Aurangzeb Tomb Removal : ಔರಂಗಜೇಬನ ಗೋರಿ ಇನ್ನೂ ಏಕೆ ಅಸ್ತಿತ್ವದಲ್ಲಿದೆ ? – ಟಿ. ರಾಜಾಸಿಂಗ್

ಭಾರತೀಯ ಜನತಾಪಕ್ಷದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಸಿಂಗ್ ಅವರ ಪ್ರಶ್ನೆ

ಪುಣೆ – ಮಹಾರಾಷ್ಟ್ರದಲ್ಲಿರುವ ಔರಂಗಜೇಬನ ಗೋರಿ ಒಂದು ವಿಷಪೂರಿತ ಕತ್ತಿಯಂತಿದೆ. ಮಹಾರಾಷ್ಟ್ರದ ಹಿಂದೂಗಳು ಈ ಗೋರಿಯನ್ನು ರಾಜ್ಯದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈಗ ದೇಶಾದ್ಯಂತ ಹಿಂದೂಗಳು ಔರಂಗಜೇಬನ ಗೋರಿ ಇನ್ನೂ ಏಕೆ ಇಲ್ಲಿದೆ ಎಂದು ಕೇಳುತ್ತಿದ್ದಾರೆ. ನನ್ನ ಒಂದೇ ಒಂದು ಸಂಕಲ್ಪವೆಂದರೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದು ಮತ್ತು ಔರಂಗಜೇಬನ ಗೋರಿಯನ್ನು ಇಲ್ಲಿಂದ ತೆಗೆದುಹಾಕುವುದು ಎಂದು ಭಾಗ್ಯನಗರ (ತೆಲಂಗಾಣ)ದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಸಿಂಗ್ ಹೇಳಿದ್ದಾರೆ.

ಗೋರಿಯ ಮೇಲೆ ಕರಸೇವೆ ನಡೆದರೆ ನನ್ನ ಬೆಂಬಲ!

ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳದ ಕಾರ್ಯಕರ್ತರು ‘ಒಂದು ವೇಳೆ ಸರಕಾರಕ್ಕೆ ಔರಂಗಜೇಬನ ಗೋರಿಯನ್ನು ತೆಗೆಯಲು ಸಾಧ್ಯವಾಗದಿದ್ದರೆ, ನಾವು ಅಲ್ಲಿ ಕರಸೇವೆ (ಶ್ರೀರಾಮ ಜನ್ಮಭೂಮಿಯಲ್ಲಿ ಬಾಬ್ರಿ ಮಸೀದಿಯನ್ನು ಕೆಡವಲು ಹಿಂದೂಗಳು ನಡೆಸಿದ ಚಳುವಳಿ) ಮಾಡುತ್ತೇವೆ’ ಎಂದು ಹೇಳಿದ್ದಾರೆ. ಅದಕ್ಕೆ ನನ್ನ ಬೆಂಬಲವಿದೆ ಎಂದು ಟಿ. ರಾಜಸಿಂಗ್ ಹೇಳಿದರು.

‘ಔರಂಗಜೇಬನ ಗೋರಿ ತೆಗೆದು ಏನು ಸಾಧಿಸುತ್ತೀರಿ?’ – ಕಾಂಗ್ರೆಸ್

ಔರಂಗಜೇಬನ ಗೋರಿಯನ್ನು ಇಟ್ಟುಕೊಂಡು ಕಾಂಗ್ರೆಸ್ಸಿನವರು ಏನು ಸಾಧಿಸಲಿದ್ದಾರೆ? ಎನ್ನುವುದನ್ನು ಮೊದಲು ಅವರು ಹೇಳಬೇಕು! ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಔರಂಗಾಬಾದ್ ನಗರದ ಹೆಸರನ್ನು ಸಂಭಾಜಿನಗರ ಎಂದು ಏಕೆ ಬದಲಾಯಿಸಲಿಲ್ಲ ಅಥವಾ ಅವರ ಗೋರಿಗೆ ಏನು ಮಾಡಲಾಯಿತು? ಎನ್ನುವುದನ್ನು ನೋಡಿದರೆ ಕಾಂಗ್ರೆಸ್ಸಿಗರಿಗೆ ಔರಂಗಜೇಬನ ಮೇಲಿನ ಪ್ರೀತಿ ಮೊದಲಿನಿಂದಲೂ ಇದೆ ಎನ್ನುವುದನ್ನು ಅವರು ಮತ್ತೆ ಹೇಳುತ್ತಿದ್ದಾರೆ!

ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳಕ್ಕೆ ಬೇರೆ ಕೆಲಸವಿಲ್ಲ. ಮಹಾರಾಷ್ಟ್ರದ ಜನರು ಶಾಂತಿಯಿಂದ ಇರಬೇಕೆಂದು ಅವರಿಗೆ ಅನಿಸುವುದಿಲ್ಲ. ಅವರು ರಾಜ್ಯದ ಅಭಿವೃದ್ಧಿಯ ವೇಗವನ್ನು ಕುಂಠಿತಗೊಳಿಸಲು ಬಯಸುತ್ತಾರೆ. (ಔರಂಗಜೇಬನ ಗೋರಿ ಮತ್ತು ಅಭಿವೃದ್ಧಿಯ ವೇಗಕ್ಕೆ ಏನು ಸಂಬಂಧ? – ಸಂಪಾದಕರು) ಔರಂಗಜೇಬನು ಇಲ್ಲಿ 27 ವರ್ಷಗಳ ಕಾಲ ಇದ್ದನು; ಆದರೆ ಅವನಿಂದ ಇಲ್ಲಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ; ಹಾಗಾದರೆ ಈಗ ಅವನ ಗೋರಿಯನ್ನು ತೆಗೆದು ಏನು ಸಾಧಿಸುವಿರಿ? ಎಂದು ಕಾಂಗ್ರೆಸ್ ಶಾಸಕ ವಿಜಯ ವಡೆಟ್ಟಿವಾರ ಪ್ರಶ್ನಿಸಿದ್ದಾರೆ.