ಖಲಿಸ್ತಾನಿಗಳು ಕೇವಲ ಭಾರತಕ್ಕೆ ಮಾತ್ರವಲ್ಲ, ಕೆನಡಾಕ್ಕೂ ಅಪಾಯಕಾರಿ !

ನೀವು ಭಯೋತ್ಪಾದನೆಯ ವಿಷಯದಲ್ಲಿ ಒಂದು ಕ್ಷಣ ಭಾರತವನ್ನು ಮರೆಯಬಹುದು, ಆದರೆ ಕೆನಡಾದಲ್ಲಿ ತಲೆ ಎತ್ತುತ್ತಿರುವ ಭಯೋತ್ಪಾದಕ ಶಕ್ತಿಗಳು ಭಾರತಕ್ಕೆ ಮಾತ್ರವಲ್ಲ, ಕೆನಡಾಕ್ಕೂ ಅಪಾಯಕಾರಿಯಾಗಿವೆ’, ಎಂದು ವಿದೇಶಮಂತ್ರಿ ಡಾ. ಎಸ್. ಜಯಶಂಕರ ಇವರು ಸಪ್ಟೆಂಬರ ೧೭ ರಂದು ‘ಜಿ-೨೦’ ಪರಿಷತ್ತು ಮುಗಿದ ನಂತರ ಮಾಹಿತಿ ನೀಡಿದರು. ಮಲ್ಯಾಳಮ್‌ ವಾರ್ತಾವಾಹಿನಿ ‘ಏಶಿಯಾನೆಟ್‌’ಗೆ ನೀಡಿದ ಸಂದರ್ಶನದಲ್ಲಿ ಡಾ. ಜಯಶಂಕರ ಇವರು ಹೇಳುತ್ತಿದ್ದ ಅಪಾಯವನ್ನು ಕೆನಡಾ ೩೮ ವರ್ಷಗಳ ಹಿಂದೆಯೇ ಎದುರಿಸಿತ್ತು. ನಿಜ ನೋಡಿದರೆ ಈ ಖಲಿಸ್ತಾನಿ ಭಯೋತ್ಪಾದಕರ ರಕ್ಷಣೆಗಾಗಿ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್‌ ಟ್ರುಡೋ ಭಾರತದೊಂದಿಗೆ ಸಂಘರ್ಷ ಮಾಡುತ್ತಿದ್ದಾರೆ, ಅದೇ ಖಲಿಸ್ತಾನಿ ಭಯೋತ್ಪಾದಕರ ಮೇಲೆ ೨೬೮ ಜನ ಕೆನೆಡಿಯನ್‌ ನಾಗರಿಕರ ಹತ್ಯೆಯ ಆರೋಪವಿದೆ. ಈ ಲೇಖನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ‘ಏರ್‌ ಇಂಡಿಯಾ’ದ ‘ವಿಮಾನ (ಫ್ಲೈಟ್) ೧೮೨’ರಲ್ಲಿನ ೩೨೯ ಅಮಾಯಕ ಜನರನ್ನು ಹೇಗೆ ಹತ್ಯೆ ಮಾಡಿದ್ದರು ? ಎಂಬ ವಿಷಯದ ಮಾಹಿತಿಯನ್ನು ನೀಡುತ್ತಿದ್ದೇವೆ.

೧. ಕೆನಡಾದ ಮನಜಿತ ಸಿಂಗ್‌ ಎಂಬ ವ್ಯಕ್ತಿ ‘ಏರ್‌ ಇಂಡಿಯಾ’ದ ವಿಮಾನದಲ್ಲಿ ತನ್ನ ಬ್ಯಾಗ್‌ನ್ನು ಇಡುವುದು

ಕೆನಡಾದ ವೆನ್‌ಕುಓರದಿಂದ ಟೊರೋಂಟೋಗೆ ಹೋಗಲು ಮನಜಿತ ಸಿಂಗ್‌ ಎಂಬ ಹೆಸರಿನ ವ್ಯಕ್ತಿ ೨೨ ಜೂನ್‌ ೧೯೮೫ ರಂದು ಮಧ್ಯಾಹ್ನ ೩.೩೦ ಕ್ಕೆ ಸಾಮಾನುಗಳನ್ನು ತಪಾಸಣೆ ಮಾಡಿಕೊಂಡು ವಿಮಾನ ನಿಲ್ದಾಣದಲ್ಲಿ ಒಳಗೆ ಹೋಗುತ್ತಾನೆ. ಟಿಕೇಟ್‌ ಖಾತ್ರಿಯಾಗಿಲ್ಲವೆಂದು ತಿಳಿದಾಗ ಅವನು ವಿಮಾನ ನಿಲ್ದಾಣದಲ್ಲಿನ ದಲಾಲನಿಗೆ ‘ನಾನಿಲ್ಲದಿದ್ದರೂ ನಡೆದೀತು, ನನ್ನ ಸಾಮಾನನ್ನಾದರೂ ಟೊರೋಂಟೋದಿಂದ ಭಾರತದ ‘ಫ್ಲೈಟ್‌ ನಂಬರ ೧೮೨’ನಲ್ಲಿ (‘ಕನಿಷ್ಕಾ’ದಲ್ಲಿ) ಕಳುಹಿಸಬೇಕು’ ಎಂದು ನಮ್ರತೆಯಿಂದ ಹೇಳುತ್ತಾನೆ. ದಲಾಲನು ಮೊದಲು ನಿರಾಕರಿಸುತ್ತಾನೆ; ಆದರೆ ಜನದಟ್ಟಣೆಯಿರುವುದರಿಂದ ಮನ ಜಿತ ಸಿಂಗ್‌ನ ವಿನಂತಿಯನ್ನು ಸ್ವೀಕರಿಸುತ್ತಾನೆ. ಅನಂತರ ಸಿಂಗ್‌ ಕಾಲಿನಿಂದ ದೂಡುತ್ತಾ ಸೂಟ್‌ಕೇಸ್‌ ತಪಾಸಣೆ ಮಾಡುತ್ತಾನೆ. ಆದರೆ ಅವನು ಹೀಗೆ ಮಾಡುವುದನ್ನು ಯಾರೂ ಗಮನಿಸುವುದಿಲ್ಲವೆಂದು ಅವನು ತನಗೆ ಬೇಕಾದ ಹಾಗೆ ಮಾಡುವುದರಲ್ಲಿ ಸಹಜವಾಗಿ ಯಶಸ್ವಿಯಾಗುತ್ತಾನೆ. ಈ ರೀತಿ ಅವನ ಬ್ಯಾಗ್‌ನ್ನು ವೆನ್‌ಕುಓರದಿಂದ ಟೊರೋಂಟೋದ ವಿಮಾನದಲ್ಲಿ ಇಡಲಾಗುತ್ತದೆ.

೨. ಮನಜಿತ ಸಿಂಗ್‌ನ ಬ್ಯಾಗ್‌ನ್ನು ಯಾರೂ ತಪಾಸಣೆ ಮಾಡುವುದಿಲ್ಲ

ಸಿಂಗ್‌ ವಿಮಾನದಲ್ಲಿ ಇಲ್ಲದಿದ್ದರೂ, ಅವನ ಸೂಟ್‌ಕೇಸ್‌ ವಿಮಾನದಲ್ಲಿಯೇ ಇತ್ತು. ಈ ವಿಮಾನ ರಾತ್ರಿ ೮.೨೨ ಕ್ಕೆ ಟೊರೋಂಟೋಗೆ ತಲುಪಿತು. ಅನಂತರ ಪ್ರಯಾಣಿಕರನ್ನು ಮತ್ತು ಸಾಮಾನುಗಳನ್ನು ಟೊರೋಂಟೋದಿಂದ ಭಾರತಕ್ಕೆ ಹೋಗುವ ‘ಏರ್‌ ಇಂಡಿಯಾ’ದ ಕನಿಷ್ಕ ವಿಮಾನದಲ್ಲಿ ಸಾಗಿಸ ಲಾಗುತ್ತದೆ. ಈ ವಿಮಾನ ಟೊರೋಂಟೋದಿಂದ ಲಂಡನ್‌ ಮಾರ್ಗದಿಂದ ಭಾರತಕ್ಕೆ ಹೋಗಲಿಕ್ಕಿತ್ತು. ವಾಕುವರದ ನಂತರ ಟೊರೋಂಟೋ ವಿಮಾನ ನಿಲ್ದಾಣದಲ್ಲಿಯೂ ಮನ್‌ಜಿತನ ಸಾಮಾನನ್ನು ಯಾರೂ ತಪಾಸಣೆ ಮಾಡಲಿಲ್ಲ. ಅದನ್ನು ನೇರವಾಗಿ ಭಾರತಕ್ಕೆ ಹೋಗುವ ಕನಿಷ್ಕ ವಿಮಾನದಲ್ಲಿ ಇಡಲಾಯಿತು. ಸಾಮಾನನ್ನು ಸ್ಥಳಾಂತರಿಸುವಾಗ ‘ಫ್ಲೈಟ್‌ ಎಟೆಂಡಂಟ್’ (ವಿಮಾನದಲ್ಲಿನ ಪರಿಚಾರಿಕೆ) ಈ ಸೂಟ್‌ಕೇಸ್‌ ಯಾರದ್ದು ? ಮತ್ತು ಅವನು ವಿಮಾನದಲ್ಲಿದ್ದಾನೆಯೋ ಅಥವಾ ಇಲ್ಲವೋ ? ಎಂಬುದನ್ನೂ ಗಮನಿಸಲಿಲ್ಲ.

೩. ‘ಏರ್‌ ಇಂಡಿಯಾ’ದ ‘ಕನಿಷ್ಕ’ ವಿಮಾನ ಸ್ಫೋಟ

೨೩ ಜೂನ್‌ ೧೯೮೫ ರಂದು ರಾತ್ರಿ ೧೨.೨೫ ಕ್ಕೆ ‘ಏರ್‌ ಇಂಡಿಯಾ’ದ ‘ಕನಿಷ್ಕ ವಿಮಾನ’ ಟೊರೋಂಟೋದಿಂದ ಹೊರಡುತ್ತದೆ. ಈ ವಿಮಾನದಲ್ಲಿ ೩೦೭ ಜನ ಪ್ರಯಾಣಿಕರು ಹಾಗೂ ೨೨ ಜನ ‘ಕ್ರೂ ಮೆಂಬರ್ರ್ಸ್‌’ (ವಿಮಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು) ಇದ್ದರು. ಈ ವಿಮಾನ ಲಂಡನ್‌ನ ಹಿಥ್ರೋ ವಿಮಾನ ನಿಲ್ದಾಣದಿಂದ ೪೫ ನಿಮಿಷಗಳ ಅಂತರದಲ್ಲಿರುವಾಗ ಬೆಳಗ್ಗೆ ೮.೧೬ ಕ್ಕೆ ವಿಮಾನ ಅನಿರೀಕ್ಷಿತ ವಾಗಿ ರಡಾರ್‌ ನಿಂದ ಕಣ್ಮರೆ ಆಯಿತು. ನಿಯಂತ್ರಣ ಕಕ್ಷೆಯಿಂದ ಅದೇ ಮಾರ್ಗದಿಂದ ಹೋಗುವ ಇತರ ಎರಡು ವಿಮಾನಗಳನ್ನು ಸಂಪರ್ಕಿಸಿ ಏರ್‌ ಇಂಡಿಯಾದ ವಿಮಾನದ ಅಸ್ತಿತ್ವವನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಯಿತು. ‘ಏರ್‌ ಇಂಡಿಯಾ’ದ ‘ಫ್ಲೈಟ್‌ ೧೮೨’ ಎಲ್ಲಿಯಾದರೂ ಕಾಣಿಸುತ್ತದೆಯೆ ? ಎಂದು ಅವರಿಗೆ ಕೇಳಲಾಯಿತು. ಎರಡೂ ವಿಮಾನದ ವೈಮಾನಿಕರು ‘ಇಲ್ಲ’ ಎಂದು ಉತ್ತರಿಸಿದರು.

ಸ್ವಲ್ಪ ಸಮಯದ ನಂತರ ಬ್ರಿಟಿಷ ಸರಕುಸಾಗಾಣಿಕೆ (ಕಾರ್ಗೋ) ವಿಮಾನದ ಪೈಲೇಟ್‌ ನಿಯಂತ್ರಣ ಕಕ್ಷೆಗೆ ಸಂದೇಶವನ್ನು ಕಳುಹಿಸಿದನು. ಈ ಸಂದೇಶ ಸಿಕ್ಕಿದ ಕೂಡಲೇ ಅಲ್ಲಿ ಗೊಂದಲ ನಿರ್ಮಾಣವಾಯಿತು. ವಾಸ್ತವಿಕತೆ ಏನೆಂದರೆ ಕಾರ್ಗೊ ವಿಮಾನದ ಪೈಲೆಟ್‌ ಅವನಿಗೆ ಅಟ್ಲಾಂಟಿಕ್‌ ಮಹಾಸಾಗರದಲ್ಲಿ ‘ಫ್ಲೈಟ್‌ ೧೮೨’ ರ ಅವಶೇಷಗಳು ಕಾಣಿಸಿದವು ಎಂದು ಹೇಳುತ್ತಾನೆ. ವಿಚಾರಣೆ ಮಾಡಿದಾಗ ವಿಮಾನ ಐರ್ಲ್ಯಾಂಡ್‌ನ ಸಮುದ್ರತೀರಕ್ಕೆ ತಲುಪುವಾಗಲೆ ದೊಡ್ಡ ಸ್ಪೋಟವಾಯಿತು ಎಂದು ತಿಳಿಯಿತು. ಆ ಸಮಯ ದಲ್ಲಿ ಈ ವಿಮಾನ ೩೧ ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿತ್ತು. ಈ ಸ್ಫೋಟ ಎಷ್ಟು ತೀವ್ರವಾಗಿತ್ತೆಂದರೆ, ಇಡೀ ವಿಮಾನ ಬೆಂಕಿಯ ಜ್ವಾಲೆಗೆ ಆಹುತಿಯಾಗಿತ್ತು. ವಿಮಾನದಲ್ಲಿನ ಒಬ್ಬ ವ್ಯಕ್ತಿಯೂ ಉಳಿಯಲಿಲ್ಲ.

೪. ಖಲಿಸ್ತಾನಿ ಭಯೋತ್ಪಾದಕರಿಂದ ಜಗತ್ತಿನ ಅತಿ ದೊಡ್ಡ ಭಯೋತ್ಪಾದಕ ದಾಳಿ !

ರಕ್ಷಕ ದಳದವರಿಗೆ ಕೇವಲ ೧೮೧ ಜನರ ಮೃತದೇಹ ಗಳನ್ನು ಹೊರಗೆ ತೆಗೆಯಲು ಸಾಧ್ಯವಾಯಿತು. ಮೃತಪಟ್ಟ ೩೨೯ ರಲ್ಲಿ ೨೬೮ ಜನರು ಭಾರತೀಯ ಮೂಲದ ಕೆನಡಾ ನಾಗರಿಕರಾಗಿದ್ದರು. ಏರ್‌ ಇಂಡಿಯಾ ‘ಫ್ಲೈಟ್‌ ೧೮೨’ ಸ್ಫೋಟ ಇದು ಜಗತ್ತಿನ ಅತಿ ದೊಡ್ಡ ಭಯೋತ್ಪಾದಕ ದಾಳಿಯಾಗಿತ್ತು. ಕೆನಡಾದಲ್ಲಿ ಸಕ್ರಿಯವಾಗಿರುವ ಖಲಿಸ್ತಾನಿ ಭಯೋತ್ಪಾದಕರ ಮೇಲೆ ಅಮಾಯಕ ಜನರ ಹತ್ಯೆಯ ಆರೋಪವಿತ್ತು.

೫. ಇನ್ನೊಂದು ಭಾರತೀಯ ವಿಮಾನ ಸ್ಫೋಟಗೊಳಿಸುವ ಖಲಿಸ್ತಾನವಾದಿಗಳ ವಿಫಲ ಪ್ರಯತ್ನ !

‘ಕನಿಷ್ಕ’ ವಿಮಾನದಲ್ಲಿ ನಡೆದ ಸ್ಫೋಟದ ನಂತರ ಕೆಲವೇ ನಿಮಿಷಗಳಲ್ಲಿ ಜಪಾನಿನ ಟೋಕಿಯೋದ ನಾರಿತಾ ವಿಮಾನ ನಿಲ್ದಾಣದಲ್ಲಿಯೂ ದೊಡ್ಡ ಸ್ಫೋಟವಾಯಿತು. ಖಲಿಸ್ತಾನಿ ಭಯೋತ್ಪಾದಕರು ಟೋಕಿಯೋ ಮಾರ್ಗದಿಂದ ಮುಂಬಯಿಗೆ ಹೋಗುವ ಏರ್‌ ಇಂಡಿಯಾದ ಇನ್ನೊಂದು ವಿಮಾನವನ್ನು ಸ್ಫೋಟಿಸುವ ಯೋಜನೆ ಮಾಡಿದ್ದರು. ಅದಕ್ಕಾಗಿ ಕೆನಡಾದಿಂದ ಹೊರಟಿರುವ ವಿಮಾನದಲ್ಲಿ ಚಾಣಾಕ್ಷತೆಯಿಂದ ಬಾಂಬ್‌ ಇಟ್ಟರು. ಅಲ್ಲಿಯೂ ಕೆನಡಾದಿಂದ ಟೋಕಿಯೋಗೆ ತಲುಪಿದ ವಿಮಾನದಲ್ಲಿನ ಸಾಮಾನುಗಳನ್ನು ಭಾರತಕ್ಕೆ ಹೋಗುವ ಏರ್‌ ಇಂಡಿಯಾದ ‘ಫ್ಲೈಟ್‌ ೩೦೧’ಕ್ಕೆ ಸಾಗಿಸುವಾಗ ವಿಮಾನ ನಿಲ್ದಾಣದಲ್ಲಿಯೆ ಈ ಸ್ಫೋಟವಾಯಿತು. ಸಾಮಾನು ಎತ್ತುವ ೨ ಸಿಬ್ಬಂದಿಗಳು ಸ್ಥಳದಲ್ಲಿಯೇ ಮೃತಪಟ್ಟರು. ಈ ರೀತಿ ಏರ್‌ ಇಂಡಿಯಾದ ಇನ್ನೊಂದು ವಿಮಾನವನ್ನು ಸ್ಫೋಟಿಸುವ ಖಲಿಸ್ತಾನಿಗಳ ಸಂಚು ವಿಫಲವಾಯಿತು.

೬. ಬಾಂಬ್‌ಸ್ಫೋಟ ಪ್ರಕರಣದಲ್ಲಿ ಇಬ್ಬರು ಖಲಿಸ್ತಾನವಾದಿಗಳ ಬಂಧನ; ಆದರೆ ಪುರಾವೆಯ ಅಭಾವದಿಂದ ಅವರು ಮುಕ್ತರಾದರು !

ಈ ಘಟನೆಯ ವಿಚಾರಣೆಗಾಗಿ ಭಾರತ ಸರಕಾರ ಸ್ವತಂತ್ರ ಸಮಿತಿಯನ್ನೂ ಸ್ಥಾಪಿಸಿತ್ತು. ಮಾಜಿ ನ್ಯಾಯಾಧೀಶ ಬಿ. ಎಮ್. ಕೃಪಾಲ ಇವರ ನೇತೃತ್ವದಲ್ಲಿ ಸ್ಥಾಪಿಸಿದ ಈ ಸಮಿತಿಯ ವರದಿಯಲ್ಲಿ, ಏರ್‌ ಇಂಡಿಯಾದ ‘ಫ್ಲೈಟ್‌ ೧೮೨’ ಈ ವಿಮಾನ ಭಯೋತ್ಪಾದಕರ ದಾಳಿಯಲ್ಲಿ ನಾಶವಾಗಿದೆ. ಇಂಜಿನ್‌ನಲ್ಲಿ ಯಾವುದೇ ದೋಷ ಇರಲಿಲ್ಲ. ‘ಬಬ್ಬರ ಖಾಲ್ಸಾ’ದ ಅಂತಾರಾಷ್ಟ್ರೀಯ ಮುಖಂಡ ತಲವಿಂದರ ಸಿಂಗ್‌ ಪರಪಾರ ಇವನು ಈ ಘಟನೆಯ ಮುಖ್ಯ ರೂವಾರಿಯಾಗಿದ್ದಾನೆ ಎಂದು ಹೇಳಲಾಗಿತ್ತು.

ಎಲ್ಲವೂ ಬಹಿರಂಗವಾಗಿ ನಡೆಯುತ್ತಿತ್ತು, ಆದರೂ ಕೆನಡಾ ಸರಕಾರ ಕ್ರಮ ತೆಗೆದುಕೊಳ್ಳಲಿಲ್ಲ. ೮ ನವೆಂಬರ್‌ ೧೯೮೫ ರಂದು ‘ರಾಯಲ್‌ ಕೆನೆಡಿಯನ್‌ ಮೌಂಟೆಡ್’ ಪೊಲೀಸ್‌ ಹಾಗೂ ‘ಇಂಟೆಲಿಜನ್ಸ್ ಸರ್ವಿಸೆಸ್’ (ಗುಪ್ತಚರ ಇಲಾಖೆ) ‘ಏರ್‌ ಇಂಡಿಯಾ ಬಾಂಬ್‌ಸ್ಫೋಟ’ ಪ್ರಕರಣದಲ್ಲಿ ‘ಬಬ್ಬರ ಖಾಲ್ಸಾ’ ಈ ಅಂತಾರಾಷ್ಟ್ರೀಯ ಸಂಘಟನೆಯ ಮುಖ್ಯಸ್ಥ ತಲವಿಂದರ ಸಿಂಗ್‌ ಪರಮಾರನ ಮನೆಯ ಮೇಲೆ ದಾಳಿ ಮಾಡಿ ಅವನನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಇಂದ್ರಜಿತ ಸಿಂಗ್‌ ರಯತ ಇವನು ವ್ಯವಸಾಯದಿಂದ ‘ಮೆಕಾನಿಕ್’ ಆಗಿದ್ದನು. ಅವನನ್ನು ಇಂಗ್ಲೆಂಡ್‌ನಿಂದ ಫೆಬ್ರವರಿ ೧೯೮೮ ರಲ್ಲಿ ಬಂಧಿಸಲಾಯಿತು. ರಯತನ ವಿರುದ್ಧ ಟೋಕಿಯೋ ವಿಮಾನ ನಿಲ್ದಾಣದಲ್ಲಿನ ಸ್ಫೋಟದಲ್ಲಿ ಬಾಂಬ್‌ ತಯಾರಿಸಿರುವ ಆರೋಪವಿತ್ತು. ತನಿಖೆಯಲ್ಲಿ ರೇಡಿಯೋದೊಳಗೆ ಬಾಂಬ್‌ ಇಡಲಾಗಿತ್ತು ಎಂಬುದು ಕಂಡುಬಂದಿತು. ಆ ರೇಡಿಯೋವನ್ನು ರಯತ ಡಂಕನ್‌ನ ತನ್ನ ಮನೆಯ ಸಮೀಪದ ಅಂಗಡಿಯಿಂದ ಖರೀದಿಸಿದ್ದನು.

ಈ ಘಟನೆಯಲ್ಲಿ ಇವರಿಬ್ಬರ ಕೈವಾಡವಿರುವ ಅನೇಕ ವಿಷಯಗಳು ಬೆಳಕಿಗೆ ಬಂದವು ; ಆದರೆ ಸಾಕ್ಷಿಯ ಅಭಾವ ದಿಂದ ಅವರಿಬ್ಬರನ್ನೂ ಬಿಡುಗಡೆ ಮಾಡಲಾಯಿತು. ಕೇವಲ ರಯತನಿಗೆ ಅಂದಿನ ೨ ಸಾವಿರ ಡಾಲರ್‌ಗಳ ದಂಡವನ್ನು ವಿಧಿಸಲಾಯಿತು ಹಾಗೂ ಅದು ಕೂಡ ಬೇರೆ ಏನೋ ವಿಷಯಕ್ಕಾಗಿ ! ಅನಂತರ ರಯತ ಇಂಗ್ಲೆಂಡ್‌ನಲ್ಲಿಯೇ ನೆಲೆಸಿದನು.

೭. ಕೆನಡಾದ ಗುಪ್ತಚರ ಇಲಾಖೆಯ ಬೇಜವಾಬ್ದಾರಿತನ !

ಅ. ಏರ್‌ ಇಂಡಿಯಾದ ಬಾಂಬ್‌ಸ್ಫೋಟದ ಈ ದುಃಖದ ಘಟನೆಯ ಮೊದಲೂ ಸಹ ಕೆನಡಾದ ಗುಪ್ತಚರ ಇಲಾಖೆ ಪರಮಾರ ಮತ್ತು ಇಂದ್ರಜಿತ ಸಿಂಗ್‌ ಇವರ ಮೇಲೆ ನಿಗಾ ಇಟ್ಟಿತ್ತು. ಜೂನ್‌ ೨೩ ರ ಘಟನೆಯ ಮೊದಲು ಅಂದರೆ ಜೂನ್‌ ೪ ರಂದು ಕೆನಡಾದ ಗುಪ್ತಚರ ಇಲಾಖೆಯು ಇಬ್ಬರನ್ನೂ ವೆನ್‌ಕುಓರ ದ್ವೀಪದಲ್ಲಿನ ಅರಣ್ಯದೊಳಗೆ ಹೋಗುವಾಗ ನೋಡಿತ್ತು. ಅವರ ವರದಿಗನುಸಾರ ಅವರು ಅಲ್ಲಿ ಸ್ಫೋಟದ ಪ್ರಯೋಗ ಮಾಡಿದ್ದರು. ಆದರೂ ಗುಪ್ತಚರ ಇಲಾಖೆ ‘ಇದು ಬಂದೂಕಿನ ಗುಂಡಿನ ಪ್ರಯೋಗ ಆಗಿತ್ತು’, ಎಂದು ತೀರ್ಮಾನಿಸಿತು ಹಾಗೂ ಅದರ ಮಾಹಿತಿಯನ್ನು ಪೊಲೀಸರಿಗೆ ನೀಡಲಿಲ್ಲ. ಈ ಘಟನೆಯಲ್ಲಿ ಪರಮಾರನ ಹೆಸರು ಮುಂದೆ ಬಂದಾಗ ಗುಪ್ತಚರ ಇಲಾಖೆ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಬೇಡಿ ಎಂದು ಹೇಳಿತ್ತು.

ಕೆನಡಾದಿಂದ ಬಿಡುಗಡೆಯಾದ ನಂತರ ತಲವಿಂದರ ಸಿಂಗ್‌ ಪರಮಾರ ಪಾಕಿಸ್ತಾನಕ್ಕೆ ಹೋದನು, ಅವನು ೧೯೯೨ ರಲ್ಲಿ ಭಾರತಕ್ಕೆ ಬಂದನು. ಮುಂಬಯಿಯಲ್ಲಿ ಪೊಲೀಸ್‌ ಚಕಮಕಿಯಲ್ಲಿ ಆತ ಸಾವನ್ನಪ್ಪಿದನು. ‘ಸಿಬಿಸಿ ನ್ಯೂಸ್‌’ಗನುಸಾರ ಪರಮಾರ ಸಾಯುವ ಮೊದಲು ಪೊಲೀಸರ ವಶದಲ್ಲಿದ್ದನು. ಅಲ್ಲಿ ಏರ್‌ ಇಂಡಿಯಾದ ಬಾಂಬ್‌ಸ್ಫೋಟದ ವಿಷಯದಲ್ಲಿ ಅವನ ವಿಚಾರಣೆಯನ್ನು ಮಾಡಲಾಗಿತ್ತು.

ಆ. ಕೆನಡಾದ ಗುಪ್ತಚರ ಇಲಾಖೆ ಒಪ್ಪಿಕೊಂಡ ಅಂಶವೆಂದರೆ ಅದು ಈ ಪ್ರಕರಣಕ್ಕೆ ಸಂಬಂಧಿಸಿದ ಜನರ ೧೫೦ ಗಂಟೆಗಳ ಕಾಲದ ‘ಕಾಲ್‌ ರೆಕಾರ್ಡ್‌’ (ಧ್ವನಿಮುದ್ರಣ ಮಾಡಿದ ಸಂಪರ್ಕ) ಅಳಿಸಿ ಹಾಕಿದೆ, ಅದನ್ನು ನ್ಯಾಯಾಲಯದಲ್ಲಿ ಸಾಕ್ಷಿಯೆಂದು ಉಪಯೋಗಿಸಲು ಸಾಧ್ಯವಿತ್ತು, ಎಂದು ಸಂಸ್ಥೆಯ ಸಿಬ್ಬಂದಿಗಳು ಹೇಳಿದರು.

೮. ಖಲಿಸ್ತಾನಿ ಭಯೋತ್ಪಾದಕರಿಂದ ಏರ್‌ ಇಂಡಿಯಾ ವಿಮಾನದ ಮೇಲೆ ದಾಳಿ ಮಾಡುವ ಬಹಿರಂಗ ಬೆದರಿಕೆ !

ಈ ನಿಯೋಜಿತ ಆಕ್ರಮಣದ ಮೊದಲೆ ಕೆನಡಾದಲ್ಲಿನ ಅನೇಕ ಗುರುದ್ವಾರಗಳಿಂದ ‘ಖಲಿಸ್ತಾನ ಝಿಂದಾಬಾದ್‌’ನ ಘೋಷಣೆಗಳನ್ನು ನೀಡಲಾಗುತ್ತಿತ್ತು. ‘ಬಬ್ಬರಖಾಲಸಾ’ ಸಂಘಟನೆಯು ‘ಏರ್‌ ಇಂಡಿಯಾದಲ್ಲಿ ಪ್ರಯಾಣಿಸ ಬೇಡಿ ಎಂದು ಬಹಿರಂಗಎಚ್ಚರಿಕೆಯನ್ನು ನೀಡುತ್ತಿತ್ತು. ಹೀಗಿದ್ದರೂ ಕೆನಡಾದ ಸುರಕ್ಷಾವ್ಯವಸ್ಥೆಗೆ ಇದನ್ನು ಪತ್ತೆಹಚ್ಚಲು ಸಾಧ್ಯ ವಾಗಲಿಲ್ಲ. ಇಷ್ಟು ಮಾತ್ರವಲ್ಲ, ಈ ಘಟನೆಯ ಮೊದಲು ಪರಮಾರನು ಖಲಿಸ್ತಾನಿಗಳ ಸಭೆಯಲ್ಲಿ ‘ಏರ್‌ ಇಂಡಿಯಾದ ವಿಮಾನಗಳು ಆಕಾಶದಿಂದ ಕೆಳಗೆ ಬೀಳುವವು’, ಎಂದು ಹೇಳಿದ್ದನು. ಇದರ ಮಾಹಿತಿ ಇದ್ದರೂ ಪರಮಾರನ ಮೇಲೆ ಘಟನೆಯ ಮೊದಲು ಮತ್ತು ಅನಂತರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಇಂತಹ ಎಚ್ಚರಿಕೆಯನ್ನು ನೀಡುತ್ತಿದ್ದರೂ ಕೆನಡಾದ ಪೊಲೀಸ್‌ ಅದರತ್ತ ನೋಡಿಯೂ ನೋಡದಂತಿತ್ತು.

೯. ಏರ್‌ ಇಂಡಿಯಾ ಬಾಂಬ್‌ಸ್ಫೋಟ ಪ್ರಕರಣದಲ್ಲಿನ ಸಾಕ್ಷಿದಾರನ ಹತ್ಯೆ ಹಾಗೂ ಖಟ್ಲೆಗಾಗಿರುವ ಖರ್ಚು

೨೨ ಜನವರಿ ೧೯೮೬ ರಂದು ಕೆನಡಾದ ‘ಎವಿಯೇಶನ್‌ ಸೆಫ್ಟೀ ಬೋರ್ಡ್‌’ ಕೂಡ ‘ಏರ್‌ ಇಂಡಿಯಾ ಫ್ಲೈಟ್‌ ೧೮೨’ ರಲ್ಲಿ ಆಗಿರುವ ಸ್ಫೋಟ ಒಂದು ಸಂಚಾಗಿತ್ತು’, ಎಂಬುದನ್ನು ಒಪ್ಪಿಕೊಂಡಿದೆ. ಏರ್‌ ಇಂಡಿಯಾದ ಬಾಂಬ್‌ಸ್ಫೋಟದ ತನಿಖೆಗಾಗಿ ಕೆನಡಾದಲ್ಲಿ ಸ್ವತಂತ್ರ ನ್ಯಾಯಾಲಯ ಕಕ್ಷೆಯನ್ನು ನಿರ್ಮಿಸಲಾಗಿತ್ತು.

೧೯೯೫ ರಲ್ಲಿ ಕೆನಡಾದ ಸರೆ ಎಂಬಲ್ಲಿರುವ ಒಂದು ವರ್ತಮಾನಪತ್ರಿಕೆಯ ಸಂಪಾದಕ ತಾರಾ ಸಿಂಗ್‌ ಹೆಯರ್‌ ಇವರು ಕೆನಡಾದ ಪೊಲೀಸರಿಗೆ, ಬಾಗರೀ ಹೆಸರಿನ ಒಬ್ಬ ವ್ಯಕ್ತಿ ಬಾಂಬ್‌ಸ್ಫೋಟದಲ್ಲಿ ತಾನು ಪಾಲ್ಗೊಂಡಿರುವುದಾಗಿ ಒಪ್ಪಿಕೊಂಡಿರುವುದನ್ನು ಕೇಳಿದೆ ಎಂದು ಹೇಳಿದರು. ಅನಂತರ ಏರ್‌ ಇಂಡಿಯಾ ಬಾಂಬ್‌ಸ್ಫೋಟದಲ್ಲಿ ಮೂರನೇ ಆರೋಪಿಯ ಹೆಸರನ್ನು ಹೇಳಲಾಯಿತು; ಆದರೆ ಕೆನಡಾದ ಪೊಲೀಸರ ಪ್ರಯತ್ನದ ನಂತರವೂ ಈ ಪ್ರಕರಣದಲ್ಲಿನ ಸಾಕ್ಷಿದಾರ ತಾರಾ ಸಿಂಗ್‌ ಹೆಯರ್‌ ಇವರಿಗೆ ಸಾಕಷ್ಟು ಸುರಕ್ಷೆ ಸಿಕ್ಕಿರಲಿಲ್ಲ ಹಾಗೂ ೧೯೯೮ ರಲ್ಲಿ ಅವರ ಹತ್ಯೆಯಾಯಿತು.

ಈ ಖಟ್ಲೆಗೆ ಕೆನಡಾದಲ್ಲಿ ಎಷ್ಟು ಸ್ಥಾನಮಾನ ನೀಡ ಲಾಗಿತ್ತೆಂದರೆ ಅದಕ್ಕೆ ‘ಏರ್‌ ಇಂಡಿಯಾ ಟ್ರಾಯಲ್’ ಎಂದೇ ಹೆಸರಿಡಲಾಗಿತ್ತು. ಖಟ್ಲೆಯ ಸೂಕ್ಷ್ಮವನ್ನು ಗಮನಿಸಿ ೭.೨ ದಶಲಕ್ಷ ಡಾಲರ್ಸ್‌, ಅಂದರೆ ಸುಮಾರು ೫೯ ಕೋಟಿ ೮೬ ಲಕ್ಷ ರೂಪಾಯಿ ಖರ್ಚು ಮಾಡಿ ಸ್ವತಂತ್ರ ನ್ಯಾಯಾಲಯ ಕಕ್ಷೆಯನ್ನು ಸಿದ್ಧಪಡಿಸಲಾಗಿತ್ತು. ಇದರಲ್ಲಿ ೨೦ ನ್ಯಾಯಾಧೀಶರನ್ನು ಆಲಿಕೆಗಾಗಿ ನೇಮಕ ಮಾಡಲಾಗಿತ್ತು.

೧೦. ವಿಚಾರಣೆ ಸಮಿತಿಯಿಂದ ಕೆನಡಾ ಸರಕಾರ, ಪೊಲೀಸ್‌ ಹಾಗೂ ಗುಪ್ತಚರ ಇಲಾಖೆ

ಇವುಗಳ ಮೇಲೆ ಆರೋಪ ಹಾಗೂ ಸರಕಾರದಿಂದ ತೋರಿಕೆಯ ಕ್ಷಮಾಯಾಚನೆ !

೨೦೦೦ ಇಸವಿಯಲ್ಲಿ ಏರ್‌ ಇಂಡಿಯಾ ಬಾಂಬ್‌ಸ್ಫೋಟ ಪ್ರಕರಣದಲ್ಲಿ ಕೆನಡಾದ ಪೊಲೀಸರು ರಿಪುದಮನ ಸಿಂಗ್‌
ಎಂಬ ವ್ಯಾಪಾರಿ ಮತ್ತು ಗಿರಣಿಯಲ್ಲಿ ಕೆಲಸ ಮಾಡುವ ಅಜನಬ ಸಿಂಗ್‌ ಬಾಗರಿಯನ್ನು ಬಂಧಿಸಿದರು. ಅವರ ಮೇಲೆ ‘ಫಸ್ಟ್ ಡಿಗ್ರಿ’ ಹತ್ಯೆಯ ಆರೋಪವನ್ನು ಮಾಡಲಾಗಿತ್ತು. ಆದರೂ ೨೦೦೫ ರಲ್ಲಿ ಕೆನಡಾದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಇ. ಎನ್. ಜೋಸೆಫನ್‌ ಇವರು, ಅವರ ವಿರುದ್ಧ ಸೂಕ್ತ ಸಾಕ್ಷಿ ಇಲ್ಲ. ‘ಎಫ್‌.ಬಿ.ಐ.’ಯ (ಫೆಡರಲ್‌ ಬ್ಯೂರೊ ಆಫ್‌ ಇನ್ವೆಸ್ಟಿಗೇಶನ್‌’) ಮಾಹಿತಿದಾರನು, ಘಟನೆಯ ಕೆಲವು ದಿನಗಳ ನಂತರ ಬಾಗರೀ ಬಾಂಬ್‌ಸ್ಫೋಟ ಮಾಡಿದ್ದನು ಎಂದು ಹೇಳಿದ್ದರು.

೨೦೦೬ ರಲ್ಲಿ ಕೆನಡಾ ಸರಕಾರ ಏರ್‌ ಇಂಡಿಯಾ ಬಾಂಬ್‌ಸ್ಪೋಟ ಸಾರ್ವಜನಿಕ ವಿಚಾರಣಾ ಸಮಿತಿಯನ್ನು ಘೋಷಣೆ ಮಾಡಿತು. ಕೆನಡಾದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಾನ್‌ ಸಿ. ಮೇಯರ್‌ ಇದರ ನೇತೃತ್ವ ಮಾಡುತ್ತಿದ್ದರು. ಅವರು ೨೦೧೦ ರಲ್ಲಿ ೩ ಸಾವಿರದ ೨೦೦ ಪುಟಗಳ ವರದಿಯನ್ನು ಸಲ್ಲಿಸಿದರು. ಅವರು ಅದಕ್ಕೆ ಸರಕಾರ ಹಾಗೂ ಸುರಕ್ಷಾವ್ಯವಸ್ಥೆಯೇ ಹೊಣೆಯಾಗಿದೆ ಎಂದು ಹೇಳಿದರು. ಅವರು, ‘ಸರಕಾರ ಮೃತರ ಕುಟುಂಬ ದವರೊಂದಿಗೆ ಶತ್ರುಗಳಂತೆ ವರ್ತಿಸಿತು. ತಲವಿಂದರ ಸಿಂಗ್‌ ಪರಮಾರನೇ ಇಡೀ ಬಾಂಬ್‌ಸ್ಫೋಟದ ಮುಖ್ಯ ರೂವಾರಿಯೆಂದು ನ್ಯಾಯಾಲಯ ನಿರ್ಣಯ ನೀಡಿದೆ.’

ವಿಚಾರಣಾ ಸಮಿತಿಯ ವರದಿಯಲ್ಲಿ ಈ ಘಟನೆಗೆ ಕೆನಡಾದ ಸುರಕ್ಷಾವ್ಯವಸ್ಥೆಯ ಕೊರತೆಯೇ ಹೊಣೆಯೆಂದು ನಿರ್ಧರಿಸಲಾಗಿತ್ತು. ಈ ಘಟನೆಯ ವಿಚಾರಣೆ ಮಾಡುವ ಕೆನಡಾದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಜಾನ್‌ ಮೇಯರ್‌ ಇವರು ೨೦೧೦ ರಲ್ಲಿ, ‘ಕೆನಡಾ ಸರಕಾರ ಹೊಣೆಯನ್ನು ಹೊರುವುದು ಆವಶ್ಯಕತೆಯಿದೆ’, ಎಂದಿತು. ಜಾನ್‌ ಮೇಯರ್‌ ಇವರು ವಿಮಾನದ ಅಪಘಾತಕ್ಕೆ ಕೆನಡಾ ಸರಕಾರ, ‘ರಾಯಲ್‌ ಕೆನೆಡಿಯನ್‌ ಮೌಂಟೆಡ್‌ ಪೊಲೀಸ್’ ಹಾಗೂ ‘ಕೆನೆಡಿಯನ್‌ ಸೆಕ್ಯುರಿಟಿ ಇಂಟಲಿಜೆನ್ಸ್ ಸರ್ವಿಸ್’ (ಕೆನಡಾದ ಗುಪ್ತಚರ ಇಲಾಖೆ) ಹೊಣೆಯೆಂದು ಹೇಳಿದರು.

ವಿಚಾರಣೆಯ ನಂತರ ೨೦೧೦ ರಲ್ಲಿ ಕೆನಡಾ ಸರಕಾರ ಸಂತ್ರಸ್ತರ ಔಪಚಾರಿಕ ಕ್ಷಮೆ ಕೇಳಿತು. ಈ ಪ್ರಕರಣದಲ್ಲಿನ ಆರೋಪಿ ರಿಪುದಮನ ಸಿಂಗ್‌ನನ್ನು ೨೦೨೨ ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು.

(ಆಧಾರ : ದೈನಿಕ ‘ದಿವ್ಯ ಮರಾಠಿ’ಯ ಜಾಲತಾಣ, ೨೨.೯.೨೦೨೩)