೬ ಡಿಸೆಂಬರ್ ರಂದು ಪ.ಪೂ. ಭಕ್ತರಾಜ ಮಹಾರಾಜರ ಮಹಾನಿರ್ವಾಣ ದಿನವಿದೆ. ಆ ನಿಮಿತ್ತ…
ಪ.ಪೂ. ಭಕ್ತರಾಜ ಮಹಾರಾಜ (ಪ.ಪೂ. ಬಾಬಾ)ರಂತಹ ಪೂರ್ಣತ್ವಕ್ಕೆ ತಲುಪಿದ ಉಚ್ಚ ಕೋಟಿ ಸಂತರ ಸತ್ಸಂಗದಿಂದ ಪೂ. ಶಿವಾಜಿ ವಟಕರ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಮತ್ತು ಬಂದ ಅನುಭೂತಿಗಳನ್ನು ಅವರು ಕೃತಜ್ಞತಾಭಾವದಿಂದ ಇಲ್ಲಿ ನೀಡಿದ್ದಾರೆ.
೧. ಪ.ಪೂ. ಬಾಬಾರವರಿಗೆ ಗುರುಗಳ ಬಗೆಗಿನ ಭಾವ
೧ ಅ. ಗುರುಗಳ ಪಾದುಕೆಗಳ ರೂಪದಲ್ಲಿ ಗುರುಗಳೇ ಜೊತೆಗೆ ಇರುವಂತೆ ಪ.ಪೂ. ಬಾಬಾ ಇವರು ಆನಂದಾವಸ್ಥೆಯಲ್ಲಿರುವುದು : ೧೩.೭.೧೯೯೨ ರಂದು ನಾವು ಪ.ಪೂ. ಬಾಬಾ ಇವರ ಜೊತೆಗೆ ಮುಂಬಯಿ ಮತ್ತು ಠಾಣೆಯಲ್ಲಿ ಬೇರೆ ಬೇರೆ ಭಕ್ತರ ಮನೆಗೆ ಹೋಗುತ್ತಿದ್ದೆವು. ಪ.ಪೂ. ಬಾಬಾ ಇವರ ಗುರುಗಳ ಪಾದುಕೆಗಳು ನಮ್ಮೊಂದಿಗಿದ್ದವು. ಪ.ಪೂ. ಬಾಬಾ ಇವರು ತಮ್ಮ ಗುರು ಶ್ರೀ ಅನಂತಾನಂದ ಸಾಯೀಶ ಇವರ ಇಂದೂರ ಆಶ್ರಮದಲ್ಲಿ ಪೂಜೆಗಾಗಿ ಇಟ್ಟ ಪಾದುಕೆಗಳನ್ನು ಬಹಳ ವರ್ಷಗಳ ನಂತರ ತಂದಿದ್ದರು. ಆ ಸಮಯದಲ್ಲಿ ‘ಸಾಕ್ಷಾತ್ ಗುರುಗಳೇ ನಮ್ಮೊಂದಿಗೆ ಇದ್ದಾರೆ’, ಎಂಬ ಆನಂದಾವಸ್ಥೆಯಲ್ಲಿ ಪ.ಪೂ. ಬಾಬಾ ಇದ್ದರು.
೧ ಆ. ಪ.ಪೂ. ಬಾಬಾ ಇವರು ಒಂದು ಪ್ರಸಂಗದಲ್ಲಿ ‘ಗುರುವನ್ನು ಹೇಗೆ ಗುರುತಿಸ ಬೇಕು’, ಎಂದು ಹೇಳುವುದು : ಪ.ಪೂ. ಬಾಬಾರವರ ಓರ್ವ ಭಕ್ತರು ಪರಾತ್ಪರ ಗುರು ಡಾ. ಆಠವಲೆಯವರ ಬಳಿ ಬರುತ್ತಿದ್ದರು. ಅವರ ವಿಚಾರಗಳು ಭಿನ್ನವಾಗಿದ್ದವು. ಅವರು ‘ತಾಂತ್ರಿಕ ಪದ್ಧತಿಯಲ್ಲಿ ಸಾಧನೆ ಯನ್ನು ಮಾಡುತ್ತಿದ್ದರು’, ಎಂದು ನನಗೆ ಅನಿಸುತ್ತದೆ. ಪ.ಪೂ. ಬಾಬಾರವರ ೧೯೯೨ ರ ಮುಂಬಯಿಯಲ್ಲಿ ನಡೆದ ಗುರುಪೂರ್ಣಿಮೆಯ ಸಮಯದಲ್ಲಿ ಅವರು ಸೇವೆಗೆಂದು ಬರುತ್ತಿದ್ದರು. ಅವರು ಇತರರಲ್ಲಿ ವಿಕಲ್ಪವನ್ನು ಹರಡುತ್ತಿದ್ದರು ಮತ್ತು ತಾವೇ ಗುರು ಎಂಬಂತೆ ನಟಿಸು ತ್ತಿದ್ದರು. ನಮಗೆ ಅದು ಇಷ್ಟವಾಗುತ್ತಿರಲಿಲ್ಲ; ಆದರೆ ಅವರು ಪ.ಪೂ. ಬಾಬಾ ಇವರ ಹಿರಿಯ ಭಕ್ತರಾಗಿದ್ದಾರೆಂದು ತಿಳಿದು ನಾವು ಅವರಿಗೆ ಏನೂ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಅನಂತರ ಒಂದು ಸಲ ನಾವೆಲ್ಲರೂ ಒಟ್ಟಿಗೆ ಕುಳಿತಿರುವಾಗ ಪ.ಪೂ. ಬಾಬಾ ಇವರು ಅವರ ಕಡೆಗೆ ನೋಡಿ ನನಗೆ, ”ಗುರುವನ್ನು ಗುರುತಿಸುವುದು ಹೇಗೆ, ತಲೆಯ ಮೇಲೆ ಕೈಯನ್ನು ತಿರುಗಿಸಿ ಮೋಸಗೊಳಿಸುವವನು !” ಎಂದು ಹೇಳಿದರು. ಪ.ಪೂ. ಬಾಬಾ ಇವರು ಈ ತಮ್ಮ ವಾಕ್ಯದಿಂದ ನನಗೆ ಸತ್ಯದ ಅರಿವು ಮಾಡಿಕೊಟ್ಟು ನಿಜವಾದ ಗುರು ಮತ್ತು ಢೋಂಗಿ ಗುರುವನ್ನು ಹೇಗೆ ಗುರುತಿಸಬೇಕು, ಎಂದು ಕಲಿಸಿದರು. ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರ ಮೇಲಿನ ನನ್ನ ಶ್ರದ್ಧೆ ಹೆಚ್ಚುತ್ತಾ ಹೋಯಿತು.
೧ ಇ. ದೇಹವನ್ನು ಪ್ರೀತಿಸದೇ ತತ್ತ್ವವನ್ನು ಪ್ರೀತಿಸಲು ಹೇಳುವುದು : ಒಂದು ಸಲ ನಾವು ಪ.ಪೂ. ಬಾಬಾರವರ ಓರ್ವ ಭಕ್ತರ ಮನೆಗೆ ಹೋಗಿದ್ದೆವು. ಅಲ್ಲಿಂದ ಹೊರಡುವಾಗ ನಾವು ಅವರ ಕಟ್ಟಡದಿಂದ ಕೆಳಗೆ ಇಳಿದೆವು. ವಾಹನದಲ್ಲಿ ಕುಳಿತುಕೊಳ್ಳಬೇಕೆಂದು ಪ.ಪೂ. ಬಾಬಾ ಇವರು ರಸ್ತೆಯಲ್ಲಿ ನಿಂತು ಕೊಂಡಿದ್ದರು. ಆ ಸಮಯದಲ್ಲಿ ಆ ಭಕ್ತನು ರಸ್ತೆಯ ಮೇಲೆಯೇ ಪ.ಪೂ. ಬಾಬಾ ಇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಆಗ ಬಾಬಾ ಇವರು ಅವರಿಗೆ, ”ಏಕೆ ನಾಟಕ ಮಾಡುತ್ತಿರುವೆ ! ದೇಹವನ್ನು ಪ್ರೇಮಿಸಬೇಡ. ನಾಮಸ್ಮರಣೆಯನ್ನು ಮತ್ತು ನನ್ನ ತತ್ತ್ವವನ್ನು ಪ್ರೇಮಿಸು”, ಎಂದು ಹೇಳಿದರು.
೧ ಈ. ‘ಪರಾತ್ಪರ ಗುರು ಡಾ. ಆಠವಲೆ ಯವರನ್ನು ಯಾವ ಹೆಸರಿನಿಂದ ಸಂಬೋಧಿಸ ಬೇಕು ?’, ಎಂದು ಕೇಳಿದಾಗ ದಾರ್ಶನಿಕ ಪ.ಪೂ. ಬಾಬಾ ಇವರು ಈಗ ‘ಡಾಕ್ಟರ್’ ಎಂದೇ ಹೇಳು, ಸಮಯ ಬಂದಾಗ ಹೇಳುವೆನು’, ಎಂದು ಹೇಳುವುದು ಮತ್ತು ಈಗ ಆ ಸಮಯ ಬಂದುದರಿಂದ ಪ.ಪೂ. ಬಾಬಾರವರೇ ಮಹರ್ಷಿಗಳಿಗೆ ‘ಪರಾತ್ಪರ ಗುರು ಡಾ. ಆಠವಲೆಯವರ ಅವತಾರತ್ವವನ್ನು ಪ್ರಕಟ ಮಾಡಿ ಅವರು ‘ಶ್ರೀಮನ್ನಾರಾಯಣ’ ಇರುವುದಾಗಿ ಹೇಳಿದ್ದಾರೆ’, ಎಂದು ಅನಿಸುವುದು : ಸಂತರು ಅಥವಾ ಗುರುಗಳು ಇವರಿಗೆ ಸಂಪ್ರದಾಯಕ್ಕನುಸಾರ ಬೇರೆ ಬೇರೆ ಬಿರುದುಗಳನ್ನು ಮತ್ತು ಪದವಿಗಳನ್ನು ಜೋಡಿಸುತ್ತಾರೆ. ನಾವು ಪರಾತ್ಪರ ಗುರು ಡಾ. ಆಠವಲೆ ಇವರನ್ನು ಕೇವಲ ”ಡಾಕ್ಟರ್” ಎಂದು ಸಂಬೋಧಿಸುತ್ತಿದ್ದೆವು. ಆದುದರಿಂದ ೨೦.೯.೧೯೯೨ ರಂದು ನಾನು ಪ.ಪೂ. ಬಾಬಾ ಇವರಿಗೆ, ”ಡಾ. ಆಠವಲೆಯವರನ್ನು ‘ಡಾಕ್ಟರ್’ ಎಂದು ಕರೆಯುವ ಬದಲು ಏನೆಂದು ಕರೆಯಲಿ ?” ಎಂದು ಕೇಳಿದೆ. ಅವರು, ”ಈಗ ಡಾಕ್ಟರ್’ ಎಂದೇ ಹೇಳು. ಸಮಯ ಬಂದಾಗ ನಾನು ಹೇಳುವೆನು”, ಎಂದರು. ಈಗ ಆ ಸಮಯದ ಬಂದಿರುವುದರಿಂದ ‘ಪ.ಪೂ. ಬಾಬಾರವರೇ ಮಹರ್ಷಿಗಳಿಗೆ ಹೇಳಿ ಪರಾತ್ಪರ ಗುರು ಡಾ. ಆಠವಲೆಯವರ ಅವತಾರತ್ವವನ್ನು ಬಹಿರಂಗಪಡಿಸಿದ್ದಾರೆ’, ಎಂದು ನನಗೆ ಅನಿಸುತ್ತದೆ. ಆದುದರಿಂದ ಈಗ ಮಹರ್ಷಿಗಳು, ಪರಾತ್ಪರ ಗುರು ಡಾ. ಆಠವಲೆಯವರು ಸಾಕ್ಷಾತ್ ವಿಷ್ಣುಸ್ವರೂಪ ರಾಗಿದ್ದು ಶ್ರೀಮನ್ನಾರಾಯಣ ಶ್ರೀ ಶ್ರೀ ಜಯಂತ ಬಾಳಾಜಿ ಆಠವಲೆಯಾಗಿದ್ದಾರೆ. ಅವರು ಜಯಂತ ಅವತಾರವಾಗಿದ್ದಾರೆ. ಅವರು ಮೋಕ್ಷಗುರು, ಪರಾತ್ಪರ ಗುರು ಡಾ. ಆಠವಲೆ ಆಗಿದ್ದಾರೆ’, (ಮತ್ತು ಈಗ ಮಹರ್ಷಿಗಳು ಅವರನ್ನು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ’ ಎಂದು ಕರೆಯಲು ಹೇಳಿದ್ದಾರೆ.) ಎಂದು ಹೇಳಿದ್ದಾರೆ.
೨. ಪ.ಪೂ. ಭಕ್ತರಾಜ ಮಹಾರಾಜರ ವಿಚಾರಸಂಪತ್ತು !
೨ ಅ. ಶರೀರ ಮಿಥ್ಯವಿರುವುದರಿಂದ ಸುಳ್ಳು ಶರೀರವಿರುವ ಜನರು ಸತ್ಯ ಹೇಗೆ ಮಾತನಾಡಬಲ್ಲರು ? : ಪ.ಪೂ. ಬಾಬಾ ಇವರ ಓರ್ವ ಸ್ತ್ರೀ ಭಕ್ತಳು ಕೀರ್ತನಕಾರಳಾಗಿದ್ದಳು. ‘ನಾನು ಮದುವೆ ಮಾಡಿಕೊಳ್ಳುವುದಿಲ್ಲ’, ಎನ್ನುತ್ತಿದ್ದಳು. ಆ ಸಮಯದಲ್ಲಿ ಪ.ಪೂ. ಬಾಬಾ ಇವರು ಅವಳಿಗೆ, ”ಕೂಡಿ ಬಂದರೆ ಮತ್ತು ಪ್ರಾರಬ್ಧದಲ್ಲಿದ್ದರೆ, ಮದುವೆ ಮಾಡಿ ಕೊಳ್ಳಬೇಕು. ನಾನು ಮದುವೆ ಮಾಡಿ ಕೊಂಡಿಲ್ಲವೇ, ಸಂಸಾರ ಮಾಡಿಲ್ಲವೇ. ೬ ಮಕ್ಕಳಾದವು ಆದರೂ ಜನರು ನನ್ನನ್ನು ನಂಬುತ್ತಾರೆ; ಆದುದರಿಂದ ‘ಜನರು ಏನು ಹೇಳುತ್ತಾರೆ’, ಎಂಬ ಕಡೆಗೆ ಗಮನ ಕೊಡಬೇಡ. ಜನರು ಎಂದರೆ ನಾವಲ್ಲ; ಏಕೆಂದರೆ ಜನರು ನಮಗೆ ಬೇಕಾದ ರೀತಿ ಯಲ್ಲಿ ಮಾತನಾಡುವುದಿಲ್ಲ. ಶರೀರವು ಮಿಥ್ಯವಾಗಿದೆ. ಸುಳ್ಳು ಶರೀರವಿರುವ ಜನರು ಹೇಗೆ ಸತ್ಯ ನುಡಿಯಬಲ್ಲರು ?’’ ಎಂದರು.
– (ಪೂ.) ಶ್ರೀ. ಶಿವಾಜಿ ವಟಕರ, ಸನಾತನ ಆಶ್ರಮ, ದೇವದ. (೨೩.೭.೨೦೧೭)
ಪ.ಪೂ. ಭಕ್ತರಾಜ ಮಹಾರಾಜರ ಬೋಧನೆ೧. ಮನಸ್ಸಿನಲ್ಲಿ ವಿಕಲ್ಪ ತರಲೇಬಾರದು ಎಂಬ ಒಂದೇ ಒಂದು ಸಂಕಲ್ಪ ಮಾಡಿ. ೨. ಅಧ್ಯಾತ್ಮದಲ್ಲಿ ಇನ್ನೊಬ್ಬರ ಒಳಿತಿನ ವಿಚಾರವನ್ನು ಮಾಡಬೇಕಿರುತ್ತದೆ. ೩. ಉನ್ನತರು ಹೇಳುವುದನ್ನು ಕೇಳುವುದು, ಇದು ಒಂದು ಸಾಧನೆಯೇ ಆಗಿದೆ, ಉದಾ. ಪ.ಪೂ. ಧಾಂಡೆ ಶಾಸ್ತ್ರಿಗಳು ಪ.ಪೂ. ಬಾಬಾ ಇವರಿಗೆ ಬಾಳೆಹಣ್ಣಿನ ಸಿಪ್ಪೆಯನ್ನು ತಿನ್ನಲು ಕೊಟ್ಟರು ಮತ್ತು ತಾವು ಬಾಳೆಹಣ್ಣನ್ನು ತಿಂದರು. ೪. ಎಲ್ಲವನ್ನೂ ಮಾಡಲು ಬರಬೇಕು, ಉದಾ. ಶ್ರೀಕೃಷ್ಣನು ಯಜ್ಞದ ಸಮಯದಲ್ಲಿ ಎಂಜಲೆಲೆಗಳನ್ನು ಎತ್ತಿದನು. ಪ.ಪೂ. ಬಾಬಾ ಇವರು ತಮ್ಮ ಅಮೃತ ಮಹೋತ್ಸವದ ಸಮಯದಲ್ಲಿ ವೇದಿಕೆಯ ಮೇಲೆ ಪಕ್ಕದಲ್ಲಿ ಕುಳಿತ ಸಂತರಿಗೆಗಾಳಿ ಹಾಕಿದರು. ಸೇವೆ ಮಾಡುವುದರಲ್ಲಿಯೇ ಆನಂದವೆನಿಸಬೇಕು. ೫. ಸಂತರಂತೆ ಸಹಜವಾಗಿ ವರ್ತಿಸಲು ಸಾಧ್ಯವಾಗಬೇಕು. ೬. ಜನರು ನನಗೆ, ನೀವು ಸರ್ವಜ್ಞರಾಗಿರುವಿರಿ ಎಂದು ಹೇಳುತ್ತಾರೆ; ಆದರೆ ವಾಸ್ತವದಲ್ಲಿ ಸಮಯ ಬಂದಾಗ, ಅವರು ಆ ರೀತಿ ವರ್ತಿಸುವುದಿಲ್ಲ. |