೧. ‘ದಾಭೋಳ್ಕರ್-ಪಾನ್ಸರೆ ಹತ್ಯೆ : ತನಿಖೆಯಲ್ಲಿನ ರಹಸ್ಯಗಳು’, ಈ ಪುಸ್ತಕ ಬರೆಯುವುದರ ಹಿಂದಿನ ಉದ್ದೇಶ
೨೦ ಆಗಸ್ಟ್ ೨೦೧೩ ರಂದು ಬೆಳಿಗ್ಗೆ ಪುಣೆಯಲ್ಲಿ ಡಾ. ನರೇಂದ್ರ ದಾಭೋಳ್ಕರರ ಹತ್ಯೆಯಾಯಿತು ಹಾಗೂ ಆ ಮೇಲೆ ಅದು ದೇಶದಾದ್ಯಂತ ದೊಡ್ಡ ವಾರ್ತೆ ಆಯಿತು ! ಅನೇಕ ಪ್ರಗತಿಪರರು ರಾಜ್ಯದಾದ್ಯಂತ ಆಂದೋಲನ ಮಾಡಿದರು. ಕಾಂಗ್ರೆಸ್ಸಿನ ಅಂದಿನ ಮುಖ್ಯಮಂತ್ರಿ ಪೃಥ್ವಿರಾಜ ಚವ್ಹಾಣ ಇವರು ಘಟನೆಯ ನಂತರ ದಾಭೋಳ್ಕರರ ಹತ್ಯೆಯ ಸಂಬಂಧವನ್ನು ಗಾಂಧಿ ಹತ್ಯೆಯೊಂದಿಗೆ ಸಂಬಂಧಿಸಿದ ಪ್ರವೃತ್ತಿಯೊಂದಿಗೆ ಜೋಡಿಸಿ ಸಂಶಯದ ದಾರವನ್ನು ಹಿಂದೂ ವಿಚಾರಶೈಲಿಯ ಸಂಘಟನೆಗಳತ್ತ ತಿರುಗಿಸಿದರು ಹಾಗೂ ಒಟ್ಟಾರೆ ತನಿಖೆಗೆ ಒಂದು ವಿಶಿಷ್ಟ ದೃಷ್ಟಿಕೋನವನ್ನು ನೀಡಿದರು ! ಈ ಘಟನೆಗೆ ೧೦ ವರ್ಷಗಳಾದವು. ನಾನು ನರೇಂದ್ರ ದಾಭೋಳ್ಕರ್, ಕಾ. ಗೋವಿಂದ ಪಾನ್ಸರೆ, ಪ್ರಾ. ಎಮ್.ಎಮ್. ಕಲ್ಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ ಇವರ ಹತ್ಯೆಯ ತನಿಖೆಯ ಹಾಗೂ ನ್ಯಾಯಾಲಯದಲ್ಲಿನ ಆರೋಪಪತ್ರಗಳನ್ನು ವಿಸ್ತಾರವಾಗಿ ಅಭ್ಯಾಸ ಮಾಡಿದೆ, ಪೊಲೀಸರ ದಾರಿ ತಪ್ಪಿದ ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಯಲ್ಲಿನ ಕೊರತೆಯಲ್ಲಿ ಸುಧಾರಣೆಯಾಗಬೇಕು, ಹಾಗೂ ನ್ಯಾಯಾಂಗ ಪ್ರಕ್ರಿಯೆಯ ಮೂಲಕ ದೋಷಿಗಳಿಗೆ ಶೀಘ್ರದಲ್ಲೇ ಶಿಕ್ಷೆಯಾಗಬೇಕು; ಆದರೆ ಅಮಾಯಕರನ್ನು ಹಿಂಸಿಸಬಾರದು, ಎಂಬ ಭಾವನೆಯಿಂದ ಈ ಪುಸ್ತಕ ಬರೆಯಲಾಗಿದೆ.
ಪುಸ್ತಕ ಬರೆಯುವುದು ನನ್ನ ಆಸಕ್ತಿಯ ವಿಷಯವಲ್ಲ ಹಾಗೂ ಅವಶ್ಯಕತೆಯೂ ಇರಲಿಲ್ಲ. ಮಹಾರಾಷ್ಟ್ರದಲ್ಲಿ ರಾರಾಜಿಸುತ್ತಿದ್ದ ನಾಸ್ತಿಕವಾದಿಗಳ ಕೊಲೆಯ ಆರೋಪಪತ್ರ ಗಳನ್ನು ಓದಿದಾಗ ತನಿಖೆಯಲ್ಲಿನ ಅಸಂಬದ್ಧತನ ನನಗೆ ಅರಿವಾಯಿತು, ಸಾವಿರಾರು ಪುಟಗಳ ಆರೋಪಪತ್ರಗಳು ಹಾಗೂ ನೂರಾರು ವರ್ತಮಾನಪತ್ರಿಕೆಗಳನ್ನು ಓದಿದಾಗ ಸಂಪೂರ್ಣ ಸಂಶೋಧನೆಯ ಕೊನೆಗೆ ನನಗೆ ಈ ಕೊಲೆಗಳ ತನಿಖೆಯ ವಿಷಯದಲ್ಲಿ ಅಜ್ಞಾತ ಸತ್ಯದ ಅರಿವಾಯಿತು. ನ್ಯಾಯದ ಗಂಭೀರ ಗರ್ಭಪಾತ ಹಾಗೂ ತನಿಖಾ ತಂಡದವರ ಢೋಂಗಿತನವನ್ನು ನಾನು ಪ್ರತ್ಯಕ್ಷ ಓದಿದೆ. ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಉದ್ದೇಶಪೂರ್ವಕವಾಗಿ ರಾಜಕೀಯ ಶಕ್ತಿಯ ಉಪಯೋಗವಾಗಿ ತನಿಖೆಯನ್ನು ಪ್ರಭಾವಿತಗೊಳಿಸಲಾಗುತ್ತದೆ, ಎನ್ನುವ ಅನುಭವ ನನಗೆ ಆಘಾತಕಾರಿಯಾಗಿತ್ತು. ‘ಇವೆಲ್ಲವೂ ಸಮಾಜದ ಮುಂದೆ ಬರುವುದು ಆವಶ್ಯಕವಾಗಿದೆ’, ಎಂಬ ವಿಚಾರದಿಂದ ಈ ಪುಸ್ತಕವನ್ನು ಬರೆಯಲು ನಾನು ಮುಂದಾದೆನು.
೨. ಪೊಲೀಸ್ ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸುಧಾರಣೆ ಆವಶ್ಯಕ !
ಬ್ರಿಟಿಷ್ ಭಾರತದ ೧೯೦೧ ರ ಪೊಲೀಸ್ ಕಮಿಶನ್ ಮುಂದಿನಂತೆ ನೋಂದಣಿ ಮಾಡಿತ್ತು, ”ಇಡೀ ದೇಶದಾದ್ಯಂತದ ಪೊಲೀಸ್ ದಳ ಅತ್ಯಂತ ಅಸಮಾಧಾನಕರ ಸ್ಥಿತಿಯಲ್ಲಿದೆ, ಎಲ್ಲ ಕಡೆಗಳಲ್ಲಿ ಅಯೋಗ್ಯ ವರ್ತನೆಯು ಸಾಮಾನ್ಯವಾಗಿದೆ. ಅದರಿಂದ ಜನರಿಗೆ ದೊಡ್ಡ ಪೀಡೆ ಹಾಗೂ ಸರಕಾರದ ತೇಜೋವಧೆಯಾಗುತ್ತದೆ. ಅದಕ್ಕಾಗಿ ತಕ್ಷಣ ಇದರಲ್ಲಿ ಬಹಳಷ್ಟು ಸುಧಾರಣೆ ಆವಶ್ಯಕವಾಗಿದೆ, ಎಂಬುದರಲ್ಲಿ ಸಂದೇಹವಿಲ್ಲ.’’ ದುರದೃಷ್ಟವಶಾತ್ ಬ್ರಿಟಿಷ್ ಕಾಲದಿಂದ ಇಂದಿನ ವರೆಗೆ ಇದರಲ್ಲಿ ಹೆಚ್ಚಿನ ಬದಲಾವಣೆ ಆಗಿರುವುದು ಕಾಣಿಸುವುದಿಲ್ಲ. ಡಾ. ದಾಭೋಳ್ಕರ್, ಕಾಮ್ರೇಡ್ ಪಾನ್ಸರೆಯವರ ಹತ್ಯೆಯ ತನಿಖಾ ಪದ್ಧತಿಯಲ್ಲಿ ಅನೇಕ ಕೊರತೆಗಳಿವೆ. ಒಂದಂತೂ ತಪ್ಪು ಫಾರೆನ್ಸಿಕ್ ವರದಿ, ಮುಖ್ಯ ಹಾಗೂ ಪುರವಣಿ ಆರೋಪಪತ್ರದಲ್ಲಿ ಒಂದೇ ಅಪರಾಧಕ್ಕೆ ಬೇರೆ ಬೇರೆ ಜನರ ವಿರುದ್ಧ ಆರೋಪ ಮಾಡಲಾಯಿತು ಹಾಗೂ ಅದಕ್ಕಿಂತಲೂ ಕೆಟ್ಟದೆಂದರೆ, ಈ ಆರೋಪಪತ್ರಗಳಲ್ಲಿ ಸಂಬಂಧಪಟ್ಟ ಜನರನ್ನು ಗುರುತಿಸುವ ಭಿನ್ನ ಭಿನ್ನ ಸಾಕ್ಷಿದಾರರು ಮತ್ತು ಯಾವುದೇ ಮಹತ್ವಪೂರ್ಣ ಸಾಕ್ಷಿಯನ್ನು ಪ್ರಸ್ತುತಪಡಿಸಲು ಸಾಧ್ಯವಾಗದ ಪೊಲೀಸ್ ವ್ಯವಸ್ಥೆ, ಭಾರತದ ಅತ್ಯಂತ ಮಹತ್ವದ ತನಿಖಾದಳವಾದ ‘ಸಿಬೈ’ ಕೂಡ ಈ ಖಟ್ಲೆಯನ್ನು ಮುಂದುವರಿಸಬಾರದೆಂದು ಎಲ್ಲ ರೀತಿಯ ಯುಕ್ತಿಗಳನ್ನು ಉಪಯೋಗಿಸಿತು ಎಂದರೆ ಆಶ್ಚರ್ಯವೇನಿಲ್ಲ. ಒಟ್ಟಾರೆ ಇದರಲ್ಲಿ ಭಾರತದ ಪೊಲೀಸ್ ದಳಗಳು ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಅತಿಶೀಘ್ರ ಸುಧಾರಣೆಯಾಗುವ ಆವಶ್ಯಕತೆಯಿದೆ, ಎಂಬುದನ್ನು ಬೆಂಬತ್ತುವ ಸಲುವಾಗಿಯೆ ಈ ಪುಸ್ತಕವನ್ನು ಬರೆಯಲಾಯಿತು. ಜನರು ಈ ವಿಷಯದಲ್ಲಿ ಧ್ವನಿಯೆತ್ತದಿದ್ದರೆ ನಮಗೆ ಇಂತಹ ದಾರಿತಪ್ಪಿದ ತನಿಖೆಯನ್ನು ಭವಿಷ್ಯದಲ್ಲಿಯೂ ಅನುಭವಿಸಬೇಕಾಗಬಹುದು !
೩. ಕೇವಲ ಖಟ್ಲೆ ಅಲ್ಲ, ಇದು ಸಾಮ್ಯವಾದಿಗಳ ವಿರುದ್ಧದ ಒಂದು ದೀರ್ಘ ಹೋರಾಟವಾಗಿದೆ !
ಈ ಲೇಖನದ ಅವಧಿಯಲ್ಲಿ ಅನೇಕ ಬಾರಿ ಈ ಖಟ್ಲೆಯನ್ನು ನಡೆಸುವ ನ್ಯಾಯವಾದಿಗಳೊಂದಿಗೆ ನನ್ನ ಸಂಪರ್ಕವಾಯಿತು, ಅದರಲ್ಲಿ ನ್ಯಾಯವಾದಿ ಸಂಜೀವ ಪುನಾಳೆಕರ್, ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ್, ವಕೀಲೆ ಸುವರ್ಣಾ ಅವ್ಹಾಡ-ಬಸ್ತ, ನ್ಯಾಯವಾದಿ ಸಮೀರ ಪಟವರ್ಧನ ಇವರೆಲ್ಲರಿದ್ದಾರೆ. ನಾನು ಅವರಲ್ಲಿ ಕೆಲವು ಸಂದೇಹಗಳನ್ನೂ ಕೇಳಿದ್ದೆನು. ಹೀಗೆಯೆ ಒಂದು ಭೇಟಿಯಲ್ಲಿ ನಾನು ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ ಇವರಲ್ಲಿ ಕೇಳಿದೆ, ”ಇದು ಇಷ್ಟು ದೀರ್ಘಕಾಲ ನಡೆಯುವ ಹೋರಾಟವಾಗಿದೆ. ನೀವು ಈ ಖಟ್ಲೆಗಳನ್ನು ಏಕೆ ನಡೆಸುತ್ತೀರಿ ?
ಇದರಲ್ಲಿ ನಿಮಗೆ ಊರ್ಜೆ ಎಲ್ಲಿಂದ ಸಿಗುತ್ತದೆ ?’’ ಅವರ ಉತ್ತರ ಅತ್ಯಂತ ನಿಖರ ಹಾಗೂ ಮಾರ್ಮಿಕವಾಗಿದೆ. ನ್ಯಾಯವಾದಿ ಇಚಲಕರಂಜೀಕರರು ಹೇಳಿದರು, ”ಇದು ಕೇವಲ ಖಟ್ಲೆಯಲ್ಲ, ಇದು ವ್ಯವಸ್ಥೆಯಲ್ಲಿ ಕುಳಿತಿರುವ ಸಾಮ್ಯವಾದಿಗಳ ವಿರುದ್ಧದ ಒಂದು ದೀರ್ಘ ಹೋರಾಟವಾಗಿದೆ. ನಾವು ಸಾಮಾನ್ಯ ನಾಗರಿಕರು ಅದನ್ನು ಕೇವಲ ಕೆಲವು ಖಟ್ಲೆ ಅಥವಾ ‘ಕೊಲೆಯ ತನಿಖೆ’, ಎಂದು ನೋಡುತ್ತೇವೆ; ಆದರೆ ಮೂಲತಃ ಇವರು ವ್ಯವಸ್ಥೆಯಲ್ಲಿದ್ದು ನಮ್ಮನ್ನು ಹಿಂಸಿಸುವ ಸಾಮ್ಯವಾದಿಗಳಾಗಿದ್ದಾರೆ. ಅವರ ದೃಷ್ಟಿಯಲ್ಲಿ ಈ ಕೊಲೆ ಹಾಗೂ ಅದರಿಂದಾಗುವ ವೇದನೆಯು ಸುದೀರ್ಘ ಯುದ್ಧವನ್ನು ಗೆಲ್ಲುವ ಒಂದು ಮಾರ್ಗವಾಗಿದೆ. ಕಾ. ಪಾನ್ಸರೆಯವರ ಕೊಲೆಯಾದಾಗ ಅವರು ತುಂಬಾ ವರ್ಷಗಳ ಹಿಂದೆ ಬರೆದಿರುವ ‘ಶಿವಾಜಿ ಯಾರು ?’, ಎನ್ನುವ ಸಣ್ಣ ಒಂದು ಪುಸ್ತಕ ದೊಡ್ಡ ಪ್ರಮಾಣದಲ್ಲಿ ಮಾರಾಟವಾಯಿತು. ಆ ಪುಸ್ತಕದ ಬಗ್ಗೆ ಉದ್ದೇಶಪೂರ್ವಕ ಚರ್ಚೆ ಮಾಡಲಾಯಿತು. ಇದು ಏನನ್ನು ತೋರಿಸುತ್ತದೆ ?
ಇದು ಆ ವ್ಯಕ್ತಿಯ ಸಾವಿನ ವೈಯಕ್ತಿಕ ವೇದನೆಯನ್ನು ತೋರಿಸುವುದಿಲ್ಲ, ಇದು ವೇದನೆಯ ಲಾಭಪಡೆದು ‘ಛತ್ರಪತಿ ಶಿವಾಜಿ ಮಹಾರಾಜರು ಹಿಂದುತ್ವನಿಷ್ಠರಾಗಿರಲಿಲ್ಲ, ಅವರು ಸೆಕ್ಯುಲರ್ (ಜಾತ್ಯತೀತ) ಆಗಿದ್ದರು’, ಎನ್ನುವ ಸಾಮ್ಯವಾದಿ ವಿಚಾರಗಳನ್ನು ಮತ್ತೊಮ್ಮೆ ಪ್ರಚಾರ ಮಾಡುವ ಅವಕಾಶವನ್ನು ಇದು ತೋರಿಸುತ್ತದೆ. ಸಾಮ್ಯವಾದಿ ಪಾನ್ಸರೆಯವರು ‘ಛತ್ರಪತಿ ಶಿವಾಜಿ ಮಹಾರಾಜರನ್ನು ಇನ್ನಿತರ ರಾಜರಂತೆಯೆ ಓರ್ವ ರಾಜಾ, ಕೇವಲ ಒಳ್ಳೆಯ ರಾಜಾ’, ಎಂಬ ವೈಶಿಷ್ಟ್ಯವನ್ನು ಮಂಡಿಸಲು ಮಾಡಿದ ವಿಫಲ ಪ್ರಯತ್ನವನ್ನು ಮತ್ತೊಮ್ಮೆ ಮಾಡಲಾಯಿತು ಹಾಗೂ ಈಗ ಅದಕ್ಕೆ ಲೇಖಕನ ಕೊಲೆಯ ಹಿನ್ನೆಲೆ ಇರುವುದರಿಂದ ಸಾಮ್ಯವಾದಿಗಳು ಈ ಪ್ರಯತ್ನದಲ್ಲಿ ಯಶಸ್ವಿಯಾಗಿರಲೂ ಬಹುದು. ಹೀಗಿದೆ ಈ ದೀರ್ಘ ಹೋರಾಟ. ಸಾಮ್ಯವಾದಿಗಳಿಗೆ ಸಮಾಜ ಹಾಗೂ ಆಡಳಿತ ಪದ್ಧತಿ ಇವೆರಡೂ ಅವರ ವಿಚಾರಶೈಲಿಯದ್ದಾಗಿರಬೇಕು. ಅದಕ್ಕಾಗಿ ವಿವಿಧ ಸಿದ್ಧತೆಗಳನ್ನು ಅವಲಂಬಿಸಿ ವಿವಿಧ ಕಥೆಗಳನ್ನು ಹಾಗೂ ಸಣ್ಣ ಸಣ್ಣ ಹೋರಾಟಗಳನ್ನು ಸಿದ್ಧ ಮಾಡುವುದು, ಅವರ ದೀರ್ಘಕಾಲದ ಯುದ್ಧ ಪ್ರಕ್ರಿಯೆ ಆಗಿದೆ. ದೇಶದಲ್ಲಿ ಕೊಲೆಗಳೇ ಆಗುವುದಿಲ್ಲವೆ ?
ಇದರ ಉತ್ತರ ‘ಆಗುತ್ತವೆ’ ಎಂಬುದಾಗಿದೆ; ಆದರೆ ಕಲ್ಬುರ್ಗಿ ಯವರ ಕೊಲೆಯ ನಂತರ ೬೫ ಜನರು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸಿದರು. ಆಗ ‘ಪ್ರಶಸ್ತಿ ವಾಪಸಿ’ಯ ಒಂದು ಚಳುವಳಿಯನ್ನೇ ಹಮ್ಮಿಕೊಳ್ಳಲಾಯಿತು. ಇದೇಕೆ ? ಇದರ ಅರ್ಥ, ಇವರೆಲ್ಲರೂ ವಿಶಿಷ್ಟ ಕೊಲೆಯ ವಿಷಯದಲ್ಲಿ ಸಂವೇದನಾಶೀಲ ರಾಗಿದ್ದರು ಹಾಗೂ ಅದರ ಬಗ್ಗೆಯೇ ಅವರಿಗೆ ಚರ್ಚೆ ಮಾಡಬೇಕಾಗಿತ್ತು, ಎಂಬುದನ್ನು ಗಮನಿಸಬೇಕು.
ಇದು ತಮ್ಮ ಮಿಥ್ಯವನ್ನು ತಯಾರು ಮಾಡುವ ಪ್ರಕ್ರಿಯೆ ಯಾಗಿದೆ, ಇದರ ಎರಡು ಸಣ್ಣ ಉದಾಹರಣೆಯನ್ನು ಕೊಡುತ್ತೇನೆ. ಮೊದಲನೆಯದ್ದು ನಕ್ಸಲವಾದಿ. ನಕ್ಸಲವಾದವು ಸಾಮ್ಯವಾದದ ಒಂದು ಭಾಗವಾಗಿದೆ. ಸಾಮ್ಯವಾದ ಹಿಂಸಾಚಾರದ ಮಾರ್ಗವನ್ನು ಬಹಿರಂಗವಾಗಿ ತನ್ನದಾಗಿಸಿ ಕೊಳ್ಳುತ್ತದೆ, ಆದರೆ ಭಾರತದಲ್ಲಿ ಜನಸಾಮಾನ್ಯರ ದೃಷ್ಟಿಯಲ್ಲಿ ನಕ್ಸಲವಾದಿ ಹಾಗೂ ಸಾಮ್ಯವಾದಿ ಬೇರೆ ಬೇರೆ ಎಂಬ ಚಿತ್ರ ಮೂಡಿದೆ ! ಇದು ಸಾಮ್ಯವಾದಿಗಳ ಯಶಸ್ಸಾಗಿದೆ, ಅಂದರೆ ಹಿಂಸಾಚಾರವನ್ನು ಮಾಡುವುದು; ಆದರೆ ಅದರ ನೈತಿಕ ಹೊಣೆಯನ್ನು ತಾವು ಸ್ವೀಕರಿಸದೆ ನಕ್ಸಲವಾದಿಗಳ ಮೇಲೆ ಹೇರುವುದು ಹಾಗೂ ಶಾಂತರಾಗಿದ್ದು ಅವರಿಗೆ ಕದ್ದುಮುಚ್ಚಿ ಸಹಾಯವನ್ನೂ ಮಾಡುವುದು ! ಇದರಿಂದಲೇ ಇನ್ನೊಂದು ಉದಾಹರಣೆ ತಯಾರಾಗುತ್ತದೆ.
ನಾವು ಚರ್ಚಾತ್ಮಕವಾಗಿ ಹೀಗೆ ಒಪ್ಪಿಕೊಳ್ಳೋಣ, ಅಂದರೆ ದಾಭೋಳ್ಕರ್, ಪಾನ್ಸರೆ, ಗೌರಿ ಲಂಕೇಶ ಹಾಗೂ ಕಲ್ಬುರ್ಗಿ ಇವರೆಲ್ಲರು ಸಾಮ್ಯವಾದಿ ಅಥವಾ ಸಮಾಜವಾದಿ ವಿಚಾರದವರಾಗಿದ್ದರು ಅಥವಾ ಆ ವಿಚಾರದಲ್ಲಿ ಮುಂದುವರಿಯುವವರಾಗಿದ್ದರು, ಅವರನ್ನು ಕೆಲವು ಹಿಂದುತ್ವನಿಷ್ಠರು ಕೊಂದರು. ಇಂದು ನ್ಯಾಯಾಲಯದಲ್ಲಿ ಆರೋಪಿಗಳೆಂದು ನಿಂತಿರುವವರೇ ಆ ಹಿಂದುತ್ವನಿಷ್ಠರಾಗಿರ ಬಹುದು, ಎಂದೇನಿಲ್ಲ, ಆದರೆ ಕೆಲವು ಜನರು ಅವನನ್ನು ಕೊಂದರು, ಎಂದು ಚರ್ಚೆಗೋಸ್ಕರವಾದರೂ ಊಹಿಸಿದರೂ ದೇಶದಾದ್ಯಂತ ಎಂತಹ ಚಿತ್ರಣ ಇದೆ ? ಎಂತಹ ಅಭಿಪ್ರಾಯಗಳನ್ನು ಮೂಡಿಸಲಾಗುತ್ತಿದೆ ? ಎಂಬುದನ್ನು ನಾವು ನೋಡೋಣ.
೪. ನಕ್ಸಲವಾದದಿಂದ ಕೊಲೆಯಾಗಿರುವ ೧೪ ಸಾವಿರ ನಾಗರಿಕರ ವಿಷಯದಲ್ಲಿ ಸಮಾಜದ ಸಂವೇದನೆ ಎಲ್ಲಿಗೆ ಹೋಗುತ್ತದೆ ?
ನಕ್ಸಲವಾದದಿಂದ ದೇಶದಲ್ಲಿ ಸಾವಿಗೀಡಾದವರ ಸಂಖ್ಯೆ ೧೪ ಸಾವಿರಕ್ಕಿಂತಲೂ ಹೆಚ್ಚಿದೆ. ಈ ಹತ್ಯೆ ಪ್ರತಿಯೊಂದು ವಾರದಲ್ಲಿ, ತಿಂಗಳಲ್ಲಿ ಆಗುತ್ತಾ ಇರುತ್ತದೆ. ಅದರ ವಾರ್ತೆಯನ್ನು ನಾವು ವರ್ತಮಾನಪತ್ರಿಕೆಗಳಲ್ಲಿ ಓದುತ್ತೇವೆ; ಆದರೆ ನಮಗೆ ಅದರಿಂದ ಏನೂ ಅನಿಸುವುದಿಲ್ಲ. ಇದರಲ್ಲಿ ಪೊಲೀಸ್ ಅಧಿಕಾರಿ, ಶಾಸಕರು, ಸೈನಿಕರು, ಸರಪಂಚರು, ಸಾಮಾನ್ಯ ನಾಗರಿಕರು ಹಾಗೂ ಆದಿವಾಸಿ ಹೀಗೆ ಎಲ್ಲರೂ ಇದ್ದಾರೆ; ಆದರೆ ನಮಗೇನೂ ಅನಿಸುವುದಿಲ್ಲ ಅಥವಾ ಅದರ ಬಗ್ಗೆ ವಿಚಾರ ಮಾಡುವುದಿಲ್ಲ. ನಮ್ಮನ್ನು ಎಷ್ಟು ಕಿವುಡರನ್ನಾಗಿ ಮಾಡಲಾಗಿದೆಯೆಂದರೆ, ಆ ವಾರ್ತೆಗಳನ್ನು ಓದಿ ನಾವು ಮುಂದಿನ ಪುಟವನ್ನು ಓದಲು ಪ್ರಾರಂಭಿಸುತ್ತೇವೆ; ಹೀಗಿರುವಾಗ ಈ ೪ ಸಾಮ್ಯವಾದಿಗಳ ಹತ್ಯೆಯಿಂದ ದೇಶದಲ್ಲಿ ಇಷ್ಟು ಅಲ್ಲೋಲಕಲ್ಲೋಲವಾಗುತ್ತಿದ್ದರೆ, ಆ ಸಾವಿರಾರು ಸಾಮಾನ್ಯ ನಾಗರಿಕರು, ಪೊಲೀಸರು, ಸರಪಂಚರಂತಹ ಜನಪ್ರತಿನಿಧಿಗಳ ಸಹಿತ ಆದಿವಾಸಿಗಳ ಹತ್ಯೆ ಮಾಡಿದ್ದಕ್ಕಾಗಿ ದೇಶದಲ್ಲಿ ಏನಾಗಬೇಕಿತ್ತು ? ಆಗ ಸಮಾಜದ ಸಂವೇದನಾಶೀಲತೆ ಎಲ್ಲಿರುತ್ತದೆ ? ಹಾಗಾದರೆ ಅದೇ ಸಂವೇದನೆಯನ್ನು ಕೇವಲ ೪ ಹತ್ಯೆಯ ವಿಷಯದಲ್ಲಿ ಹೇಗೆ ಉಂಟು ಮಾಡಲಾಗುತ್ತದೆ ? ನನ್ನಂತಹ ನ್ಯಾಯವಾದಿಗಳ ಆಕ್ಷೇಪ ಹಾಗೂ ನಿಜವಾದ ಹೋರಾಟ ಅಲ್ಲಿದೆ. ಹತ್ಯೆ ಮಾಡುವುದು ಖಂಡನೀಯವೇ ಆಗಿದೆ; ಆದರೆ ೧೪ ಸಾವಿರ ಹತ್ಯೆಯ ವಿಷಯದಲ್ಲಿ ಸಮಾಜವನ್ನು ಅಸಂವೇದನಾಶೀಲವನ್ನಾಗಿ ಮಾಡುವುದು ಹಾಗೂ ‘ಗಾಂಧಿ ಹತ್ಯೆಯ ನಂತರ ದೇಶದಲ್ಲಿ ಎಲ್ಲವೂ ಶಾಂತವಾಗಿತ್ತು, ಅನಂತರ ನೇರವಾಗಿ ೨೦೧೩ ರಲ್ಲಿ ದಾಭೋಳ್ಕರರ ಹತ್ಯೆಯಾಯಿತು’, ಎನ್ನುವ ಚಿತ್ರಣವನ್ನು ಮೂಡಿಸುವುದು, ಇದು ವೈಚಾರಿಕ ಭಯೋತ್ಪಾದನೆಯಾಗಿದೆ. ಸಂಘ, ಭಾಜಪ ಹಾಗೂ ಮೋದಿಯವರ ಆಡಳಿತವನ್ನು ಅಲ್ಲಾಡಿಸುವ ಆಯುಧ ಇದಾಗಿದೆಯೇ ?’’ ನ್ಯಾಯವಾದಿ ಇಚಲಕರಂಜೀಕರರ ಈ ಪ್ರಶ್ನೆ ಯಾರಿಗೆ ಒಪ್ಪಿಗೆಯಾಗಲಿ ಅಥವಾ ಆಗದಿರಲಿ, ಆದರೆ ನಿಜವಾಗಿಯೂ ವಿಚಾರ ಮಾಡುವ ಹಾಗಿದೆ !
೫. ‘ನಕ್ಸಲವಾದಿ ಹಿಂಸಾಚಾರ’, ಇದು ಭಯೋತ್ಪಾದನೆಯಲ್ಲವೇ ?
೨೦೧೦ ರಲ್ಲಿ ಪ್ರಧಾನಮಂತ್ರಿ ಮನಮೋಹನ ಸಿಂಹ ಇವರು ‘ದೇಶದಾದ್ಯಂತದ ಭದ್ರತೆಯಲ್ಲಿ ನಕ್ಸಲವಾದದ ಸಮಸ್ಯೆ ಗಂಭೀರವಾಗಿದೆ’, ಎಂದಿದ್ದರು. ದೇಶದ ನಕ್ಸಲವಾದದಿಂದ ಪೀಡಿತವಾದ ಪ್ರದೇಶದ ವ್ಯಾಪ್ತಿಯನ್ನು ನೋಡಿದರೆ, ಅದು ಕೇರಳದಂತಹ ರಾಜ್ಯಕ್ಕಿಂತ ದೊಡ್ಡದಾಗಿತ್ತು; ಹಾಗಾದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಈ ಸಮಸ್ಯೆಗಾಗಿ ಎಷ್ಟು ದೊಡ್ಡ ಪ್ರಮಾಣದಲ್ಲಿ ಖರ್ಚಾಗುತ್ತಿರಬಹುದು ? ಯಾವುದೋ ಒಂದು ರಾಜಕೀಯ ವಿಚಾರಧಾರೆ ನಕ್ಸಲವಾದಿಗಳ ಮಾಧ್ಯಮದಿಂದ ನಿರಂತರ ಹಿಂಸಾಚಾರ ಮಾಡುತ್ತದೆ; ಆದರೆ ಅದು ಭಯೋತ್ಪಾದನೆ ಆಗಿರುವುದಿಲ್ಲ ಅಥವಾ ಅದಕ್ಕೆ ಪ್ರಸ್ತುತ ವ್ಯವಸ್ಥೆಯು ‘ಭಯೋತ್ಪಾದನೆ’ ಎಂದು ಹೇಳಲು ಆಸ್ಪದ ನೀಡುವುದಿಲ್ಲ. ಅದನ್ನು ‘ಹಕ್ಕುಗಳ ಹೋರಾಟ’ ಎಂದು ಹೇಳುತ್ತಾ ಹಿಂಸಾತ್ಮಕವಾಗಿ ಹೋರಾಡುವ ಅದರ ವಿರುದ್ಧ ಮಾಧ್ಯಮಗಳು, ರಾಜಕಾರಣ ಹಾಗೂ ನ್ಯಾಯಾಂಗ ಸಂಸ್ಥೆ ಇವು ಉದಾರತೆ ತೋರಿಸುತ್ತವೆ, ಎಂಬುದು ಗಂಭೀರವಾಗಿದೆ. ಪ್ರಸ್ತುತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ಯೆಯ ಒಳಸಂಚು ಮಾಡಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಅರ್ಬನ್ ನಕ್ಸಲವಾದಿಗಳ ವಿಷಯದಲ್ಲಿ ‘ಜಿಹಾದಿ’, ‘ಭಯೋತ್ಪಾದಕರು’ ಎಂಬ ಶಬ್ದವನ್ನು ಉಪಯೋಗಿಸದೆ, ‘ಲೇಖಕ’, ‘ವಿಚಾರವಾದಿ’, ‘ಸಾಮಾಜಿಕ ಕಾರ್ಯಕರ್ತರು’ ಇಂತಹ ವಿಶ್ಲೇಷಣೆ ನೀಡಿ ಅವರ ಹೆಸರನ್ನು ಬಹಳ ಗೌರವದಿಂದ ಉಚ್ಚರಿಸಲಾಗುತ್ತಿತ್ತು, ಅವರನ್ನು ನಾವು ಅಂತಹ ಸಹಾನುಭೂತಿಯಿಂದ ನೋಡುವಂತೆ ಒತ್ತಡ ಹೇರಲಾಗುತ್ತಿತ್ತು. ಅದೇ ಸಮಯದಲ್ಲಿ ನಾಲಾಸೋಪಾರ ಬಾಂಬ್ ಸಂಗ್ರಹ ಪ್ರಕರಣದಲ್ಲಿ ಬಂಧಿಸಲ್ಪಟ್ಟವರನ್ನು ‘ಹಿಂದೂ ಭಯೋತ್ಪಾದಕರು’ ಎಂದು ಹೇಳಲಾಗುತ್ತಿತ್ತು. ಇದು ಕೂಡ ಒಂದು ‘ವೈಚಾರಿಕ ಭಯೋತ್ಪಾದನೆ’ಯೇ ಆಗಿದೆ !
೬. ಸಾಮ್ಯವಾದಿಗಳ ವೈಚಾರಿಕ ಭಯೋತ್ಪಾದನೆ !
ನಾವು ಬ್ರಿಟಿಷರೊಂದಿಗೆ ಹೋರಾಡಿ ಸ್ವಾತಂತ್ರ್ಯವನ್ನು ಗಳಿಸಿದೆವು; ಆದರೆ ನಮ್ಮ ಮಕ್ಕಳಿಗೆ ನಮ್ಮ ಇತಿಹಾಸದಲ್ಲಿ ‘ಅಕ್ಬರ ದ ಗ್ರೇಟ್’ ಹಾಗೂ ‘ಮೊಗಲರು ಹೇಗೆ ದೇಶದ ರಾಜರಾಗಿದ್ದರು ?’, ಎಂಬುದರ ಇತಿಹಾಸವನ್ನೇ ಇದುವರೆಗೆ ಕಲಿಸಬೇಕಾಗುತ್ತಿದೆ. ‘ಬ್ರಿಟಿಷರು ಭಾರತವನ್ನು ಮೊಗಲರಿಂದಲ್ಲ, ಮರಾಠರಿಂದ ಗೆದ್ದುಕೊಂಡಿದ್ದಾರೆ’, ಎನ್ನುವ ವಿಷಯವೂ ನಮಗೆ ಗೊತ್ತಿಲ್ಲ, ಇಂತಹ ಇತಿಹಾಸವನ್ನು ಬರೆಯಲಾಗುತ್ತದೆ. ಜೋಸೆಫ್ ಸ್ಟಾಲೀನ್‌ನ ‘ಒಬ್ಬ ಮನುಷ್ಯನ ಮರಣವು ದುಃಖದಾಯಕವಾಗಿದೆ. ಲಕ್ಷಗಟ್ಟಲೆ ಜನರ ಮರಣ ಕೇವಲ ಅಂಕಿಅಂಶಗಳಾಗಿವೆ !’, ಈ ವಾಕ್ಯದ ಪ್ರಕಾರ ೪ ಜನರ ಸಾವು ಇದು ದುಃಖದ ವಿಷಯವಾಗಿದೆ. ಆದರೆ ೧೪ ಸಾವಿರ ಜನರು ಸತ್ತರು ಅಥವಾ ಕನಿಷ್ಠ ೧ ಸಾವಿರ ಸತ್ತರು, ಎಂದು ತಿಳಿದುಕೊಂಡರೂ ‘ಅದು ಕೇವಲ ಅಂಕಿಅಂಶವಾಗಿದೆ’, ಎಂದು ನಾವಿಂದು ತಿಳಿದುಕೊಳ್ಳುತ್ತಿಲ್ಲವೇ ?
ಸ್ಟಾಲೀನ್‌ನ ಇನ್ನೂ ಒಂದು ವಾಕ್ಯ ಅಷ್ಟೇ ಮಹತ್ವದ್ದಾಗಿದೆ. ಅವನು ಹೇಳಿದ್ದನು, ‘ಫ್ಡೀಟಿಣ ಇಸ್ ಣಹೆ ಶ್ಚಿಡಿಠಿಎಸ್ಣ ಚಿಟಿಜ ಸ್ಣಡಿಒಟಿಗೆಸ್ಣ ತಿಎಚಿಠಿಒಟಿ ಒಜಿ ಔಡಿ ಠಿಚಿಡಿಣಥಿ (‘ಪ್ರಕಾಶನವೇ ನಮ್ಮ ಪಕ್ಷದ ಅತ್ಯಂತ ಹರಿತವಾದ ಹಾಗೂ ಶಕ್ತಿಶಾಲಿ ಶಸ್ತ್ರವಾಗಿದೆ.)’ ಸಾಯುವವರೆಗೆ ಯಾರಿಗೂ ಹೆಚ್ಚಿನ ಪರಿಚಯವಿಲ್ಲದ ಕಾ. ಪಾನ್ಸರೆ ಹಾಗೂ ಗೌರಿ ಲಂಕೇಶ ಇವರಿಬ್ಬರೂ ಮರಣದ ನಂತರ ಮಾತ್ರ ಬಹಳ ದೊಡ್ಡ ವಿಚಾರವಾದಿ ಹಾಗೂ ಸಾಮಾಜಿಕ ಚಳುವಳಿಯ ನೇತಾರರಾಗಿದ್ದರು ಎಂಬ ಪ್ರತಿಮೆ ಮೂಡಿಸಲಾಯಿತೇ ? ಹಾಗೆ ಆಗಿದ್ದರೆ, ಅದನ್ನು ಇದೇ ಶಸ್ತ್ರದ ಮೂಲಕ ಮಾಡಿರಬಹುದೇ ? ಒಂದು ರೀತಿಯಲ್ಲಿ ಇವೆಲ್ಲವೂ ವೈಚಾರಿಕ ಭಯೋತ್ಪಾದನೆಯಾಗಿದೆ ! ಇದು ಹೀಗೆಯೇ ಮುಂದುವರಿದರೆ, ಮರಣದ ಮೊದಲು ಯಾರಿಗೂ ಪರಿಚಯವಿಲ್ಲದ ಅಥವಾ ಮರೆತು ಹೋಗಿರುವ ಕಾ. ಪಾನ್ಸರೆ ಇನ್ನೊಂದು ೫೦ ವರ್ಷಗಳ ನಂತರ ಜಾಗತಿಕ ಸ್ವರೂಪದ ನೇತಾರರಾಗಿ ದ್ದರು ಎಂದು ಬಣ್ಣಿಸಲಾಗುವುದು ಹಾಗೂ ‘ಇಸ್ಲಾಮಿಕ್ ಭಯೋತ್ಪಾದನೆಯನ್ನು ವರ್ಜಿಸಿ ವಿಚಾರವಾದಿಗಳ ಹತ್ಯೆಯ ಖಟ್ಲೆ ಹಾಗೂ ಮಾಲೆಗಾವ್ ಸ್ಫೋಟದಂತಹ ಖಟ್ಲೆಗಳಲ್ಲಿನ ಆರೋಪಿಗಳನ್ನು ‘ಜಾಗತಿಕ ಭಯೋತ್ಪಾದಕರೆಂದು ಘೋಷಣೆ ಮಾಡಬಹುದು’, ಎಂಬ ಬಗ್ಗೆ ಭಯವೆನಿಸುವುದು ಸುಳ್ಳಲ್ಲ !
‘ವೈಚಾರಿಕ ಭಯೋತ್ಪಾದನೆ’ಯು ನಮಗೆ ತಿಳಿಯದಂತೆಯೇ ‘ರಾಜಾ ವಿಕ್ರಮಾದಿತ್ಯನ ಹೆಗಲ ಮೇಲೆ ಹೇಗೆ ಬೇತಾಳ ಕುಳಿತಿದ್ದನೋ’, ಹಾಗೆಯೇ ಕುಳಿತಿದೆ ! ರಾಜಾ ವಿಕ್ರಮಾದಿತ್ಯನಿಗೆ ಅದರ ಅರಿವಿತ್ತು ಹಾಗೂ ಅವನು ತನ್ನ ತಲೆಯನ್ನು ೧೦೦ ಹೋಳಾಗಲು ಬಿಡಲಿಲ್ಲ. ದೇಶದ ನಾಗರಿಕರ ತಲೆ ಮಾತ್ರ ವೈಚಾರಿಕ ದೃಷ್ಟಿಯಲ್ಲಿ ಹೀಗೆ ಹೋಳಾಗುವುದನ್ನು ನಾವು ನೋಡುತ್ತಿದ್ದೇವೆ. ಈ ಭಯೋತ್ಪಾದನೆಯು ಹೀಗೆ ಅದೃಶ್ಯ ಹಾಗೂ ಸಾವಿರಾರು ಪಟ್ಟು ಹೆಚ್ಚು ವಿಷಯುಕ್ತ ವಾಗಿದೆ; ಅದರಿಂದ ನಾವು ನಮ್ಮ ಸಂಸ್ಕೃತಿ, ಇತಿಹಾಸ ಹಾಗೂ ಮುಂಬರುವ ಕಾಲದಲ್ಲಿ ನಮ್ಮನ್ನೇ ನಾವು ಕಳೆದು ಕೊಳ್ಳಲಿಕ್ಕಿದ್ದೇವೆ ! ಆದ್ದರಿಂದ ಇದರೊಂದಿಗೆ ವೈಚಾರಿಕ ಸ್ತರದಲ್ಲಿ ಹೋರಾಡುವುದು ನಮ್ಮ ಕರ್ತವ್ಯವಾಗಿದೆ.
– ಡಾ. ಅಮಿತ ಥಡಾನಿ, ಖ್ಯಾತ ಶಸ್ತ್ರಚಿಕಿತ್ಸಕರು, ಮುಂಬಯಿ.
ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯಾರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥ ಗಳಲ್ಲಿ ಉಲ್ಲೇಖವಿದೆ. |