ಇದು ಹಿಂದೂಗಳಿಗೆ ಲಜ್ಜಾಸ್ಪದ  !

೧. ಇದು ಹಿಂದೂಗಳಿಗೆ ಲಜ್ಜಾಸ್ಪದ  !

ಉತ್ತರಾಖಂಡ ರಾಜ್ಯದ ೩೦ ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳು ಇಸ್ಲಾಮಿಕ್‌ ಶಿಕ್ಷಣ ಪಡೆಯುತ್ತಿದ್ದಾರೆ ಎಂಬ ಮಾಹಿತಿಯು ಬೆಳಕಿಗೆ ಬಂದಿದೆ.  ಇಲ್ಲಿಯವರೆಗೆ ಅಂತಹ ೭೪೯ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಬಂದಿದೆ. ಇದರಲ್ಲಿ ಹಿಂದೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

೨. ಇಂತಹವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಲಿ !

ಯಾವುದೇ ಗ್ರಂಥದ ಬಗ್ಗೆ ಹೇಳಿಕೆಯು ನಿಜವಾದ ಸಂದರ್ಭವನ್ನು ಆಧರಿಸಿರಬೇಕು. ಕೆಲವೊಮ್ಮೆ ಅಸತ್ಯ ಹೇಳಿಕೆಗಳೂ ಆಗಬಹುದು, ಎಂದು ಹೇಳಿ ಅಲಹಾಬಾದ್‌ ಉಚ್ಚ ನ್ಯಾಯಾಲಯದ ಲಖನೌ ವಿಭಾಗೀಯ ಪೀಠವು ಶ್ರೀರಾಮಚರಿತಮಾನಸದ ಪ್ರತಿಯನ್ನು ಸುಟ್ಟು ಹಾಕಿದ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಅವರ ಕಿವಿಹಿಂಡಿದೆ.

೩. ದೇಶದಲ್ಲಿನ ಗುಲಾಮಗಿರಿಯ ಪ್ರತೀಕಗಳಾಗಿರುವ  ಎಲ್ಲ ಕಡೆಗಳಲ್ಲಿನ ಹೆಸರುಗಳನ್ನು ಬದಲಾಯಿಸಿರಿ !

ಉತ್ತರ ಪ್ರದೇಶದ ‘ಅಲಿಗಡ’ದ ಹೆಸರನ್ನು ಬದಲಾಯಿಸಿ  ‘ಹರಿಗಡ’ ನ್ನಾಗಿ ಮಾಡುವ ಪ್ರಸ್ತಾವನೆಯನ್ನು ಅಲಿಗಡ ಪುರಸಭೆಯು ಅನುಮೋದಿಸಿದೆ. ಈಗ ಈ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಗುವುದು. ಸರಕಾರದ ಮನ್ನಣೆ ದೊರೆತ ನಂತರ ಅಧಿಕೃತವಾಗಿ ಹೆಸರನ್ನು ಬದಲಾಯಿಸಲಾಗುವುದು.

೪. ಇಡೀ ದೇಶದಲ್ಲಿನ ದೇವಸ್ಥಾನಗಳನ್ನು ಸರಕಾರದಿಂದ ಮುಕ್ತಗೊಳಿಸಿ !

 ‘ನಾವು ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿನ ಸಾವಿರಾರು ದೇವಸ್ಥಾನಗಳನ್ನು ಸರಕಾರಿಕರಣ ಮಾಡಿದ ‘ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವಾಲಯ’ ವನ್ನು ರದ್ದುಪಡಿಸುತ್ತೇವೆ’ ಎಂದು ಭಾಜಪದ ತಮಿಳುನಾಡು ಪ್ರದೇಶಾಧ್ಯಕ್ಷ  ಕೆ. ಅಣ್ಣಮಲೈ ಭರವಸೆ ನೀಡಿದ್ದಾರೆ.

೫. ಹಿಂದೂಗಳನ್ನು ಅಸಹಿಷ್ಣುಗಳು ಎನ್ನಲು ಜಾವೇದ್‌ ಅಖ್ತರ್‌ ಮಾಡಿದ ಪ್ರಯತ್ನಗಳನ್ನು ತಿಳಿಯಿರಿ!

ಮಹಾರಾಷ್ಟ್ರದಲ್ಲಿ ದೀಪಾವಳಿ ಕಾರ್ಯಕ್ರಮದಲ್ಲಿ ಖ್ಯಾತ ಗೀತಕಾರ ಜಾವೇದ್‌ ಅಖ್ತರ್‌ ‘ಭಾರತದಲ್ಲಿ ಹಿಂದೂ ಸಂಸ್ಕೃತಿ ಸಹಿಷ್ಣುವಾಗಿರುವುದರಿಂದ ಈ ದೇಶದಲ್ಲಿ  ಪ್ರಜಾಪ್ರಭುತ್ವ ಉಳಿದಿದೆ’, ಎಂದು ಹೇಳುತ್ತಾ ‘ ಈಗ ಮಾತ್ರ  ಹಿಂದೂಗಳಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ’ ಎಂದು