ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ
ಬೀಜಿಂಗ್ (ಚೀನಾ) – ಕರೋನಾದಂತಹ ಸಾಂಕ್ರಾಮಿಕ ರೋಗದ ಅಪಾಯ ಮತ್ತೊಮ್ಮೆ ನಿರ್ಮಾಣವಾಗಿದೆಯೆಂದು ಹೇಳಲಾಗುತ್ತಿದೆ. ವಿಶೇಷವೆಂದರೆ ಈ ಸಾಂಕ್ರಾಮಿಕ ರೋಗದ ಪ್ರಾರಂಭವೂ ಕರೋನಾದಂತೆ ಚೀನಾದಿಂದಲೇ ಪ್ರಾರಂಭವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಗಮನಿಸಿ ಜಗತ್ತಿನಾದ್ಯಂತ ಎಚ್ಚರಿಕೆ ನೀಡಿದೆ. ಈ ಸಾಂಕ್ರಾಮಿಕದ ಅಪಾಯ ಹೆಚ್ಚುತ್ತಿರುವುದರಿಂದ ಚೀನಾದಲ್ಲಿ ಶಾಲೆಗಳನ್ನು ಮುಚ್ಚಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
(ಸೌಜನ್ಯ – Aaj Tak)
1. ಈ ಮಹಾಮಾರಿ ರೋಗವು ಮುಖ್ಯವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಈ ರೋಗದ ಲಕ್ಷಣಗಳು ನ್ಯುಮೋನಿಯಾದಂತಿದೆ; ಆದರೆ ಕೆಲವು ರೋಗಲಕ್ಷಣಗಳು ನ್ಯುಮೋನಿಯಾಗಿಂತ ಭಿನ್ನವಾಗಿರುವುದರಿಂದ ಇನ್ನೂ ಕಂಡು ಹಿಡಿಯಲು ಸಾಧ್ಯವಾಗಿರುವುದಿಲ್ಲ. ಈ ರೋಗದ ಸೋಂಕಿತ ಮಕ್ಕಳ ಶ್ವಾಸಕೋಶದಲ್ಲಿ ಊತ ಬರುತ್ತದೆ. ಇದರೊಂದಿಗೆ ಅವರಿಗೆ ಜ್ವರ ಮತ್ತು ಕೆಮ್ಮು ಬಂದು ಉಸಿರಾಡಲು ತೊಂದರೆಯಾಗುತ್ತದೆ.
2. ವಿಶ್ವ ಆರೋಗ್ಯ ಸಂಸ್ಥೆಯು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಚೀನಾಕ್ಕೆ ಮನವಿ ಮಾಡಿದೆ. ಈ ರೋಗಕ್ಕೆ ತುತ್ತಾದವರ ಬಗ್ಗೆ ಸೂಕ್ತ ನಿಗಾ ವಹಿಸಲು ನಿರ್ದೇಶನಗಳನ್ನೂ ನೀಡಿದೆ.