‘ಪ್ರಸ್ತುತ ಅನೇಕ ಸಾಧಕರು, ಹಿತಚಿಂತಕರು ಮತ್ತು ಮಧ್ಯಮವರ್ಗೀಯ ಕುಟುಂಬಗಳು ಸಹ ಷೇರು ಮಾರುಕಟ್ಟೆಯಲ್ಲಿ ದೀಪಾವಳಿಹಬ್ಬದ ನಿಮಿತ್ತ ಅಥವಾ ಇತರ ಕಾರಣಗಳಿಂದ ಹೆಚ್ಚು ಹಣಹೂಡಿಕೆಯನ್ನು ಮಾಡುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಪರಿಚಯದ ವ್ಯಕ್ತಿಗಳ, ಸಂಬಂಧಿಕರ ಅಥವಾ ಸ್ನೇಹಿತರ ಸಲಹೆಯ ಮೇರೆಗೆ ಅಥವಾ ಜಾಹೀರಾತುಗಳನ್ನು ನೋಡಿ ಹಣಹೂಡಿಕೆ ಮಾಡಲಾಗುತ್ತದೆ, ಎಂಬುದು ಗಮನಕ್ಕೆ ಬಂದಿದೆ. ವಾಸ್ತವದಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣಹೂಡಿಕೆಯನ್ನು ಮಾಡುವಾಗ ಹೆಚ್ಚಿನ ಜನರಿಗೆ ಅದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಪ್ರಾಥಮಿಕ ಅಧ್ಯಯನವೂ ಇರುವುದಿಲ್ಲ. ಕೇವಲ ಪ್ರಲೋಭನೆಗೆ ಒಳಗಾಗಿ ಅಥವಾ ತ್ವರಿತ ದೊಡ್ಡ ಪ್ರತಿಫಲ ಸಿಗಬೇಕೆಂಬ ಆಮಿಷದಿಂದ ತನ್ನ ಉಳಿತಾಯದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಲಾಗುತ್ತದೆ. ಅನೇಕ ಹೂಡಿಕೆದಾರರು ಮಾಡಿದ ಹೂಡಿಕೆಯ ಅಧ್ಯಯನವನ್ನು ಮಾಡಿದಾಗ ಗಮನಕ್ಕೆ ಬಂದಿರುವುದೇನೆಂದರೆ, ಕೆಲವೇ ಜನರು ತಮ್ಮ ಆದಾಯವನ್ನು ಪಡೆದಿದ್ದಾರೆ. ಅನೇಕ ಪ್ರಕರಣಗಳಲ್ಲಿ ಎಲ್ಲ ಹಣವನ್ನು ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ. ಪ್ರಾರಂಭದಲ್ಲಿ ಅನೇಕ ಪ್ರಕರಣಗಳಲ್ಲಿ ಕೆಲವು ಸೀಮಿತ ಮೊತ್ತದ ಮರುಪಾವತಿಯನ್ನು ಪಡೆಯಲಾಯಿತು; ಆದರೆ ಕಾಲಾಂತರದಲ್ಲಿ ಆ ಹೂಡಿಕೆದಾರರೂ ನಷ್ಟವನ್ನೇ ಅನುಭವಿಸಬೇಕಾಗಿ ಬಂದಿದೆ. ಆದ್ದರಿಂದ ಹೂಡಿಕೆ ಪ್ರತಿಯೊಬ್ಬರ ವೈಯಕ್ತಿಕ ವಿಷಯವಾಗಿದ್ದರೂ, ಈ ಕ್ಷೇತ್ರದ ಅಪಾಯಗಳನ್ನು ಮತ್ತು ಮೋಸಗಾರಿಕೆಯನ್ನು ಗಮನಕ್ಕೆ ಬರಬೇಕು ಎಂಬುದೇ ಈ ಲೇಖನದ ಹಿಂದಿನ ಉದ್ದೇಶ !
೧. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ, ಎಂದರೆ ಶೇ. ೧೦೦ ರಷ್ಟು ಗಂಡಾಂತರ !
ಸಾಮಾನ್ಯವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಎಂದರೆ ಗಂಡಾಂತರವೆಂದೇ ತಿಳಿಯಲಾಗುತ್ತದೆ; ಆದರೆ ಜಾಹೀರಾತುಗಳಿಂದ ಅದರ ನಿಜ ಸ್ವರೂಪವು ಎದುರಿಗೆ ಬರುವುದಿಲ್ಲ. ‘ತ್ವರಿತ ಮತ್ತು ಭಾರೀ ಆದಾಯ ಅಂದರೆ ಹಣ ಮುಳುಗುವ ಸಾಧ್ಯತೆ ಅಧಿಕ’, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ‘ಷೇರು ಮಾರುಕಟ್ಟೆಯಲ್ಲಿ ಹಣವು ಎಂದಿಗೂ ಮುಳುಗುವುದಿಲ್ಲ’, ಎಂದು ಷೇರು-ಮಾರಾಟಗಾರರು (ಷೇರ್ ಬ್ರೊಕರ್) ಹೇಳುತ್ತಾರೆ. ನಂತರ ಅವರು, ನಿಮ್ಮ ಆಯ್ಕೆಯಲ್ಲಿ ನಿಮ್ಮ ಸಂಪೂರ್ಣ ಹಣ ಮುಳುಗುವ ಸಾಧ್ಯತೆ ಇದೆ, ಎಂದೂ ಹೇಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಈ ಪ್ರಲೋಭನೆಗೆ ಒಳಗಾಗದೆ ಮತ್ತು ಜಾಗರೂಕತೆಯಿಂದ ವಿಚಾರ ಮಾಡಿ ಹೂಡಿಕೆ ಮಾಡಬೇಕು. ಇದರಲ್ಲಿ ರಕ್ಷಣೆಗೆ ಯಾವ ಭರವಸೆಯೂ ಇರುವುದಿಲ್ಲ ಕೇವಲ ಶೇ. ೧೦೦ ರಷ್ಟು ಗಂಡಾಂತರವೇ ಇರುತ್ತದೆ
೨. ವಿವಿಧ ಕಂಪನಿಗಳ ಮಾಧ್ಯಮದಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಹೊಸ ಪದ್ಧತಿ
ಸದ್ಯ ಪ್ರಚಲಿತ ಪದ್ಧತಿಯಂತೆ ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡದೇ, ವಿವಿಧ ಹೂಡಿಕೆ ಮಾಡುವ ಕಂಪನಿಗಳ ಮಾಧ್ಯಮದಿಂದ ಹೂಡಿಕೆ ಮಾಡಲಾಗುತ್ತದೆ. ಅವರಲ್ಲಿ ಷೇರು ಮಾರುಕಟ್ಟೆಯ ತಜ್ಞರಿರುವುದರಿಂದ ಹೂಡಿಕೆದಾರರಿಗೆ ತಜ್ಞ ವ್ಯಕ್ತಿಯ ಮಾರ್ಗದರ್ಶನ ಸಿಗುತ್ತದೆ, ಎಂದು ಈ ಕಂಪನಿಗಳು ಭರವಸೆ ನೀಡುತ್ತವೆ. ಈ ಪ್ರಚಲಿತ ಪದ್ಧತಿಯಲ್ಲಿ ಹೂಡಿಕೆ ಮಾಡಲು ಕಂಪನಿಯ ಒಬ್ಬ ವ್ಯಕ್ತಿ ಯನ್ನು ಜೋಡಿಸಿ ಕೊಡಲಾಗುತ್ತದೆ ಮತ್ತು ಆ ವ್ಯಕ್ತಿಯು ಹೇಳಿದಂತೆ ಎಲ್ಲರೂ ಹೂಡಿಕೆ ಮಾಡುತ್ತಿರುತ್ತಾರೆ. ಈ ಪ್ರಕ್ರಿಯೆಯನ್ನು ನಿಯಮಕ್ಕನುಸಾರ ಮಾಡಿದರೆ ಆ ರೀತಿಯ ಕರಾರು ಸಹ ಮಾಡಲಾಗುತ್ತದೆ; ಆದರೆ ಈ ಕರಾರನ್ನು ಅಧ್ಯಯನ ಮಾಡಿದಾಗ ಗಮನಕ್ಕೆ ಬರುವುದೇನೆಂದರೆ, ಈ ಕರಾರು ಒಮ್ಮುಖವಾಗಿರುತ್ತದೆ. ಆದ್ದರಿಂದ ಹೂಡಿಕೆಯಲ್ಲಿನ ಎಲ್ಲ ಅಪಾಯಗಳು ಹೂಡಿಕೆದಾರರ ಮೇಲೆಯೇ ಇರುತ್ತದೆ. ನಮಗೆ ಜೋಡಿಸಿಕೊಟ್ಟಿರುವ ತಜ್ಞರು ಸತತವಾಗಿ ಭರವಸೆ ನೀಡುತ್ತಿರುತ್ತಾರೆ, ‘ಹಣ ಮುಳುಗಿದರೂ, ನೀವು ಚಿಂತೆ ಮಾಡಬೇಡಿ. ನಾನು ನಿಮ್ಮ ನಷ್ಟವನ್ನು ಆದಷ್ಟು ಬೇಗ ತುಂಬಿಸಿ ಕೊಡುತ್ತೇನೆ,’ ಎಂದು ಈ ರೀತಿಯ ಟೊಳ್ಳು ಭರವಸೆಯನ್ನು ಕೊಡುತ್ತ ಅವರು ಹೂಡಿಕೆಯ ಜಾಲದಲ್ಲಿ ಸಿಲುಕಿಸುತ್ತಾರೆ. ನಮಗೆ ಆ ವ್ಯಕ್ತಿಯು ಅಪರಿಚಿತವಾಗಿದ್ದೂ ಅಥವಾ ಅವನ ಬಗ್ಗೆ ಏನು ಮಾಹಿತಿ ಇರುವುದಿಲ್ಲ. ಕೇವಲ ‘ರೇಟಿಂಗ್’ (ಶ್ರೇಯಾಂಕ) ಅನ್ನು ಪರಿಗಣಿಸಿ ನಾವು ಅವರ ಪ್ರಲೋಭನೆಗೆ ಸಿಲುಕುತ್ತೇವೆ ಮತ್ತು ಮೋಸ ಹೋಗುತ್ತೇವೆ. ಇದು ನಿತ್ಯದ ಅನುಭವವಾಗಿದೆ.
೩. ಹಣ ಮುಳುಗಿತು, ಎಂದರೆ ಏನಾಯಿತು ? ಎಂದು ಅನೇಕ ಜನರಿಗೆ ತಿಳಿಯದಿರುವುದು
ಶೇ. ೯೦ ರಷ್ಟು ಹೂಡಿಕೆದಾರರಿಗೆ ಅವರ ಹಣ ಮುಳುಗಿತು, ಎಂದರೆ ಏನಾಯಿತು ? ಎಂಬುದೂ ಗೊತ್ತಿರುವುದಿಲ್ಲ. ಅವರು ಯಾರ ಬಳಿ ಹೂಡಿಕೆಗಾಗಿ ಹಣ ಕೊಟ್ಟಿರುತ್ತಾರೆಯೋ, ಅವರು ‘ಹಣ ಮುಳುಗಿತು’ ಎಂದಾಗ ಆ ವ್ಯಕ್ತಿಯನ್ನು ನಂಬುತ್ತಾರೆ. ಕೆಲವರು ಅವರೊಂದಿಗೆ ವಾದಿಸುತ್ತಾರೆ, ಸಂಕ್ಷಿಪ್ತವಾಗಿ ಹೇಳುವುದಾದರೆ ತಮಗೆ ತೊಂದರೆ ಮಾಡಿಕೊಳ್ಳುತ್ತಾರೆ.
೪. ಕಾನೂನು ಪ್ರಕ್ರಿಯೆಯ ಮೂಲಕ ನಷ್ಟ ಪರಿಹಾರದ ಸಾಧ್ಯತೆ ವಿರಳ !
ಹಣ ಕಳೆದುಕೊಂಡ ನಂತರ ಅನೇಕ ಜನರಿಗೆ ನಾವು ಮೋಸ ಹೋದೆವೆಂದು ಗಮನಕ್ಕೆ ಬರುತ್ತದೆ. ಸಂಬಂಧಿತ ವ್ಯಕ್ತಿಯು ಮೌಖಿಕ ಭರವಸೆ ನೀಡಿರುತ್ತಾನೆ. ಅದನ್ನೇ ನಿಜ ವೆಂದು ತಿಳಿದ ಕಾರಣ ತಾನು ಮೋಸ ಹೋದೆ ಎಂದು ಆ ವ್ಯಕ್ತಿಗೆ ಗೊತ್ತಾಗುತ್ತದೆ. ಆ ವ್ಯಕ್ತಿಯು ಅನೇಕ ಕಾಗದಪತ್ರಗಳ ಮೇಲೆ ಸಹಿ ಮಾಡಿರುತ್ತಾನೆ. ಆ ಮೂಲಕ ಸಂಬಂಧಪಟ್ಟಿರುವ ಕಂಪನಿಗಳು ಮತ್ತು ಗೊತ್ತುಪಡಿಸಿದ ವ್ಯಕ್ತಿಗಳು ಕಾನೂನು ಪ್ರಕ್ರಿಯೆಯಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ. ಆದ್ದರಿಂದ ಕಾನೂನು ಪ್ರಕ್ರಿಯೆಯಿಂದ ನಷ್ಟಪರಿಹಾರದ ಸಾಧ್ಯತೆ ಕಡಿಮೆ ಇರುತ್ತದೆ.
೫. ಹೂಡಿಕೆ ಮಾಡುವಾಗ ಕರಾರು ಮತ್ತು ನಿಯಮಗಳನ್ನು ಪರಿಶೀಲಿಸುವುದು ಅಗತ್ಯ !
ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದೆಂದರೆ ತುಂಬಾ ಅಪಾಯಕಾರಿಯಾಗಿರುತ್ತದೆ. ಕೆಲವು ಹೂಡಿಕೆಗಳು ಸಂರಕ್ಷಿತ ವಾಗಿದ್ದರು ಅದರ ಕರಾರು ಮತ್ತು ನಿಯಮಗಳನ್ನು ಪರಿಶೀಲಿಸುವುದು ಆವಶ್ಯಕವಾಗಿರುತ್ತದೆ. ಆದ್ದರಿಂದ ನಾವು ಮೋಸ ಹೋಗಿದ್ದೇವೆ, ಎಂದು ನಮಗೆ ಅನಿಸುತ್ತಿದ್ದರೂ ಕಾನುನು ಪ್ರಕ್ರಿಯೆ ತುಂಬಾ ಕಠಿಣವಾಗಿರುತ್ತದೆ. ಈ ಕ್ಷೇತ್ರದ ಮೋಸಗಾರಿಕೆಯ ಬಗ್ಗೆ ನೇರವಾಗಿ ಪೊಲೀಸರಲ್ಲಿ ದೂರು ನೀಡದೇ ‘ಸೆಕ್ಯುರಿಟೀಸ್ ಮತ್ತು ರೆಗ್ಯುಲೇಶನ್ ಬೋರ್ಡ ಆಫ್ ಇಂಡಿಯಾ’ (ಸ್ಟಾಕ್ ಎಕ್ಸಚೇಂಜ್) ಗೆ ದೂರು ನೀಡ ಬೇಕಾಗುತ್ತದೆ. ಬೋರ್ಡ ಈ ದೂರಿನ ಬಗ್ಗೆ ತನಿಖೆ ನಡೆಸುತ್ತದೆ. ಅದರಿಂದ ಏನೂ ಪ್ರಯೋಜನವಾಗುವುದಿಲ್ಲ; ಏಕೆಂದರೆ ನಾವು ಒಪ್ಪಂದಕ್ಕೆ ಸಹಿ ಹಾಕಿರುತ್ತೇವೆ, ಹಾಗೆಯೇ ಸಂಬಂಧಪಟ್ಟ ಕಂಪನಿಗಳು ಎಲ್ಲ ಕಾಗದಪತ್ರಗಳನ್ನು ಅವರ
ಅನುಕೂಲಕ್ಕೆ ತಕ್ಕಂತೆ ಮಾಡಿ ಮುಂದೆ ಕಳುಹಿಸಿರುತ್ತವೆ. ಆದ್ದರಿಂದ ಈ ಕ್ಷೇತ್ರದ ದೂರುಗಳು ಫಲದಾಯಕವಾಗುವುದಿಲ್ಲ.
೬. ಅಧ್ಯಯನ ಮಾಡದೇ ಷೇರ್‌ನಲ್ಲಿ ಹೂಡಿಕೆ ಮಾಡುವುದನ್ನು ತಡೆಯಿರಿ !
ಹೆಚ್ಚಿನ ಜನರು ‘ಹೂಡಿಕೆದಾರರ’ ಮತ್ತು ‘ಷೇರ್ ಮಾರ್ಕೆಟಿಂಗ್’ ಇವುಗಳಲ್ಲಿನ ವ್ಯತ್ಯಾಸವನ್ನು ಗಮನದಲ್ಲಿ ತೆಗೆದುಕೊಳ್ಳುವುದಿಲ್ಲ. ಕೆಲವರು ಹೂಡಿಕೆದಾರರಾಗಿರುತ್ತಾರೆ; ಆದರೆ ಅದು ಅವರ ವ್ಯವಸಾಯವಾಗಿರುವುದಿಲ್ಲ. ಕೆಲವರು ಇದನ್ನೇ ಮುಖ್ಯ ವ್ಯವಸಾಯವನ್ನಾಗಿ ಮಾಡಿಕೊಂಡಿರುತ್ತಾರೆ ಮತ್ತು ಅವರು ಅದೇ ಕ್ಷೇತ್ರದಲ್ಲಿ ಪೂರ್ಣ ಸಮಯ ಇರುತ್ತಾರೆ. ಆದ್ದರಿಂದ ಅವರಿಗೆ ಅದರಲ್ಲಿನ ಸೂಕ್ಷ್ಮ ವಿಷಯ ಗಳೆಲ್ಲವೂ ಮಾಹಿತಿಯಿರುತ್ತದೆ. ಆದ್ದರಿಂದ ಅವರಿಗೆ ಲಾಭ ವಾಗಿದೆ ಎಂದು ನಾವು ಸಹ ಹೂಡಿಕೆ ಮಾಡುವುದು ತಪ್ಪು. ಆದ್ದರಿಂದ ಈ ಕ್ಷೇತ್ರದ ಪ್ರತ್ಯಕ್ಷ ಅಧ್ಯಯನ ಇದ್ದರೆ ಅಥವಾ ಅದೇ ತಮ್ಮ ವ್ಯವಸಾಯವಿದ್ದರೆ ಮಾತ್ರ ಹೂಡಿಕೆ ಮಾಡಬಹುದು; ಆದರೆ ಯಾರೊಬ್ಬರ ಸಲಹೆಗೆ ಮರುಳಾಗಿ ಹೂಡಿಕೆ ಮಾಡಿದರೆ ನಷ್ಟವಾಗುವ ಸಾಧ್ಯತೆ ಹೆಚ್ಚು ಇರುತ್ತದೆ.
೭. ಯಾವುದೇ ವಿಮೆ ರಕ್ಷಣೆ ಇಲ್ಲ !
ಈ ಕ್ಷೇತ್ರದಲ್ಲಿ ಮಾಡಿದ ಯಾವುದೇ ಹೂಡಿಕೆಯ ಮೇಲೆ ಭರವಸೆ ಅಥವಾ ವಿಮೆ ಮಾಡಲಾಗುವುದಿಲ್ಲ, ಎಂಬುದನ್ನು ಖಚಿತಪಡಿಸುವುದು ಆವಶ್ಯಕವಾಗಿದೆ.
೮. ಮುಚ್ಚುಮರೆಯ ವಸೂಲಿ
ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬೇಕಾದು ದೇನೆಂದರೆ, ಇದರಲ್ಲಿ ಸಿಗುವ ಲಾಭದಲ್ಲಿ ಸುಮಾರು ಶೇ. ೨೦ ರಷ್ಟು ಮೊತ್ತವು ‘ಸರ್ವಿಸ್ ಚಾರ್ಜೆಸ್’ ಮತ್ತು ‘ಆದಾಯ ತೆರಿಗೆ’ಯನ್ನು ಕಡಿತಗೊಳಿಸಿದ ನಂತರವೇ ನಮಗೆ ಸಿಗುತ್ತಿರುತ್ತದೆ. ಈ ವಿಚಾರ ಅನೇಕ ಜನರಿಂದ ಆಗಿರುವುದಿಲ್ಲ. ಇನ್ನೂ ಹೆಚ್ಚಿನ ತೆರೆಮರೆಯ ವೆಚ್ಚಗಳಿವೆ. ಈ ಕ್ಷೇತ್ರದಲ್ಲಿನ ಹೂಡಿಕೆಯಿಂದ ಕೆಲವರಿಗೆ ಲಾಭವಾಗಿರಬಹುದು; ಆದರೆ ಷೇರ್‌ನಲ್ಲಿನ ಹೂಡಿಕೆಯು ಅಪಾಯಕರವಾಗಿರುವುದರಿಂದ ಅದನ್ನು ವಿಚಾರಪೂರ್ವಕ ಮಾಡುವುದು ಆವಶ್ಯಕವಾಗಿದೆ.’
– ನ್ಯಾಯವಾದಿ ನಾಗೇಶ ಜೋಶಿ
ಮೋಸಹೋಗಿ ಹಣ ಕಳೆದುಕೊಂಡ ಕೆಲವು ಉದಾಹರಣೆಗಳುಅ. ಒಬ್ಬ ಧರ್ಮಪ್ರೇಮಿಗೆ ಅನೇಕ ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಅನುಭವವಿತ್ತು. ಹೆಚ್ಚು ಲಾಭ ಪಡೆಯಲು ಅವನಿಗೆ ಷೇರು ಮಾರುಕಟ್ಟೆಯ ಓರ್ವ ಸಲಹೆಗಾರರು ಕೆಲವು ವಿಶಿಷ್ಟ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಹೇಳಿದರು. ಅನಂತರ ಅವರ ಎಲ್ಲ ಹಣ ಮುಳುಗಿತು. ದೂರು ನೀಡಿದರೂ ಏನು ಪರಿಣಾಮವಾಗಲಿಲ್ಲ. ಆ. ಓರ್ವ ಸಾಧಕನ ಹತ್ತಿರದ ಸಂಬಂಧಿಕರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂಬಂಧಿಕರು ಆ ಸಾಧಕನಿಗೆ ಷೇರು ಮಾರುಕಟ್ಟೆಯಲ್ಲಿನ ಓರ್ವ ಸಲಹೆಗಾರರ ಪರಿಚಯ ಮಾಡಿಕೊಟ್ಟರು. ಅವರು ಈ ಕ್ಷೇತ್ರದಲ್ಲಿ ಹೇಗೆ ಹಣ ಗಳಿಸಬಹುದು ? ಹಣವನ್ನು ತಕ್ಷಣ ದುಪ್ಪಟ್ಟು ಮಾಡಿಕೊಡುತ್ತೇನೆ’, ಎಂದೆಲ್ಲ ಭರವಸೆ ನೀಡಿದರು. ಆ ವ್ಯಕ್ತಿಯ ಉಚ್ಚ ಜೀವನ ಶೈಲಿಯು ಆ ಸಾಧಕನ ಮೇಲೆ ಪ್ರಭಾವ ಬೀರಿತು. ಆದ್ದರಿಂದ ಸಾಧಕನು ತನ್ನ ಆಸ್ತಿ-ಪಾಸ್ತಿಯನ್ನೆಲ್ಲ ಮಾರಿ ಹೆಚ್ಚು ಹಣವನ್ನು ಆ ವ್ಯಕ್ತಿಗೆ ಕೊಟ್ಟನು. ಮುಖ್ಯವಾಗಿ ಹಣ ಹೂಡಿಕೆ ಮಾಡುವ ಮೊದಲು ಯಾರ ಸಲಹೆಯನ್ನೂ ಪಡೆಯಲಿಲ್ಲ. ಅದರಿಂದಾಗಿ ಬಹಳ ಹಣ ಕಳೆದುಕೊಂಡನು. ನಂತರ ಅದನ್ನು ಹಿಂಪಡೆಯಲು ಹೊಸ ಹೋರಾಟ ಆರಂಭವಾಯಿತು. ಇ. ಒಬ್ಬ ಹಿತಚಿಂತಕನ ಒಳ್ಳೆಯ ವ್ಯವಸಾಯ ಇತ್ತು. ಅವನ ಆದಾಯವೂ ಚೆನ್ನಾಗಿತ್ತು. ಅವನು ತನ್ನ ಔದ್ಯೋಗಿಕ ಸ್ನೇಹಿತನು ಹೇಳಿಕೆಯ ಮೇಲೆ ವಿಶ್ವಾಸವನ್ನಿಟ್ಟನು. ಹೂಡಿಕೆಯ ನಂತರ ಆರಂಭದಲ್ಲಿ ಅವನು ಸ್ವಲ್ಪ ಹಣವನ್ನು ಮರಳಿ ಪಡೆದನು; ಆದರೆ ಕೊನೆಗೆ ಅವನಿಗೆ ಭಾರೀ ನಷ್ಟ ಅನುಭವಿಸ ಬೇಕಾಯಿತು. ಸ್ನೇಹದÀ ಕಹಿಯನ್ನೂ ಸಹಿಸಬೇಕಾಯಿತು. ಈ. ಈ ಕ್ಷೇತ್ರದಲ್ಲಿನ ಒಬ್ಬ ವ್ಯಕ್ತಿಯು ಓರ್ವ ಯುವಕನಿಗೆ ಬೇರೆಯೇ ಅಮಿಷವನ್ನು ತೋರಿಸಿದನು. ಅವನು ‘ಭಾರತದಲ್ಲಿ ಚಿನ್ನದ ಬೆಲೆ ಎಂದಿಗೂ ಕಡಿಮೆ ಆಗುವುದಿಲ್ಲ, ಅದು ಸತತವಾಗಿ ಹೆಚ್ಚಳವಾಗುತ್ತಲೇ ಇರುತ್ತದೆ. ಆದ್ದರಿಂದ ನೀವು ‘ಅನ್‌ಲೈನ್’ನಿಂದ ಚಿನ್ನವನ್ನು ಪಡೆದು ಬಹಳಷ್ಟು ಹಣ ಗಳಿಸಿ’, ಎಂದು ಹೇಳಿದನು. ‘ನೀವು ಎಷ್ಟು ಹೂಡಿಕೆ ಮಾಡುತ್ತಿರೋ, ಅಷ್ಟು ಹಣವು ನಿಮಗೆ ಸಾಲದ ರೂಪದಲ್ಲಿ ಹೂಡಿಕೆ ಮಾಡಲು ಸಿಗುತ್ತದೆ. ಇದರಿಂದಲೂ ನಿಮಗೆ ಒಳ್ಳೆಯ ಲಾಭವಾಗಲಿದೆ’, ಎಂದನು. ಅನಂತರ ಆ ಯುವಕನು ಬಹಳಷ್ಟು ಹಣವನ್ನು ಹೂಡಿಕೆ ಮಾಡಿದನು. (ಒಂದೇ ದಿನದಲ್ಲಿ ಹಣದ ಚಿಂತೆ ಮುಗಿಯುವುದು, ಎಂದೂ ಹೇಳುತ್ತಿದ್ದನು. ಪ್ರತ್ಯಕ್ಷದಲ್ಲಿ ಈ ವ್ಯವಹಾರದಲ್ಲಿ ಅವನಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಯಿತು. ಆದ್ದರಿಂದ ಅವನಿಗೆ ಮನೆಯನ್ನು ಮಾರಿ ಸಾಲ ತೀರಿಸಬೇಕಾಯಿತು.) ಉ. ಒಬ್ಬ ಹಿತಚಿಂತಕನು ಒಂದು ಕರಾರನ್ನು ಗಮನಕೊಟ್ಟು ಓದದೇ ಅದರ ಮೇಲೆ ಸಹಿ ಮಾಡಿದನು ಆದ್ದರಿಂದ ಅವನಿಗೆ ನಷ್ಟವನ್ನು ಸಹಿಸಬೇಕಾಯಿತು. – ನ್ಯಾಯವಾದಿ ನಾಗೇಶ ಜೋಶಿ |