ದೇವತೆಗಳ ತತ್ತ್ವಗಳನ್ನು ಆಕರ್ಷಿಸಬಲ್ಲ ಕೆಲವು ದೈವೀ ಪರಿಮಳಯುಕ್ತ ವನಸ್ಪತಿಗಳು !

೧. ದೈವೀ ಪರಿಮಳದ ವನಸ್ಪತಿ ‘ಜವಾದೂ’

೧. ಭಾರತದ ಕೆಲವು ಪರಿಮಳಯುಕ್ತ ಅಂಟನ್ನು ಸ್ರವಿಸುವ ವನಸ್ಪತಿಗಳಿಂದ ಕರ್ಪೂರ, ಗುಗ್ಗುಳ, ಊದ(ಲೋಬಾನಾ), ಧೂಪ ಇವುಗಳನ್ನು ಪಡೆಯಲಾಗುತ್ತದೆ, ಆದರೆ ಬಹಳಷ್ಟು ಮರಗಳನ್ನು ಕಡಿಯುವುದರಿಂದ ಈ ವನಸ್ಪತಿಗಳು ವಿನಾಶದ ಅಂಚಿನಲ್ಲಿವೆ : ‘ನಮ್ಮ ಭಾರತ ದೇಶದಲ್ಲಿ ಅನೇಕ ಪ್ರಕಾರದ ಪರಿಮಳಯುಕ್ತ ವನಸ್ಪತಿಗಳಿವೆ’, ಇದು ನಮಗೆ ಗೊತ್ತಿದೆ. ಈ ಪರಿಮಳಯುಕ್ತ ವನಸ್ಪತಿಗಳಿಂದಲೇ ನಮಗೆ ಕರ್ಪೂರ, ಗುಗ್ಗುಳ, ಊದ(ಲೋಬಾನಾ) ಮತ್ತು ಧೂಪ ಇವುಗಳಂತಹ ದೈವೀ ಪರಿಮಳಗಳು ಪ್ರಾಪ್ತವಾಗುತ್ತವೆ. ಈ ವನಸ್ಪತಿಗಳ ಅಂಟು ಸಹ ಒಂದು ವಿಧದ ಪರಿಮಳಯುಕ್ತ ದ್ರವ್ಯವಾಗಿದೆ. ಸುಮಾತ್ರಾ ಬೆಟ್ಟದ ಮೇಲೆ ಕರ್ಪೂರದ ಮರಗಳಿವೆ. ದಕ್ಷಿಣ ಭಾರತದ ಪರ್ವತಗಳ ಮೇಲೆ ಗುಗ್ಗುಳ, ಸಾಂಬ್ರಾಣಿ, ಊದ ಈ ಪ್ರಕಾರದ ಪರಿಮಳಯುಕ್ತ ದ್ರವ್ಯಗಳ ಮರಗಳಿವೆ. ಪ್ರಸ್ತುತ ಬಹಳಷ್ಟು ಮರಗಳ ಕಡಿತದಿಂದಾಗಿ ಈ ವನಸ್ಪತಿಗಳು ವಿನಾಶದ ಅಂಚಿನಲ್ಲಿವೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

೨. ಪರಿಮಳಯುಕ್ತ ದ್ರವ್ಯಗಳನ್ನು ನೀಡುವ ಇತರ ವನಸ್ಪತಿಗಳು !

೨ ಅ. ‘ದೇವದಾರು’ : ‘ದೇವದಾರು’ ಈ ಮರದ ಬಗ್ಗೆ ಮಾಹಿತಿಯನ್ನು ಪಡೆಯುವಾಗ, ‘ಕೊಳ್ಳೀಮಲೈ ಪರ್ವತದ ಮೇಲೆ ‘ದೇವದಾರು’ ಹೆಸರಿನ ಪರಿಮಳಯುಕ್ತ ಮರಗಳಿದ್ದು ಮೊದಲು, ಅದರ ಕಟ್ಟಿಗೆಯನ್ನು ದೇವತೆಗಳ ಆರತಿಯನ್ನು ಮಾಡುವಾಗ ಉರಿಸಲು ಬಳಸಲಾಗುತ್ತಿತ್ತು. ಈ ಕಟ್ಟಿಗೆಯ ತುಂಡನ್ನು ಹೊತ್ತಿಸಿದಾಗ ಅದರಿಂದ ಒಂದು ರೀತಿಯ ಪರಿಮಳಯುಕ್ತ ಹೊಗೆ ಹೊರಗೆ ಬರುತ್ತಿತ್ತು’, ಎಂದು ತಿಳಿಯಿತು. ನಾವು ಈ ಪರ್ವತದ ಮೇಲಿರುವ ಓರ್ವ ವ್ಯಕ್ತಿಯ ಬಳಿ ಈ ಕಟ್ಟಿಗೆಯನ್ನು ನೋಡಿದೆವು.

೨ ಅ ೧. ಈ ಕಟ್ಟಿಗೆಯನ್ನು ಸುಟ್ಟಾಗ ಬರುವ ಹೊಗೆಯ ಪರಿಮಳದಲ್ಲಿ ದೇವತೆಗಳನ್ನು ಆಕರ್ಷಿಸುವ ಸಾಮರ್ಥ್ಯ ಇರುವುದು; ಆದುದರಿಂದ ಯಜ್ಞಯಾಗಗಳಿಗಾಗಿ ಈ ಮರದ ಸಮಿಧೆಯ ಬಳಕೆಯಾಗುವುದು : ಈ ಕಟ್ಟಿಗೆಯಿಂದ ಹೊರಗೆ ಬರುವ ಹೊಗೆಯ ಪರಿಮಳವು ಸಾಮಾನ್ಯವಾಗಿ ಮಸಾಲೆಗಳನ್ನು ಸುಟ್ಟಾಗ ಬರುವ ವಾಸನೆಯಂತೆ ಇರುತ್ತದೆ. ನನಗೆ ಈ ಹೊಗೆ ಮಾರಕವೆನಿಸಿತು. ಆ ವ್ಯಕ್ತಿಯು ‘ದೇವದಾರು’ ಈ ಮರದ ಬಗ್ಗೆ ಮಾಹಿತಿಯನ್ನು ನೀಡುವಾಗ ನಮಗೆ, ”ಈ ಮರದ ಕಟ್ಟಿಗೆಯ ಹೊಗೆಯಲ್ಲಿ ದೇವತೆಗಳನ್ನು ಆಕರ್ಷಿಸುವ ಸಾಮರ್ಥ್ಯವಿದೆ; ಆದುದರಿಂದ ಈ ಮರದ ಸಮಿಧೆಗಳನ್ನು ಯಜ್ಞಗಳಲ್ಲಿ ಬಳಸಲಾಗುತ್ತದೆ. ಈ ಹೊಗೆಯಿಂದಾಗಿ ಅನೇಕ ದೇವತೆಗಳು ಯಜ್ಞದ ಸ್ಥಳಕ್ಕೆ ಆಕರ್ಷಿಸಲ್ಪಡುವುದರಿಂದ ಯಜ್ಞದ ಸ್ಥಳದಲ್ಲಿ ಉಪಸ್ಥಿತರಿರುವ ಜನರಿಗೆ ದೇವತೆಗಳ ಚೈತನ್ಯದ ಲಾಭವಾಗಲು ಸಹಾಯವಾಗುತ್ತದೆ”, ಎಂದು ಹೇಳಿದರು.

೨ ಆ. ಜವಾದೂ : ‘ಜವಾದೂ ಸಹ ಇದೇ ರೀತಿಯ ಇನ್ನೊಂದು ಸುಗಂಧಯುಕ್ತ ವನಸ್ಪತಿ ಆಗಿದೆ !’ ‘ಜವಾದೂ’ ಮರದ ಕಾಂಡಗಳ ಪುಡಿಯಿಂದಲೇ ಇದರ ಪರಿಮಳ ಬರುತ್ತದೆ. ‘ಜವಾದೂ’ವಿನ ಅತ್ತರ ಮಾರುಕಟ್ಟೆಯಲ್ಲಿ ಸಿಗುತ್ತದೆ. ಈ ಪರಿಮಳ ಎಲ್ಲರ ಮನಸ್ಸನ್ನು ಉಲ್ಲಾಸಿತಗೊಳಿಸುತ್ತದೆ. ‘ತಮಿಳುನಾಡಿನ ವೆಲ್ಲೂರ ಎಂಬ ಊರಿನ ಸಮೀಪವಿರುವ ಪರ್ವತದ ಮೇಲೆ ಇದರ ಮರಗಳಿವೆ’, ಎಂಬ ಮಾಹಿತಿ ನಮಗೆ ಸಿಕ್ಕಿತು.

೧. ಬಹಳಷ್ಟು ಸಲ ದಕ್ಷಿಣ ಭಾರತದಲ್ಲಿ ದೇವಿಯ ದೇವಸ್ಥಾನಗಳಲ್ಲಿ ಅಥವಾ ಶಂಕರಾಚಾರ್ಯರ ಮಠಗಳಲ್ಲಿ ಈ ಪರಿಮಳಯುಕ್ತ ಪುಡಿಯನ್ನು ದೇವತೆಗಳ ವಿಗ್ರಹಗಳಿಗೆ ಲೇಪಿಸಲು ಉಪಯೋಗಿಸಲಾಗುತ್ತದೆ.

೨. ಈ ಪರಿಮಳಯುಕ್ತ ಪುಡಿಯನ್ನು ಅಥವಾ ಅತ್ತರನ್ನು ಹವನಗಳಲ್ಲಿಯೂ ಉಪಯೋಗಿಸುತ್ತಾರೆ. ಇದರಿಂದ ವಾತಾವರಣ ಪರಿಮಳಯುಕ್ತವಾಗುತ್ತದೆ ಮತ್ತು ಇದರಿಂದ ಆ ಸ್ಥಳದಲ್ಲಿ ದೇವತೆಗಳ ತತ್ತ್ವವೂ ಆಕರ್ಷಿತವಾಗುತ್ತದೆ.

೩. ಅನೇಕ ಬಾರಿ ಮಹರ್ಷಿಗಳು ನಮಗೆ ರಾಮನಾಥಿ ಆಶ್ರಮದಲ್ಲಿ ನಡೆಯುವ ಯಜ್ಞಗಳಲ್ಲಿ ಈ ‘ಜವಾದೂ’ ಹೆಸರಿನ ಅತ್ತರವನ್ನು ಬಳಸಲು ಹೇಳುತ್ತಾರೆ.

೩. ಕೃತಜ್ಞತೆ

ಭಗವಂತನು ನಮಗೆ ಈ ದೈವೀ ಮರಗಳ ಮೂಲಕ ಅನೇಕ ಪರಿಮಳಗಳನ್ನು ನೀಡಿದ್ದಾನೆ. ‘ಅವುಗಳ ಬಳಕೆಯನ್ನು ಯಾವಾಗ ಮತ್ತು ಹೇಗೆ ಮಾಡಬೇಕು ?’,
ಎಂಬುದನ್ನೂ ಋಷಿಮುನಿಗಳು ನಮಗೆ ಹೇಳಿದ್ದಾರೆ. ಋಷಿಮುನಿಗಳು ನೀಡಿದ ಈ ಜ್ಞಾನದ ಬಗ್ಗೆ ನಾವು ಅವರಿಗೆ ಎಷ್ಟು ಕೃತಜ್ಞತೆಗಳನ್ನು ವ್ಯಕ್ತ ಪಡಿಸಿದರೂ ಅದು ಕಡಿಮೆಯೇ ಆಗಿದೆ.’

ದೈವೀ ಸುಗಂಧಿ ವನಸ್ಪತಿ ದಕ್ಷಿಣ ಭಾರತದಲ್ಲಿ ಸಿಗುವ ಪುನಗೂ ಹೆಸರಿನ ಅತ್ತರ ‘ಮಹರ್ಷಿಗಳು ನಮಗೆ ‘ಪುನಗೂ’ ಹೆಸರಿನ ಅತ್ತರನ್ನು ಕಾಳಭೈರವನ ಪೂಜೆಯಾದ ನಂತರ ಅವರ ದಂಡಕ್ಕೆ ಲೇಪಿಸಲು ಹೇಳಿದ್ದಾರೆ; ಆದುದರಿಂದ ರಾಮನಾಥಿ ಆಶ್ರಮದಲ್ಲಿ ಸ್ಥಾಪಿಸಲಾದ ಕಾಳಭೈರವನ ದಂಡದ ಪೂಜೆಯಲ್ಲಿ ಈ ಅತ್ತರನ್ನು ಬಳಸಲಾಗುತ್ತದೆ. ಇದರ ಪರಿಮಳ ಬಹಳ ಮಾರಕವಿದೆ. ಈ ಅತ್ತರ ಒಂದು ಜಾತಿಯ ಪ್ರಾಣಿಯಿಂದ ದೊರಕುತ್ತದೆ. ‘ಆ ಪ್ರಾಣಿಯ ನಾಬಿ (ಹೊಕ್ಕಳು)ಯಲ್ಲಿ ಈ ಪರಿಮಳವಿರುತ್ತದೆ’, ಎಂಬ ಮಾಹಿತಿ ನಮಗೆ ಸಿಕ್ಕಿತು. ಇದು ದಕ್ಷಿಣ ಭಾರತದಲ್ಲಿ ಸಿಗುತ್ತದೆ.

‘ಯಾವ ಪ್ರಾಣಿಯಿಂದ ಯಾವ ಪರಿಮಳ ಸಿಗುತ್ತದೆ ?’ ಮತ್ತು ‘ಈ ಪರಿಮಳದಿಂದ ಯಾವ ದೇವತೆಯ ತತ್ತ್ವ ಜಾಗೃತವಾಗುತ್ತದೆ ?’, ಎಂಬುದರ ಬಗ್ಗೆಯೂ ನಮ್ಮ ಋಷಿಮುನಿಗಳ ಅಧ್ಯಯನವಿತ್ತು’, ಇದೂ ನಮಗೆ ಇದರಿಂದ ಕಲಿಯಲು ಸಿಗುತ್ತದೆ.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಕೊಳ್ಳಿಮಲೈ, ತಮಿಳುನಾಡು. (೧೪.೧.೨೦೨೧, ಬೆಳಗ್ಗೆ ೮.೩೯)