Action Against Halal Products in Uttar Pradesh: ಉತ್ತರ ಪ್ರದೇಶದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವ ಇಸ್ಲಾಮಿ ಸಂಸ್ಥೆಯ ವಿರುದ್ಧ ದೂರು ದಾಖಲು

ರಾಜ್ಯದಲ್ಲಿ ಹಲಾಲ್ ಪ್ರಮಾಣ ಪತ್ರದ ಮೇಲೆ ನಿಷೇಧ ಹೇರುವ ವಿಚಾರದಲ್ಲಿ !

ಹಲಾಲ್ ಪ್ರಮಾಣ ಪತ್ರದಿಂದ ಸಿಗುವ ಹಣ ಭಯೋತ್ಪಾದಕ ಚಟುವಟಿಕೆಗಾಗಿ ಉಪಯೋಗಿಸಲಾಗುತ್ತಿರುವುದರ ಕುರಿತು ದೂರು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಯಾವುದೇ ಅಧಿಕಾರ ಇಲ್ಲದಿರುವಾಗ ಆಹಾರ ಪದಾರ್ಥ, ಸೌಂದರ್ಯ ವರ್ಧಕಗಳು ಮುಂತಾದ ವಸ್ತುಗಳಿಗಾಗಿ ಕಂಪನಿಗಳಿಗೆ ಹಲಾಲ್ ಪ್ರಮಾಣ ಪತ್ರ ನೀಡಿ ಅವರಿಂದ ಹಣ ಕೀಳುವವರ ವಿರುದ್ಧ ಉತ್ತರಪ್ರದೇಶದಲ್ಲಿನ ಯೋಗಿ ಆದಿತ್ಯನಾಥ ಸರಕಾರವು ಕ್ರಮ ಕೈಗೊಳ್ಳಲು ಆದೇಶ ನೀಡಿದೆ. ಇದರ ನಂತರ ಲಕ್ಷ್ಮಣಪುರಿ ಪೊಲೀಸರು ಹಲಾಲ್ ಪ್ರಮಾಣ ಪತ್ರ ನೀಡುವ ಇಸ್ಲಾಮಿ ಸಂಸ್ಥೆಗಳ ಮೇಲೆ ದೂರು ದಾಖಲಿಸಿದೆ. ಅವರ ಮೇಲೆ ಭಾರತೀಯ ದಂಡ ಸಂಹಿತೆಯ ಕಲಂ ೧೨೦(ಬ), ೧೫೩ ಅ, ೨೯೮, ೩೮೪, ೪೨೦, ೪೬೭, ೪೬೮, ೪೭೧ ಮತ್ತು ೫೦೫ ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಉತ್ತರ ಪ್ರದೇಶ ಸರಕಾರ ಹಲಾಲ್ ಪ್ರಮಾಣ ಪತ್ರದ ಮೇಲೆ ನಿಷೇಧ ಹೇರುವ ಯೋಚನೆ ಕೂಡ ಮಾಡುತ್ತಿದೆ. ಹಲಾಲ್ ಪ್ರಮಾಣ ಪತ್ರದ ಮೂಲಕ ಯಾವ ಇಸ್ಲಾಮಿ ಸಂಘಟನೆ ಹಣ ಸಂಗ್ರಹಿಸುತ್ತಿದೆ, ಆ ಹಣವನ್ನು ಭಯೋತ್ಪಾದಕ ಸಂಘಟನೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಾಗಿ ಬಳಸಲಾಗುತ್ತಿದೆ, ಎಂದು ದೂರು ಬಂದ ನಂತರ ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ.

ಯಾವ ಸಂಘಟನೆಗಳ ಮೇಲೆ ದೂರು ದಾಖಲು ?

ಲಕ್ಷ್ಮಣಪುರಿ ಪೊಲೀಸರು ದಾಖಲಿಸಿರುವ ದೂರಿನಲ್ಲಿ ‘ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಚೆನ್ನೈ’, ಜಮಿಯದ್ ಉಲೇಮಾ ಹಿಂದ ಹಲಾಲ್ ಟ್ರಸ್ಟ್ ದೆಹಲಿ’, ‘ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ ಮುಂಬಯಿ’, ‘ಜಮಿಯದ್ ಉಲೇಮಾ ಮಹಾರಾಷ್ಟ್ರ’, ಮುಂಬಯಿ ಮುಂತಾದ ಸಂಸ್ಥೆಯಿಂದ ಗ್ರಾಹಕರಿಗೆ ಧರ್ಮದ ಹೆಸರಿನ ಕೆಲವು ಉತ್ಪಾದನೆಗಳ ಮೇಲೆ ಹಲಾಲ್ ಪ್ರಮಾಣ ಪತ್ರ ನೀಡಿ ಕಾನೂನ ಬಾಹಿರ ವ್ಯವಹಾರ ಮಾಡಲಾಗುತ್ತಿದೆ. ಈ ಸಂಸ್ಥೆಗಳ ಉತ್ಪಾದನೆಗಳಿಗೆ ಪ್ರಮಾಣ ಪತ್ರ ನೀಡುವ ಯಾವುದೇ ಅಧಿಕಾರವಿಲ್ಲ. ಆರ್ಥಿಕ ಲಾಭಕ್ಕಾಗಿ ಈ ರೀತಿಯ ಪ್ರಮಾಣ ಪತ್ರ ಹಂಚಲಾಗುತ್ತಿದೆ. ಇದು ಸಾಮಾಜಿಕ ದ್ವೇಷ ಹೆಚ್ಚಿಸುತ್ತಿದೆ, ಹಾಗೂ ಇದು ಜನರ ಶ್ರದ್ಧೆಯ ಜೊತೆಗೆ ಆಟ ಆಡಿದ ಹಾಗೆ’ ಎಂದು ಹೇಳಿದೆ.

ಹಲಾಲ್ ಪ್ರಮಾಣ ಪತ್ರ ಪಡೆಯದೇ ಇರುವ ಕಂಪನಿಗಳ ಉತ್ಪಾದನೆಯ ಮಾರಾಟ ಕಡಿಮೆ ಮಾಡುವ ಪ್ರಯತ್ನ !

ದೂರುದಾರ ಶೈಲೇಂದ್ರ ಶರ್ಮಾ ಇವರು, ಯಾವ ಕಂಪನಿಗಳು ಈ ಸಂಸ್ಥೆಗಳಿಂದ ಹಲಾಲ್ ಪ್ರಮಾಣ ಪತ್ರ ಪಡೆಯುವುದಿಲ್ಲ, ಅವರ ಉತ್ಪಾದನೆಯ ಮಾರಾಟ ಕಡಿಮೆ ಆಗುವುದಕ್ಕಾಗಿ ಕೂಡ ಪ್ರಯತ್ನ ಮಾಡಲಾಗುತ್ತದೆ. ಇದು ಕೂಡ ಒಂದು ರೀತಿಯ ಅಪರಾಧವಾಗಿದೆ. ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ಸಮಾಜ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಘಟಕಗಳಿಗೆ ಲಾಭ ತಲುಪಿಸಲಾಗುತ್ತಿರಬಹುದು, ಇಂತಹ ಸಾಧ್ಯತೆಗಳಿವೆ. ವಿಶೇಷವಾಗಿ ಸಸ್ಯಹಾರಿ ಪದಾರ್ಥ, ಉದಾ. ಸೋಪು, ಎಣ್ಣೆ, ಟೂಥಪೇಸ್ಟ್, ಜೇನುತುಪ್ಪ ಮುಂತಾದವುಗಳಿಗಾಗಿ ಹಲಾಲ್ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲದಿದ್ದರೂ ಅದನ್ನು ನೀಡಲಾಗುತ್ತದೆ. ಇದರಿಂದ, ಒಂದು ಧರ್ಮದ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ. ಧರ್ಮದ ಹೆಸರಿನಲ್ಲಿ ಒಂದು ವಿಶೇಷ ವಿಷಯದ ಬಗ್ಗೆ ತಪ್ಪು ಪ್ರಸಾರ ಮಾಡಲಾಗುತ್ತಿದೆ. ಇದರಲ್ಲಿ ‘ಯಾವ ಕಂಪನಿಗಳು ಹಲಾಲ್ ಪ್ರಮಾಣ ಪತ್ರ ಪಡೆದಿಲ್ಲ, ಅವರ ಉತ್ಪಾದನೆಗಳ ಬಳಕೆ ಮಾಡಬಾರದೆಂದು’ ಪ್ರಚಾರ ಮಾಡಲಾಗುತ್ತದೆ. ಇದರಿಂದ ಇತರ ಧರ್ಮದವರ ವ್ಯವಸಾಯಕ್ಕೆ ಹಾನಿ ಉಂಟಾಗುತ್ತದೆ. ಇದಲ್ಲದೆ ಸಾಮಾನ್ಯ ಜನರಿಗಾಗಿ ಬಳಕೆ ಆಗುವ ವಸ್ತುಗಳ ಮೇಲೆ ಕೂಡ ಹಲಾಲ್ ಪ್ರಮಾಣ ಪತ್ರ ನೀಡಿ ಆರ್ಥಿಕ ಲಾಭ ಪಡೆಯಲಾಗುತ್ತಿದೆ. ಇಷ್ಟೇ ಅಲ್ಲದೆ ಈ ಮೂಲಕ ಸಮಾಜದಲ್ಲಿ ದ್ವೇಷ ಮತ್ತು ಬಿರುಕು ಮೂಡಿಸಿ ದೇಶವನ್ನು ಅಶಕ್ತಗೊಳಿಸುವ ಒಂದು ಸುವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದೆ. ಇದರಲ್ಲಿ ಪ್ರಮಾಣ ಪತ್ರ ನೀಡುವ ಮತ್ತು ಒಂದು ವಿಶೇಷ ಧರ್ಮದ ಕಂಪನಿಗಳ ಮಾಲೀಕರು ಸಹಭಾಗಿದ್ದಾರೆ ಎಂದು ಹೇಳಿದರು.

ಹಲಾಲ್ ಪ್ರಮಾಣ ಪತ್ರ ಎಂದರೆ ಏನು ?

ಮುಸಲ್ಮಾನರಲ್ಲಿ ಹಲಾಲ್ (ಇಸ್ಲಾಂ ಧರ್ಮದ ಪ್ರಕಾರ ಯೋಗ್ಯ) ಉತ್ಪಾದನೆಗಳನ್ನು ಉಪಯೋಗಿಸಲು ಯೋಗ್ಯ ಎಂದು ತಿಳಿಯಲಾಗಿದೆ. ಇದರಲ್ಲಿ ಆಹಾರ ಪದಾರ್ಥ ಹಾಗೂ ಇತರ ಉತ್ಪಾದನೆಯ ಸಮಾವೇಶ ಇದೆ. ಈ ಉತ್ಪಾದನೆಯಲ್ಲಿ ಮುಸಲ್ಮಾನರಿಗೆ ಯಾವುದು ‘ಹರಾಮ್’ ಆಗಿದೆ ಎಂದರೆ ಇಸ್ಲಾಂನ ಪ್ರಕಾರ ಅಯೋಗ್ಯವಾಗಿದೆ ಅವುಗಳು ಇಲ್ಲ. ಇಂತಹ ಉತ್ಪಾದನೆಗಳು ಮುಸಲ್ಮಾನ ಸಂಸ್ಥೆ ‘ಹಲಾಲ್ ಪ್ರಮಾಣಿತ’ ಎಂದು ಪ್ರಮಾಣಪತ್ರ ನೀಡುತ್ತದೆ. ಅದರ ಬದಲು ಸಾವಿರಾರು ರೂಪಾಯಿ ಕಬಳಿಸುತ್ತದೆ. ಇಂತಹ ಹಲಾಲ್ ಪ್ರಮಾಣಿತ ಉತ್ಪಾದನೆ ಇಸ್ಲಾಮಿ ದೇಶದಲ್ಲಿ ರಫ್ತು ಮಾಡಲಾಗುತ್ತದೆ ಹಾಗೆಯೇ ಭಾರತದಲ್ಲಿ ಕೂಡ ವಿತರಿಸಲಾಗುತ್ತದೆ.

ಸಂಪಾದಕರ ನಿಲುವು

ಹಿಂದೂ ಜನಜಾಗೃತಿ ಸಮಿತಿ ಕಳೆದ ಕೆಲವು ವರ್ಷಗಳಿಂದ ಈ ಸಂದರ್ಭದಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದೆ ಹಾಗೂ ಸರಕಾರಿ ಮಟ್ಟದಲ್ಲಿ ಕೂಡ ಈ ಪ್ರಮಾಣ ಪತ್ರವನ್ನು ನಿಷೇಧಿಸಲು ಒತ್ತಾಯಿಸುತ್ತಿದ್ದೇವೆ. ಇಂದು ಉತ್ತರಪ್ರದೇಶದ ಸರಕಾರವು ಈ ಹೆಜ್ಜೆ ಇಟ್ಟಿದ್ದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಅಭಿನಂದನೆಗಳು. ಅವರಿಂದ ಪ್ರೇರಣೆ ಪಡೆದು ಕೇಂದ್ರ ಸರಕಾರ ಮತ್ತು ಇತರ ರಾಜ್ಯಗಳಲ್ಲಿ ಕೂಡ ಹೀಗೆ ಪ್ರಯತ್ನ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತಿದೆ !