೧. ಪೊಲೀಸರ ಲಾಠಿ ಪ್ರಹಾರದಲ್ಲಿ ಬಜರಂಗ ದಳದ ಕಾರ್ಯಕರ್ತನ ಮೃತ್ಯುವಾದ ಬಗ್ಗೆ ಆತÀನ ಸಹೋದರಿಯಿಂದ ಝಾರಖಂಡ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ
ಡಿಸೆಂಬರ್ ೨೦೨೨ ರಲ್ಲಿ ಝಾರಖಂಡ ರಾಜ್ಯದಲ್ಲಿನ ಪಶ್ಚಿಮ ಸಿಂಹಭೂಮದ ಚೈಬಸಾ ದಲ್ಲಿ ಪೂಜಾ ಗಿರಿ ಹಾಗೂ ಅವಳ ಸಹೋದರ ಕಮಲದೇವ ಗಿರಿ ಇವರು ಪೊಲೀಸರಿಂದ ಪೂರ್ವಾನುಮತಿ ಪಡೆದು ಶಾಂತಿಯುತವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದರು. ಕಮಲದೇವ ಇವರು ಬಜರಂಗ ದಳದ ಕಾರ್ಯಕರ್ತರಾಗಿದ್ದರು. ಪ್ರತಿಭಟನೆಯ ಸ್ಥಳಕ್ಕೆ ಪೊಲೀಸ್ ಅಧಿಕಾರಿ ನಿರಂಜನ ತಿವಾರಿ ಬಂದು ಅನಿರೀಕ್ಷಿತ ವಾಗಿ ಲಾಠಿ ಪ್ರಹಾರ ಮಾಡಲು ಆರಂಭಿಸಿದರು. ಈ ಲಾಠಿ ಪ್ರಹಾರದಲ್ಲಿ ಪೂಜಾ ಗಿರಿ ಹಾಗೂ ಕಮಲದೇವ ಗಿರಿ ಇವರಿಬ್ಬರೂ ಗಂಭೀರವಾಗಿ ಗಾಯಗೊಂಡರು. ಪೊಲೀಸರು ಅವರನ್ನು ಆಸ್ಪತ್ರೆಗೆ ಸೇರಿಸಿದರು. ಕಮಲದೇವರಿಗೆ ೮ ಕಡೆಗಳಲ್ಲಿ ತೀವ್ರವಾಗಿ ಗಾಯವಾಗಿದೆÉ ಎಂದು ಆಧುನಿಕ ವೈದ್ಯರು ಹೇಳಿದರು. ಅದರಲ್ಲಿಯೇ ಅವರು ಸಾವನ್ನಪ್ಪಿದರು. ಪೂಜಾ ಇವರನ್ನು ಉಪಚಾರ ಮಾಡಿ ಮನೆಗೆ ಕಳುಹಿಸಲಾಯಿತು. ಅನಂತರ ಪೂಜಾ ಇವರು ಪೊಲೀಸರಲ್ಲಿ ದೂರು ದಾಖಲಿಸಿದರು. ಅವರು ’ಸಹೋದರನ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಕಲಮ್ ೩೦೨, ಶಸ್ತ್ರಾಸ್ತ್ರಗಳ ಕಾನೂನು ಹಾಗೂ ’ಸ್ಫೋಟಕ ಪದಾರ್ಥ ಅಧಿನಿಯಮ’ಕ್ಕನುಸಾರ ಅಪರಾಧವನ್ನು ದಾಖಲಿಸ ಬೇಕು ಹಾಗೂ ದೋಷಿ ಅಧಿಕಾರಿಗಳು ಮತ್ತು ಅವರ ಸಹಚರರÀನ್ನು ಸೆರೆಮನೆಗೆ ತಳ್ಳಿ ಅವರ ವಿರುದ್ಧ ಕ್ರಿಮಿನಲ್ ಖಟ್ಲೆ ನಡೆಸಬೇಕು’, ಎಂದು ವಿನಂತಿಸಿದರು. ಈ ಅರ್ಜಿಯ ಕಡೆಗೆ ಯಾರೂ ಗಮನಕೊಡಲಿಲ್ಲ. ಅನಂತರ ಅವರು ಪಶ್ಚಿಮ ಸಿಂಹಭೂಮದ ಜಿಲ್ಲಾ ಪೊಲೀಸ್ ಪ್ರಮುಖ ಹಾಗೂ ಝಾರಖಂಡದ ಪೊಲೀಸ್ ಮಹಾಸಂಚಾಲಕರಿಗೆ ಲಿಖಿತ ಸ್ವರೂಪದಲ್ಲಿನ ಮನವಿಯನ್ನು ಸಲ್ಲಿಸಿದರು. ಇಷ್ಟೆಲ್ಲ ಮಾಡಿದರೂ ಅನೇಕ ತಿಂಗಳು ಯಾವುದೇ ಕಾರ್ಯಾಚರಣೆಯಾಗಲಿಲ್ಲ. ಕೊನೆಗೆ ಪೂಜಾ ಇವರು ಝಾರಖಂಡ ಉಚ್ಚ ನ್ಯಾಯಾಲಯ ದಲ್ಲಿ ’ರಿಟ್’ ಅರ್ಜಿಯನ್ನು ದಾಖಲಿಸಿದರು. ಅದರಲ್ಲಿಯೂ ಅವರು ಈ ಮೇಲಿನ ಬೇಡಿಕೆ ಗಳನ್ನೇ ಮಾಡಿದ್ದರು.
೨. ಝಾರಖಂಡ ಉಚ್ಚ ನ್ಯಾಯಾಲಯದಿಂದ ಸಂತ್ರಸ್ತೆಗೆ ನ್ಯಾಯ ಕೊಡಿಸಲು ಪ್ರಯತ್ನ
ಈ ಅರ್ಜಿಯನ್ನು ಸರಕಾರ ಹಾಗೂ ಪೊಲೀಸರು ವಿರೋಧ ಮಾಡಿದರು. ’ಪ್ರತಿಭಟನೆ ಮಾಡುತ್ತಿರುವಾಗ ಪ್ರತಿಭಟನಾಕಾರ ರಲ್ಲಿ ಪರಸ್ಪರ ಹೊಡೆದಾಡಿ ಅವರು ಗಾಯಗೊಂಡಿದ್ದರು. ಇದರಲ್ಲಿ ಪೊಲೀಸರ ತಪ್ಪೇನೂ ಇಲ್ಲ. ಆದ್ದರಿಂದ ಅವರ ವಿರುದ್ಧ ಅಪರಾಧ ದಾಖಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಷ್ಟು ಮಾತ್ರವಲ್ಲ, ಅರ್ಜಿದಾರರಾದ ಪೂಜಾ ಗಿರಿ ಇವರು ನೇರವಾಗಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ದಾಖಲಿಸುವ ಬದಲು ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಗನುಸಾರ ಕೆಳಗಿನ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಬೇಕಿತ್ತು. ಅವರಿಗೆ ಪರ್ಯಾಯ ಮಾರ್ಗವಿರುವುದರಿಂದ ಅರ್ಜಿ ಯನ್ನು ಸ್ವೀಕರಿಸಬಾರದು’, ಎಂದು ಸರಕಾರದ ವತಿಯಿಂದ ಹೇಳಲಾಯಿತು. ಅನಂತರ ಈ ಪ್ರಕರಣದಲ್ಲಿ ಆಂದೋಲನ ದಲ್ಲಿ ಮರಣ ಹೊಂದಿದ ವ್ಯಕ್ತಿಗಾದ ಗಾಯಗಳ ಬಗ್ಗೆ ಆಧುನಿಕ ವೈದ್ಯರು ನೀಡಿದ ಪ್ರಮಾಣಪತ್ರ ಹಾಗೂ ಪೂಜಾ ಗಿರಿಗೂ ಹೊಡೆತ ಬಿದ್ದಿರುವುದರ ಬಗ್ಗೆ ನ್ಯಾಯಾಲಯ ಗಂಭೀರವಾಗಿ ವಿಚಾರ ಮಾಡಿತು. ಇದರ ಜೊತೆಗೆ ಲಲಿತಾ ಕುಮಾರಿ ಖಟ್ಲೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಆಧಾರವನ್ನೂ ತೆಗೆದುಕೊಳ್ಳಲಾಯಿತು. ಆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮುಂದಿನಂತೆ ಘೋಷಣೆ ಮಾಡಿತು. ’ಪ್ರೈಮಾ ಫೆಸೀ ಕೇಸ್’ (ಪ್ರಥಮದರ್ಶನಿ ಅಪರಾಧ ಅಥವಾ ಅಪರಾಧ ಸಿದ್ಧವಾಗುವವರೆಗೆ ಸ್ವೀಕರಿಸುವುದು) ಆಗಿದ್ದರೆ ಅಪರಾಧವನ್ನು ದಾಖಲಿಸಬೇಕು. ಯಾವ ಪೊಲೀಸ್ ಅಧಿಕಾರಿ ಅಪರಾಧವನ್ನು ದಾಖಲಿಸಿಕೊಳ್ಳುವುದಿಲ್ಲವೋ, ಅವನ ವಿರುದ್ಧ ವಿಭಾಗೀಯ ವಿಚಾರಣೆಯನ್ನು ಮಾಡಿ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
ಈ ನಿರ್ಣಯದ ಆಧಾರ ಪಡೆದು ಉಚ್ಚ ನ್ಯಾಯಾಲಯ, ಕೇವಲ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಗನುಸಾರ ಅವರಿಗೆ ಬೇರೆ ನ್ಯಾಯಾಲಯಕ್ಕೆ ಹೋಗುವ ಅವಕಾಶವಿದೆ, ಎಂದು ’ರಿಟ್ ಅರ್ಜಿ ಹಾಗೂ ಸಂವಿಧಾನವು ಉಚ್ಚ ನ್ಯಾಯಾಲಯಕ್ಕೆ ನೀಡಿದ ಅಧಿಕಾರವನ್ನು ಉಪಯೋಗಿಸಬಾರದು, ಎಂಬ ಅರ್ಥ ಆಗುವುದಿಲ್ಲ’ ಎಂದು ಹೇಳಿತು. ಪ್ರತಿಯೊಂದು ರಾಜ್ಯದ ಗೃಹ ಸಚಿವರು ಹೊರಡಿಸಿದ ಸುತ್ತೋಲೆಗಳ ಬಗ್ಗೆಯೂ ವಿಚಾರ ಮಾಡಲಾಯಿತು. ಕೊನೆಗೆ ಝಾರಖಂಡ ಉಚ್ಚ ನ್ಯಾಯಾಲಯ ಪೊಲೀಸರ ಯುಕ್ತಿವಾದವನ್ನು ತಳ್ಳಿಹಾಕಿತು. ಈ ಪ್ರಕರಣದಲ್ಲಿ ಪಶ್ಚಿಮ ಸಿಂಹಭೂಮದ ಜಿಲ್ಲಾ ಪೊಲೀಸ ಉಪಾಯುಕ್ತ ಚೈಬಸಾ, ಹಾಗೆಯೇ ಪೊಲೀಸ ಮಹಾಸಂಚಾಲಕರಿಗೆ ಗಮನಕೊಡಲು ಹೇಳಲಾಯಿತು. ಈ ರೀತಿ ರಿಟ್ ಅರ್ಜಿಯ ನಿರ್ಣಯ ನೀಡಿ ಸಂತ್ರಸ್ತೆಗೆ ನ್ಯಾಯ ಕೊಡಿಸಲು ಪ್ರಯತ್ನಿಸಲಾಯಿತು.
೩. ಮತಾಂಧರ ಮುಂದೆ ಬಗ್ಗುವ ಪೊಲೀಸರಿಂದ ಹಿಂದೂಗಳ ಜೊತೆಗಿನ ತುಚ್ಛ ವರ್ತನೆ
ಇದರಲ್ಲಿ ಒಂದು ವಿಷಯ ಸ್ಪಷ್ಟವಾಗಿ ಅರಿವಾಯಿತು, ಪೊಲೀಸರು ಯಾವಾಗಲೂ ಮತಾಂಧರ ಮುಂದೆ ಮೊಣ ಕಾಲೂರುತ್ತಾರೆ ಹಾಗೂ ಹಿಂದೂಗಳೊಂದಿಗೆ ತುಚ್ಛವಾಗಿ ವರ್ತಿಸುತ್ತಾರೆ. ಹಿಂದೂಗಳ ಮೇಲೆ ಎಷ್ಟೇ ಅತ್ಯಾಚಾರ ಗಳಾದರೂ ಅದರ ಕಡೆಗೆ ಗಮನಹರಿಸುವುದಿಲ್ಲ, ಇದು ಭಾರತೀಯ ಪ್ರಜಾಪ್ರಭುತ್ವದ ದೌರ್ಭಾಗ್ಯವಾಗಿದೆ. ಆದ್ದರಿಂದ ಹಿಂದೂಗಳು ಒಂದು ಪ್ರಬಲ ಹಿಂದೂ ಸಂಘಟನೆಯನ್ನು ಮಾಡಬೇಕು. ಅವರು ನ್ಯಾಯಪೂರ್ಣ ಬೇಡಿಕೆಗಾಗಿ ಆಡಳಿತ, ಪೊಲೀಸರು ಹಾಗೂ ನ್ಯಾಯಾಲಯ ಮುಂತಾದ ಎಲ್ಲ ಸ್ಥಳಗಳಲ್ಲಿ ಸಂವಿಧಾನಾತ್ಮಕ ಮಾರ್ಗದಿಂದ ನ್ಯಾಯವನ್ನು ಕೇಳಬೇಕು. ಇಲ್ಲಿ ’ಅನ್ಯಾಯ ಮಾಡುವವನು ಎಷ್ಟು ದೋಷಿಯೋ, ಅಷ್ಟೇ ದೋಷಿ ಅನ್ಯಾಯವನ್ನು ಸಹಿಸಿಕೊಳ್ಳುವವನೂ ಆಗಿರುತ್ತಾನೆ’, ಎಂಬ ತತ್ತ್ವವನ್ನು ಗಮನದಲ್ಲಿಡಬೇಕು. ಒಟ್ಟಾರೆ ಇವೆಲ್ಲ ಘಟನೆಗಳು ಹಿಂದೂ ರಾಷ್ಟ್ರ ಸ್ಥಾಪನೆ ಎಷ್ಟು ಅನಿವಾರ್ಯವಾಗಿದೆ, ಎಂಬುದನ್ನು ಸೂಚಿಸುತ್ತವೆ.’ – ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೧೮.೯.೨೦೨೩)
|| ಶ್ರೀಕೃಷ್ಣಾರ್ಪಣಮಸ್ತು ||