India Canada Relations : ಕೆನಡಾದೊಂದಿಗಿನ ಭಾರತದ ಸಂಬಂಧಗಳು ಮೊದಲಿಗಿಂತ ಉತ್ತಮ ! – ಭಾರತೀಯ ಉಚ್ಚಾಯುಕ್ತ ಸಂಜಯ ವರ್ಮಾ

ಒಟಾವಾ (ಕೆನಡಾ) – ಭಾರತ-ಕೆನಡಾ ಸಂಬಂಧಗಳು ಸೆಪ್ಟೆಂಬರಗಿಂತ ಉತ್ತಮವಾಗಿದೆ. ಭಾರತದ ಅತಿ ದೊಡ್ಡ ಚಿಂತೆಯೆಂದರೆ, ಕೆನಡಾದ ಕೆಲವು ನಾಗರಿಕರು ಭಾರತದಲ್ಲಿ ಭಯೋತ್ಪಾದನೆಯನ್ನು ಹರಡಲು ಅವರ ಭೂಮಿಯನ್ನು ಉಪಯೋಗಿಸುತ್ತಿದ್ದಾರೆ. ಭಾರತೀಯ ರಾಜತಾಂತ್ರಿಕರು ಮತ್ತು ಇತರ ಅಧಿಕಾರಿಗಳ ಭದ್ರತೆಯು ನಮಗೆ ಎಲ್ಲಕ್ಕಿಂತ ಮಹತ್ವದ ವಿಷಯವಾಗಿದೆಯೆಂದು ಕೆನಡಾದಲ್ಲಿರುವ ಭಾರತೀಯ ಉಚ್ಚಾಯುಕ್ತ ಸಂಜಯ ವರ್ಮಾ ಇಲ್ಲಿಯ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವರ್ಮಾ ತಮ್ಮ ಮಾತನ್ನು ಮುಂದುವರಿಸುತ್ತಾ, ಭಾರತ ಮತ್ತು ಕೆನಡಾ ಸಂಬಂಧಗಳನ್ನು ಸುಧಾರಿಸಲು ಮತ್ತು ಪರಸ್ಪರರ ದೇಶಗಳಲ್ಲಿ ರಾಜತಾಂತ್ರಿಕ ಉಪಸ್ಥಿತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತಿವೆ ಎಂದು ಹೇಳಿದರು. ಭಾರತವು ಕೆನಡಾದ ನಾಗರಿಕರಿಗಾಗಿ ಇ-ವೀಸಾ ಸೇವೆಯನ್ನು ಪುನಃ-ಪ್ರಾರಂಭಿಸಿದೆ.

ಕೆನಡಾ ಸಾಕ್ಷ್ಯವನ್ನು ಸಲ್ಲಿಸಬೇಕು !

ಖಲಿಸ್ತಾನಿ ಹರದೀಪ ಸಿಂಹ ನಿಜ್ಜರ್ ಹತ್ಯೆಗಾಗಿ ಭಾರತವನ್ನು ಯಾವುದೇ ವಿಚಾರಣೆ ನಡೆಸದೇ ದೂಷಿಸಲಾಯಿತು. ಇದು ಕಾನೂನಿನ ರಾಜ್ಯವೇ ? ಇದೆಲ್ಲದರ ನಂತರ ಭಾರತವನ್ನು ತನಿಖೆಗೆ ಸಹಕರಿಸುವಂತೆ ಕೋರಲಾಗಿತ್ತು. ‘ಕೆನಡಾದ ಬಳಿ ಪುರಾವೆಗಳಿದ್ದರೆ ಅದನ್ನು ಸಾದರಪಡಿಸಬೇಕು’, ಎಂದು ಭಾರತ ಯಾವಾಗಲೂ ಹೇಳಿದೆ, ಎಂದು ಸಂಜಯ ವರ್ಮಾ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಹೇಳಿದರು.
ಭಾರತ ಸರಕಾರ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಕೆನಡಾಕ್ಕೆ ಹಲವು ದಾಖಲೆಗಳನ್ನು ನೀಡಿದೆ. ಅವರು ಭಾರತ ಮತ್ತು ಕೆನಡಾದಲ್ಲಿ ಅಪರಾಧ ಎಸಗಿರುವ ಪುರಾವೆಗಳಿವೆ ಎಂದು ವರ್ಮಾ ಈ ವೇಳೆ ಹೇಳಿದರು. (ಒಂದೆಡೆ ನಿಜ್ಜರ್ ಹತ್ಯೆಗೆ ಭಾರತವನ್ನು ದೂಷಿಯೆಂದು ನಿರ್ಧರಿಸುವುದು ಮತ್ತು ಇನ್ನೊಂದೆಡೆ ಖಲಿಸ್ತಾನಿಗಳನ್ನು ಬೆಂಬಲಿಸುವುದು ಕೆನಡಾ ಸರಕಾರ ದ್ವಂದ್ವ ಮಾನಸಿಕತೆ ! – ಸಂಪಾದಕರು)

ಸಂಪಾದಕೀಯ ನಿಲುವು

ವರ್ಮಾ ಯಾವ ಆಧಾರದಲ್ಲಿ ಇಂತಹ ಹೇಳಿಕೆ ನೀಡುತ್ತಿದ್ದಾರೆ? ಖಲಿಸ್ತಾನಿಗಳು ಹಿಂದೂ ದೇವಸ್ಥಾನಗಳಿಗೆ ಮುತ್ತಿಗೆ ಹಾಕುತ್ತಿದ್ದಾರೆ. ದೇವಸ್ಥಾನಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಇಂತಹವರ ವಿರುದ್ಧ ಕೆನಡಾ ಯಾವುದೇ ಕ್ರಮ ಕೈಗೊಳ್ಳವುದಿಲ್ಲ. ಹೀಗಿರುವಾಗ ಭಾರತದ ಸಂಬಂಧಗಳು ಹೇಗೆ ತಾನೆ ಸುಧಾರಿಸುತ್ತದೆ ?