ಆಕ್ಲೆಂಡ್ (ನ್ಯೂಜಿಲೆಂಡ್) – ಕಳೆದ ವರ್ಷ ಡಿಸೆಂಬರ್‌ನಲ್ಲಿ ನ್ಯೂಜಿಲೆಂಡ್‌ನ ಆಗಿನ ಸರಕಾರವು ತಂಬಾಕು ಮತ್ತು ಸಿಗರೇಟ್‌ಗಳನ್ನು ನಿಷೇಧಿಸುವ ಐತಿಹಾಸಿಕ ಕಾನೂನನ್ನು ಜಾರಿಗೊಳಿಸಿತ್ತು. ಆದರೆ ಈಗಿನ ಹೊಸ ಸರಕಾರವು ಈ ನಿಷೇಧವನ್ನು ಹಿಂಪಡೆಯಲು ನಿರ್ಧರಿಸಿದೆ. ‘ಇದರಿಂದ ಜನರಿಗೆ ತೆರಿಗೆ ವಿನಾಯಿತಿ ಸಿಗಲಿದೆ’, ಎಂದು ಸರಕಾರದ ಹೇಳಿಕೆಯಾಗಿದೆ. ಆದುದರಿಂದ ‘ಸ್ಮೋಕ್ ಫ್ರೀ’ ಹೆಸರಿನ ಪರಿಸರ ಕಾನೂನನ್ನು ರದ್ದುಪಡಿಸಲಾಗುವುದು. ಈ ಕಾನೂನಿನ ಅಡಿಯಲ್ಲಿ 2008 ರ ನಂತರ ಜನಿಸಿದವರು ಯಾವುದೇ ರೀತಿಯ ಧೂಮಪಾನ ಉತ್ಪನ್ನಗಳನ್ನು ಖರೀದಿಸುವಂತಿಲ್ಲ.
1. ಈ ನಿರ್ಧಾರಕ್ಕೆ ದೇಶದ ವೈದ್ಯರು ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಟಾಗೋ ವಿಶ್ವವಿದ್ಯಾಲಯದ ಪ್ರೊ. ರಿಚರ್ಡ ಎಡ್ವರ್ಡ್ಸ ಮಾತನಾಡಿ, “ನಾವು ಆಘಾತ ಮತ್ತು ನಿರಾಶೆಗೊಂಡಿದ್ದೇವೆ” ಎಂದು ಹೇಳಿದರು. ಈ ಹೆಜ್ಜೆ ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದೆ ಎಂದು ಹೇಳಿದರು.
2. ನ್ಯೂಜಿಲೆಂಡ್‌ನ ಆಗಿನ ಆರೋಗ್ಯ ಸಚಿವೆ ಆಯಿಷಾ ವೆರಾಲ್ ಅವರು ಮೂಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು. ಆ ಸಮಯದಲ್ಲಿ ಅವರು, ಸಾವಿರಾರು ಜನರು ಈಗ ಹೆಚ್ಚು ದೀರ್ಘಕಾಲ ಮತ್ತು ಉತ್ತಮ ಜೀವನವನ್ನು ನಡೆಸುವರು ಎಂದು ಹೇಳಿದ್ದರು. ಜನರಿಗೆ ಧೂಮಪಾನದಿಂದಾಗುವ ರೋಗಗಳು ಮತ್ತು ಸಮಸ್ಯೆಗಳು ಬರುವುದಿಲ್ಲ. ಇದರಿಂದ ನ್ಯೂಜಿಲೆಂಡ್‌ನ ಆರೋಗ್ಯ ಇಲಾಖೆಯ 26 ಸಾವಿರದ 400 ಕೋಟಿ ಉಳಿತಾಯವಾಗಲಿದೆ ಎಂದು ಹೇಳಿದರು.
3. ಅತಿ ಕಡಿಮೆ ಧೂಮಪಾನ ಮಾಡುವ ದೇಶಗಳಲ್ಲಿ ನ್ಯೂಜಿಲೆಂಡ್ ಒಂದಾಗಿದೆ. ಸರಕಾರದ ಅಂಕಿಅಂಶಗಳ ಪ್ರಕಾರ, ಅಲ್ಲಿ ಕೇವಲ ಶೇ. 8 ಪ್ರರಷ್ಟು ಜನರು ಪ್ರತಿದಿನ ಧೂಮಪಾನ ಮಾಡುತ್ತಾರೆ.
New Zealand scraps world-first smoking ‘generation ban’ to fund tax cutshttps://t.co/dY1VOcih9G
— The Guardian (@guardian) November 27, 2023