ಋಷಿ-ಮುನಿಗಳ ಸರ್ವಶ್ರೇಷ್ಠತೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಋಷಿ-ಮುನಿಗಳು ಸಪ್ತಲೋಕಗಳ ವಿಚಾರ ಮಾಡುತ್ತಾರೆ, ಆದರೆ ವಿಜ್ಞಾನವು ಕೇವಲ ಪೃಥ್ವಿಯ ಮೇಲಿನ ಮಾನವನ ವಿಚಾರ ಮಾಡುತ್ತದೆ.’

ನಿಜವಾದ ಬ್ರಾಹ್ಮಣ !

‘ಈಶ್ವರಪ್ರಾಪ್ತಿಯ ತಳಮಳ ಇರುವವನೇ ನಿಜವಾದ ಬ್ರಾಹ್ಮಣ’

ಮತದಾರರೇ, ಮತ ನೀಡುವಾಗ ಇದರ ಬಗ್ಗೆ ವಿಚಾರ ಮಾಡಿ !

‘ಮತದಾರರೇ, ನಿಮ್ಮಿಂದ ಚುನಾಯಿತರಾದ ಅಭ್ಯರ್ಥಿಗಳಿಂದಾದ ತಪ್ಪುಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ. ಹಾಗಾಗಿ ಆ ತಪ್ಪುಗಳ ಪಾಪ ನಿಮಗೆ ತಟ್ಟಲಿದೆ, ಇದನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಿ.’

ನೌಕರಿಗಾಗಿ ಶೈಕ್ಷಣಿಕ ಅರ್ಹತೆಯ ಜೊತೆಗೆ ವೈಯಕ್ತಿಕ ಗುಣಗಳು ಸಹ ಮಹತ್ವಪೂರ್ಣ !

‘ಯಾವುದೇ ಕ್ಷೇತ್ರದಲ್ಲಿ ಯಾರಿಗಾದರೂ ಕೇವಲ ಅವರ ಶೈಕ್ಷಣಿಕ ಪ್ರಮಾಣಪತ್ರದ ಆಧಾರದ ಮೇಲೆ ನೌಕರಿ ನೀಡದೆ ಅವರ ವೈಯಕ್ತಿಕ ಗುಣಗಳನ್ನು ನೋಡಿ ಆಯ್ಕೆ ಮಾಡುವುದು ಆವಶ್ಯಕವಿದೆ.’

ಮಾನಸಿಕವಾಗಿ ಅಲ್ಲ; ಕೇವಲ ಶಾರೀರಿಕವಾಗಿ ಪ್ರೇಮಿಸುವ ಇಂದಿನ ಪತಿ-ಪತ್ನಿ !

‘ಇಂದಿನ ಕಾಲದಲ್ಲಿ ಸ್ತ್ರೀ-ಪುರುಷರಲ್ಲಿನ ಪ್ರೇಮವು ಹೆಚ್ಚಾಗಿ ಕೇವಲ ಶಾರೀರಿಕ ಪ್ರೇಮವಾಗಿರುತ್ತದೆ. ಹಾಗಾಗಿ ಅವರಿಗೆ ಮದುವೆ ಮಾಡಿಕೊಳ್ಳುವ ಅವಶ್ಯಕತೆಯೂ ಅನಿಸುವುದಿಲ್ಲ ಮತ್ತು ಅವರು ಮದುವೆಯಾದರೂ ಅದು ಉಳಿಯುವುದಿಲ್ಲ. ಅವರಲ್ಲಿ ಪರಸ್ಪರ ಹೊಂದಾಣಿಕೆ ಆಗದಿದ್ದರೆ, ಅದು ಮಾನಸಿಕ ಪ್ರೇಮವಲ್ಲದ ಕಾರಣ ಅವರು ಜೊತೆಗಾರರನ್ನು ಬದಲಾಯಿಸುತ್ತಿರುತ್ತಾರೆ. ಮದುವೆಯಾಗಿದ್ದರೆ ಅಲ್ಪಾವಧಿಯಲ್ಲಿ ವಿಚ್ಛೇದನ ಪಡೆದು ಬೇರೆಯಾಗುತ್ತಾರೆ.’

ಪೊಲೀಸ್‌ ಆಡಳಿತವು ಇದರ ಬಗ್ಗೆ ಗಮನ ಹರಿಸುವುದೇ ?

‘ತಮ್ಮ ವಿಭಾಗದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಹಿರಂಗ ಪಡಿಸದ ಪೊಲೀಸರು ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಹಿರಂಗ ಪಡಿಸುವರೇ ?’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ