ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಿಸಿದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಮಹತ್ವ !
‘ವಿದೇಶಿ ವಿಚಾರವಂತರೊಬ್ಬರು, ‘ನೀವು ಸತ್ತಾಗ, ‘ನೀವು ಸತ್ತಿದ್ದೀರಿ’, ಎಂದು ನಿಮಗೆ ತಿಳಿಯುವುದಿಲ್ಲ. ಅದರ ದುಃಖವನ್ನು ಇತರರಿಗೆ ಆಗುತ್ತದೆ. ಹಾಗೆಯೇ ಮೂರ್ಖ ಮನುಷ್ಯನ ಸಂದರ್ಭದಲ್ಲಿ ಘಟಿಸುತ್ತದೆ’, ಎಂದು ಹೇಳಿದ್ದಾರೆ. (ವ್ಹೆಟಿ ಥಿಔ ಚಿಡಿಎ ಜಎಚಿಜ, ಥಿಔ ಜಒಟಿ’ಣ ಞಟಿಒತಿ ಥಿಔ ಚಿಡಿಎ ಜಎಚಿಜ. ಖಿಹೆ ಠಿಚೀಟಿ ಇಸ್ ಜಿಎಟಣ ಬ್ಥಿ ಒಣಹೆಡಿಸ್. ಖಿಹೆ ಸ್ಚಿಮೆ ಣಹಿಟಿಗ್ ಹ್ಚಿಠಿಠಿಎಟಿಸ್ ತಿಹೆಟಿ ಥಿಔ ಚಿಡಿಎ ಸ್ಣಉಠೀಜ.)’ ಅದೇ ರೀತಿ ‘ಮೃತಪಟ್ಟ ವ್ಯಕ್ತಿಯ ಶವದ ಸಂವೇದನೆಯು ನಾಶಗೊಂಡಿರುವುದರಿಂದ ಅವನಿಗೆ ಯಾವ ಅರಿವೂ ಇರುವುದಿಲ್ಲ. ಅವನಿಗೆ ‘ನಾವು ಜೀವಂತರಾಗಿದ್ದೇವೆ, ಸುಖವಾಗಿದ್ದೇವೆಯೋ ಅಥವಾ ದುಃಖಿಯಾಗಿದ್ದೇವೆಯೋ ? ಎಂಬ ಅರಿವು ಇರುವುದಿಲ್ಲ; ಆದರೆ ಇತರರಿಗೆ ಅದರ ಅರಿವು ಇರುವುದರಿಂದ ಅವರಿಗೆ ದುಃಖವಾಗುತ್ತದೆ, ಅದೇ ರೀತಿ ಯಾವುದಾದರೊಬ್ಬ ಮೂರ್ಖ ಮನುಷ್ಯನು ಅಯೋಗ್ಯವಾಗಿ ಮಾತನಾಡುತ್ತಾನೆ ಅಥವಾ ವರ್ತಿಸುತ್ತಾನೆ, ಆ ಸಮಯದಲ್ಲಿ ಅವನಿಗೆ ಆ ಕುರಿತು ಯಾವ ಸಂವೇದನೆಯೂ ಆಗುವುದಿಲ್ಲ; ಆದರೆ ಇತರರಿಗೆ ಮಾತ್ರ ಅರಿವಾಗುತ್ತದೆ.
ವಿಚಾರವಂತರು ಹೇಳಿದಂತೆ ‘ನಾವು ಜೀವಂತವಾಗಿರುವಾಗಲೇ ಮರಣ ಅಥವಾ ಮೂರ್ಖ ಮನುಷ್ಯನಂತಾಗಿ ಸುಖ-ದುಃಖದ ಅರಿವನ್ನು ಹೇಗೆ ನಾಶಗೊಳಿಸಬೇಕು ?’, ಎಂಬ ಪ್ರಶ್ನೆಯಾಗಿದೆ. ಇದು ಕೇವಲ ಸಾಧನೆ ಮಾಡುವುದರಿಂದ ಸಾಧ್ಯವಾಗುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ‘ಗುರುಕೃಪಾಯೋಗಾನುಸಾರ’ ಸಾಧನೆಯ ಅಂತರ್ಗತ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದ ಸಾಧಕನಿಗೆ ಮೇಲಿನ ಅಂಶವನ್ನು ಹೇಳಿದ ಸ್ಥಿತಿಯಲ್ಲಿ ಸಹಜವಾಗಿ ತಲುಪಬಹುದು. ಸಾಧನೆಯ ಈ ಪ್ರಕ್ರಿಯೆಯಿಂದ ಸಾಧಕನಲ್ಲಿ ಅಹಂಶೂನ್ಯತೆ ಆದನಂತರ ವ್ಯಾವಹಾರಿಕ ದೃಷ್ಟಿಯಲ್ಲಿ ಅವನು ಇತರರಿಗಾಗಿ ಮೃತ ಅಥವಾ ಮೂರ್ಖನಾಗಬಹುದು; ಆದರೆ ಇಂತಹ ಸಾಧಕನ ಸುಖ-ದುಃಖದ ಸಂವೇದನೆಯು ನಾಶಗೊಂಡು
ಅವನಿಗೆ ಕೇವಲ ಆನಂದ ಸಿಗುತ್ತದೆ ಮತ್ತು ಇತರರಿಗೆ ಮಾತ್ರ ಅವರ ಸ್ವಭಾವದೋಷಗಳಿಗನುಸಾರ ಸುಖ-ದುಃಖವಾಗುತ್ತದೆ.
ಆನಂದಮಯ ಜೀವನಕ್ಕಾಗಿ ಸಾಧನೆಯನ್ನು ಕಲಿಸಿ ಸಾಧಕರಿಗೆ ಆನಂದವನ್ನು ನೀಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಚರಣಗಳಲ್ಲಿ ನಾನು ಶರಣಾಗತಭಾವದಿಂದ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’
– (ಪೂ.) ಶಿವಾಜಿ ವಟಕರ (ಸನಾತನದ ೧೦೨ ನೇ ಸಂತರು, ೭೬ ವರ್ಷ), ಸನಾತನ ಆಶ್ರಮ, ದೇವದ, ಪನವೇಲ. (೨೦.೬.೨೦೨೩)