ಥಳ’. ಹಾಗಾಗಿ ನಮ್ಮ ಜವಾಬ್ದಾರಿಯೂ ದೊಡ್ಡದಾಗಿದೆ. ದೇವಸ್ಥಾನಗಳ ಮೂಲಕ ಹಿಂದೂ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲಾಗುತ್ತದೆ.
ಮರಾಠಿ ಸನಾತನ ಪಂಚಾಂಗ್ 2024 ‘ಆಂಡ್ರಾಯ್ಡ್’ ಮತ್ತು ‘ಐಒಎಸ್’ ಅಪ್ಲಿಕೇಶನ್ ಲೋಕಾರ್ಪಣೆ!ಈ ಸಂದರ್ಭದಲ್ಲಿ, ಮರಾಠಿ ಸನಾತನ ಪಂಚಾಂಗ 2024 ‘ಆಂಡ್ರಾಯ್ಡ್’ ಮತ್ತು ‘ಐಒಎಸ್’ ಅಪ್ಲಿಕೇಶನ್ ಅನ್ನು ಗಣ್ಯರ ಹಸ್ತದಿಂದ ಲೋಕಾರ್ಪಣೆಗೊಳಿಸಲಾಯಿತು. |
ದೇವಸ್ಥಾನ ಸಮ್ಮೇಳನಕ್ಕೆ ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ, ಜಗದ್ಗುರು ರಮಾನಂದಾಚಾರ್ಯ ದಕ್ಷಿಣ ಪೀಠ, ನಾಣೀಜಧಾಮ ಇವರ ಸಂದೇಶಸಮ್ಮೇಳನದ ಆಯೋಜನೆಯಿಂದ ಹಿಂದೂ ಧರ್ಮವನ್ನು ಸಂಘಟಿಸಲು ಅಮೂಲ್ಯವಾದ ಕಾರ್ಯವನ್ನು ಮಾಡಬಹುದು ! – ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ, ಜಗದ್ಗುರು ರಾಮಾನಂದಾಚಾರ್ಯ ದಕ್ಷಿಣ ಪೀಠ, ನಾಣಿಜಧಾಮಎರಡನೇ ರಾಜ್ಯ ಮಟ್ಟದ ದೇವಸ್ಥಾನ ಸಮ್ಮೇಳನಕ್ಕೆ ನಮ್ಮನ್ನು ಆಹ್ವಾನಿಸಲಾಗಿತ್ತು. ನಾಣಿಜ್, ಜಗದ್ಗುರು ರಾಮಾನಂದಾಚಾರ್ಯ ದಕ್ಷಿಣ ಪೀಠದ ಪರವಾಗಿ ಅಭಿನಂದಿಸುತ್ತಿದ್ದೇವೆ. ಈ ಸಮ್ಮೇಳನದ ಸಂಘಟನೆಯು ಪ್ರಸ್ತುತ ಸ್ಥಿತಿಯಲ್ಲಿ ಹಿಂದೂ ಧರ್ಮವನ್ನು ಸಂಘಟಿಸುವಲ್ಲಿ ಅಮೂಲ್ಯವಾದ ಕೆಲಸವನ್ನು ಮಾಡಬಹುದೆಂಬ ವಿಶ್ವಾಸ ನಮಗಿದೆ. 1. ಭಾರತದಲ್ಲಿನ ಹಿಂದೂ ದೇವಾಲಯಗಳ ಪಾವಿತ್ರ್ಯತೆ, ಸಂಸ್ಕಾರ, ಸಂಸ್ಕೃತಿ, ಆಧ್ಯಾತ್ಮಿಕತೆಯನ್ನು ಕಾಪಾಡಿಕೊಳ್ಳಲು ವಸ್ತ್ರಸಂಹಿತೆ ಅತ್ಯಂತ ಅವಶ್ಯಕವಾಗಿದೆ. ದೇವಸ್ಥಾನಗಳಂತಹ ಪವಿತ್ರ ಸ್ಥಳಗಳಲ್ಲಿ ಅರೆಬರೆ(ತುಂಡುವಸ್ತ್ರ) ಬಟ್ಟೆಗಳನ್ನು ಧರಿಸುವುದು ಸಂಸ್ಕೃತಿಗೆ ಶೋಭಿಸುವುದಿಲ್ಲ. 2. ದೇವಸ್ಥಾನಗಳ ಧರ್ಮಪರಂಪರೆ ಮತ್ತು ಪುರಾತನ ಧಾರ್ಮಿಕ ಸಂಸ್ಥೆಗಳನ್ನು ರಕ್ಷಿಸುವ ಜತೆಗೆ ಧರ್ಮ ವಿರೋಧಿ ಕಾನೂನನ್ನು ವಿರೋಧಿಸುವ ನಿಟ್ಟಿನಲ್ಲಿ ಎಲ್ಲ ಭಗವಂತನ ಭಕ್ತರು ಒಗ್ಗೂಡುವ ಆವಶ್ಯಕತೆಯಿದೆ. 3. ಧರ್ಮ ರಕ್ಷಣೆ ಇಂದಿನ ಅಗತ್ಯವಾಗಿದೆ ಎನ್ನುವುದನ್ನು ಮನಗಂಡು ಎಲ್ಲ ಸಂಪ್ರದಾಯದವರು, ಮಠ, ಮಂದಿರ, ಆಶ್ರಮಗಳು ಒಗ್ಗೂಡಿ ಹಿಂದೂ ಧರ್ಮವನ್ನು ಉಳಿಸಿ ಸಂರಕ್ಷಿಸಬೇಕು. ಈ ಕಾರ್ಯದಲ್ಲಿ ಪೀಠದ ದೇವರ ಆಶೀರ್ವಾದ ನಿಮ್ಮೊಂದಿಗೆ ಇರುತ್ತದೆ. |