‘ಹಮಾಸ’ ಈ ಭಯೋತ್ಪಾದಕ ಸಂಘಟನೆಯು ಇಸ್ರೈಲ್‌ನ ಮೇಲೆ ಮಾಡಿದ ದಾಳಿಯ ಹಿಂದೆ ಮಹಮ್ಮದ ದೇಯೀಫ ಎಂಬ ಸೂತ್ರಧಾರ ಇದ್ದಾನೆಂದು ಇಸ್ರೈಲ್‌ನ ವಿಶ್ವಾಸವಿದೆ. (ಅರಬಿ ಭಾಷೆಯಲ್ಲಿ ದೇಯೀಫ ಎಂದರೆ ‘ನೆಂಟರು’ ಎಂದು ಅರ್ಥವಾಗುತ್ತದೆ.) ಮಹಮ್ಮದ ದೇಯೀಫನನ್ನು ಹೊಸ ‘ಒಸಾಮಾ ಬಿನ್ ಲಾಡೇನ’ ಎಂದು ಇಸ್ರೈಲ್ ಹೇಳಿದೆ.
೧. ಮಹಮ್ಮದ ದೇಯೀಫನ ಹಿನ್ನೆಲೆ ಗಾಝಾದಲ್ಲಿ ೧೯೬೫ ರಲ್ಲಿ ಮಹಮ್ಮದ ದೇಯೀಫನ ಜನ್ಮ ಆಯಿತು.
ಅವನ ತಂದೆಯ ಹೆಸರು ಮಹಮ್ಮದ ದೀಬ ಇಬ್ರಾಹಿಮ್ ಅಲ್ ಮಸರಿ ಎಂದಾಗಿತ್ತು. ಒಂದು ನಿರಾಶ್ರಿತರ ಡೇರೆಯಲ್ಲಿ ಮಹಮ್ಮದ ದೇಯೀಫನ ಜನ್ಮ ಆಯಿತು. ಅವನು ತನ್ನ ಹೆಸರನ್ನು ಬದಲಾಯಿಸಿ ಅರಬೀ ಭಾಷೆಯ ‘ದೇಯೀಫ’ ಎಂದು ಇಟ್ಟುಕೊಂಡನು. ಮಹಮ್ಮದ ದೇಯೀಫ ಹಮಾಸ ಈ ಭಯೋತ್ಪಾದಕ ಸಂಘಟನೆಯ ಸೇನಾ ಶಾಖೆ ‘ಅಲ್ ಕಾಸಮ್’ ಬ್ರಿಗೇಡ್‌ನ ಕಮಾಂಡರ್ ಆಗಿದ್ದಾನೆ. ಇಸ್ರೈಲ್ ಬಳಿ ಅವನ ಒಂದೇ ಛಾಯಾಚಿತ್ರವಿದೆ.
೨. ಮಹಮ್ಮದ ದೇಯೀಫ ಎಲ್ಲಿ ಇರುತ್ತಾನೆ ?
ಇಸ್ರೈಲ್‌ನ ಗುಪ್ತಚರ ಸಂಸ್ಥೆ ‘ಮೋಸಾದ’ ೫೮ ವರ್ಷದ ಮಹಮ್ಮದ ದೇಯೀಫನನ್ನು ಕೊಲ್ಲಲು ೭ ಬಾರಿ ಪ್ರಯತ್ನಿಸಿತು, ಎಂದು ಹೇಳಲಾಗುತ್ತದೆ; ಆದರೆ ಅವೆಲ್ಲವೂ ವಿಫಲವಾದವು. ‘ಮೋಸಾದ’ ಅನೇಕ ದಶಕಗಳಿಂದ ಮಹಮ್ಮದ ದೇಯೀಫನನ್ನು ಹುಡುಕುತ್ತಿದೆ; ಆದರೆ ಪ್ರತಿಯೊಂದು ಪ್ರಯತ್ನದಲ್ಲಿ ಅವನು ಅದರ ಜಾಲದಿಂದ ತಪ್ಪಿಸಿಕೊಳ್ಳುತ್ತಾನೆ. ವಿವಿಧ ಜಾಲತಾಣಗಳಲ್ಲಿನ ವಾರ್ತೆ ಗನುಸಾರ ಮಹಮ್ಮದ ದೇಯೀಫ ಯಾವಾಗಲೂ ಗಾಲಿಕುರ್ಚಿ (ವೀಲಚೇರ್)ಯಲ್ಲಿರುತ್ತಾನೆ ಹಾಗೂ ಗಾಝಾ ದಲ್ಲಿ ನಿರ್ಮಿಸಿದ ಭೂಗತ ಸುರಂಗಗಳ ನೆಟವರ್ಕನಲ್ಲಿ ವಾಸಿಸುತ್ತಾನೆ. ಇದರಿಂದಾಗಿ ಮಹಮ್ಮದ ದೇಹೀಫ ಪ್ರತಿ ಸಲ ಮೋಸಾದ’ದ ಕೈಯಿಂದ ತಪ್ಪಿಸಿಕೊಳ್ಳುತ್ತಾನೆ. ಈ ಸುರಂಗಗಳನ್ನು ನಿರ್ಮಿಸುವುದರಲ್ಲಿ ಮಹಮ್ಮದ ದೇಯೀಫನ ಕೈವಾಡವೂ ಇದೆ. ಅವನು ಪ್ರತಿದಿನ ತನ್ನ ಸ್ಥಳವನ್ನು ಬದಲಾಯಿಸುತ್ತಿರುತ್ತಾನೆ ಹಾಗೂ ಎಂದಿಗೂ ಒಂದೇ ಸ್ಥಳದಲ್ಲಿ ಇರುವುದಿಲ್ಲ. ಅವನು ಇಸ್ರೈಲಿಗಳ ಹತ್ಯೆಗೆ ಕರೆ ನೀಡುವ ಧ್ವನಿಮುದ್ರಣ ಮಾಡಿದ ಸಂದೇಶಗಳನ್ನು ಹಮಾಸ್‌ನ ಭಯೋತ್ಪಾದಕರಿಗೆ ಬಹಳಷ್ಟು ಸಲ ಕಳುಹಿಸುತ್ತಿರುತ್ತಾನೆ. ಅವನು ವಿದೇಶ ದಲ್ಲಿನ ತನ್ನ ಸಮರ್ಥಕರನ್ನು ಹಮಾಸದಲ್ಲಿ ಸೇರಿಕೊಳ್ಳಲು ಕರೆ ನೀಡಿದ್ದಾನೆ. ಅದರ ಪರಿಣಾಮವೆಂದು ಅನೇಕ ದೇಶಗಳಲ್ಲಿನ ನಾಗರಿಕರು ಈ ಭಯೋತ್ಪಾದಕ ಚಟುವಟಿಕೆಯಲ್ಲಿ ಸಿಲುಕುವ ಅಪಾಯವಿದೆ.
(ಆಧಾರ : ವಿವಿಧ ಜಾಲತಾಣಗಳು)